ಭಾರತ-ಯುಕೆ ಪ್ರಧಾನ ಮಂತ್ರಿಗಳು  
ದೇಶ

'ವಿಕಸಿತ ಭಾರತ'ದ ದೃಷ್ಟಿಕೋನ ಸರಿಯಾದ ಹಾದಿಯಲ್ಲಿದೆ: ಭಾರತ, ಮೋದಿ ಬಗ್ಗೆ ಯುಕೆ ಪ್ರಧಾನಿ Keir Starmer ಹೇಳಿದ್ದೇನು?

ವಿಕಸಿತ ಭಾರತದ ಪ್ರಯಾಣದಲ್ಲಿ ಪಾಲುದಾರರಾಗಲು ಬಯಸುತ್ತೇವೆ ಎಂದು ಯುಕೆ ಪ್ರಧಾನಿಯಾಗಿ ಭಾರತಕ್ಕೆ ತಮ್ಮ ಮೊದಲ ಭೇಟಿಯಲ್ಲಿರುವ ಸ್ಟಾರ್ಮರ್ ಹೇಳಿದರು.

ಭಾರತದ ಬೆಳವಣಿಗೆಯ ಕಥೆ ಅದ್ಭುತವಾಗಿದೆ ಎಂದು ಯುನೈಟೆಡ್ ಕಿಂಗ್‌ಡಮ್‌ ಪ್ರಧಾನಿ ಕೀರ್ ಸ್ಟಾರ್ಮರ್ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ಪ್ರಧಾನಿ ನರೇಂದ್ರ ಮೋದಿಯವರ ನೇತೃತ್ವದಲ್ಲಿ ಭಾರತವು 2047 ರ ವೇಳೆಗೆ ವಿಕಸಿತ ಭಾರತದ ಕನಸನ್ನು ನನಸು ಮಾಡುವ ಹಾದಿಯಲ್ಲಿದೆ ಎಂದು ಸಹ ಹೇಳಿದ್ದಾರೆ.

ಭಾರತದ ಆರ್ಥಿಕ ರಾಜಧಾನಿಯಾಗಿ ನಾವು ಮುಂಬೈನಲ್ಲಿ ಇಂದು ಭೇಟಿಯಾಗುತ್ತಿರುವುದು ಸಂತಸದ ವಿಷಯ. ಭಾರತದ ಬೆಳವಣಿಗೆಯ ಕಥೆ ಅದ್ಭುತವಾಗಿದೆ. 2028 ರ ವೇಳೆಗೆ ವಿಶ್ವದ 3 ನೇ ಅತಿದೊಡ್ಡ ಆರ್ಥಿಕತೆಯಾಗುವ ಗುರಿಯನ್ನು ಹೊಂದಿರುವ ಭಾರತ ಇಂದು ಮೋದಿಯವರ ನಾಯಕತ್ವ ಹೊಂದಿದ್ದು ಅವರನ್ನು ಅಭಿನಂದಿಸುತ್ತೇನೆ. 2047ರ ವೇಳೆಗೆ ಅದನ್ನು ಸಂಪೂರ್ಣವಾಗಿ ಅಭಿವೃದ್ಧಿ ಹೊಂದಿದ ದೇಶವನ್ನಾಗಿ ಮಾಡುವುದು ವಿಕಸಿತ ಭಾರತದ ದೃಷ್ಟಿಕೋನವಾಗಿದೆ ನಾನು ಇಲ್ಲಿಗೆ ಬಂದಾಗಿನಿಂದ ನಾನು ನೋಡಿರುವ ಎಲ್ಲವೂ ನೀವು ಅದರಲ್ಲಿ ಯಶಸ್ವಿಯಾಗುವ ಹಾದಿಯಲ್ಲಿದ್ದೀರಿ ಎಂಬುದಕ್ಕೆ ಸಂಪೂರ್ಣ ಪುರಾವೆಯಾಗಿದೆ ಎಂದರು.

ವಿಕಸಿತ ಭಾರತದ ಪ್ರಯಾಣದಲ್ಲಿ ಪಾಲುದಾರರಾಗಲು ಬಯಸುತ್ತೇವೆ ಎಂದು ಯುಕೆ ಪ್ರಧಾನಿಯಾಗಿ ಭಾರತಕ್ಕೆ ತಮ್ಮ ಮೊದಲ ಭೇಟಿಯಲ್ಲಿರುವ ಸ್ಟಾರ್ಮರ್ ಹೇಳಿದರು.

ದ್ವಿಪಕ್ಷೀಯ ಸಭೆ

ಉಭಯ ನಾಯಕರು ಮುಂಬೈನಲ್ಲಿ ದ್ವಿಪಕ್ಷೀಯ ಸಭೆ ನಡೆಸಿ ಜಂಟಿ ಹೇಳಿಕೆ ಬಿಡುಗಡೆ ಮಾಡಿ ಯುಕೆ-ಭಾರತ ಸಮಗ್ರ ಆರ್ಥಿಕ ಮತ್ತು ವ್ಯಾಪಾರ ಒಪ್ಪಂದವನ್ನು ಪ್ರಗತಿಯ ಕ್ಷಣ ಎಂದು ಕರೆದರು.

ಭವಿಷ್ಯದ ಮೇಲೆ ಕೇಂದ್ರೀಕರಿಸಿದ ಹೊಸ ಆಧುನಿಕ ಪಾಲುದಾರಿಕೆಯನ್ನು ನಾವು ರಚಿಸುತ್ತಿದ್ದೇವೆ. ಅವಕಾಶಗಳನ್ನು ಬಳಸಿಕೊಳ್ಳುತ್ತಿದ್ದೇವೆ. ಜುಲೈನಲ್ಲಿ ಯುಕೆ-ಭಾರತ ಸಮಗ್ರ ಆರ್ಥಿಕ ಮತ್ತು ವ್ಯಾಪಾರ ಒಪ್ಪಂದವನ್ನು (CETA) ಸಾಧಿಸಿದ್ದೇವೆ. ಇದು ಒಂದು ಮಹತ್ವದ ಕ್ಷಣವಾಗಿದೆ. ವರ್ಷಗಳ ಕಾಲದ ಬೆಳವಣಿಗೆ, ಸುಂಕಗಳನ್ನು ಕಡಿತಗೊಳಿಸುವುದು, ಪರಸ್ಪರರ ಮಾರುಕಟ್ಟೆಗಳಿಗೆ ಪ್ರವೇಶವನ್ನು ಹೆಚ್ಚಿಸುವುದು ಮತ್ತು ಉಭಯ ದೇಶಗಳಲ್ಲಿ ನಾಗರಿಕರಿಗೆ ಉದ್ಯೋಗಗಳನ್ನು ಸೃಷ್ಟಿಸುವುದು ಮತ್ತು ನಮ್ಮ ಎರಡೂ ರಾಷ್ಟ್ರಗಳಲ್ಲಿ ಜೀವನವನ್ನು ಸೃಷ್ಟಿಸುವುದಾಗಿದೆ. ಒಪ್ಪಂದದ ಮಾತುಗಳನ್ನು ಮೀರಿ, ಎರಡು ದೇಶಗಳು ಇನ್ನಷ್ಟು ನಿಕಟವಾಗಿ ಒಟ್ಟಿಗೆ ಕೆಲಸ ಮಾಡಲು ನೀಡಿರುವ ವಿಶ್ವಾಸದ ಚೈತನ್ಯವಿದೆ. ಇದನ್ನು ನಾವು ಇಲ್ಲಿಗೆ ಭೇಟಿ ನೀಡಿದಾಗ ನೋಡಿದ್ದೇವೆ ಎಂದರು.

ಉಕ್ರೇನ್ ಮತ್ತು ಗಾಜಾ ಸಂಘರ್ಷಗಳನ್ನು ಕೊನೆಗೊಳಿಸಲು ಭಾರತದ ಪ್ರಯತ್ನಗಳನ್ನು ಹೇಳಿದ ಅವರು ಭಾರತ-ಯುಕೆ ಸಂಬಂಧವು ಜಾಗತಿಕ ಸ್ಥಿರತೆಯ ಪ್ರಮುಖ ಬೆಂಬಲಿಗನಾಗಿ ಕಾರ್ಯನಿರ್ವಹಿಸುತ್ತಿದೆ. ಜಾಗತಿಕ ಅನಿಶ್ಚಿತತೆಯ ಪ್ರಸ್ತುತ ಯುಗದಲ್ಲಿ, ಭಾರತ ಮತ್ತು ಯುಕೆ ನಡುವಿನ ಪಾಲುದಾರಿಕೆಯು ಜಾಗತಿಕ ಸ್ಥಿರತೆ ಮತ್ತು ಆರ್ಥಿಕ ಪ್ರಗತಿಯ ಪ್ರಮುಖ ಆಧಾರಸ್ತಂಭವಾಗಿ ಕಾರ್ಯನಿರ್ವಹಿಸುತ್ತಿದೆ ಎಂದರು.

ಕಡಲ ಭದ್ರತೆ

ಇಂಡೋ-ಪೆಸಿಫಿಕ್ ಮತ್ತು ಪಶ್ಚಿಮ ಏಷ್ಯಾದಲ್ಲಿ ಶಾಂತಿ ಮತ್ತು ಸ್ಥಿರತೆ ಹಾಗೂ ಉಕ್ರೇನ್‌ನಲ್ಲಿ ನಡೆಯುತ್ತಿರುವ ಸಂಘರ್ಷದ ಕುರಿತು ನಾವು ಅಭಿಪ್ರಾಯಗಳನ್ನು ಹಂಚಿಕೊಂಡಿದ್ದೇವೆ. ಉಕ್ರೇನ್ ಸಂಘರ್ಷ ಮತ್ತು ಗಾಜಾ ಸಮಸ್ಯೆಯ ಕುರಿತು ಮಾತುಕತೆ ಮತ್ತು ರಾಜತಾಂತ್ರಿಕತೆಯ ಮೂಲಕ ಶಾಂತಿಯನ್ನು ಪುನಃಸ್ಥಾಪಿಸುವ ಎಲ್ಲಾ ಪ್ರಯತ್ನಗಳನ್ನು ಭಾರತ ಬೆಂಬಲಿಸುತ್ತದೆ. ಇಂಡೋ-ಪೆಸಿಫಿಕ್ ಪ್ರದೇಶದಲ್ಲಿ ಕಡಲ ಭದ್ರತಾ ಸಹಕಾರವನ್ನು ಹೆಚ್ಚಿಸಲು ನಾವು ಸಂಪೂರ್ಣವಾಗಿ ಬದ್ಧರಾಗಿದ್ದೇವೆ ಎಂದು ಅವರು ಹೇಳಿದರು.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಅನ್ನಭಾಗ್ಯ: 5 ಕೆಜಿ ಅಕ್ಕಿ ಬದಲು ಇಂದಿರಾ ಕಿಟ್ ವಿತರಣೆ: ಸಂಪುಟ ಸಭೆಯಲ್ಲಿ ಮಹತ್ವದ ತೀರ್ಮಾನ

ದೇಶದಲ್ಲೇ ಮೊದಲು: ಉದ್ಯೋಗಸ್ಥ ಮಹಿಳೆಯರಿಗೆ ಗುಡ್ ನ್ಯೂಸ್; ವೇತನ ಸಹಿತ 'ಋತುಚಕ್ರ ರಜೆ'ಗೆ ರಾಜ್ಯ ಸಚಿವ ಸಂಪುಟ ಒಪ್ಪಿಗೆ!

Exclusive: ಬಿಹಾರದಲ್ಲಿ ಕಾಂಗ್ರೆಸ್​ಗೆ 57 ಸ್ಥಾನ ಸಾಧ್ಯತೆ, ಹೊಸ ಮಿತ್ರಪಕ್ಷಕ್ಕೆ ಎರಡು ಸ್ಥಾನ

ನ. 25 ರಂದು ಪ್ರಧಾನಿ ಮೋದಿಯಿಂದ ರಾಮ ಮಂದಿರದ ಮೇಲೆ 21 ಅಡಿ ಎತ್ತರದ ಧರ್ಮ ಧ್ವಜಾರೋಹಣ

'ಮೂರ್ನಾಲ್ಕು ದಿನದಲ್ಲಿ ಡಿಸ್ಚಾರ್ಜ್ ಆಗ್ತಾರೆ': ದೇವೇಗೌಡರ ಆರೋಗ್ಯದ ಕುರಿತು ಎಚ್.ಡಿ ಕುಮಾರಸ್ವಾಮಿ ಹೇಳಿಕೆ

SCROLL FOR NEXT