ನವದೆಹಲಿ: ಬಿಹಾರದ ಯುವಕನೊಬ್ಬ ಚಲಿಸುತ್ತಿರುವ ರೈಲಿನಲ್ಲಿ ಅಪಾಯಕಾರಿ ಸ್ಟಂಟ್ ಮೂಲಕ ಪ್ಲಾಟ್‌ಫಾರ್ಮ್‌ನಲ್ಲಿ ನಿಂತಿದ್ದ ಮಹಿಳೆಯನ್ನು ಸ್ಪರ್ಶಿಸಲು ಯತ್ನಿಸಿರುವ ವಿಡಿಯೋವೊಂದು ಸಾಮಾಜಿಕ ಜಾಲತಾಣಗಳಲ್ಲಿ ಭಾರಿ ವೈರಲ್ ಆಗುತ್ತಿದೆ.ನೆಟ್ಟಿಗರು ತೀವ್ರ ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ.
ಯುವಕನನ್ನು ರಾಹುಲ್ ಕುಮಾರ್ ಯಾದವ್ ಎಂದು ಗುರುತಿಸಲಾಗಿದೆ. ಈತ ತನ್ನ ಫೇಸ್ ಬುಕ್ ಖಾತೆಯಲ್ಲಿ ಡಿಜಿಟಲ್ ಕ್ರಿಯೇಟರ್ ಎಂದು ಹೇಳಿಕೊಂಡಿದ್ದಾನೆ. ಮಹುವಾ ವಾಸಿಸುತ್ತಿದ್ದು, ಹಾಜಿಪುರದಲ್ಲಿ ಕೆಲಸ ಮಾಡುತ್ತಿರುವುದಾಗಿ ತಿಳಿದುಬಂದಿದೆ.
ರಾಹುಲ್ ಇನ್‌ಸ್ಟಾಗ್ರಾಮ್‌ನಲ್ಲಿ ಹಂಚಿಕೊಂಡ ವೀಡಿಯೊದಲ್ಲಿ, ಚಲಿಸುತ್ತಿರುವ ರೈಲಿನಲ್ಲಿ ಒಂದು ಕಾಲನ್ನು ಇಟ್ಟಿರುವ ಯುವಕ ಮತ್ತೊಂದು ಕಾಲನ್ನು ಫ್ಲಾಟ್ ಪಾರಂನಲ್ಲಿ ಎಳೆಯುತ್ತಾ ಯುವತಿ ಸ್ಪರ್ಶಿಸಲು ಮುಟ್ಟಲು ಕೈ ಚಾಚುವುದು ಕಂಡುಬಂದಿದೆ. ಆದರೆ ಅದು ಸಾಧ್ಯವಾಗಿಲ್ಲ.
ಈ ವಿಡಿಯೋವನ್ನು ಮತ್ತೆ ಹಂಚಿಕೊಂಡಾಗ ನೆಟ್ಟಿಗರು ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಈ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗುತ್ತಿದ್ದು, ನೆಟ್ಟಿಗರು ನಾನಾ ರೀತಿಯಲ್ಲಿ ಪ್ರತಿಕ್ರಿಯಿಸುತ್ತಿದ್ದಾರೆ. ಆದರೆ ಭಾರತೀಯ ರೈಲ್ವೆ ಇಲ್ಲಿಯವರೆಗೂ ಯಾವುದೇ ಹೇಳಿಕೆ ನೀಡಿಲ್ಲ.