ಕೈ ಮೇಲೆ ಡೆತ್ ನೋಟ್ ಬರೆದುಕೊಂಡು ವೈದ್ಯೆ ಆತ್ಮಹತ್ಯೆ Special Arrangement
ದೇಶ

ಮಹಾರಾಷ್ಟ್ರ: ಇಬ್ಬರು ಪೊಲೀಸ್ ಅಧಿಕಾರಿಗಳಿಂದ ಅತ್ಯಾಚಾರ, ಕಿರುಕುಳ; ಕೈ ಮೇಲೆ ಡೆತ್ ನೋಟ್ ಬರೆದುಕೊಂಡು ವೈದ್ಯೆ ಆತ್ಮಹತ್ಯೆ!

28 ವರ್ಷದ ವೈದ್ಯೆ ಪೊಲೀಸ್ ಸಬ್-ಇನ್ಸ್‌ಪೆಕ್ಟರ್ ಗೋಪಾಲ್ ಬದಾನೆ ತನ್ನ ಮೇಲೆ ಐದು ಬಾರಿ ಅತ್ಯಾಚಾರ ಎಸಗಿದ್ದಾರೆ ಎಂದು ಆರೋಪಿಸಿದ್ದಾರೆ.

ಮುಂಬೈ: ಮಹಾರಾಷ್ಟ್ರದ ಸತಾರಾ ಜಿಲ್ಲೆಯ ಫಾಲ್ಟನ್‌ನಲ್ಲಿ ಮಹಿಳಾ ವೈದ್ಯೆಯೊಬ್ಬರು, ಇಬ್ಬರು ಪೊಲೀಸ್ ಅಧಿಕಾರಿಗಳು ತನ್ನ ಮೇಲೆ ಅತ್ಯಾಚಾರ ಎಸಗಿದ್ದಾರೆ ಮತ್ತು ಕಿರುಕುಳ ಹಾಗೂ ಮಾನಸಿಕ ಹಿಂಸೆ ನೀಡಿದ್ದಾರೆ ಎಂದು ಡೆತ್ ನೋಟ್ ಬರೆದಿಟ್ಟು ಆತ್ಮಹತ್ಯೆ ಮಾಡಿಕೊಂಡಿದ್ದಾರೆ.

28 ವರ್ಷದ ವೈದ್ಯೆ ಪೊಲೀಸ್ ಸಬ್-ಇನ್ಸ್‌ಪೆಕ್ಟರ್ ಗೋಪಾಲ್ ಬದಾನೆ ತನ್ನ ಮೇಲೆ ಐದು ಬಾರಿ ಅತ್ಯಾಚಾರ ಎಸಗಿದ್ದಾರೆ ಎಂದು ಆರೋಪಿಸಿದ್ದಾರೆ.

ಮತ್ತೊಬ್ಬ ಪೊಲೀಸ್ ಇನ್ಸ್‌ಪೆಕ್ಟರ್ ಪ್ರಶಾಂತ್ ಬಂಕರ್, ನಾಲ್ಕು ತಿಂಗಳ ಕಾಲ ಕಿರುಕುಳ ಮತ್ತು ಮಾನಸಿಕ ಹಿಂಸೆ ನೀಡಿದ್ದಾರೆ ಎಂದು ಆರೋಪಿಸಿದ್ದಾರೆ. ಈ ಡೆತ್ ನೋಟ್ ಅನ್ನು ವಿಧಿವಿಜ್ಞಾನ ಪರೀಕ್ಷೆಗೆ ಕಳುಹಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.

"ವೈದ್ಯೆ, ಹಿರಿಯ ಅಧಿಕಾರಿಗಳಿಗೆ ದೂರು ನೀಡಿದ್ದರೂ ಯಾವುದೇ ನ್ಯಾಯ ಸಿಗಲಿಲ್ಲ. ಇದರಿಂದ ನೊಂದ ವೈದ್ಯೆ ಸಾವಿಗೆ ಶರಣಾಗಿದ್ದಾರೆ ಎಂದು ವರದಿಯಾಗಿರುವುದಾಗಿ" ಎಂದು ಸತಾರಾ ಪೊಲೀಸ್ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

ಫಾಲ್ಟನ್‌ನ ಹೋಟೆಲ್ ಕೋಣೆಯಲ್ಲಿ ವೈದ್ಯೆ ಆತ್ಮಹತ್ಯೆ ಮಾಡಿಕೊಂಡಿದ್ದಾರೆ.

ಈ ಸಂಬಂಧ ಬದಾನೆ ಮತ್ತು ಬಂಕರ್ ವಿರುದ್ಧ ಪ್ರಕರಣ ದಾಖಲಾಗಿದೆ ಎಂದು ಸತಾರಾ ಪೊಲೀಸ್ ವರಿಷ್ಠಾಧಿಕಾರಿ ತುಷಾರ್ ದೋಷಿ ತಿಳಿಸಿದ್ದಾರೆ.

ಇಬ್ಬರೂ ಅಧಿಕಾರಿಗಳನ್ನು ಸೇವೆಯಿಂದ ಅಮಾನತುಗೊಳಿಸಲಾಗಿದೆ ಮತ್ತು ಪ್ರಸ್ತುತ ಅವರು ತಲೆಮರೆಸಿಕೊಂಡಿದ್ದಾರೆ. ಅವರನ್ನು ಪತ್ತೆಹಚ್ಚಲು ತಂಡಗಳನ್ನು ರಚಿಸಲಾಗಿದೆ.

ಬದಾನೆ ಮತ್ತು ಅವರ ಸಹಚರರು ವೈದ್ಯಕೀಯ ವರದಿಗಳನ್ನು ಬದಲಾಯಿಸುವಂತೆ ಒತ್ತಡ ಹೇರಿದ್ದಾರೆ ಎಂದು ವೈದ್ಯರ ಸಂಬಂಧಿಕರು ಆರೋಪಿಸಿದ್ದಾರೆ. "ವೈದ್ಯೆ ನಿರಂತರ ಒತ್ತಡದಲ್ಲಿದ್ದರು, ಅದು ಅಂತಿಮವಾಗಿ ತನ್ನ ಜೀವನವನ್ನು ಕೊನೆಗೊಳಿಸಲು ಕಾರಣವಾಯಿತು" ಎಂದು ಆಕೆಯ ಸಹೋದರ ಹೇಳಿದ್ದಾರೆ.

ಎನ್‌ಸಿಪಿ ಸಂಸದೆ ಸುಪ್ರಿಯಾ ಸುಳೆ ಅವರು ಈ ಘಟನೆ "ಅತ್ಯಂತ ಗಂಭೀರ" ವಾಗಿದ್ದು, ನ್ಯಾಯಯುತ ಮತ್ತು ಸಮಗ್ರ ತನಿಖೆ ನಡೆಸಬೇಕು ಎಂದು ಒತ್ತಾಯಿಸಿದ್ದಾರೆ.

"ಭದ್ರತೆ ಒದಗಿಸಬೇಕಾದ ಪೊಲೀಸರೇ ಅತ್ಯಾಚಾರ ಮತ್ತು ಚಿತ್ರಹಿಂಸೆ ನೀಡುತ್ತಿದ್ದರೆ, ಜನರನ್ನು ಯಾರು ರಕ್ಷಿಸುತ್ತಾರೆ? ಫಡ್ನವೀಸ್ ನೇತೃತ್ವದ ಸರ್ಕಾರ ಮಹಾರಾಷ್ಟ್ರದಲ್ಲಿ ಕಾನೂನು ಮತ್ತು ಸುವ್ಯವಸ್ಥೆಯನ್ನು ಕಾಪಾಡುವಲ್ಲಿ ವಿಫಲವಾಗಿದೆ" ಎಂದು ಶಿವಸೇನೆ(ಯುಬಿಟಿ) ನಾಯಕಿ ಸುಷ್ಮಾ ಅಂಧಾರೆ ವಾಗ್ದಾಳಿ ನಡೆಸಿದ್ದಾರೆ.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ನನ್ನ ಹೇಳಿಕೆಗೆ ನಾನೂ ಈಗಲೂ ಬದ್ಧ, ಆದ್ರೆ ಸಿದ್ದರಾಮಯ್ಯ 5 ವರ್ಷ ಸಿಎಂ: ಯತೀಂದ್ರ

ರಾಜ್ಯದ ರೈತರಿಗೆ ವಂಚಿಸಿದವರ 'ಕೇಸ್' ಮುಚ್ಚಿಹಾಕಲು ಸಚಿವ ಜಮೀರ್ ಪ್ರಭಾವ! ಸ್ಪೋಟಕ AUDIO ವೈರಲ್, ಜೆಡಿಎಸ್ ಕಿಡಿ

3ನೇ ಏಕದಿನ: 'ರೋ-ಕೋ' ಭರ್ಜರಿ ಕಮ್ ಬ್ಯಾಕ್, ಸಿಡ್ನಿಯಲ್ಲಿ ಭಾರತಕ್ಕೆ 9 ವಿಕೆಟ್ ಭರ್ಜರಿ ಜಯ

Cricket: ಆಸಿಸ್ ವಿರುದ್ಧ ಸಿಡಿಲಬ್ಬರದ ಬ್ಯಾಟಿಂಗ್, ಕೊಹ್ಲಿ ಸಾಧನೆ ಸೇರಿ ಹಲವು ದಾಖಲೆಗಳ ಮುರಿದ ರೋ'ಹಿಟ್' ಶರ್ಮಾ!

Sabarimala gold theft: ಬೆಂಗಳೂರು, ಬಳ್ಳಾರಿಯಲ್ಲಿ ಕೇರಳ SIT ದಾಳಿ, ಗೋವರ್ಧನ್ ಒಡೆತನದ ಜ್ಯುವೆಲ್ಲರಿಯಿಂದ ಕದ್ದ ಚಿನ್ನ ವಶ!

SCROLL FOR NEXT