ಸಚಿವ ಸುರೇಶ್ ಗೋಪಿ 
ದೇಶ

ಆದಾಯವೇ ಇಲ್ಲ, ಸಚಿವ ಸ್ಥಾನ ಬೇಡ- ನಾನು ಮತ್ತೆ ನಟನೆ ಮಾಡ್ತೇನೆ: ಸಾರ್ವಜನಿಕ ಕಾರ್ಯಕ್ರಮದಲ್ಲೇ ಸುರೇಶ್‌ ಗೋಪಿ ಘೋಷಣೆ

ನಾನು ನಿಜವಾಗಿಯೂ ನಟನೆಯನ್ನು ಮುಂದುವರಿಸಲು ಬಯಸುತ್ತೇನೆ. ನಾನು ಹೆಚ್ಚು ಗಳಿಸಬೇಕಾಗಿದೆ, ನನ್ನ ಆದಾಯ ಈಗ ಸಂಪೂರ್ಣವಾಗಿ ನಿಂತುಹೋಗಿದೆ ಎಂದು ಅವರು ಹೇಳಿದರು.

ಕಣ್ಣೂರು: ಕೇಂದ್ರ ಸಚಿವ ಸುರೇಶ್ ಗೋಪಿ ನಟನೆಗೆ ಮರಳುವ ಇಚ್ಛೆಯನ್ನು ವ್ಯಕ್ತಪಡಿಸಿದ್ದು, ತಮ್ಮ ಸಿನಿಮಾ ವೃತ್ತಿಜೀವನವನ್ನು ಮುಂದುವರಿಸಲು ಬಯಸುವುದಾಗಿ ಹೇಳಿದ್ದಾರೆ.

ಸಾರ್ವಜನಿಕ ಕಾರ್ಯಕ್ರಮದಲ್ಲಿ ಕೇಂದ್ರ ಸಚಿವ ಸ್ಥಾನ ತಮಗೆ ಬೇಡ. ನಟನೆಗೆ ಮತ್ತೆ ಮರಳುವುದಾಗಿ ಘೋಷಿಸಿದ್ದಾರೆ. ಕಣ್ಣೂರಿನಲ್ಲಿ ನಡೆದ ಕಾರ್ಯಕ್ರಮವೊಂದರಲ್ಲಿ ಮಾತನಾಡಿದ ತ್ರಿಶೂರ್ ಸಂಸದ ಮತ್ತು ನಟ-ರಾಜಕಾರಣಿಯಾಗಿರುವ ಅವರು, ಸಚಿವ ಹುದ್ದೆಯನ್ನು ವಹಿಸಿಕೊಂಡ ನಂತರ ತಮ್ಮ ಆದಾಯ ಗಮನಾರ್ಹವಾಗಿ ಕಡಿಮೆಯಾಗಿದೆ ಎಂದು ಹೇಳಿದರು. ಸಿನಿಮಾ ವೃತ್ತಿಜೀವನವನ್ನು ತೊರೆದು ಸಚಿವನಾಗಲು ತಮಗೆ ಇಷ್ಟವಿರಲಿಲ್ಲ ಎಂದಿರುವ ಅವರು, ಕೇಂದ್ರ ಸಚಿವ ಸ್ಥಾನಕ್ಕೆ ರಾಜೀನಾಮೆ ನೀಡುವ ಇಂಗಿತವನ್ನು ವ್ಯಕ್ತಪಡಿಸಿದ್ದಾರೆ.

ನಾನು ನಿಜವಾಗಿಯೂ ನಟನೆಯನ್ನು ಮುಂದುವರಿಸಲು ಬಯಸುತ್ತೇನೆ. ನಾನು ಹೆಚ್ಚು ಗಳಿಸಬೇಕಾಗಿದೆ, ನನ್ನ ಆದಾಯ ಈಗ ಸಂಪೂರ್ಣವಾಗಿ ನಿಂತುಹೋಗಿದೆ ಎಂದು ಅವರು ಹೇಳಿದರು.

ಇನ್ನು ತಾವು ರಾಜೀನಾಮೆ ಸಲ್ಲಿಸಿದ ನಂತರ ತೆರವಾಗುವ ಸಚಿವ ಸ್ಥಾನವನ್ನು ರಾಜ್ಯಸಭಾ ಸಂಸದ ಸಿ ಸದಾನಂದನ್ ಮಾಸ್ಟರ್ ಅವರಿಗೆ ನೀಡಬೇಕೆಂದು ಮನವಿ ಮಾಡಿದ್ದಾರೆ. ನಾನು ಎಂದಿಗೂ ಸಚಿವನಾಗಬೇಕೆಂದು ಪ್ರಾರ್ಥಿಸಿಲ್ಲ. ಚುನಾವಣೆಗೆ ಒಂದು ದಿನ ಮೊದಲೂ, ನಾನು ಸಚಿವನಾಗಲು ಬಯಸುವುದಿಲ್ಲ, ನಾನು ಸಿನಿಮಾದಲ್ಲಿ ಮುಂದುವರಿಯಲು ಬಯಸುತ್ತೇನೆ ಎಂದು ವರದಿಗಾರರಿಗೆ ಹೇಳಿದ್ದೆ.

ನಾನು ಅಕ್ಟೋಬರ್ 2008 ರಲ್ಲಿ ಪಕ್ಷದ ಸದಸ್ಯತ್ವವನ್ನು ಪಡೆದುಕೊಂಡೆ . ಪಕ್ಷವು ನನ್ನ ಮೇಲೆ ಭರವಸೆ ಇಟ್ಟು ದೊಡ್ಡ ಹುದ್ದೆಯನ್ನೇ ನೀಡಿತು ಎಂದರು. ಸದ್ಯ ಗೋಪಿ ಕೇಂದ್ರ ಪೆಟ್ರೋಲಿಯಂ ಮತ್ತು ನೈಸರ್ಗಿಕ ಅನಿಲ ರಾಜ್ಯ ಸಚಿವರು ಮತ್ತು ಪ್ರವಾಸೋದ್ಯಮ ಸಚಿವರಾಗಿ ಕಾರ್ಯನಿರ್ವಹಿಸುತ್ತಿದ್ದಾರೆ. ಇನ್ನು ಈ ವರ್ಷದ ಆರಂಭದಲ್ಲಿ, ರಾಷ್ಟ್ರಪತಿ ದ್ರೌಪದಿ ಮುರ್ಮು ಅವರು ಕಣ್ಣೂರಿನ ಬಿಜೆಪಿ ಹಿರಿಯ ನಾಯಕ ಸದಾನಂದನ್ ಮಾಸ್ಟರ್ ಅವರನ್ನು ರಾಜ್ಯಸಭೆಗೆ ನಾಮನಿರ್ದೇಶನ ಮಾಡಿದ್ದರು.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಕರೂರ್ ಕಾಲ್ತುಳಿತ ಪ್ರಕರಣ ಸಿಬಿಐಗೆ ವರ್ಗಾಯಿಸಿದ ಸುಪ್ರೀಂ ಕೋರ್ಟ್

Israel-Gaza war: 7 ಒತ್ತೆಯಾಳುಗಳ ರೆಡ್ ಕ್ರಾಸ್‌ಗೆ ಹಸ್ತಾಂತರಿಸಿದ ಹಮಾಸ್; ಯುದ್ಧ ಅಂತ್ಯ- ಟ್ರಂಪ್ ಘೋಷಣೆ

Women's ODI World Cup 2025: ಸತತ ಸೋಲುಗಳಿಂದ ಸಂಕಷ್ಟ; ಟೀಂ ಇಂಡಿಯಾ ಸೆಮಿಫೈನಲ್‌ ಹಾದಿ ಕಠಿಣ

ಬಿಹಾರ ಚುನಾವಣೆ: ಸುಶಾಂತ್ ಸಿಂಗ್ ಸಹೋದರಿಗೆ ಟಿಕೆಟ್ ನೀಡಲು ಸಿಪಿಐ(ಎಂಎಲ್) ನಿರ್ಧಾರ

'ನೆಹರು ಮರಿ ಮೊಮ್ಮಗಳ ಹೆಸರು ಇಟ್ಕೊಂಡಿರುವ ನಿಮ್ಮಿಂದ RSS ಬ್ಯಾನ್ ಅಸಾಧ್ಯ: ಜಮೀರ್‌ನ ಬಿಳಿ ಟೋಪಿ ಸಾಬಣ್ಣ ಅಂತ ಕರಿತೀರಾ?'

SCROLL FOR NEXT