ಪಾಟ್ನಾ: ಮುಂದಿನ ತಿಂಗಳು ನಡೆಯುವ ಬಿಹಾರ ವಿಧಾನಸಭೆ ಚುನಾವಣೆಗೆ ಮುನ್ನ ಆರ್‌ಜೆಡಿಯ ಇಬ್ಬರು ಶಾಸಕರಾದ ಸಂಗೀತಾ ಕುಮಾರಿ ಮತ್ತು ಚೇತನ್ ಆನಂದ್ ಅವರು ಶುಕ್ರವಾರ ರಾಜೀನಾಮೆ ನೀಡಿದ್ದಾರೆ.
ಸಂಗೀತಾ ಕುಮಾರಿ ಮತ್ತು ಚೇತನ್ ಆನಂದ್ ಅವರು ಇಂದು ತಮ್ಮ ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡಿದ್ದು, ಇಬ್ಬರೂ ಬಿಜೆಪಿ ಸೇರುವ ಸಾಧ್ಯತೆಯಿದೆ.
ಸಂಗೀತಾ ಕುಮಾರಿ ಮತ್ತು ಆನಂದ್ ಅವರ ರಾಜೀನಾಮೆಯ ನಂತರ ಮೊಹಾನಿಯಾ ಮತ್ತು ಶಿಯೋಹರ್ ಸ್ಥಾನಗಳು ಖಾಲಿಯಾಗಿವೆ ಎಂದು ವಿಧಾನಸಭಾ ಸಚಿವಾಲಯ ಅಧಿಸೂಚನೆ ಹೊರಡಸಿದೆ.
ಬಿಹಾರ ವಿಧಾನಸಭೆಗೆ ನವೆಂಬರ್ 6 ಮತ್ತು 11 ರಂದು ಎರಡು ಹಂತದಲ್ಲಿ ಚುನಾವಣೆ ನಡೆಯಲಿದ್ದು, ನವೆಂಬರ್ 14 ರಂದು ಫಲಿತಾಂಶ ಪ್ರಕಟವಾಗಲಿದೆ.