ನಿತಿನ್ ಗಡ್ಕರಿ 
ದೇಶ

ನಾನೊಬ್ಬನೇ ಏಕೆ ಬೈಯಿಸಿಕೊಳ್ಳಬೇಕು?: ನಿತಿನ್ ಗಡ್ಕರಿ ಹೀಗೆ ಕೇಳಿದ್ದೇಕೆ? ಅವರನ್ನು ಟೀಕಿಸಿದ್ಯಾರು? Video

ರಾಷ್ಟ್ರೀಯ ಹೆದ್ದಾರಿಗಳಲ್ಲಿ ಹೆದ್ದಾರಿ ನಿರ್ಮಿಸಿದ ಗುತ್ತಿಗೆದಾರರು, ಅಧಿಕಾರಿಗಳು ಮತ್ತು ಎಂಜಿನಿಯರ್‌ಗಳ ಹೆಸರುಗಳು ಹಾಗೂ ಅವರ ಸಂಪರ್ಕ ವಿವರಗಳೊಂದಿಗೆ QR-ಕೋಡೆಡ್ ಸೈನ್‌ಬೋರ್ಡ್‌ಗಳನ್ನು ಹಾಕಲಾಗುವುದು.

ನವದೆಹಲಿ: ರಸ್ತೆಗಳ ಕಳಪೆ ಸ್ಥಿತಿಗೆ "ನಾನು ಒಬ್ಬನೇ ಏಕೆ ಏಕೆ ಬೈಯಿಸಿಕೊಳ್ಳಬೇಕು?" ಎಂದು ಕೇಂದ್ರ ರಸ್ತೆ ಸಾರಿಗೆ ಮತ್ತು ಹೆದ್ದಾರಿ ಸಚಿವ ನಿತಿನ್ ಗಡ್ಕರಿ ಕೇಳಿದ್ದಾರೆ.

ರಾಷ್ಟ್ರೀಯ ಹೆದ್ದಾರಿಗಳಲ್ಲಿ ಹೆದ್ದಾರಿ ನಿರ್ಮಿಸಿದ ಗುತ್ತಿಗೆದಾರರು, ಅಧಿಕಾರಿಗಳು ಮತ್ತು ಎಂಜಿನಿಯರ್‌ಗಳ ಹೆಸರುಗಳು ಹಾಗೂ ಅವರ ಸಂಪರ್ಕ ವಿವರಗಳೊಂದಿಗೆ QR-ಕೋಡೆಡ್ ಸೈನ್‌ಬೋರ್ಡ್‌ಗಳನ್ನು ಹಾಕಲಾಗುವುದು. ಇದರಿಂದ ರಸ್ತೆಯ ಸ್ಥಿತಿಗೆ ನಿರ್ದಿಷ್ಟವಾಗಿ ಯಾರು ಜವಾಬ್ದಾರರು ಎಂಬುದು ತಿಳಿಯುತ್ತದೆ ಎಂದು ಒತ್ತಿ ಹೇಳಿದರು.

ರಾಷ್ಟ್ರೀಯ ಹೆದ್ದಾರಿಗಳಲ್ಲಿ ಶೀಘ್ರವೇ ಪ್ರಯಾಣಿಕರು ತಾವು ಓಡಾಡುತ್ತಿರುವ ರಸ್ತೆಯನ್ನು ಯಾರು ನಿರ್ಮಿಸಿದ್ದಾರೆ ಎಂಬುದರ ಸಂಪೂರ್ಣ ಮಾಹಿತಿಯನ್ನು ಪಡೆದುಕೊಳ್ಳಲಿದ್ದಾರೆ. ಇದಕ್ಕಾಗಿ ಹೆದ್ದಾರಿ ಬದಿಯ ಫಲಕಗಳಲ್ಲಿ QR ಕೋಡ್ ಅಳವಡಿಸಲಾಗುತ್ತದೆ. ಪ್ರಯಾಣಿಕರು ಸ್ಕ್ಯಾನ್ ಮಾಡಿ ಮಾಹಿತಿಯನ್ನು ಪಡೆದುಕೊಳ್ಳಬಹುದು ಎಂದು ನಿತಿನ್ ಗಡ್ಕರಿ ತಿಳಿಸಿದ್ದಾರೆ.

“ಈ ಸೈನ್‌ಬೋರ್ಡ್ ಜನರಿಗೆ ಸಚಿವರು, ಕಾರ್ಯದರ್ಶಿ ಅಥವಾ ಗುತ್ತಿಗೆದಾರರು ಯಾರು ಮತ್ತು ಅವರ ಫೋನ್ ಸಂಖ್ಯೆಗಳು ಯಾವುವು ಎಂಬುದನ್ನು ತಿಳಿಸುತ್ತದೆ. ಯೋಜನೆಯು ಪೂರ್ಣಗೊಂಡ ನಂತರ 10 ವರ್ಷಗಳ ಕಾಲ ಪ್ರತಿಯೊಬ್ಬ ಗುತ್ತಿಗೆದಾರನು ನಿರ್ವಹಣೆಗೆ ಜವಾಬ್ದಾರನಾಗಿರುತ್ತಾನೆ. ರಸ್ತೆಯಲ್ಲಿ ಗುಂಡಿ ಸೇರಿದಂತೆ ಇತರೆ ದೋಷಗಳಿದ್ರೆ ಅಧಿಕಾರಿಗಳು ಮತ್ತು ಗುತ್ತಿಗೆದಾರರು ಜವಾಬ್ದಾರರಾಗಿದ್ದು, ಅವುಗಳನ್ನು ಸರಿಪಡಿಸಬೇಕಾಗುತ್ತದೆ.

ನವದೆಹಲಿಯಲ್ಲಿ ಭಾರತೀಯ ಕೈಗಾರಿಕಾ ಒಕ್ಕೂಟ (CII) ಆಯೋಜಿಸಿದ್ದ ಸ್ಮಾರ್ಟ್ ರಸ್ತೆಗಳ ಸಮ್ಮೇಳನ 2025 ರಲ್ಲಿ ಮಾತನಾಡಿದ ಗಡ್ಕರಿ, ಹೊಸ ಕ್ಯೂಆರ್ ಕೋಡ್ ವ್ಯವಸ್ಥೆಯು ಹೆದ್ದಾರಿ ಯೋಜನೆಗಳನ್ನು ಹೆಚ್ಚು ಪಾರದರ್ಶಕವಾಗಿಸುವುದಲ್ಲದೆ, ನಾಗರಿಕರನ್ನು ಸಬಲೀಕರಣಗೊಳಿಸುತ್ತದೆ ಎಂದರು.

ಹೊಸ ಮಾನದಂಡಗಳ ಅಡಿಯಲ್ಲಿ, ಈ ಫಲಕಗಳಲ್ಲಿ ಆಸ್ಪತ್ರೆ, ಪೊಲೀಸ್ ಠಾಣೆ, ಪೆಟ್ರೋಲ್ ಪಂಪ್‌ಗಳು, ಪಂಕ್ಚರ್ ರಿಪೇರಿ ಅಂಗಡಿಗಳು, ವಾಹನ ಸೇವಾ ಕೇಂದ್ರಗಳು ಮತ್ತು ಇ-ಚಾರ್ಜಿಂಗ್ ಕೇಂದ್ರಗಳು ಸೇರಿದಂತೆ ಸುತ್ತಮುತ್ತಲಿನ ಕನಿಷ್ಠ 20 ಅಗತ್ಯ ಸೇವೆಗಳ ವಿವರಗಳನ್ನು ಮತ್ತು ಸಂಬಂಧಿತ ಸಹಾಯವಾಣಿ ಸಂಖ್ಯೆಗಳನ್ನು ಪ್ರದರ್ಶಿಸಲಾಗುತ್ತದೆ. ಅಧಿಕಾರಿಗಳು ಈ ಸೈನ್‌ಬೋರ್ಡ್‌ಗಳನ್ನು ರಸ್ತೆಬದಿ, ಟೋಲ್ ಪ್ಲಾಜಾಗಳು, ಮಿನಿ ವಿಶ್ರಾಂತಿ ಪ್ರದೇಶಗಳು ಮತ್ತು ಟ್ರಕ್ ಲೇ-ಬೈಗಳಲ್ಲಿ ಸ್ಥಾಪಿಸಲು ಅಧಿಕಾರ ನೀಡಿದ್ದಾರೆ.

ರಸ್ತೆ ಗುಂಡಿಗಳಿದ್ರೆ ಮಾಧ್ಯಮವರು ನನ್ನ ಫೋಟೋ ಮಾತ್ರ ಯಾಕೆ ಹಾಕಬೇಕು? ಗುತ್ತಿಗೆದಾರರ ಫೋಟೋ ಸಹ ಹಾಕಲಿ. ಸೆಕ್ರೆಟರಿ, ಅಧಿಕಾರಿಗಳ ಫೋಟೋ ಬರಲಿ. ಎಲ್ಲವೂ ನನ್ನ ಕುತ್ತಿಗೆಗೆ ಯಾಕೆ ಬರುತ್ತೆ. ಸೋಶಿಯಲ್ ಮೀಡಿಯಾದಲ್ಲಿ ನಾನೇಕೆ ಎಲ್ಲದಕ್ಕೂ ಉತ್ತರ ನೀಡಲಿ ಎಂದು ಹೇಳಿ ನಿತಿನ್ ಗಡ್ಕರಿ ನಕ್ಕಿದ್ದಾರೆ. ವಿಪಕ್ಷಗಳು ಇದನ್ನೇ ಅಸ್ತ್ರವನ್ನಾಗಿ ಮಾಡಿಕೊಳ್ಳುತ್ತಿದ್ದು, ಇದೇ ನೋಡಿ ವಿಫಲತೆಯನ್ನು ಬೇರೆಯವರ ಹೆಗಲಿಗೆ ವರ್ಗಾವಣೆ ಮಾಡೋದು ಎಂದು ಟೀಕಿಸಿದ್ದಾರೆ.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

ಜಾತಿ ಗಣತಿ: ಮನೆ ಮನೆ ಸಮೀಕ್ಷೆ ಮುಕ್ತಾಯ; ರಾಜ್ಯದ ಒಟ್ಟು ಜನಸಂಖ್ಯೆ ಎಷ್ಟು ಗೊತ್ತಾ?

ದೇಶದ ಮೊದಲ 'ಕಡುಬಡತನ ಮುಕ್ತ' ರಾಜ್ಯ: ಘೋಷಣೆಗೆ ಕೇರಳ ಸಜ್ಜು, ಆರ್ಥಿಕ ತಜ್ಞರ ಆಕ್ಷೇಪವೇನು?

ಸಿಎಂ ಆಗಿ ಡಿಕೆಶಿ ನವೆಂಬರ್ 21ಕ್ಕೆ ಪ್ರಮಾಣ ವಚನ: ವರದಿಗಾರರ ಪ್ರಶ್ನೆಗೆ ಸಿಎಂ ಸಿದ್ದರಾಮಯ್ಯ ಸಿಡಿಮಿಡಿ!

ಕುಡಚಿ ಕಾಂಗ್ರೆಸ್ MLA​ ಪುತ್ರನಿಗೆ ಡಿಕೆ ಶಿವಕುಮಾರ್ ಹೆಸರು ನಾಮಕರಣ! ವಿಶೇಷ ಏನು ಗೊತ್ತಾ?

ಬೆಂಗಳೂರು: ಲವರ್ ಜೊತೆ ಸೇರಿ 'ತಾಯಿಯನ್ನೇ ಕೊಂದು' ಆತ್ಮಹತ್ಯೆಯ ನಾಟಕವಾಡಿದ್ದ ಮಗಳು! ಪೊಲೀಸರ ಕೈಗೆ ಸಿಕ್ಕಿ ಬಿದ್ದಿದ್ದು ಹೇಗೆ ಗೊತ್ತಾ?

SCROLL FOR NEXT