ಕೋಲ್ಡ್ರಿಫ್' ಸಿರಫ್ ಸಾಂದರ್ಭಿಕ ಚಿತ್ರ 
ದೇಶ

Tamil Nadu: ವಿಷಯುಕ್ತ 'ಕೋಲ್ಡ್ರಿಫ್' ಸಿರಪ್; ಶ್ರೀಸನ್ ಫಾರ್ಮಾ ಕಂಪನಿಯ ಲೈಸನ್ಸ್ ರದ್ದುಗೊಳಿಸಿ, ಬಾಗಿಲು ಮುಚ್ಚಿಸಿದ ಸ್ಟಾಲಿನ್ ಸರ್ಕಾರ!

ರಾಜ್ಯ ಔಷಧ ನಿಯಂತ್ರಣ ಇಲಾಖೆ ಅಧಿಕಾರಿಗಳು ತಪಾಸಣೆ ನಡೆಸಿದಾಗ ಕೆಮ್ಮಿನ ಸಿರಪ್‌ನಲ್ಲಿ ಶೇ.48.6 ರಷ್ಟು ಡೈಎಥಿಲೀನ್ ಗ್ಲೈಕಾಲ್ (DEG) ಅಂಶವಿರುವುದು ಪತ್ತೆಯಾಗಿದೆ. ಈ ಔಷಧಿ ಮಧ್ಯಪ್ರದೇಶದ ಮಕ್ಕಳ ಸಾವಿಗೂ ಕಾರಣವಾಗಿದೆ.

ಚೆನ್ನೈ: ವಿಷಯುಕ್ತ ಕೋಲ್ಡ್ರಿಫ್ ಕೆಮ್ಮಿನ ಸಿರಪ್ ತಯಾರಕರಾದ ಸ್ರೆಸನ್ ಫಾರ್ಮಾ ಕಂಪನಿಯ ಉತ್ಪಾದನಾ ಪರವಾನಗಿಯನ್ನು ಸಂಪೂರ್ಣವಾಗಿ ರದ್ದುಗೊಳಿಸಲಾಗಿದೆ. ಅಲ್ಲದೇ ಕಂಪನಿಯನ್ನು ಮುಚ್ಚಲು ರಾಜ್ಯ ಸರ್ಕಾರ ಆದೇಶಿಸಿದೆ.

ರಾಜ್ಯ ಔಷಧ ನಿಯಂತ್ರಣ ಇಲಾಖೆ ಅಧಿಕಾರಿಗಳು ತಪಾಸಣೆ ನಡೆಸಿದಾಗ ಕೆಮ್ಮಿನ ಸಿರಪ್‌ನಲ್ಲಿ ಶೇ.48.6 ರಷ್ಟು ಡೈಎಥಿಲೀನ್ ಗ್ಲೈಕಾಲ್ (DEG) ಅಂಶವಿರುವುದು ಪತ್ತೆಯಾಗಿದೆ. ಈ ಔಷಧಿ ಮಧ್ಯಪ್ರದೇಶದ ಮಕ್ಕಳ ಸಾವಿಗೂ ಕಾರಣವಾಗಿದೆ.

ಕಂಪನಿಯು ಸರಿಯಾದ ಉತ್ತಮ ಉತ್ಪಾದನಾ ವ್ಯವಸ್ಥೆ (GMP) ಮತ್ತು ಉತ್ತಮ ಪ್ರಯೋಗಾಲಯ ವ್ಯವಸ್ಥೆ (GLP) ಹೊಂದಿಲ್ಲ ಎಂಬುದನ್ನು ಅಧಿಕಾರಿಗಳು ಗುರುತಿಸಿದ್ದು, 300 ಕ್ಕೂ ಹೆಚ್ಚು ನಿರ್ಣಾಯಕ ಮತ್ತು ಪ್ರಮುಖ ಉಲ್ಲಂಘನೆಗಳನ್ನು ದಾಖಲಿಸಿದ್ದಾರೆ.

ಕಂಪನಿಯ ಮಾಲೀಕ ಜಿ ರಂಗನಾಥನ್ ಅವರನ್ನು ಇತ್ತೀಚೆಗೆ ಮಧ್ಯಪ್ರದೇಶದ ವಿಶೇಷ ತನಿಖಾ ತಂಡ ಬಂಧಿಸಿತ್ತು. ಜಾರಿ ನಿರ್ದೇಶನಾಲಯದ ತಂಡವು ಅಕ್ರಮ ಹಣ ವರ್ಗಾವಣೆ ತಡೆ ಕಾಯ್ದೆ (PMLA) ಪ್ರಕರಣದಲ್ಲಿ ಶ್ರೀಸನ್ ಫಾರ್ಮಾಸ್ಯುಟಿಕಲ್ಸ್ ಮತ್ತು ಕೆಲವು ಅಧಿಕಾರಿಗಳ ನಿವಾಸದ ಮೇಲೆ ದಾಳಿ ನಡೆಸಿದೆ.

ಸ್ರೇಸನ್ ಫಾರ್ಮಾಸ್ಯುಟಿಕಲ್ಸ್‌ನ ಔಷಧ ತಯಾರಿಕಾ ಪರವಾನಗಿಯನ್ನು ಸಂಪೂರ್ಣವಾಗಿ ರದ್ದುಗೊಳಿಸಲಾಗಿದ್ದು, ಕಂಪನಿಯನ್ನು ಮುಚ್ಚಲಾಗಿದೆ. ತಮಿಳುನಾಡಿನಲ್ಲಿರುವ ಇತರ ಔಷಧ ತಯಾರಿಕಾ ಕಂಪನಿಗಳ ವಿವರವಾದ ತಪಾಸಣೆ ನಡೆಸಲು ಆದೇಶ ನೀಡಲಾಗಿದೆ ಎಂದು ರಾಜ್ಯ ಸರ್ಕಾರ ಹೇಳಿಕೆಯಲ್ಲಿ ತಿಳಿಸಿದೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

Asian Games 2026: ಫೈನಲ್ ನಲ್ಲಿ ಪಾಕಿಸ್ತಾನ ವಿರುದ್ಧ ಭಾರತಕ್ಕೆ ರೋಚಕ ಜಯ, ಮತ್ತೊಂದು ಚಿನ್ನದ ಪದಕ

ಮೈಸೂರು: ಕುಸಿದು ಬಿದ್ದ ದೀಪಾಲಂಕಾರದ ಬೃಹತ್ ಕಟೌಟ್; ವಿದ್ಯಾರ್ಥಿಗಳು ಪಾರು, ದಸರಾ ಆರಂಭದಲ್ಲೇ ತಪ್ಪಿದ ದೊಡ್ಡ ದುರಂತ!

'ಕಮಾಲ್ ಕರ್ ದಿಯಾ ಪೈಲಟ್ ಜಿ, ನಿಮ್ಮ ಧೈರ್ಯಕ್ಕೆ ನಮ್ಮ ಸೆಲ್ಯೂಟ್': ಕ್ಯಾಪ್ಟನ್ ಸ್ಮಿತ್ ಮಚ್ಚರ್'ರನ್ನು ಹಾಡಿ ಹೊಗಳಿದ ಸಲ್ಮಾನ್ ಖಾನ್!

Asian Games 2026: ಇತಿಹಾಸ ಬರೆದ ಮೈಸೂರಿನ ಪ್ರಣವಿ ಅರಸ್; ಚಿನ್ನ ಗೆದ್ದ ಮೊದಲ ಭಾರತೀಯ ಮಹಿಳಾ ಗಾಲ್ಫರ್

Dimple Queen: ಹುಟ್ಟುಹಬ್ಬದ ಸಂಭ್ರಮದಲ್ಲಿ ರಚಿತಾ ರಾಮ್ ಕೆನ್ನೆ ಗಿಂಡಿದ ಅಭಿಮಾನಿ! Video ವೈರಲ್