ಚೆನ್ನೈ: ತಮಿಳುನಾಡಿನಲ್ಲಿ ಭಾರತೀಯ ವಾಯುಪಡೆ ವಿಮಾನವೊಂದು ಪತನವಾಗಿದ್ದು ಅದೃಷ್ಟವಶಾತ್ ಪೈಲಟ್ ಪ್ರಾಣಾಪಾಯದಿಂದ ಪಾರಾಗಿದ್ದಾರೆ.
ತಮಿಳುನಾಡಿನ ರಾಜಧಾನಿ ಚೆನ್ನೈನ ತಾಂಬರಂ ಬಳಿ ಇಂದು ಮಧ್ಯಾಹ್ನ ನಿಯಮಿತ ತರಬೇತಿ ಕಾರ್ಯಾಚರಣೆಯ ಸಮಯದಲ್ಲಿ ಭಾರತೀಯ ವಾಯುಪಡೆಯ PC-7 ಪಿಲಾಟಸ್ ತರಬೇತಿ ವಿಮಾನ ಪತನಗೊಂಡಿದೆ. ವಿಮಾನವು ಅರಣ್ಯ ಪ್ರದೇಶದಲ್ಲಿ ನೆಲಕ್ಕೆ ಅಪ್ಪಳಿಸುವ ಮೊದಲು ಪೈಲಟ್ ಸುರಕ್ಷಿತವಾಗಿ ಹೊರಗೆ ಹಾರಿದ್ದಾರೆ.
ಪೂರ್ವ ಕರಾವಳಿ ರಸ್ತೆ (ECR) ಅನ್ನು ರಾಜೀವ್ ಗಾಂಧಿ ಸಲೈ ಜೊತೆ ಸಂಪರ್ಕಿಸುವ ತಿರುಪೋರೂರು-ನೆಮ್ಮೆಲಿ ರಸ್ತೆಯಲ್ಲಿ ಉಪ್ಪು ಕಾರ್ಖಾನೆಯೊಳಗೆ ವಿಮಾನ ಅಪಘಾತಕ್ಕೀಡಾದಾಗ ದೊಡ್ಡ ಶಬ್ದ ಕೇಳಿಸಿತು ಎಂದು ಸ್ಥಳೀಯ ನಿವಾಸಿಗಳು ತಿಳಿಸಿದ್ದಾರೆ.
ಇದರಿಂದ ಉಪ್ಪು ತಯಾರಿಸಲು ಬಳಸುವ ಉಪ್ಪುನೀರನ್ನು ಸಾಗಿಸುವ ಪೈಪ್‌ಲೈನ್‌ಗಳು ಮತ್ತು ಕಾರ್ಖಾನೆಯ ಛಾವಣಿಗೆ ಹಾನಿಯಾಯಿತು. ಇದು ಉಪ್ಪುನೀರು ಮತ್ತು ಹತ್ತಿರದಲ್ಲಿ ಸಂಗ್ರಹಿಸಲಾದ ಉಪ್ಪಿನ ರಾಶಿಯನ್ನು ಸಹ ಕಲುಷಿತಗೊಳಿಸಿತು.
ಇನ್ನು ಈ ಅಪಪಾಘತಕ್ಕೆ ಸಂಬಂಧಿಸಿದಂತೆ ಭಾರತೀಯ ವಾಯುಪಡೆಯ ಅಧಿಕಾರಿಗಳು ತನಿಖೆಗೆ ಆದೇಶಿಸಿದ್ದಾರೆ. ನಿಯಮಿತ ತರಬೇತಿ ಕಾರ್ಯಾಚರಣೆಯಲ್ಲಿದ್ದ ಪಿಲಾಟಸ್ ಪಿಸಿ-7 ವಿಮಾನ ತಿರುಪೋರೂರು ಪಟ್ಟಣದ ಬಳಿ ಪತನಗೊಂಡಿದೆ ಎಂದು ರಕ್ಷಣಾ ವಕ್ತಾರರು ತಿಳಿಸಿದ್ದಾರೆ.
ಅಪಘಾತಕ್ಕೆ ಕಾರಣವನ್ನು ಕಂಡುಹಿಡಿಯಲು ವಿಚಾರಣಾ ನ್ಯಾಯಾಲಯಕ್ಕೆ (COI) ಆದೇಶಿಸಲಾಗಿದೆ. ಪೈಲಟ್‌ನನ್ನು ಏರ್ ಆಂಬ್ಯುಲೆನ್ಸ್‌ನಲ್ಲಿ ಕರೆದೊಯ್ಯಲಾಯಿತು ಮತ್ತು ಹೆಚ್ಚಿನ ತನಿಖೆ ನಡೆಯುತ್ತಿದೆ ಎಂದು ಮಾಹಿತಿ ನೀಡಿದ್ದಾರೆ.