ದೆಹಲಿ ಸ್ಫೋಟ 
ದೇಶ

Delhi blast: ಪ್ರಮುಖ ಆರೋಪಿಯ ಸಹಚರನನ್ನು ಬಂಧಿಸಿದ NIA

ಕಾರು ಸ್ಫೋಟ ಪ್ರಕರಣದ ತನಿಖೆ ನಡೆಸುತ್ತಿರುವ NIA ತಂಡ ಇಂದು ಶ್ರೀನಗರದಲ್ಲಿ ಅನೀಶ್ ಎಂದೂ ಕರೆಯಲ್ಪಡುವ ಜಾಸಿರ್ ಬಿಲಾಲ್ ವನಿಯನ್ನು ಬಂಧಿಸಿದ್ದು, ದೆಹಲಿಗೆ ಕರೆದೊಯ್ಯುತ್ತಿದೆ.

ಶ್ರೀನಗರ: ದೆಹಲಿ ಕಾರ್ ಬಾಂಬ್ ಸ್ಫೋಟದ ಪ್ರಮುಖ ಆರೋಪಿ ಡಾ. ಉಮರ್ ಉನ್ ನಬಿಯ ಮತ್ತೊಬ್ಬ ಸಹಚರನನ್ನು ರಾಷ್ಟ್ರೀಯ ತನಿಖಾ ಸಂಸ್ಥೆ(ಎನ್ಐಎ) ಸೋಮವಾರ ಬಂಧಿಸಿದೆ.

ಕಾರು ಸ್ಫೋಟ ಪ್ರಕರಣದ ತನಿಖೆ ನಡೆಸುತ್ತಿರುವ NIA ತಂಡ ಇಂದು ಶ್ರೀನಗರದಲ್ಲಿ ಅನೀಶ್ ಎಂದೂ ಕರೆಯಲ್ಪಡುವ ಜಾಸಿರ್ ಬಿಲಾಲ್ ವನಿಯನ್ನು ಬಂಧಿಸಿದ್ದು, ದೆಹಲಿಗೆ ಕರೆದೊಯ್ಯುತ್ತಿದೆ.

ಅನಂತನಾಗ್ ಜಿಲ್ಲೆಯ ಖಾಜಿಗುಂಡ್ ನಿವಾಸಿ ಜಾಸಿರ್ ದಾಳಿಯಲ್ಲಿ ಭಾಗಿಯಾಗಿರುವ ಗುಂಪಿಗೆ ತಾಂತ್ರಿಕ ಸಹಾಯ ನೀಡಿದ್ದಾನೆ ಎಂದು ತನಿಖಾಧಿಕಾರಿಗಳು ತಿಳಿಸಿದ್ದಾರೆ.

ಕಾರು ಬಾಂಬ್ ಸ್ಫೋಟಕ್ಕೆ ಮುಂಚಿನ ಅವಧಿಯಲ್ಲಿ ಆರೋಪಿ, ಡ್ರೋನ್‌ಗಳನ್ನು ಮಾರ್ಪಡಿಸುವ ಮತ್ತು ರಾಕೆಟ್‌ಗಳನ್ನು ತಯಾರಿಸಲು ಪ್ರಯತ್ನಿಸಿದ ಶಂಕೆ ವ್ಯಕ್ತವಾಗಿದೆ.

ತನಿಖಾ ಸಂಸ್ಥೆಯ ಪ್ರಕಾರ, ಜಾಸಿರ್, ಕಾರು ಸ್ಫೋಟ ಯೋಜಿಸುವಲ್ಲಿ ಪ್ರಮುಖ ಪಾತ್ರ ವಹಿಸಿದ್ದಾರೆಂದು ನಂಬಲಾದ ಭಯೋತ್ಪಾದಕ ಉಮರ್ ಉನ್ ನಬಿಯ ಸಹಚರನಾಗಿದ್ದ ಎನ್ನಲಾಗಿದೆ.

ಕೆಂಪು ಕೋಟೆ ಬಳಿ ನಡೆದ ದಾಳಿಯ ಹಿಂದಿನ ವ್ಯಾಪಕ ಪಿತೂರಿಯನ್ನು ಬಹಿರಂಗಪಡಿಸುವಲ್ಲಿ ಈ ಬಂಧನವು ಮತ್ತೊಂದು ಪ್ರಮುಖ ಹೆಜ್ಜೆಯಾಗಿದೆ ಎಂದು NIA ಹೇಳಿದೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

ಭಾರತದ ಚುನಾವಣಾ ವ್ಯವಸ್ಥೆಯ ವಿಶ್ವಾಸಾರ್ಹತೆ ಬಗ್ಗೆ ಜಾಗತಿಕವಾಗಿ ಅತ್ಯುತ್ತಮ ಸ್ಪಷ್ಟ ಅಭಿಪ್ರಾಯ- ಟ್ರಂಪ್ ಹೇಳಿಕೆ ಬೆನ್ನಲ್ಲೇ MEA ಪ್ರತಿಕ್ರಿಯೆ!

ಮಾಜಿ ಸಚಿವ ಬಿ. ಸಿ. ನಾಗೇಶ್ ನಿಧನ: ನಾಳೆ ತಿಪಟೂರಿನಲ್ಲಿ ಅಂತ್ಯಕ್ರಿಯೆ!

ಬೆಂಗಳೂರು ದಕ್ಷಿಣ ಜಿಲ್ಲೆಯಲ್ಲಿ ನಕಲಿ ಔಷಧಿ ಮರುಪ್ಯಾಕಿಂಗ್ ಬೃಹತ್ ಜಾಲ ಪತ್ತೆ: 5 ಕೋಟಿ ರೂ. ಮೌಲ್ಯದ ವಸ್ತುಗಳು ವಶಕ್ಕೆ!

ಪಸಿಂದು ಗೋಲ್ಡನ್ ಡಕೌಟ್: ಆಡಿದ 2ನೇ ಪಂದ್ಯದಲ್ಲೇ ಕುಂಬ್ಳೆ ದಾಖಲೆ ಸರಿಗಟ್ಟಿದ Team India ಯುವ ಸ್ಪಿನ್ನರ್ ಮಾನವ್ ಸುತಾರ್!

ದೇವೇಗೌಡರ ಕೂಸನ್ನು ಹಾದಿ ತಪ್ಪಿಸಿ ಯಾರಪ್ಪನಿಗೆ ಕೊಡಲು ಹೊರಟಿದ್ದೀರಿ ಮಿಸ್ಟರ್ ಡಿ.ಕೆ. ಶಿವಕುಮಾರ್? ತಾಕತ್ ಇದ್ರೆ ಚರ್ಚೆಗೆ ಬನ್ನಿ, ಕುಮಾರಸ್ವಾಮಿ ಸವಾಲು!