ಗಣೇಶ್ ಗೋಡಿಯಾಲ್ 
ದೇಶ

ವಿಧಾನಸಭಾ ಚುನಾವಣೆಗೂ ಮುನ್ನ ಉತ್ತರಾಖಂಡ ಕಾಂಗ್ರೆಸ್ ಅಧ್ಯಕ್ಷರಾಗಿ ಗಣೇಶ್ ಮರುನೇಮಕ

ಮಹತ್ವದ ನಡೆಯಲ್ಲಿ, ಗಣೇಶ್ ಗೋಡಿಯಾಲ್ ಅವರನ್ನು ಉತ್ತರಾಖಂಡ ಪ್ರದೇಶ ಕಾಂಗ್ರೆಸ್ ಅಧ್ಯಕ್ಷರನ್ನಾಗಿ ಮರು ನೇಮಿಸಿದ್ದು, ಇದು ಅವರ ಎರಡನೇ ಅವಧಿಯಾಗಿದೆ.

ಡೆಹ್ರಾಡೂನ್: ಮುಂಬರುವ 2027 ರ ವಿಧಾನಸಭಾ ಚುನಾವಣೆಗೆ ಅಧಿಕೃತವಾಗಿ ಸಿದ್ಧತೆಗಳನ್ನು ಆರಂಭಿಸಿರುವ ಕಾಂಗ್ರೆಸ್ ಹೈಕಮಾಂಡ್, ಉತ್ತರಾಖಂಡ ಕಾಂಗ್ರೆಸ್ ಅಧ್ಯಕ್ಷರಾಗಿ ಗಣೇಶ್ ಗೋಡಿಯಾಲ್ ಅವರನ್ನು ಮರುನೇಮಕ ಮಾಡಿದೆ.

ಮಹತ್ವದ ನಡೆಯಲ್ಲಿ, ಗಣೇಶ್ ಗೋಡಿಯಾಲ್ ಅವರನ್ನು ಉತ್ತರಾಖಂಡ ಪ್ರದೇಶ ಕಾಂಗ್ರೆಸ್ ಅಧ್ಯಕ್ಷರನ್ನಾಗಿ ಮರು ನೇಮಿಸಿದ್ದು, ಇದು ಅವರ ಎರಡನೇ ಅವಧಿಯಾಗಿದೆ.

ಗೋಡಿಯಾಲ್ ಅವರು ಈ ಹಿಂದೆ 2021 ರಿಂದ 2022 ರವರೆಗೆ ಈ ಹುದ್ದೆಯನ್ನು ಅಲಂಕರಿಸಿದ್ದರು. 2022 ರ ವಿಧಾನಸಭಾ ಚುನಾವಣೆಗೆ ಸ್ವಲ್ಪ ಮೊದಲು ಉತ್ತರಾಖಂಡ ಅಧ್ಯಕ್ಷರಾಗಿ ಅಧಿಕಾರ ವಹಿಸಿಕೊಂಡಿದ್ದರು. ಆ ಸಮಯದಲ್ಲಿ, ಅವರಿಗೆ ಸಮಗ್ರ ಪುನರ್ರಚನೆಗೆ ಸೀಮಿತ ಅವಕಾಶವಿತ್ತು. ಈ ಬಾರಿ, ಮುಂದಿನ ಚುನಾವಣೆಗೆ ಸ್ವಲ್ಪ ಹೆಚ್ಚು ಸಮಯ ಇರುವಾಗ, ಗೋಡಿಯಾಲ್ ಅವರಿಗೆ ಸಾಂಸ್ಥಿಕ ರಚನೆಯನ್ನು ಪುನರ್ನಿರ್ಮಿಸಲು ಮತ್ತು ಪಕ್ಷದ ಕಾರ್ಯಕರ್ತರನ್ನು ಹುರಿದುಂಬಿಸಲು ಅವಕಾಶ ನೀಡಲಾಗಿದೆ ಎಂದು ನಿರೀಕ್ಷಿಸಲಾಗಿದೆ.

ಹೈಕಮಾಂಡ್‌ನ ಈ ನಿರ್ಧಾರವು ಮಾಜಿ ಮುಖ್ಯಮಂತ್ರಿ ಹರೀಶ್ ರಾವತ್ ವ್ಯಕ್ತಪಡಿಸಿದ ದೀರ್ಘಕಾಲದ ಆಶಯವನ್ನು ಈಡೇರಿಸುವಂತಿದೆ, ಅವರು ಇತ್ತೀಚೆಗೆ ಸಂಘಟನೆಯೊಳಗೆ ಬ್ರಾಹ್ಮಣ ಮುಖಗಳಿಗೆ ಹೆಚ್ಚಿನ ಪ್ರಾತಿನಿಧ್ಯ ನೀಡುವಂತೆ ಸಾಮಾಜಿಕ ಮಾಧ್ಯಮದಲ್ಲಿ ಪ್ರತಿಪಾದಿಸಿದ್ದರು.

ಬ್ರಾಹ್ಮಣ ಸಮುದಾಯದ ಗೋಡಿಯಾಲ್ ಅವರು ಉತ್ತರಾಖಂಡ ರಾಜಕೀಯದಲ್ಲಿ ಚಿರಪರಿಚಿತ ಮುಖ. ಆದರೆ ಅವರು ಅಧ್ಯಕ್ಷ ಸ್ಥಾನಕ್ಕೆ ಮತ್ತೆ ಮರಳಿರುವುದು ಕಾಂಗ್ರೆಸ್‌ನೊಳಗಿನ ಕೆಲವು ಬಣಗಳನ್ನು ಅಚ್ಚರಿಗೊಳಿಸಿದೆ ಎಂದು ವರದಿಯಾಗಿದೆ.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

GST ಕಡಿತ, ಆಹಾರ ವಸ್ತುಗಳ ಬೆಲೆ ಇಳಿಕೆ; ದಶಕದಲ್ಲೇ ಕನಿಷ್ಠ ಮಟ್ಟಕ್ಕೆ ಕುಸಿದ ಹಣದುಬ್ಬರ

ದೆಹಲಿ ಸ್ಫೋಟ ಸಂತ್ರಸ್ತರನ್ನು ಭೇಟಿ ಮಾಡಿ ಆರೋಗ್ಯ ವಿಚಾರಿಸಿದ ಪ್ರಧಾನಿ ಮೋದಿ, ಸಂಜೆ 5.30ಕ್ಕೆ CCS ತುರ್ತು ಸಭೆ!

ಆಕೆ ಹಿಂದೆಂದೂ ಬುರ್ಖಾ ಸಹ ಧರಿಸಿರಲಿಲ್ಲ, ಶಾಹೀನ್ ಉಗ್ರ ಚಟುವಟಿಕೆಗಳಲ್ಲಿ ತೊಡಗಿದ್ದಾಳೆ ಎಂಬುದು ನಮಗೆ ನಂಬಲು ಇನ್ನೂ ಅಸಾಧ್ಯ- ಮಾಜಿ ಪತಿ, ಸಹೋದರ

'ಸುಮ್ನೆ ಗಾಸಿಪ್ ಬೇಡ.. ಅವಳು ನನ್ನ ಹೆಂಡತಿ': ಒಂದೇ ವರ್ಷದ ಅವಧಿಯಲ್ಲಿ Rashid Khan 2ನೇ ಮದುವೆ!

ದೆಹಲಿ ಸ್ಫೋಟ ಕೇಂದ್ರ 'ಸರ್ಕಾರದ ವೈಫಲ್ಯ': ಕಾಂಗ್ರೆಸ್ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ

SCROLL FOR NEXT