ರಾಷ್ಟ್ರಧ್ವಜಕ್ಕಿಂತ ಎತ್ತರದಲ್ಲಿ ISLAM ಧ್ವಜ ಹಾರಾಟ 
ದೇಶ

ರಾಷ್ಟ್ರಧ್ವಜಕ್ಕಿಂತ ಎತ್ತರದಲ್ಲಿ ಇಸ್ಲಾಂ ಧ್ವಜ ಹಾರಾಟ: ಇಮಾಮ್ ವಿರುದ್ಧ ಪ್ರಕರಣ ದಾಖಲು! Video

ರಾಷ್ಟ್ರೀಯ ಧ್ವಜಕ್ಕಿಂತ ಎತ್ತರದಲ್ಲಿ ಇಸ್ಲಾಮಿಕ್ ಧ್ವಜ ಹಾರಿಸಿದ ಆರೋಪದ ಮೇಲೆ ಉತ್ತರ ಪ್ರದೇಶದ ಕೌಶಂಬಿಯಲ್ಲಿರುವ ಮಸೀದಿಯ 37 ವರ್ಷದ ಇಮಾಮ್ ವಿರುದ್ಧ ಪೊಲೀಸರು ಪ್ರಕರಣ ದಾಖಲಿಸಿದ್ದಾರೆ.

ಲಖನೌ: ಉತ್ತರ ಪ್ರದೇಶದಲ್ಲಿ ತ್ರಿವರ್ಣ ಧ್ವಜಕ್ಕಿಂತ ಎತ್ತರದಲ್ಲಿ ಇಸ್ಲಾಮಿಕ್ ಧ್ವಜ ಹಾರಿಸಿದ ಆರೋಪದ ಮೇಲೆ ಇಮಾಮ್ ವಿರುದ್ಧ ಪ್ರಕರಣ ದಾಖಲಿಸಲಾಗಿದೆ.

ರಾಷ್ಟ್ರೀಯ ಧ್ವಜಕ್ಕಿಂತ ಎತ್ತರದಲ್ಲಿ ಇಸ್ಲಾಮಿಕ್ ಧ್ವಜ ಹಾರಿಸಿದ ಆರೋಪದ ಮೇಲೆ ಉತ್ತರ ಪ್ರದೇಶದ ಕೌಶಂಬಿಯಲ್ಲಿರುವ ಮಸೀದಿಯ 37 ವರ್ಷದ ಇಮಾಮ್ ವಿರುದ್ಧ ಪೊಲೀಸರು ಪ್ರಕರಣ ದಾಖಲಿಸಿದ್ದಾರೆ ಎಂದು ಅಧಿಕಾರಿಯೊಬ್ಬರು ಮಂಗಳವಾರ ತಿಳಿಸಿದ್ದಾರೆ.

ಆಗಸ್ಟ್ 31 ರಂದು ಸಂದೀಪನ್ ಘಾಟ್ ಪೊಲೀಸ್ ಠಾಣೆ ಪ್ರದೇಶದಲ್ಲಿ ಈ ಘಟನೆ ವರದಿಯಾಗಿದೆ ಎಂದು ಚೈಲ್ ವೃತ್ತ ಅಧಿಕಾರಿ ಅಭಿಷೇಕ್ ಸಿಂಗ್ ತಿಳಿಸಿದ್ದಾರೆ.

ಮುರತ್‌ಗಂಜ್ ಪಟ್ಟಣದ ಮಸೀದಿಯ ಮಿನಾರ್ ಮೇಲೆ ತ್ರಿವರ್ಣ ಧ್ವಜಕ್ಕಿಂತ ಎತ್ತರದಲ್ಲಿ ಇಸ್ಲಾಮಿಕ್ ಧ್ವಜ ಹಾರಿಸಿರುವುದನ್ನು ಮುರತ್‌ಗಂಜ್ ಹೊರಠಾಣೆ ಉಸ್ತುವಾರಿ ಸಬ್-ಇನ್ಸ್‌ಪೆಕ್ಟರ್ ಅಜಿತ್ ಸಿಂಗ್ ಅವರು ಗಸ್ತು ತಿರುಗುತ್ತಿದ್ದಾಗ ಗಮನಿಸಿದರು. ಈ ಕೃತ್ಯವು "ರಾಷ್ಟ್ರೀಯ ಧ್ವಜದ ಘನತೆ ಮತ್ತು ಗೌರವವನ್ನು ಕುಗ್ಗಿಸಿದೆ" ಎಂದು ಅವರು ಹೇಳಿದ್ದಾರೆ.

ತತ್ ಕ್ಷಣವೇ ಕಾರ್ಯಪ್ರವೃತ್ತರಾದ ಸಬ್-ಇನ್ಸ್‌ಪೆಕ್ಟರ್ ಅಜಿತ್ ಸಿಂಗ್ ಇಸ್ಲಾಮಿಕ್ ಧ್ವಜವನ್ನು ತಕ್ಷಣವೇ ತೆಗೆದುಹಾಕಿಸಿದರು. ಹೊರಠಾಣೆ ಉಸ್ತುವಾರಿ ಲಿಖಿತ ದೂರಿನ ಆಧಾರದ ಮೇಲೆ, ಕೌಶಂಬಿ ಜಿಲ್ಲೆಯ ಕಾಸಿಯಾ, ಚಿಕ್ವಾನ್ ಕಾ ಪೂರ್ವಾ ನಿವಾಸಿ ಇಮಾಮ್ ಇಮ್ತಿಯಾಜ್ ಅಹ್ಮದ್ ವಿರುದ್ಧ 1971 ರ ರಾಷ್ಟ್ರೀಯ ಗೌರವಕ್ಕೆ ಅವಮಾನ ತಡೆ ಕಾಯ್ದೆಯ ಸೆಕ್ಷನ್ 2 ರ ಅಡಿಯಲ್ಲಿ ಪೊಲೀಸರು ಪ್ರಕರಣ ದಾಖಲಿಸಿದ್ದಾರೆ.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

GST 2.0: ಶಾಂಪುವಿನಿಂದ ಸಣ್ಣ ಕಾರುಗಳವರೆಗೆ, ಯಾವುದು ಅಗ್ಗ ಮತ್ತು ದುಬಾರಿ?

ಉತ್ತರ ಭಾರತದ ಹಲವೆಡೆ ಭಾರಿ ಪ್ರವಾಹ, ಭೂ ಕುಸಿತಕ್ಕೆ ಇದೇ ಕಾರಣ! ಕೇಂದ್ರ, ರಾಜ್ಯಗಳಿಂದ ಉತ್ತರ ಬಯಸಿದ ಸುಪ್ರೀಂಕೋರ್ಟ್!

56th GST Council: ಇನ್ನು ಶೇ.5 ಮತ್ತು ಶೇ.18 ಎರಡು ಹಂತದ ತೆರಿಗೆ, ಸೆ.22ರಂದು ಜಾರಿ

GST 2.0: ಯಾವುದಕ್ಕೆ ತೆರಿಗೆ, ಯಾವುದಕ್ಕೆ ವಿನಾಯಿತಿ ಇಲ್ಲಿದೆ ಮಾಹಿತಿ...

ಮುಖ್ಯಮಂತ್ರಿ ಹುದ್ದೆಯಿಂದ ಫಡ್ನವೀಸ್ ಗೆ ಕೊಕ್; ರಾಷ್ಟ್ರ ರಾಜಕಾರಣಕ್ಕೆ ಮಹಾರಾಷ್ಟ್ರ ಸಿಎಂ?; ಬಿಜೆಪಿ ರಾಷ್ಟ್ರಾಧ್ಯಕ್ಷ ರೇಸ್ ನಲ್ಲಿ ರೂಪಾಲಾ!

SCROLL FOR NEXT