ಪಣಜಿ: ಗೋವಾದಲ್ಲಿ ಆಯೋಜಿಸಲಾಗಿದ್ದ "ಗೋವಾ ಕಾಮಸೂತ್ರ ಮತ್ತು ಕ್ರಿಸ್‌ಮಸ್ ಆಚರಣೆಗಳ ಕಥೆಗಳು" ಕಾರ್ಯಕ್ರಮಕ್ಕೆ ತೀವ್ರ ವಿರೋಧ ವ್ಯಕ್ತವಾಗತೊಡಗಿದೆ.
ಕಾರ್ಯಕ್ರಮದ ಜಾಹೀರಾತು ಆಕ್ರೋಶಕ್ಕೆ ಕಾರಣವಾಗಿದ್ದು, ಮುಂದಿನ ತಿಂಗಳು ನಿಗದಿಯಾಗಿದ್ದ ಕಾರ್ಯಕ್ರಮವನ್ನು ರದ್ದುಗೊಳಿಸುವಂತೆ ಆಯೋಜಕರಿಗೆ ಪೊಲೀಸರು ನಿರ್ದೇಶನ ನೀಡಿದ್ದಾರೆ ಎಂದು ಅಧಿಕಾರಿಯೊಬ್ಬರು ತಿಳಿಸಿದ್ದಾರೆ.
ಡಿಸೆಂಬರ್ 25 ರಿಂದ 28 ರವರೆಗೆ ಕರಾವಳಿ ರಾಜ್ಯದಲ್ಲಿ ನಡೆಯಲಿರುವ ಕಾರ್ಯಕ್ರಮಕ್ಕೆ ಸ್ಥಳೀಯ ಎನ್‌ಜಿಒ ಆಕ್ಷೇಪ ವ್ಯಕ್ತಪಡಿಸಿದ ನಂತರ ಪೊಲೀಸರು ಈ ವಿಷಯವನ್ನು ಗಂಭೀರವಾಗಿ ಪರಿಗಣಿಸಿ ಕ್ರಮ ಕೈಗೊಂಡಿದ್ದಾರೆ.
ಭಾನುವಾರ ಎಕ್ಸ್‌ನಲ್ಲಿ ಕಾರ್ಯಕ್ರಮದ ಪೋಸ್ಟರ್ ನ್ನು ಹಂಚಿಕೊಂಡ ಪೊಲೀಸರು, ಈ ವಿಷಯವನ್ನು ಗಮನದಲ್ಲಿಟ್ಟುಕೊಂಡು ಕಾರ್ಯಕ್ರಮವನ್ನು ರದ್ದುಗೊಳಿಸದಂತೆ ಆಯೋಜಕರಿಗೆ ನಿರ್ದೇಶನ ನೀಡಲಾಗಿದೆ ಎಂದು ಹೇಳಿದ್ದಾರೆ
"ಸಾಮಾಜಿಕ ಮಾಧ್ಯಮದಿಂದ ಜಾಹೀರಾತುಗಳನ್ನು ತೆಗೆದುಹಾಕಲು ಸಂಘಟಕರಿಗೆ ನಿರ್ದೇಶನ ನೀಡಲಾಗಿದೆ" ಎಂದು ಪೊಲೀಸರು ತಮ್ಮ ಪೋಸ್ಟ್‌ನಲ್ಲಿ ತಿಳಿಸಿದ್ದಾರೆ, ತಮ್ಮ ವ್ಯಾಪ್ತಿಯಲ್ಲಿ ಮುಂಬರುವ ಕಾರ್ಯಕ್ರಮಗಳ ಬಗ್ಗೆ ಜಾಗರೂಕರಾಗಿರಲು ಪೊಲೀಸ್ ಠಾಣೆಗಳಿಗೆ ನಿರ್ದೇಶನ ನೀಡಲಾಗಿದೆ ಎಂದು ಪೊಲೀಸರು ತಮ್ಮ ಪೋಸ್ಟ್‌ನಲ್ಲಿ ತಿಳಿಸಿದ್ದಾರೆ.
"ಗೋವಾದಲ್ಲಿ ಕಾಮಸೂತ್ರ-ಕ್ರಿಸ್‌ಮಸ್ ಸೆಲೆಬ್ರೇಷನ್ಸ್ ಕಥೆಗಳು" ಕಾರ್ಯಕ್ರಮ ಭಗವಾನ್ ಶ್ರೀ ರಜನೀಶ್ ಫೌಂಡೇಶನ್ ಬ್ಯಾನರ್ ಅಡಿಯಲ್ಲಿ ಆಯೋಜಿಸಲಾಗಿದ್ದು ಸಾಮಾಜಿಕ ಮಾಧ್ಯಮದಲ್ಲಿ ಈ ಕುರಿತು ಜಾಹೀರಾತು ಪ್ರಕಟಿಸಲಾಗಿದೆ.
ಪೋಸ್ಟರ್‌ನಲ್ಲಿ ಕಾರ್ಯಕ್ರಮದ ಸ್ಥಳವಿಲ್ಲದಿದ್ದರೂ, ಆಯೋಜಕರನ್ನು ಭಗವಾನ್ ಶ್ರೀ ರಜನೀಶ್ ಫೌಂಡೇಶನ್‌ನ ಓಶೋ ಲುದಿಯಾನಾ ಧ್ಯಾನ ಸಂಘದ ಸಂಸ್ಥಾಪಕ ಸ್ವಾಮಿ ಧ್ಯಾನ್ ಸುಮಿತ್ ಎಂದು ಉಲ್ಲೇಖಿಸಲಾಗಿದೆ.