ಏರ್ ಇಂಡಿಯಾ ವಿಮಾನ online desk
ದೇಶ

ಎಲ್ಲಾ ಬೋಯಿಂಗ್ 787 ವಿಮಾನಗಳ ವಿದ್ಯುತ್ ವ್ಯವಸ್ಥೆ ಪರಿಶೀಲಿಸಿ: DGCA'ಗೆ ಪೈಲಟ್‌ಗಳ ಮನವಿ

ಅಕ್ಟೋಬರ್ 4 ರಂದು ಅಮೃತಸರದಿಂದ ಬರ್ಮಿಂಗ್‌ಹ್ಯಾಮ್‌ಗೆ ತೆರಳುತ್ತಿದ್ದ ಏರ್ ಇಂಡಿಯಾ ಡ್ರೀಮ್‌ಲೈನರ್ ವಿಮಾನದ ಲ್ಯಾಂಡಿಂಗ್‌ಗೆ ಕೆಲವೇ ಸೆಕೆಂಡುಗಳ ಮೊದಲು ಸುಮಾರು 500 ಅಡಿ ಎತ್ತರದಲ್ಲಿ ಇದ್ದಾಗ ಏಕಾಏಕಿ ವಿಮಾನದ ರಾಮ್ ಏರ್ ಟರ್ಬೈನ್ (RAT) ನಿಯೋಜನೆಗೊಂಡಿತ್ತು.

ಮುಂಬೈ: ದೇಶದಲ್ಲಿರುವ ಎಲ್ಲಾ ಬೋಯಿಂಗ್ 787 ವಿಮಾನಗಳ ವಿದ್ಯುತ್ ವ್ಯವಸ್ಥೆಯನ್ನು ಸಂಪೂರ್ಣವಾಗಿ ಪರಿಶೀಲಿಸುವಂತೆ ಮತ್ತು ತನಿಖೆ ನಡೆಸುವಂತೆ ಭಾರತೀಯ ಪೈಲಟ್‌ಗಳ ಒಕ್ಕೂಟ(FIP) ಭಾನುವಾರ ವಾಯುಯಾನ ಸುರಕ್ಷತಾ ನಿಯಂತ್ರಕ DGCAಗೆ ಮನವಿ ಮಾಡಿದೆ.

ಅಮೃತಸರದಿಂದ ಬರ್ಮಿಂಗ್‌ಹ್ಯಾಮ್‌ಗೆ ತೆರಳುತ್ತಿದ್ದ ಏರ್ ಇಂಡಿಯಾದ ಬೋಯಿಂಗ್ 787 ವಿಮಾನವು ಯುಕೆ ನಗರದಲ್ಲಿ ಲ್ಯಾಂಡಿಂಗ್‌ಗೆ ಮುನ್ನ ರಾಮ್ ಏರ್ ಟರ್ಬೈನ್ (RAT) ಅನಿರೀಕ್ಷಿತವಾಗಿ ನಿಯೋಜನೆಗೊಂಡಿದ್ದರಿಂದ ಆತಂಕ ಸೃಷ್ಟಿಯಾಗಿತ್ತು. ಈ ಘಟನೆ ಬೆನ್ನಲ್ಲೇ ಪೈಲಟ್‌ಗಳ ಸಂಘ, DGCA (ನಾಗರಿಕ ವಿಮಾನಯಾನ ನಿರ್ದೇಶನಾಲಯ)ಗೆ ಪತ್ರ ಬರೆದಿದೆ.

ಅಕ್ಟೋಬರ್ 4 ರಂದು ಅಮೃತಸರದಿಂದ ಬರ್ಮಿಂಗ್‌ಹ್ಯಾಮ್‌ಗೆ ತೆರಳುತ್ತಿದ್ದ ಏರ್ ಇಂಡಿಯಾ ಡ್ರೀಮ್‌ಲೈನರ್ ವಿಮಾನದ ಲ್ಯಾಂಡಿಂಗ್‌ಗೆ ಕೆಲವೇ ಸೆಕೆಂಡುಗಳ ಮೊದಲು ಸುಮಾರು 500 ಅಡಿ ಎತ್ತರದಲ್ಲಿ ಇದ್ದಾಗ ಏಕಾಏಕಿ ವಿಮಾನದ ರಾಮ್ ಏರ್ ಟರ್ಬೈನ್ (RAT) ನಿಯೋಜನೆಗೊಂಡಿತ್ತು. ಅದೃಷ್ಟವಶಾತ್‌ ವಿಮಾನ ಸುರಕ್ಷಿತವಾಗಿ ಲ್ಯಾಂಡ್ ಆಗಿದ್ದು, ಹೆಚ್ಚಿನ ಪರಿಶೀಲನೆಗಾಗಿ ಅದನ್ನು ಸ್ಥಗಿತಗೊಳಿಸಲಾಗಿದೆ.

ಏರ್ ಇಂಡಿಯಾ ವಿಮಾನ ಘಟನೆಯಲ್ಲಿ, ವಿಮಾನ ಆರೋಗ್ಯ ಮಾನಿಟರಿಂಗ್(AHM) ಬಸ್ ಪವರ್ ಕಂಟ್ರೋಲ್ ಯೂನಿಟ್(BPCU)ನ ದೋಷವನ್ನು ಎತ್ತಿತೋರಿಸಿದ್ದು, ಇದು RATನ ಸ್ವಯಂ ನಿಯೋಜನೆಗೆ ಕಾರಣವಾಗಬಹುದು ಎಂದು FIP ಅಧ್ಯಕ್ಷ G S ರಾಂಧವಾ ಅವರು DGCA ಗೆ ಬರೆದ ಪತ್ರದಲ್ಲಿ ತಿಳಿಸಿದ್ದಾರೆ.

BPCU ವಿಮಾನದ ವಿದ್ಯುತ್ ವ್ಯವಸ್ಥೆಯನ್ನು ನಿರ್ವಹಿಸುತ್ತದೆ. ಡ್ಯುಯಲ್ ಎಂಜಿನ್ ವೈಫಲ್ಯ ಅಥವಾ ಸಂಪೂರ್ಣ ಎಲೆಕ್ಟ್ರಾನಿಕ್ ಅಥವಾ ಹೈಡ್ರಾಲಿಕ್ ವೈಫಲ್ಯದ ಸಂದರ್ಭದಲ್ಲಿ RAT ಸ್ವಯಂಚಾಲಿತವಾಗಿ ನಿಯೋಜಿಸುತ್ತದೆ. ಆದರೆ ನಿನ್ನೆ ನಡೆದ ಘಟನೆಯಲ್ಲಿ ವಿಮಾನದ ಎಲ್ಲಾ ವಿದ್ಯುತ್ ಮತ್ತು ಹೈಡ್ರಾಲಿಕ್ ಪ್ಯಾರಾಮೀಟರ್‌ಗಳು ಸಾಮಾನ್ಯವಾಗಿದ್ದವು. ಆದರೂ RAT ನಿಯೋಜನೆಗೊಂಡಿರುವುದು ಆತಂಕಕ್ಕೆ ಕಾರಣವಾಗಿದೆ.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

Women's World cup 2025: ಪಾಕಿಸ್ತಾನ್ ವಿರುದ್ಧ ಗೆದ್ದು ಬೀಗಿದ ಭಾರತ

ಡಾರ್ಜಿಲಿಂಗ್‌ನಲ್ಲಿ ಭಾರೀ ಮಳೆ; ಭೂಕುಸಿತದಲ್ಲಿ ಮಕ್ಕಳು ಸೇರಿ ಕನಿಷ್ಠ 20 ಮಂದಿ ಸಾವು

ರಿಷಬ್ ಶೆಟ್ಟಿ ದೃಶ್ಯಕಾವ್ಯಕ್ಕೆ ಬಹುಪರಾಕ್: 4ನೇ ದಿನಕ್ಕೆ ಜಗತ್ತಿನಾದ್ಯಂತ 300 ಕೋಟಿ ಕಲೆಕ್ಷನ್ ದಾಖಲೆ ಬರೆದ 'ಕಾಂತಾರ'!

India-Pakistan ಪಂದ್ಯದ ವೇಳೆ ಹೈಡ್ರಾಮಾ: ಮೊದಲು ನಾಟೌಟ್ ನಂತರ Out ಘೋಷಣೆ; 4ನೇ ಅಂಪೈರ್ ಜೊತೆ Pak ನಾಯಕಿ ವಾಗ್ವಾದ, Video

22 ವರ್ಷಗಳ ನಂತರ ಬಿಹಾರ ಮತದಾರರ ಪಟ್ಟಿ 'ಶುದ್ಧೀಕರಿಸಲಾಗಿದೆ'; ದೇಶಾದ್ಯಂತ ವಿಸ್ತರಣೆ: CEC

SCROLL FOR NEXT