ಬಂಡಿ ಸಂಜಯ್ ಕುಮಾರ್  
ದೇಶ

ಬಿಜೆಪಿ ಬೆಂಬಲಿತ ಅಭ್ಯರ್ಥಿ ಆಯ್ಕೆ ಮಾಡಿ ತಕ್ಷಣವೇ ಅಭಿವೃದ್ಧಿಗೆ 10 ಲಕ್ಷ ರೂ. ಪಡೆಯಿರಿ: ಕೇಂದ್ರ ಸಚಿವ ಬಂಡಿ ಸಂಜಯ್ ಕುಮಾರ್

ಹಿಂದಿನ ಬಿಆರ್‌ಎಸ್ ಮತ್ತು ಕಾಂಗ್ರೆಸ್ ಸರ್ಕಾರಗಳು ತಮ್ಮ ಪದಾಧಿಕಾರಿಗಳನ್ನು ಸರ್ವಾನುಮತದಿಂದ ಆಯ್ಕೆ ಮಾಡುವ ಪಂಚಾಯತ್‌ಗಳಿಗೆ ಹಣವನ್ನು ನೀಡುವುದಾಗಿ ಭರವಸೆ ಮಾತ್ರ ನೀಡಿ ನಂತರ ಹಣ ಬಿಡುಗಡೆ ಮಾಡದೆ ವಂಚಿಸಿವೆ ಎಂದು ಟೀಕಿಸಿದರು.

ಹೈದರಾಬಾದ್: ಮುಂದಿನ ತಿಂಗಳು ತೆಲಂಗಾಣದಲ್ಲಿ ನಡೆಯಲಿರುವ ಗ್ರಾಮ ಪಂಚಾಯತ್ ಚುನಾವಣೆಯಲ್ಲಿ ಬಿಜೆಪಿ ಬೆಂಬಲಿತ ಅಭ್ಯರ್ಥಿಯನ್ನು ಆಯ್ಕೆ ಮಾಡಿದರೆ ತಮ್ಮ ಕರೀಂನಗರ ಲೋಕಸಭಾ ಕ್ಷೇತ್ರದ ಹಳ್ಳಿಗಳಿಗೆ 10 ಲಕ್ಷ ರೂಪಾಯಿ ಹಣ ನೀಡುವುದಾಗಿ ಕೇಂದ್ರ ಸಚಿವ ಬಂಡಿ ಸಂಜಯ್ ಕುಮಾರ್ ಹೇಳಿದ್ದಾರೆ.

ಹಿಂದಿನ ಬಿಆರ್‌ಎಸ್ ಮತ್ತು ಕಾಂಗ್ರೆಸ್ ಸರ್ಕಾರಗಳು ತಮ್ಮ ಪದಾಧಿಕಾರಿಗಳನ್ನು ಸರ್ವಾನುಮತದಿಂದ ಆಯ್ಕೆ ಮಾಡುವ ಪಂಚಾಯತ್‌ಗಳಿಗೆ ಹಣವನ್ನು ನೀಡುವುದಾಗಿ ಭರವಸೆ ಮಾತ್ರ ನೀಡಿ ನಂತರ ಹಣ ಬಿಡುಗಡೆ ಮಾಡದೆ ವಂಚಿಸಿವೆ ಎಂದು ಆರೋಪಿಸಿದ ಅವರು, ಈ ಬಾರಿ ಅಂತಹ ತಂತ್ರಗಳಿಗೆ ಬಲಿಯಾಗಬೇಡಿ ಎಂದು ಮತದಾರರಿಗೆ ಮನವಿ ಮಾಡಿಕೊಂಡರು.

ಕರೀಂನಗರ ಗ್ರಾಮಗಳು ಬಿಜೆಪಿ ಬೆಂಬಲಿತ ಅಭ್ಯರ್ಥಿಯನ್ನು ಸರ್ವಾನುಮತದಿಂದ ಆಯ್ಕೆ ಮಾಡಿ ಅಭಿವೃದ್ಧಿಗಾಗಿ ತಕ್ಷಣವೇ 10 ಲಕ್ಷ ರೂಪಾಯಿ ಪಡೆಯಿರಿ. ನಿಮ್ಮ ಗ್ರಾಮವು ಕರೀಂನಗರ ಸಂಸದೀಯ ಕ್ಷೇತ್ರದಲ್ಲಿ ಬಿಜೆಪಿ ಬೆಂಬಲಿತ ಅಧ್ಯಕ್ಷರನ್ನು ಸರ್ವಾನುಮತದಿಂದ ಆಯ್ಕೆ ಮಾಡಿದರೆ, ಆ ಗ್ರಾಮದ ಅಭಿವೃದ್ಧಿಗೆ ನಾನು ನೇರವಾಗಿ 10 ಲಕ್ಷ ರೂಪಾಯಿ ನೀಡುತ್ತೇನೆ ಎಂದು ಅವರು ಎಕ್ಸ್ ಪೋಸ್ಟ್ ನಲ್ಲಿ ತಿಳಿಸಿದ್ದಾರೆ.

ಸಂಸತ್ ಸದಸ್ಯರಾಗಿ, ಎಂಪಿಲ್ಯಾಡ್ ನಿಧಿಗಳು ತಮ್ಮ ಬಳಿ ಲಭ್ಯವಿದೆ ಎಂದು ಕೇಂದ್ರ ಗೃಹ ಖಾತೆ ರಾಜ್ಯ ಸಚಿವರೂ ಆಗಿರುವ ಸಂಜಯ್ ಕುಮಾರ್ ಹೇಳಿದರು.

ಕಾರ್ಪೊರೇಟ್ ಸಾಮಾಜಿಕ ಜವಾಬ್ದಾರಿ (CSR) ಮೂಲಕ ಕೋಟಿಗಟ್ಟಲೆ ಹಣವನ್ನು ಹೇಗೆ ತಂದು ಶಿಕ್ಷಣ ಮತ್ತು ಆರೋಗ್ಯ ರಕ್ಷಣೆಯಲ್ಲಿ ಹೂಡಿಕೆ ಮಾಡಿದರು ಎಂಬುದು ಜನರಿಗೆ ಈಗಾಗಲೇ ತಿಳಿದಿದೆ. ಕೇಂದ್ರ ಸಚಿವರಾಗಿ, ಪಂಚಾಯತ್ ಅಭಿವೃದ್ಧಿಯನ್ನು ಬಲಪಡಿಸಲು ಇನ್ನೂ ಹೆಚ್ಚಿನ ಕೇಂದ್ರ ನಿಧಿಗಳನ್ನು ಪಡೆದುಕೊಂಡಿರುವುದಾಗಿ ತಿಳಿಸಿದರು.

ಹಿಂದಿನ ಬಿಆರ್ ಎಸ್ ಸರ್ಕಾರವು ಚುನಾವಣೆ ಸರ್ವಾನುಮತದಿಂದ ನಡೆಯುವ ಪಂಚಾಯತ್‌ಗಳಿಗೆ ಐದು ಲಕ್ಷ ರೂಪಾಯಿ ಭರವಸೆ ನೀಡಿತ್ತು. ಕರೀಂನಗರ ಸಂಸತ್ ಪ್ರದೇಶದ ಸುಮಾರು 70 ಹಳ್ಳಿಗಳು ಆ ಭರವಸೆಯನ್ನು ನಂಬಿ ಬಿಆರ್ ಎಸ್ ಅಭ್ಯರ್ಥಿಗಳನ್ನು ಸರ್ವಾನುಮತದಿಂದ ಆಯ್ಕೆ ಮಾಡಿದ್ದವು ಎಂದು ಹೇಳಿದರು.

ಐದು ವರ್ಷಗಳ ನಂತರವೂ, ಆಗಿನ ಕೆಸಿಆರ್ ಸರ್ಕಾರವು ಒಂದೇ ಒಂದು ರೂಪಾಯಿಯನ್ನು ಬಿಡುಗಡೆ ಮಾಡಲಿಲ್ಲ ಎಂದು ಆರೋಪಿಸಿದರು.

ಈ ಹಿಂದೆ, ಕಾಂಗ್ರೆಸ್ ಸರ್ಕಾರವು ಇದೇ ರೀತಿಯ ಭರವಸೆಗಳನ್ನು ನೀಡಿ ಸರ್ವಾನುಮತದ ಚುನಾವಣೆಯ ಹೆಸರಿನಲ್ಲಿ ಜನರನ್ನು ವಂಚಿಸಿತು. ಕಾಂಗ್ರೆಸ್ ಮತ್ತು ಬಿಆರ್ ಎಸ್ ನಂಬಿದವರು ಆರ್ಥಿಕವಾಗಿ ಬಳಲುತ್ತಿದ್ದರು. ಎರಡೂ ಪಕ್ಷಗಳು ಈಗ ಅದೇ ವಂಚನೆಯನ್ನು ಪುನರಾವರ್ತಿಸಲು ತಯಾರಿ ನಡೆಸುತ್ತಿವೆ. ಕರೀಂನಗರ ಜನರು ಅವರ ಮಾತುಗಳಿಗೆ ಬಲಿಯಾಗಬೇಡಿ ಎಂದು ನಾನು ಒತ್ತಾಯಿಸುತ್ತೇನೆ ಎಂದು ಸಂಜಯ್ ಕುಮಾರ್ ಹೇಳಿದರು.

ಕಾಂಗ್ರೆಸ್ ಅಥವಾ ಬಿಆರ್‌ಎಸ್ ಬೆಂಬಲಿತ ಅಭ್ಯರ್ಥಿಗಳು ತಪ್ಪಾಗಿ ಒಂದು ವೇಳೆ ಗೆದ್ದರೆ ಹೊಸ ನಿಧಿಗಳು ಬರುವುದಿಲ್ಲ. ಕೇಂದ್ರ ನಿಧಿಗಳು ಸಹ ಬೇರೆಡೆಗೆ ಹೋಗಬಹುದು, ಜನರು ಎರಡೂ ಪಕ್ಷಗಳ ಪೊಳ್ಳು ಭರವಸೆಗಳಿಗೆ ಮರುಳಾಗಬೇಡಿ ಎಂದರು.

ತೆಲಂಗಾಣ ರಾಜ್ಯ ಚುನಾವಣಾ ಆಯೋಗವು ರಾಜ್ಯದಲ್ಲಿ ಗ್ರಾಮ ಪಂಚಾಯತ್ ಚುನಾವಣೆಗಳಿಗೆ ಮೂರು ಹಂತದ ವೇಳಾಪಟ್ಟಿಯನ್ನು ಪ್ರಕಟಿಸಿದ್ದು, ಡಿಸೆಂಬರ್ 11, 14 ಮತ್ತು 17 ರಂದು ನಡೆಯಲಿದೆ.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

ಸಾಂವಿಧಾನಿಕ ಕರ್ತವ್ಯಗಳು ಪ್ರಜಾಪ್ರಭುತ್ವದ ಅಡಿಪಾಯ: ದೇಶದ ನಾಗರಿಕರಿಗೆ ಪ್ರಧಾನಿ ಮೋದಿ ಪತ್ರ

ಅರುಣಾಚಲ ಪ್ರದೇಶ ಭಾರತದ "ಅವಿಭಾಜ್ಯ-ಅಳಿಸಲಾಗದ" ಭಾಗ: ಚೀನಾಗೆ ಭಾರತ ತಿರುಗೇಟು

ನಮ್ಮ ಮೆಟ್ರೋ ಪ್ರಯಾಣಿಕರಿಗೆ ಗುಡ್​ ನ್ಯೂಸ್​: ಹಳದಿ ಮಾರ್ಗದ ಸಂಚಾರ ಸೋಮವಾರ ಬೆಳಗ್ಗೆ 5 ಗಂಟೆಯಿಂದಲೇ ಶುರು..!

ಅಯೋಧ್ಯೆ ಧರ್ಮಧ್ವಜದಲ್ಲಿರುವ ಕೋವಿದಾರ ಮರ: ರಾಜವೃಕ್ಷಕ್ಕೂ, ಶ್ರೀರಾಮಚಂದ್ರನಿಗೂ ಅದೆಂಥ ನಂಟು? ತ್ರೇತಾಯುಗದಲ್ಲಿದ್ದ ದೈವಿಕ ಮರದ ವಿಶೇಷತೆ ಏನು?

26/11 ಮುಂಬೈ ದಾಳಿಗೆ 17 ವರ್ಷ: ಕರಾಳ ದಿನ ನೆನೆದ ದೇಶದ ಜನತೆ, ಹುತಾತ್ಮರಿಗೆ ಭಾವಪೂರ್ಣ ಶ್ರದ್ಧಾಂಜಲಿ

SCROLL FOR NEXT