ದೆಹಲಿ ಸ್ಫೋಟ PTI
ದೇಶ

Delhi Blast: 'ಶಂಕಿತ ಆತ್ಮಹತ್ಯಾ ಬಾಂಬರ್ ಟೆಲಿಗ್ರಾಮ್‌ನಲ್ಲಿ ಮೂಲಭೂತವಾದಿ ವೈದ್ಯರ ಗುಂಪಿನ ಭಾಗವಾಗಿದ್ದ'; ಯಾರೀತ? ಇಲ್ಲಿದೆ ಮಾಹಿತಿ..

ಸ್ಫೋಟದಲ್ಲಿ ಅಮೋನಿಯಂ ನೈಟ್ರೇಟ್, ಇಂಧನ ತೈಲ ಮತ್ತು ಡಿಟೋನೇಟರ್‌ಗಳನ್ನು ಬಳಸಿರಬಹುದು ಎಂದು ಪೊಲೀಸರ ಪ್ರಾಥಮಿಕ ತನಿಖೆಯಲ್ಲಿ ಪತ್ತೆ ಮಾಡಿದ್ದಾರೆ.

ನವದೆಹಲಿ: ದೆಹಲಿಯಲ್ಲಿ ಮತ್ತೊಂದು ಭಯೋತ್ಪಾದ ದಾಳಿ ಸಂಭವಿಸಿದ್ದು, ಈ ದಾಳಿಯಲ್ಲಿ ಆತ್ಮಹತ್ಯ ಬಾಂಬರ್ ಆಗಿದ್ದ ಉಗ್ರ ಟೆಲಿಗ್ರಾಮ್‌ನಲ್ಲಿ ಮೂಲಭೂತವಾದಿ ವೈದ್ಯರ ಗುಂಪಿನ ಭಾಗವಾಗಿದ್ದ ಎಂದು ಮೂಲಗಳು ತಿಳಿಸಿವೆ.

ದೆಹಲಿಯ ಐತಿಹಾಸಿಕ ಕೆಂಪು ಕೋಟೆ ಬಳಿ ಸಂಭವಿಸಿದ ಭೀಕರ ಸ್ಫೋಟದಲ್ಲಿ 12 ಮಂದಿ ಮೃತಪಟ್ಟಿದ್ದು, 20 ಜನ ಗಾಯಗೊಂಡಿದ್ದಾರೆ. ಐ20 ಕಾರಿನಲ್ಲಿದ್ದ ವೈದ್ಯ ಉಮರ್ ಮೊಹಮ್ಮದ್ ಆತ್ಮಹತ್ಯಾ ಬಾಂಬರ್ ಆಗಿ ಈ ಸ್ಫೋಟ ನಡೆಸಿದ್ದಾನೆ ಎಂದು ತನಿಖಾ ಸಂಸ್ಥೆಗಳು ಶಂಕೆ ವ್ಯಕ್ತಪಡಿಸಿವೆ.

ಬಾಂಬ್ ಸ್ಪೋಟಕ್ಕೂ ಮೊದಲು ಸ್ಫೋಟಗೊಂಡ ಹ್ಯುಂಡೇ ಐ20 ಕಾರನ್ನು ಕಾಶ್ಮೀರದ ಪುಲ್ವಾಮಾ ನಿವಾಸಿಯಾಗಿರುವ ವೈದ್ಯ ಉಮರ್ ಮೊಹಮ್ಮದ್‌ ಚಾಲನೆ ಮಾಡುತ್ತಿದ್ದ ಎನ್ನಲಾಗಿದೆ.

ಈ ಸ್ಫೋಟದಲ್ಲಿ ಅಮೋನಿಯಂ ನೈಟ್ರೇಟ್, ಇಂಧನ ತೈಲ ಮತ್ತು ಡಿಟೋನೇಟರ್‌ಗಳನ್ನು ಬಳಸಿರಬಹುದು ಎಂದು ಪೊಲೀಸರ ಪ್ರಾಥಮಿಕ ತನಿಖೆಯಲ್ಲಿ ಪತ್ತೆ ಮಾಡಿದ್ದಾರೆ.

ಫರಿದಾಬಾದ್ ನಂಟು

ಇನ್ನು 'ಸುಮಾರು 360 ಕೆ.ಜಿ.ಯಷ್ಟು ಅಮೋನಿಯಂ ನೈಟ್ರೇಟ್ ಪತ್ತೆಯಾದ ಫರಿದಾಬಾದ್ ಭಯೋತ್ಪಾದಕ ಮಾದರಿಗೂ ಹಾಗೂ ದೆಹಲಿ ಸ್ಫೋಟಕ್ಕೂ ಸಂಬಂಧವಿದೆ ಎಂದು ಪೊಲೀಸರು ಶಂಕೆ ವ್ಯಕ್ತಪಡಿಸಿದ್ದಾರೆ. ಅಂತಿಮ ವರದಿಗಾಗಿ ಕಾಯಲಾಗುತ್ತಿದೆ" ಎಂದು ಮೂಲಗಳು ತಿಳಿಸಿವೆ.

ಫರಿದಾಬಾದ್‌ನಲ್ಲಿ ವಶಪಡಿಸಿಕೊಂಡ 2,900 ಕೆ.ಜಿ. ಸ್ಫೋಟಕ ವಸ್ತುಗಳಲ್ಲಿ ಅಮೋನಿಯಂ ನೈಟ್ರೇಟ್, ಪೊಟ್ಯಾಷಿಯಂ ನೈಟ್ರೇಟ್ ಮತ್ತು ಸಲ್ಫರ್ ಇದ್ದವು. ಇದರಲ್ಲಿ 360 ಕೆ.ಜಿ. ಅಮೋನಿಯಂ ನೈಟ್ರೇಟ್ ಎಂದೆನ್ನಲಾದ ಸ್ಫೋಟಕ ವಸ್ತು ಮತ್ತು ಕೆಲವು ಶಸ್ತ್ರಾಸ್ತ್ರಗಳು ಮತ್ತು ಮದ್ದುಗುಂಡುಗಳನ್ನು ವಶಪಡಿಸಿಕೊಳ್ಳಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.

ಟೆಲಿಗ್ರಾಮ್ ನಲ್ಲಿ ಮೂಲಭೂತವಾದಿ ವೈದ್ಯರ ಗುಂಪು

ಇನ್ನು ಖ್ಯಾತ ಸಾಮಾಜಿಕ ಜಾಲತಾಣ ಟೆಲಿಗ್ರಾಮ್ ನಲ್ಲಿ ಮೂಲಭೂತವಾದಿ ವೈದ್ಯರ ಗುಂಪು ರಚನೆಯಾಗಿತ್ತು. ಹಾಲಿ ಬಾಂಬ್ ಸ್ಫೋಟದಲ್ಲಿ ಆತ್ಮಹತ್ಯಾ ಬಾಂಬರ್ ಆಗಿದ್ದ ಎಂದು ತನಿಖಾಧಿಕಾರಿಗಳು ಶಂಕಿಸಿದ್ದಾರೆ. ಟೆಲಿಗ್ರಾಮ್‌ನಲ್ಲಿ ಸಮನ್ವಯ ಸಾಧಿಸಿದ ಮತ್ತು ಪಾಕಿಸ್ತಾನ ಮೂಲದ ಭಯೋತ್ಪಾದಕ ಗುಂಪು ಜೈಶ್-ಎ-ಮೊಹಮ್ಮದ್ (ಜೆಇಎಂ) ಜೊತೆ ಸಂಪರ್ಕ ಹೊಂದಿರುವ ಮೂಲಭೂತವಾದಿ ವೈದ್ಯರ ಗುಂಪಿನ ಸದಸ್ಯ ಡಾ. ಉಮರ್ ಮೊಹಮ್ಮದ್ ದೆಹಲಿ ಸ್ಫೋಟದ ಕೇಂದ್ರಬಿಂದು. ಈತನೇ ಆತ್ಮಹತ್ಯಾ ಬಾಂಬರ್ ಎಂದು ಶಂಕಿಸಲಾಗಿದೆ.

ಯಾರೀತ?

ಫೆಬ್ರವರಿ 24, 1989 ರಂದು ಜಮ್ಮು ಮತ್ತು ಕಾಶ್ಮೀರದ ಪುಲ್ವಾಮಾದಲ್ಲಿ ಜನಿಸಿದ ಉಮರ್ ಮೊಹಮ್ಮದ್ ಫರಿದಾಬಾದ್‌ನ ಅಲ್ ಫಲಾಹ್ ವೈದ್ಯಕೀಯ ಕಾಲೇಜಿನಲ್ಲಿ ವೈದ್ಯರಾಗಿದ್ದರು. ಆತ ಶ್ರೀನಗರದ ಸರ್ಕಾರಿ ವೈದ್ಯಕೀಯ ಕಾಲೇಜಿನಿಂದ (ಜಿಎಂಸಿ) ತಮ್ಮ ಎಂಡಿ (ವೈದ್ಯಕೀಯ) ಪಡೆದಿದ್ದ. ಫರಿದಾಬಾದ್‌ಗೆ ವರ್ಗಾಯಿಸುವ ಮೊದಲು ಜಿಎಂಸಿ ಅನಂತ್‌ನಾಗ್‌ನಲ್ಲಿ ಹಿರಿಯ ನಿವಾಸಿಯಾಗಿ ಸೇವೆ ಸಲ್ಲಿಸಿದ್ದ. ಈತ "ವೈಟ್ ಕಾಲರ್" ಭಯೋತ್ಪಾದನಾ ಮಾಡ್ಯೂಲ್‌ನಲ್ಲಿ ಭಾಗಿಯಾಗಿದ್ದಕ್ಕಾಗಿ ಸೋಮವಾರ ಬಂಧಿಸಲಾದ ಇಬ್ಬರು ವೈದ್ಯರಾದ ಅದೀಲ್ ಅಹ್ಮದ್ ರಾಥರ್ ಮತ್ತು ಮುಜಮ್ಮಿಲ್ ಶಕೀಲ್ ಅವರ ಆಪ್ತ ಸಹಾಯಕರಾಗಿದ್ದರು ಎಂದು ಆರೋಪಿಸಲಾಗಿದೆ.

ತನ್ನ ಸಹಾಯಕರ ಬಂಧನದ ನಂತರ, ಉಮರ್ ಆತಂಕಗೊಂಡಿದ್ದ. ಬಳಿಕ ತನ್ನ ಬಿಳಿ ಹುಂಡೈ i20 ಕಾರಿನಲ್ಲಿ ಸ್ಫೋಟಕ್ಕೆ ಕಾರಣನಾದನೆಂದು ವರದಿಯಾಗಿದೆ. ಹಾನಿಗೊಳಗಾದ ವಾಹನದಲ್ಲಿ ದೇಹದ ಭಾಗಗಳು ಮತ್ತು ಕೈಗಳ ತುಣುಕುಗಳು ಕಂಡುಬಂದಿವೆ. ದೇಹವು ಉಮರ್ ಮೊಹಮ್ಮದ್‌ಗೆ ಸೇರಿದೆಯೇ ಎಂದು ನಿರ್ಧರಿಸಲು ಈಗ ಡಿಎನ್‌ಎ ಪರೀಕ್ಷೆಯನ್ನು ನಡೆಸಲಾಗುವುದು ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಉಮರ್ ಮೊಹಮ್ಮದ್ ಡಾ. ಅದೀಲ್ ಅವರ ಆಪ್ತರು ಎಂದು ವರದಿಯಾಗಿದೆ. ಅವರಿಬ್ಬರೂ ಟೆಲಿಗ್ರಾಮ್ ಚಾನೆಲ್‌ಗಳಲ್ಲಿ ಸಕ್ರಿಯವಾಗಿರುವ ತೀವ್ರಗಾಮಿ ವೈದ್ಯರ ಗುಂಪಿನೊಂದಿಗೆ ಸಂಬಂಧ ಹೊಂದಿದ್ದಾರೆ.

ಸಿಸಿಟಿವಿ ವೀಡಿಯೊಗಳು ಮತ್ತು ಚಿತ್ರಗಳ ಪ್ರಕಾರ, ಉಮರ್ ಬದರ್ಪುರದಿಂದ ಕಾರನ್ನು ಓಡಿಸಿ ಆಶ್ರಮ, ಸರಾಯ್ ಕಾಲೇ ಖಾನ್ ಮತ್ತು ಐಟಿಒ ಮೂಲಕ ಹೋಗಿ ಕೆಂಪು ಕೋಟೆಯ ಬಳಿಯ ಪಾರ್ಕಿಂಗ್ ಸ್ಥಳದಲ್ಲಿ ನಿಲ್ಲಿಸಲಾಗಿತ್ತು. ಕಾರನ್ನು ಮೂರು ಗಂಟೆಗಳಿಗೂ ಹೆಚ್ಚು ಕಾಲ ನಿಲ್ಲಿಸಲಾಗಿತ್ತು, ಮಧ್ಯಾಹ್ನ 3:19 ಕ್ಕೆ ಕಾರು ಪ್ರವೇಶಿಸಿದ ಆರೋಪಿ ಸಂಜೆ 6:30 ರ ಸುಮಾರಿಗೆ ಹೊರಟುಹೋದರು. ಮೂಲಗಳ ಪ್ರಕಾರ, ಉಮರ್ ಒಂದು ನಿಮಿಷವೂ ಕಾರನ್ನು ಬಿಟ್ಟು ಹೋಗಿರಲಿಲ್ಲ.

ಇನ್ನೂ ಮೂವರ ಕೈವಾಡ

ಉಮರ್ ಹೊರತುಪಡಿಸಿ, ದೆಹಲಿ 10/11 ಸ್ಫೋಟದಲ್ಲಿ ಇನ್ನೂ ಮೂವರು ಭಾಗಿಯಾಗಿದ್ದಾರೆಂದು ಶಂಕಿಸಲಾಗಿದೆ. ತಾರಿಕ್ ಅಹ್ಮದ್ ಮಲಿಕ್, ಆಮಿರ್ ರಶೀದ್ ಮತ್ತು ಉಮರ್ ರಶೀದ್. ಸೋಮವಾರ ರಾತ್ರಿ ಜಮ್ಮು ಮತ್ತು ಕಾಶ್ಮೀರದ ಪ್ಯಾಂಪೋರ್‌ನಿಂದ ಮೂವರು ಶಂಕಿತರನ್ನು ಬಂಧಿಸಲಾಯಿತು. ತಾರಿಕ್ ಮತ್ತು ಆಮಿರ್ ಅವರನ್ನು ಶ್ರೀನಗರಕ್ಕೆ ಕರೆತಂದು ವಿಚಾರಣೆ ನಡೆಸಲಾಗುತ್ತಿದ್ದರೂ, ಉಮರ್ ರಶೀದ್ ಇನ್ನೂ ಪಂಪೋರ್‌ನಲ್ಲಿದ್ದಾರೆ.

ತನಿಖೆಯಿಂದ ಆಮಿರ್ ಕಾರನ್ನು ಉಮರ್ ಮೊಹಮ್ಮದ್‌ಗೆ ನೀಡಿದ್ದ ಎಂದು ತಿಳಿದುಬಂದಿದೆ. ಒಂದು ಚಿತ್ರದಲ್ಲಿ, ಆಮಿರ್ ಕಾರಿನ ಕೀಲಿಯನ್ನು ಹಿಡಿದಿರುವುದು ಕಂಡುಬರುತ್ತದೆ, ಬಹುಶಃ ಅವರು ಕಾರು ಖರೀದಿಸಿದ ನಂತರ ತೆಗೆದದ್ದು. ಅಬ್ ರಶೀದ್ ಮಿರ್ ಅವರ 27 ವರ್ಷದ ಮಗ ಆಮಿರ್ ರಶೀದ್ ಮಿರ್ ಪ್ಲಂಬರ್ ಆಗಿ ಕೆಲಸ ಮಾಡುತ್ತಿದ್ದರು. 44 ವರ್ಷದ ತಾರಿಕ್ ಮಲಿಕ್ ಪುಲ್ವಾಮಾದ ಬ್ಯಾಂಕಿನಲ್ಲಿ ಭದ್ರತಾ ಸಿಬ್ಬಂದಿಯಾಗಿ ಕೆಲಸ ಮಾಡುತ್ತಿದ್ದ ಎನ್ನಲಾಗಿದೆ.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

Delhi Blast: ಬಂಧಿತ ವೈದ್ಯೆಗೆ 'ಜೈಶ್ ಇ ಮಹಮದ್' ಉಗ್ರ ಸಂಘಟನೆಯ ಮಹಿಳಾ ಘಟಕ ಸ್ಥಾಪನೆ 'ಟಾಸ್ಕ್': ವರದಿ

ದೆಹಲಿ ಸ್ಫೋಟದ ಲಿಂಕ್: ಫರಿದಾಬಾದ್ ನ ಅಲ್-ಫಲಾಹ್ ವಿಶ್ವವಿದ್ಯಾಲಯದ ಇಬ್ಬರು ವೈದ್ಯರ ಬಂಧನ, NIA ತನಿಖೆ

'ಮದರಸಾ ನಿಷೇಧ, ಮೌಲಾನಗಳು ಜೈಲಿಗೆ.. ಮುಸ್ಲಿಮರ ಸಮಗ್ರ ನಾಗರಿಕ ನೋಂದಣಿ': ಕೇಂದ್ರ ಸರ್ಕಾರಕ್ಕೆ ಬಸನಗೌಡ ಪಾಟೀಲ್ ಯತ್ನಾಳ್ ಸಲಹೆ

Red Fort blast: ಸಾವಿನ ಸಂಖ್ಯೆ 12ಕ್ಕೆ ಏರಿಕೆ: i20 ಕಾರು ಚಲಾಯಿಸುತ್ತಿದ್ದ ವ್ಯಕ್ತಿ ಪುಲ್ವಾಮಾ ವೈದ್ಯ; Video

Ranji Trophy 2025-26: ಮಿಂಚಿದ ಕನ್ನಡಿಗರು, ಮಹಾರಾಷ್ಟ್ರ ವಿರುದ್ಧ ಕರ್ನಾಟಕಕ್ಕೆ ಭಾರಿ ಮುನ್ನಡೆ

SCROLL FOR NEXT