ಶತ್ರುಘ್ನ ಸಿನ್ಹಾ , ನಿತೀಶ್ ಕುಮಾರ್ 
ದೇಶ

ಬಿಹಾರ ಚುನಾವಣೆಯಲ್ಲಿ ಭರ್ಜರಿ ಗೆಲುವು: ನಿತೀಶ್ ಕುಮಾರ್ ಹಾಡಿ ಹೊಗಳಿದ TMC ಸಂಸದ ಶತ್ರುಘ್ನ ಸಿನ್ಹಾ!

ಜನರ ನಿರೀಕ್ಷೆಗಳಿಗೆ ತಕ್ಕಂತೆ ಆಡಳಿತ ನಡೆಸಲು ನಿತೀಶ್ ಕುಮಾರ್ ಅವರಿಗೆ ದೇವರು ಆಶೀರ್ವದಿಸಲಿ. ಅದೇ ರೀತಿ ಎನ್ ಡಿಎ ಮಿತ್ರ ಪಕ್ಷಗಳಿಗೆ ಅಭಿನಂದನೆಗಳು.

ಕೋಲ್ಕತ್ತ: ಇತ್ತೀಚಿಗೆ ನಡೆದ ಬಿಹಾರ ವಿಧಾನಸಭೆಯಲ್ಲಿ ಎನ್ ಡಿಎ ಭರ್ಜರಿ ಗೆಲುವು ಸಾಧಿಸಿರುವ ಹಿನ್ನೆಲೆಯಲ್ಲಿ ಟಿಎಂಸಿ ಸಂಸದ ಶತ್ರುಘ್ನ ಸಿನ್ಹಾ ಜೆಡಿಯು ನಾಯಕ ನಿತೀಶ್ ಕುಮಾರ್ ಅವರನ್ನು ಹಾಡಿ ಹೊಗಳಿದ್ದಾರೆ.

ಈ ಕುರಿತು ಸಾಮಾಜಿಕ ಜಾಲತಾಣ ಎಕ್ಸ್ ನಲ್ಲಿ ಪೋಸ್ಟ್ ಮಾಡಿರುವ ಶತ್ರುಘ್ನ ಸಿನ್ಹಾ, ನಮ್ಮ ಬಿಹಾರದ ಜನರು ಚುನಾವಣೆಯಲ್ಲಿ ತಮ್ಮ ಅಮೂಲ್ಯವಾದ ಮತ ಚಲಾಯಿಸುವ ಮೂಲಕ ಅರ್ಹವಾದ ಸರ್ಕಾರವನ್ನು ಮಾಡಿಕೊಂಡಿದ್ದಕ್ಕಾಗಿ ಮತ್ತು ಅತ್ಯಂತ ಜನಪ್ರಿಯ, ಸಜ್ಜನ ರಾಜಕಾರಣಿಯಾದ ನಿತೀಶ್ ಕುಮಾರ್ ಅವರ ನಾಯಕತ್ವವನ್ನು ಬೆಂಬಲಿಸಿದ್ದಕ್ಕಾಗಿ ಎಲ್ಲರಿಗೂ ಅಭಿನಂದನೆ ಎಂದಿದ್ದಾರೆ.

ಜನರ ನಿರೀಕ್ಷೆಗಳಿಗೆ ತಕ್ಕಂತೆ ಆಡಳಿತ ನಡೆಸಲು ನಿತೀಶ್ ಕುಮಾರ್ ಅವರಿಗೆ ದೇವರು ಆಶೀರ್ವದಿಸಲಿ. ಅದೇ ರೀತಿ ಎನ್ ಡಿಎ ಮಿತ್ರ ಪಕ್ಷಗಳಿಗೆ ಅಭಿನಂದನೆಗಳು, ಜೈ ಬಿಹಾರ, ಜೈ ಹಿಂದ್ ಎಂದು ಬರೆದುಕೊಂಡಿದ್ದಾರೆ.

ಶತ್ರುಘ್ನ ಸಿನ್ಹಾ ಅವರ ಹೇಳಿಕೆ ರಾಜಕೀಯ ವಲಯಗಳಿಗೆ ಕುತೂಹಲ ಮೂಡಿಸಿದೆ. ಸಿನ್ಹಾ ಅವರು ಬಿಹಾರ ಮೂಲದವರಾಗಿದ್ದು, ಇದು ಅವರ ವೈಯುಕ್ತಿಕ ಅಭಿಪ್ರಾಯವಾಗಿದೆ ಎಂದು ಟಿಎಂಸಿ ಹೇಳಿದೆ.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

ಯಾವುದೇ ಕ್ಷಣದಲ್ಲಿ ಅಮೆರಿಕದಿಂದ ವೈಮಾನಿಕ ದಾಳಿ ಸಾಧ್ಯತೆ: ಇರಾನ್ ತೊರೆಯುವಂತೆ ಭಾರತೀಯ ಪ್ರಜೆಗಳಿಗೆ ಸೂಚನೆ

ಆಫ್ರಿಕಾ ವಿರುದ್ಧ ಹೀನಾಯ ಸೋಲು: ಸ್ಯಾಮ್ಸನ್ ಬದಲಿಗೆ ತಿಲಕ್ ವರ್ಮಾನ ಕೈಬಿಡಬೇಕಾ ಎಂದು ನಕ್ಕಿದ್ದ ಸೂರ್ಯಗೆ ತೀವ್ರ ಮುಖಭಂಗ!

ಚಿನ್ನದ ಬೆಲೆ ಏರಿಕೆಯಾಗಿದೆ ಆದರೆ 'ಮಿತಿ ಮೀರಿಲ್ಲ', ಸರ್ಕಾರ ಸೂಕ್ಷ್ಮವಾಗಿ ಗಮನಿಸುತ್ತಿದೆ: ನಿರ್ಮಲಾ ಸೀತಾರಾಮನ್

ಮಾದಕ ವಸ್ತು ನೀಡಿ ಸಾಮೂಹಿಕ ಅತ್ಯಾಚಾರ: ಸ್ನೇಹಿತರ ವಿರುದ್ಧವೇ ಹನಿಟ್ಯ್ರಾಪ್ ಆರೋಪಿ ಯುವತಿ ದೂರು!

T20 World Cup 2026: 'ಅತಿಯಾದ ಆತ್ಮವಿಶ್ವಾಸ ಹೊಂದಿದ್ದ ಟೀಂ ಇಂಡಿಯಾ ಅಹಂಕಾರ ಬಿಟ್ಟು, ಪರಿಸ್ಥಿತಿಗಳಿಗೆ ಹೊಂದಿಕೊಳ್ಳುವ ಅಗತ್ಯವಿತ್ತು'

SCROLL FOR NEXT