ವಾಷಿಂಗ್ಟನ್: ಫಿಲಿಪ್ಪೀನ್ಸ್‌ನಲ್ಲಿ ನಡೆದ 48ನೇ ಆವೃತ್ತಿಯ ಸೌಂದರ್ಯ ಸ್ಪರ್ಧೆಯಲ್ಲಿ ಭಾರತವನ್ನು ಪ್ರತಿನಿಧಿಸಿದ್ದ ಶೆರಿ ಸಿಂಗ್ ವಿಜೇತರಾಗಿ ಆಯ್ಕೆಯಾಗಿದ್ದಾರೆ.
ಫಿಲಿಪ್ಪೀನ್ಸ್‌ನ ಮನಿಲಾದಲ್ಲಿ ನಡೆದ 48ನೇ ಆವೃತ್ತಿಯ ಮಿಸ್ ಯೂನಿವರ್ಸ್ ಸೌಂದರ್ಯ ಸ್ಪರ್ಧೆಯಲ್ಲಿ ಭಾರತದ ಶೆರಿ ಸಿಂಗ್ ವಿಜೇತರಾಗಿದ್ದಾರೆ. 120 ಸ್ಪರ್ಧಿಗಳು ಭಾಗಿಯಾಗಿದ್ದ ಸ್ಪರ್ಧೆಯಲ್ಲಿ ಸೇಂಟ್ ಪೀಟರ್ಸ್‌ಬರ್ಗ್‌ನ ಸ್ಪರ್ಧಿ ಮೊದಲ ರನ್ನರ್ ಅಪ್, ಫಿಲಿಪ್ಪೀನ್ಸ್‌ನ ಸ್ಪರ್ಧಿ 2ನೇ ರನ್ನರ್ ಅಪ್ ಆಗಿದ್ದಾರೆ.
ಗೆಲುವಿನ ಬಗ್ಗೆ ಸಂತಸ ವ್ಯಕ್ತಪಡಿಸಿರುವ ಶೆರಿ, ‘ತನ್ನ ಮಿತಿಯಿಂದ ಹೊರಗೆ ಕನಸು ಕಾಣುವ ದೈರ್ಯ ಮಾಡುವ ಎಲ್ಲ ಮಹಿಳೆಗೂ ಈ ಗೆಲುವು ಸಲ್ಲುತ್ತದೆ’ ಎಂದಿದ್ದಾರೆ.
ಈ ಪ್ರಶಸ್ತಿಯನ್ನು ಗೆದ್ದ ಮೊದಲ ಭಾರತೀಯ ಸ್ಪರ್ಧಿ ಶೆರಿ ಸಿಂಗ್ ಆಗಿದ್ದಾರೆ. ಇತರ ಅಂತಿಮ ಸ್ಪರ್ಧಿಗಳು ಯುಎಸ್ಎ, ಜಪಾನ್, ಮ್ಯಾನ್ಮಾರ್, ಬಲ್ಗೇರಿಯಾ, ಯುಎಇ, ಆಫ್ರಿಕಾ ಮತ್ತು ಉಕ್ರೇನ್‌ನಂತಹ ರಾಷ್ಟ್ರಗಳು ಮತ್ತು ಪ್ರದೇಶಗಳನ್ನು ಪ್ರತಿನಿಧಿಸಿದರು.