ನವದೆಹಲಿ: ಪ್ರಧಾನ ಮಂತ್ರಿ ನರೇಂದ್ರ ಮೋದಿಯವರ ದೆಹಲಿಯಲ್ಲಿರುವ ಅಧಿಕೃತ ನಿವಾಸ ಬದಲಾಗುತ್ತಿದೆ. ಈ ಮೂಲಕ ಸೌತ್ ಬ್ಲಾಕ್ ನಿಂದ ಸ್ಥಳಾಂತರಗೊಳ್ಳುತ್ತಿರುವ ಮೊದಲ ಪ್ರಧಾನಿ ನರೇಂದ್ರ ಮೋದಿ ಆಗಿರುತ್ತಾರೆ.
ಈ ತಿಂಗಳ ಆರಂಭದಲ್ಲಿ ಸೇವಾ ತಿರಥ್ ಎಂಬ ಹೆಸರಿನ ಹೊಸ ಪ್ರಧಾನ ಮಂತ್ರಿ ಕಚೇರಿ ಸಂಕೀರ್ಣಕ್ಕೆ ಸಂಪುಟ ಕಾರ್ಯದರ್ಶಿ ಕಚೇರಿ ಸ್ಥಳಾಂತರಗೊಂಡಿದ್ದು, ಪ್ರಧಾನಿ ಕಚೇರಿ ಶೀಘ್ರದಲ್ಲೇ ಸೌತ್ ಬ್ಲಾಕ್ ನಿಂದ ಸ್ಥಳಾಂತರಗೊಳ್ಳಲಿದೆ.
ಸಂಪುಟ ಕಾರ್ಯದರ್ಶಿ ಟಿ.ವಿ. ಸೋಮನಾಥನ್ ಹೊಸ ಸಂಕೀರ್ಣದಿಂದ ಕೆಲಸ ಮಾಡಲು ಪ್ರಾರಂಭಿಸಿದ್ದರೂ, ಅದು ಇನ್ನೂ ಉದ್ಘಾಟನೆಗೊಂಡಿಲ್ಲ.
ಈ ಸಂಕೀರ್ಣವು ಪ್ರಧಾನ ಮಂತ್ರಿ ಕಚೇರಿ, ರಾಷ್ಟ್ರೀಯ ಭದ್ರತಾ ಮಂಡಳಿ ಸಚಿವಾಲಯ ಮತ್ತು ವಿಶೇಷ ರಕ್ಷಣಾ ಗುಂಪಿನ ಕಚೇರಿಗಳನ್ನು ಒಳಗೊಂಡಿದೆ.