ನರೇಂದ್ರ ಮೋದಿ 
ದೇಶ

ರೈತರು ಶಾಲು ಬೀಸಿದ್ದನ್ನು ನೋಡಿದರೆ ಬಿಹಾರದ ಗಾಳಿ ತಮಿಳುನಾಡಿಗೆ ಬಂದಂತೆ ಭಾಸವಾಯಿತು: ಪ್ರಧಾನಿ ಮೋದಿ

ಸಾವಯವ ಕೃಷಿಗೆ ಭಾರತ ಜಾಗತಿಕ ಕೇಂದ್ರವಾಗುವತ್ತ ಸಾಗುತ್ತಿದೆ. ಇದು ದೇಶದ ಸ್ಥಳೀಯ ಮತ್ತು ಸಾಂಪ್ರದಾಯಿಕ ವಿಧಾನ ಎಂದು ಪ್ರಧಾನಿ ನರೇಂದ್ರ ಮೋದಿ ಹೇಳಿದರು.

ಕೊಯಮತ್ತೂರು: ಸಾವಯವ ಕೃಷಿಗೆ ಭಾರತ ಜಾಗತಿಕ ಕೇಂದ್ರವಾಗುವತ್ತ ಸಾಗುತ್ತಿದೆ. ಇದು ದೇಶದ ಸ್ಥಳೀಯ ಮತ್ತು ಸಾಂಪ್ರದಾಯಿಕ ವಿಧಾನ ಎಂದು ಪ್ರಧಾನಿ ನರೇಂದ್ರ ಮೋದಿ ಹೇಳಿದರು. ರಾಷ್ಟ್ರೀಯ ಪ್ರಜಾಸತ್ತಾತ್ಮಕ ಒಕ್ಕೂಟ (NDA)ದ ಅದ್ಭುತ ಗೆಲುವಿನ ನಂತರ ತಮಿಳುನಾಡಿಗೆ ಆಗಮಿಸಿದಾಗ ರೈತರು ಶಾಲುಗಳನ್ನು ಬೀಸುತ್ತಿರುವುದನ್ನು ನೋಡಿದರೆ ನಾನು ಬರುವುದಕ್ಕೂ ಮೊದಲೇ 'ಬಿಹಾರದ ಗಾಳಿ' ತಮಿಳುನಾಡಿಗೆ ಬಂದಂತೆ ಭಾಸವಾಗುತ್ತಿದೆ ಎಂದರು.

ದಕ್ಷಿಣ ಭಾರತ ನೈಸರ್ಗಿಕ ಕೃಷಿ ಶೃಂಗಸಭೆ 2025 ಮತ್ತು ಪ್ರದರ್ಶನವನ್ನು ಉದ್ಘಾಟಿಸಿದ ಪ್ರಧಾನಿ ಮೋದಿ, ಒಂಬತ್ತು ಕೋಟಿ ರೈತರಿಗೆ ನೆರವು ನೀಡುವ ಪಿಎಂ-ಕಿಸಾನ್ ಯೋಜನೆಯ 21ನೇ ಕಂತಿನ ಒಟ್ಟು ಮೊತ್ತ 18,000 ಕೋಟಿಗೂ ಹೆಚ್ಚು ಹಣವನ್ನು ರೈತರ ಖಾತೆಗಳಿಗೆ ವರ್ಗಾಯಿಸಿದರು. ತಮಿಳುನಾಡಿನಲ್ಲಿ ಎಐಎಡಿಎಂಕೆ ನೇತೃತ್ವದ ರಾಷ್ಟ್ರೀಯ ಪ್ರಜಾಸತ್ತಾತ್ಮಕ ಒಕ್ಕೂಟ (ಎನ್‌ಡಿಎ) ಮುಂದಿನ ವರ್ಷ ನಡೆಯಲಿರುವ ವಿಧಾನಸಭಾ ಚುನಾವಣೆಯಲ್ಲಿ ಆಡಳಿತಾರೂಢ ದ್ರಾವಿಡ ಮುನ್ನೇತ್ರ ಕಳಗಂ (DMK) ನೇತೃತ್ವದ ಮೈತ್ರಿಕೂಟದ ವಿರುದ್ಧ ಸ್ಪರ್ಧಿಸಲಿದೆ. ವಿರೋಧ ಪಕ್ಷಗಳ ಮೈತ್ರಿಕೂಟವು ಎಂ.ಕೆ ಸ್ಟಾಲಿನ್ ನೇತೃತ್ವದ ಸರ್ಕಾರವನ್ನು ಉರುಳಿಸಲು ಪ್ರಯತ್ನಿಸುತ್ತಿದೆ.

ಸಮ್ಮೇಳನವನ್ನುದ್ದೇಶಿಸಿ ಮಾತನಾಡಿದ ಮೋದಿ, ರಾಸಾಯನಿಕ ಗೊಬ್ಬರ ಮತ್ತು ಕೀಟನಾಶಕಗಳ ಅತಿಯಾದ ಬಳಕೆಯು ಮಣ್ಣಿನ ಫಲವತ್ತತೆ ಕುಸಿತಕ್ಕೆ ಕಾರಣವಾಗಿದೆ. ಸಾವಯವ ಕೃಷಿಗೆ ಸಂಪೂರ್ಣ ಬೆಂಬಲ ನೀಡಲಾಗುತ್ತಿದೆ ಎಂದು ಹೇಳಿದರು. ಬೆಳೆ ವೈವಿಧ್ಯೀಕರಣ ಮತ್ತು ಸಾವಯವ ಕೃಷಿಯು ಮಣ್ಣಿನ ಸಂಬಂಧಿತ ಸಮಸ್ಯೆಗಳಿಗೆ ಪರಿಹಾರವಾಗಿದೆ ಎಂದು ಅವರು ಹೇಳಿದರು. ಹವಾಮಾನ ಬದಲಾವಣೆಯ ಸವಾಲುಗಳನ್ನು ಪರಿಹರಿಸಲು ಸಾವಯವ ಕೃಷಿಯೂ ಸಹಾಯ ಮಾಡುತ್ತದೆ ಎಂದು ಮೋದಿ ಹೇಳಿದರು.

ಕಳೆದ 11 ವರ್ಷಗಳಲ್ಲಿ ದೇಶದ ಕೃಷಿ ಕ್ಷೇತ್ರವು ಗಮನಾರ್ಹ ಪರಿವರ್ತನೆಗೆ ಒಳಗಾಗಿದೆ ಎಂದು ಪ್ರಧಾನಿ ಮೋದಿ ತಮ್ಮ ಭಾಷಣದಲ್ಲಿ ಹೇಳಿದರು. ಕೃಷಿ ರಫ್ತು ಬಹುತೇಕ ದ್ವಿಗುಣಗೊಂಡಿದೆ. ರೈತರು ಕೃಷಿಯನ್ನು ಆಧುನೀಕರಿಸಲು ಸರ್ಕಾರ ಎಲ್ಲಾ ರೀತಿಯ ಸಹಾಯಕ್ಕೂ ಬಾಗಿಲು ತೆರೆದಿದೆ. ಭವಿಷ್ಯದ ಯೋಜನೆಗಳನ್ನು ಉಲ್ಲೇಖಿಸುತ್ತಾ ಅವರು, "ಮುಂಬರುವ ದಿನಗಳಲ್ಲಿ ಭಾರತವು ನೈಸರ್ಗಿಕ ಕೃಷಿಗೆ ವಿಶ್ವ ಕೇಂದ್ರವಾಗಲಿದೆ. ನಮ್ಮ ಜೀವವೈವಿಧ್ಯವು ಹೊಸ ರೂಪವನ್ನು ಪಡೆಯುತ್ತಿದೆ. ಇಂದಿನ ಯುವಕರು ಕೃಷಿಯನ್ನು ಆಧುನಿಕ ಮತ್ತು ಪ್ರಮುಖ ಅವಕಾಶವಾಗಿ ನೋಡುತ್ತಿದ್ದಾರೆ. ಇದು ಗ್ರಾಮೀಣ ಆರ್ಥಿಕತೆಯನ್ನು ಹೆಚ್ಚು ಬಲಪಡಿಸುತ್ತದೆ ಎಂದರು.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

ಬೆಂಗಳೂರಿನಲ್ಲಿ ಹಗಲು ದರೋಡೆ: 7 ಕೋಟಿ ಕದ್ದ ಖದೀಮರು; 4 ಶಂಕಿತರ ಫೋಟೋ, ಡಿಜಿ-ಐಜಿಪಿಗೆ ಪರಮೇಶ್ವರ್ ತಾಕೀತು!

ದೆಹಲಿಯ JNU ಗೆ ಶೃಂಗೇರಿ ಶ್ರೀಗಳ ಭೇಟಿ: ಕ್ಯಾಂಪಸ್ ನಲ್ಲಿ ವಿದ್ಯಾರಣ್ಯ ಮೂರ್ತಿಗೆ ಮಾಲಾರ್ಪಣೆ; VIKAS ಕುರಿತು ಉಪನ್ಯಾಸ;

ಶಬರಿಮಲೆಯಲ್ಲಿ ಜನದಟ್ಟಣೆ: ಅಯ್ಯಪ್ಪ ಭಕ್ತರ ಸುರಕ್ಷಿತ, ಸುಗಮ ಸಂಚಾರಕ್ಕಾಗಿ ಕೇರಳಕ್ಕೆ ಕರ್ನಾಟಕ ಸರ್ಕಾರ ಮನವಿ!

"ಉಪಾಸನಾ ಕೊನಿಡೆಲಾ ಮಾತೆಲ್ಲಾ ಕೇಳ್ಬೇಡಿ; 20 ವರ್ಷಕ್ಕೆ ಮದುವೆಯಾಗಿ ಮಕ್ಕಳು ಮಾಡ್ಕೊಳಿ": Zoho ಸಂಸ್ಥಾಪಕನ ಮಾತು ಕೇಳಿ ಓಹೋ ಎಂದ ಜನ!

ನುಗ್ಗಿ ಹೊಡೆದಿದ್ದೇವೆ ಎಂಬ ಪಾಕ್ ಹೇಳಿಕೆ ಬೆನ್ನಲ್ಲೆ ಪ್ರತೀಕಾರಕ್ಕೆ ಮುಂದಾದ ಭಾರತ; ತೀವ್ರ ತಪಾಸಣೆ, ಟಾರ್ಗೆಟ್ ಫಿಕ್ಸ್, ಜಮ್ಮು-ಕಾಶ್ಮೀರದ ವೈದ್ಯರಿಗೆ ನಡುಕ!

SCROLL FOR NEXT