ಆರೆಸ್ಸೆಸ್ ಮುಖ್ಯಸ್ಥ ಮೋಹನ್ ಭಾಗವತ್ ಅವರು ಮಹಾರಾಷ್ಟ್ರದ ನಾಗ್ಪುರದಲ್ಲಿ ನಡೆದ 'ರಾಷ್ಟ್ರೀಯ ಸ್ವಯಂಸೇವಕ ಸಂಘ ವಿಜಯದಶಮಿ ಉತ್ಸವ 2025' ಸಂದರ್ಭದಲ್ಲಿ ಮಾತನಾಡಿದರು. 
ದೇಶ

ಸ್ವದೇಶಿ-ಸ್ವಾವಲಂಬನೆಗೆ ಪರ್ಯಾಯವಿಲ್ಲ: RSS ಮುಖ್ಯಸ್ಥ ಮೋಹನ್ ಭಾಗವತ್

ಜಗತ್ತು ಪರಸ್ಪರ ಅವಲಂಬನೆಯ ಮೂಲಕ ಕಾರ್ಯನಿರ್ವಹಿಸುತ್ತದೆ, ಆದರೆ. ಪರಸ್ಪರ ಅವಲಂಬನೆಯು ಅಸಹಾಯಕತೆಯಾಗಿ ಬದಲಾಗಬಾರದು. ನಾವು ಆತ್ಮನಿರ್ಭರರಾಗಿರಬೇಕು ಮತ್ತು ನಮ್ಮ ಸ್ವಂತ ಇಚ್ಛೆಯ ಪ್ರಕಾರ ವರ್ತಿಸಬೇಕು.

ನವದೆಹಲಿ: ಆರ್‌ಎಸ್‌ಎಸ್ ಮುಖ್ಯಸ್ಥ ಮೋಹನ್ ಭಾಗವತ್ ಅವರು ಸ್ವದೇಶಿ ಮತ್ತು ಸ್ವಾವಲಂಬನೆಯ ಮಹತ್ವವನ್ನು ಗುರುವಾರ ಒತ್ತಿ ಹೇಳಿದ್ದು, ಸ್ವದೇಶಿ ಮತ್ತು ಸ್ವಾವಲಂಬನೆಗೆ ಪರ್ಯಾಯವಿಲ್ಲ ಎಂದು ಹೇಳಿದ್ದಾರೆ.

ನಾಗ್ಪುರದಲ್ಲಿ ನಡೆದ ರಾಷ್ಟ್ರೀಯ ಸ್ವಯಂಸೇವಕ ಸಂಘದ ಶತಮಾನೋತ್ಸವ ಸಂಭ್ರಮಾಚರಣೆಯಲ್ಲಿ ಮಾತನಾಡಿದ ಅವರು, ಜಾಗತಿಕ ಪರಸ್ಪರ ಅವಲಂಬನೆ ಒಂದು ವಾಸ್ತವವಾಗಿದ್ದರೂ, ಅದು ಕಡ್ಡಾಯವಾಗಬಾರದು ಎಂದು ಹೇಳಿದ್ದಾರೆ.

ಜಗತ್ತು ಪರಸ್ಪರ ಅವಲಂಬನೆಯ ಮೂಲಕ ಕಾರ್ಯನಿರ್ವಹಿಸುತ್ತದೆ, ಆದರೆ. ಪರಸ್ಪರ ಅವಲಂಬನೆಯು ಅಸಹಾಯಕತೆಯಾಗಿ ಬದಲಾಗಬಾರದು. ನಾವು ಆತ್ಮನಿರ್ಭರರಾಗಿರಬೇಕು ಮತ್ತು ನಮ್ಮ ಸ್ವಂತ ಇಚ್ಛೆಯ ಪ್ರಕಾರ ವರ್ತಿಸಬೇಕು ಎಂದು ತಿಳಿಸಿದರು.

ಡೊನಾಲ್ಡ್ ಟ್ರಂಪ್ ಭಾರತೀಯ ಸರಕುಗಳ ಮೇಲಿನ ಸುಂಕದ ಬಗ್ಗೆ ಮಾತನಾಡಿ, ಈ ಕ್ರಮಗಳು ಭಾರತಕ್ಕೆ ಬೆದರಿಕೆಯಾಗಲ್ಲ. ಬದಲಿಗೆ ಭಾರತ ಜಾಗತಿಕ ನಾಯಕನಾಗಿ ಹೊರಹೊಮ್ಮುವುದನ್ನು ನೋಡಲುಯುವಜನರು ಮತ್ತು ಕೈಗಾರಿಕಾ ನಾಯಕರ ಉತ್ಸಾಹವನ್ನು ಹೆಚ್ಚಿಸುತ್ತದೆ ಎಂದರು.

ಇದೇ ವೇಳೆ ಜಾಗತಿಕ ಆರ್ಥಿಕ ಕ್ರಮದಲ್ಲಿನ ನ್ಯೂನತೆಗಳ ಕುರಿತು ಎಚ್ಚರಿಕೆ ನೀಡಿದ ಅವರು, ಹೆಚ್ಚುತ್ತಿರುವ ಅಸಮಾನತೆ, ಸಂಪತ್ತಿನ ಕೇಂದ್ರೀಕರಣ, ಪರಿಸರ ನಾಶ ವಿಚಾರವನ್ನು ಪ್ರಸ್ತಾಪಿಸಿದರು.

ನೇಪಾಳದಲ್ಲಿ ಇತ್ತೀಚೆಗೆ ನಡೆದ ಜೆನ್ ಝಡ್ ಪ್ರತಿಭಟನೆಗಳ ಬಗ್ಗೆ ಮಾತನಾಡಿ, ಈ ಪ್ರತಿಭಟನೆಗಳು ಸರ್ಕಾರದ ಹಿಂಸಾತ್ಮಕ ಅಂತ್ಯಕ್ಕೆ ಕಾರಣವಾದವು. ಇಂತಹ ಘಟನೆಗಳು ವಿದೇಶಿ ಶಕ್ತಿಗಳಿಗೆ ಮಧ್ಯಪ್ರವೇಶಿಸಲು ಅವಕಾಶ ನೀಡುತ್ತವೆ ಎಂದು ಎಚ್ಚರಿಸಿದರು.

ಹಿಂಸಾತ್ಮಕ ದಂಗೆ ಯಾವುದಕ್ಕೂ ಕಾರಣವಾಗುವುದಿಲ್ಲ. ಅವು ಕೇವಲ ಅರಾಜಕತೆಗೆ ಕಾರಣವಾಗುತ್ತವೆ. ಅಶಾಂತಿ ವಿದೇಶಿ ಶಕ್ತಿಗಳಿಗೆ ಮಧ್ಯಪ್ರವೇಶಿಸಲು ಅವಕಾಶ ನೀಡುತ್ತದೆ ಎಂದರು.

ಭಾರತದ ನೆರೆಹೊರೆಯಲ್ಲಿನ ಕ್ರಾಂತಿ ಒಳ್ಳೆಯ ಸಂಕೇತವಲ್ಲ. ಸರ್ಕಾರದೊಂದಿಗಿನ ಭಿನ್ನಾಭಿಪ್ರಾಯಗಳನ್ನು ಯಾವಾಗಲೂ ಕಾನೂನು ಮಾರ್ಗಗಳ ಮೂಲಕ ವ್ಯಕ್ತಪಡಿಸಬೇಕು ಎಂದರು. ಅರಾಜಕತೆಯ ವ್ಯಾಕರಣವನ್ನು ನಿಲ್ಲಿಸಬೇಕು ಎಂದರು.

ಇಂತಹ ಹಿಂಸಾತ್ಮಕ ಕ್ರಾಂತಿಗಳು ಯಾವುದೇ ನಿರ್ದಿಷ್ಟ ಫಲಿತಾಂಶವನ್ನು ತರುವುದಿಲ್ಲ. ತಮ್ಮ ಅಸಮಾಧಾನವನ್ನು ವ್ಯಕ್ತಪಡಿಸಲು ಈ ಮಾರ್ಗವನ್ನು ಬಳಸುವುದು ಯಾರಿಗೂ ಪ್ರಯೋಜನವಾಗುವುದಿಲ್ಲ ಎಂದರು.

ಇಲ್ಲಿಯವರೆಗಿನ ಎಲ್ಲಾ ರಾಜಕೀಯ ಕ್ರಾಂತಿಗಳ ಇತಿಹಾಸವನ್ನು ನಾವು ನೋಡಿದರೆ, ಅವುಗಳಲ್ಲಿ ಯಾವುದೂ ತಮ್ಮ ಉದ್ದೇಶವನ್ನು ಸಾಧಿಸಿಲ್ಲ. ಸರ್ಕಾರಗಳನ್ನು ಹೊಂದಿರುವ ರಾಷ್ಟ್ರಗಳಲ್ಲಿನ ಎಲ್ಲಾ ಕ್ರಾಂತಿಗಳು ಮುಂಚೂಣಿ ರಾಷ್ಟ್ರಗಳನ್ನು ಬಂಡವಾಳಶಾಹಿ ರಾಷ್ಟ್ರಗಳಾಗಿ ಪರಿವರ್ತಿಸಿವೆ ಎಂದರು.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಯದುವೀರ್ ಒಡೆಯರ್ ರಿಂದ ಬನ್ನಿ ಮರಕ್ಕೆ ಶಮಿ ಪೂಜೆ: ಅರಮನೆ ದಸರಾ ಮುಕ್ತಾಯ

ಭಾರತದಲ್ಲಿ ಪ್ರತಿ ಗಂಟೆಗೆ ಒಬ್ಬ ರೈತ ಆತ್ಮಹತ್ಯೆ: NCRB ವರದಿ

'ಪಾಕಿಸ್ತಾನ ಪ್ರಧಾನಿ ಕೊಟ್ಟಿದ್ದ 25 ಲಕ್ಷ ರೂ ಚೆಕ್ ಕೂಡ ಬೌನ್ಸ್..!', ಕ್ರಿಕೆಟಿಗ Saeed Ajmal ವಿಡಿಯೋ ವೈರಲ್!

1st Test: ಇತಿಹಾಸ ಬರೆದ Jasprit Bumrah, ಕನ್ನಡಿಗ Javagal Srinath ಹಳೇ ದಾಖಲೆ ಕೊನೆಗೂ ಪತನ!

1st Test: Siraj, Bumrah ಮಾರಕ ಬೌಲಿಂಗ್ ದಾಳಿಗೆ ತತ್ತರಿಸಿದ West Indies, ಮೊದಲ ಇನ್ನಿಂಗ್ಸ್ 162 ರನ್ ಗೆ ಆಲೌಟ್!

SCROLL FOR NEXT