ಹತ್ಯೆ (ಸಾಂಕೇತಿಕ ಚಿತ್ರ) 
ದೇಶ

ಪಾಟ್ನಾ: ಆರ್‌ಜೆಡಿ ಕಾರ್ಯಕರ್ತನಿಗೆ ಗುಂಡಿಕ್ಕಿ ಹತ್ಯೆ; 6 ಗುಂಡುಗಳು ಹಾರಿವೆ ಎಂದ ಪೊಲೀಸರು

ಮೃತ ವ್ಯಕ್ತಿಯನ್ನು ವೈಶಾಲಿ ಜಿಲ್ಲೆಯ ರಾಘೋಪುರ ನಿವಾಸಿ ರಾಜ್ ಕುಮಾರ್ ಅಲಿಯಾಸ್ ಅಲಾ ರೈ ಎಂದು ಗುರುತಿಸಲಾಗಿದೆ.

ಪಾಟ್ನಾ: ಪಾಟ್ನಾದ ರಾಜೇಂದ್ರ ನಗರ ಟರ್ಮಿನಲ್ ಬಳಿ ಅಪರಿಚಿತ ಶಸ್ತ್ರಸಜ್ಜಿತ ದುಷ್ಕರ್ಮಿಗಳು ಆರ್‌ಜೆಡಿ ಕಾರ್ಯಕರ್ತನನ್ನು ಗುಂಡಿಕ್ಕಿ ಕೊಂದಿದ್ದಾರೆ ಎಂದು ಪೊಲೀಸರು ಗುರುವಾರ ತಿಳಿಸಿದ್ದಾರೆ.

ಮೃತ ವ್ಯಕ್ತಿಯನ್ನು ವೈಶಾಲಿ ಜಿಲ್ಲೆಯ ರಾಘೋಪುರ ನಿವಾಸಿ ರಾಜ್ ಕುಮಾರ್ ಅಲಿಯಾಸ್ ಅಲಾ ರೈ ಎಂದು ಗುರುತಿಸಲಾಗಿದೆ.

"ಈ ಘಟನೆ ಬುಧವಾರ ರಾತ್ರಿ 10 ಗಂಟೆಗೆ ರಾಜೇಂದ್ರ ನಗರ ಟರ್ಮಿನಲ್ ಬಳಿಯ ಬೀದಿ ಸಂಖ್ಯೆ 17ರಲ್ಲಿ ನಡೆದಿದೆ ಎಂದು ಎಸ್‌ಪಿ(ಪಾಟ್ನಾ ಪೂರ್ವ) ಪರಿಚಯ್ ಕುಮಾರ್ ಅವರು ವರದಿಗಾರರಿಗೆ ತಿಳಿಸಿದ್ದಾರೆ.

ಅಪರಿಚಿತ ವ್ಯಕ್ತಿಗಳು ವ್ಯಕ್ತಿಯೊಬ್ಬರ ಮೇಲೆ ಗುಂಡು ಹಾರಿಸಿದ್ದಾರೆ ಎಂಬ ಮಾಹಿತಿ ಬಂದ ತಕ್ಷಣ, ಪೊಲೀಸರು ಸ್ಥಳಕ್ಕೆ ತೆರಳಿ ಗುಂಡೇಟಿನಿಂದ ಗಾಯಗೊಂಡಿದ್ದ ವ್ಯಕ್ತಿಯನ್ನು ಹತ್ತಿರದ ಆಸ್ಪತ್ರೆಗೆ ಕರೆದೊಯ್ದರು. ಆದರೆ ಚಿಕಿತ್ಸೆಯ ಸಮಯದಲ್ಲಿ ಸಾವನ್ನಪ್ಪಿದರು" ಎಂದು ಅವರು ಹೇಳಿದ್ದಾರೆ.

ಸ್ಥಳದಿಂದ ಆರು ಬಳಕೆಯಾದ ಕಾರ್ಟ್ರಿಡ್ಜ್‌ಗಳನ್ನು ಪೊಲೀಸರು ವಶಪಡಿಸಿಕೊಂಡಿದ್ದಾರೆ. ಗುಂಡಿನ ದಾಳಿಯಲ್ಲಿ ಇಬ್ಬರಿಗೂ ಹೆಚ್ಚು ಜನ ಭಾಗಿಯಾಗಿದ್ದಾರೆಂದು ಶಂಕಿಸಲಾಗಿದೆ ಎಂದು ಎಸ್ ಪಿ ತಿಳಿಸಿದ್ದಾರೆ.

"ಘಟನೆಗೆ ನಿಖರವಾದ ಕಾರಣ ಇನ್ನೂ ತಿಳಿದು ಬಂದಿಲ್ಲ. ಆದರೆ ಸ್ಥಳೀಯರು ರೈ ರಾಜಕೀಯದಲ್ಲಿ ಸಕ್ರಿಯರಾಗಿದ್ದರು ಮತ್ತು ಭೂಮಿ ಮಾರಾಟ-ಖರೀದಿಯಲ್ಲಿಯೂ ಭಾಗಿಯಾಗಿದ್ದಾರೆ ಎಂದು ಹೇಳಿದ್ದಾರೆ.

ಪೊಲೀಸರು ಈ ಪ್ರಕರಣವನ್ನು ಎಲ್ಲಾ ಕೋನಗಳಿಂದ ತನಿಖೆ ನಡೆಸುತ್ತಿದ್ದಾರೆ ಮತ್ತು ಆರೋಪಿಗಳನ್ನು ಬಂಧಿಸಲು ಸಿಸಿಟಿವಿ ದೃಶ್ಯಾವಳಿಗಳನ್ನು ವಿಶ್ಲೇಷಿಸುತ್ತಿದ್ದಾರೆ" ಎಂದು ಎಸ್‌ಪಿ ತಿಳಿಸಿದ್ದಾರೆ.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಸಾಹಸಸಿಂಹ ವಿಷ್ಣುವರ್ಧನ್, ಸರೋಜಾದೇವಿಗೆ ಮರಣೋತ್ತರ 'ಕರ್ನಾಟಕ ರತ್ನ' ಪ್ರಶಸ್ತಿ ಘೋಷಣೆ

ABVP ಕಾರ್ಯಕ್ರಮದಲ್ಲಿ ಭಾಗಿಯಾದ ವಿಚಾರ: ಗೃಹ ಸಚಿವ ಡಾ. ಜಿ. ಪರಮೇಶ್ವರ್ ಹೇಳಿದ್ದೇನು? Video

ಬೆಂಗಳೂರು: ಮಹಿಳೆ ಮೇಲೆ ಹಲ್ಲೆ; BMTC ಡ್ರೈವರ್ ತಾತ್ಕಾಲಿಕ ವಜಾ; ಮುತ್ತಿಕ್ಕುವಂತೆ ಪೀಡಿಸಿದ ಚಾಲಕ ಆರೀಫ್‍ಗೆ ಧರ್ಮದೇಟು!

'ಅಶ್ಲೀಲ ದೃಶ್ಯ'ದಲ್ಲಿ ನಟಿಸುವಂತೆ ನನ್ನನ್ನು ಒತ್ತಾಯಿಸಲಾಗಿತ್ತು: ಶ್ರೀರಾಮ ಚಂದ್ರ ಬೆಡಗಿ ಮೋಹಿನಿ ಬಿಚ್ಚಿಟ್ಟ ಅಸಲಿ ಸಂಗತಿ ಏನು?

ನಿಮ್ಮ ಕಲ್ಪನೆಗೂ ಒಂದು ಮಿತಿ ಇರಲಿ: ವಿನಯ್ ಜತೆ ಸುತ್ತಾಟ ಎಂದವರಿಗೆ ರಮ್ಯಾ ತಿರುಗೇಟು

SCROLL FOR NEXT