ರಿಲಯನ್ಸ್ ಇಂಡಸ್ಟ್ರೀಸ್ ಲಿಮಿಟೆಡ್‌ನ ಅಧ್ಯಕ್ಷ ಮತ್ತು ವ್ಯವಸ್ಥಾಪಕ ನಿರ್ದೇಶಕ ಮುಖೇಶ್ ಅಂಬಾನಿ ಅವರು ಪ್ರಧಾನಿ ನರೇಂದ್ರ ಮೋದಿ ಅವರಿಗೆ 75 ನೇ ಹುಟ್ಟುಹಬ್ಬದ ಶುಭಾಶಯಗಳನ್ನು ಕೋರಿದ್ದಾರೆ. 2047 ರಲ್ಲಿ ದೇಶವು 100 ವರ್ಷಗಳನ್ನು ಪೂರೈಸುವ ಸಮಯದವರೆಗೆ ಮೋದಿಯವರೇ ಭಾರತಕ್ಕೆ ಸೇವೆ ಸಲ್ಲಿಸುವುದನ್ನು ಮುಂದುವರಿಸಬೇಕೆಂದು ಆಶಿಸಿದ್ದಾರೆ.
"ಸ್ವತಂತ್ರ ಭಾರತವು 100 ವರ್ಷಗಳನ್ನು ಪೂರೈಸುವ ಸಂದರ್ಭದಲ್ಲಿ ಮೋದಿಯವರು ಸೇವೆ ಸಲ್ಲಿಸುವುದನ್ನು ಮುಂದುವರಿಸಬೇಕೆಂದು ನನ್ನ ಆಳವಾದ ಆಶಯವಾಗಿದೆ" ಎಂದು ಅಂಬಾನಿ ವೀಡಿಯೊ ಸಂದೇಶದಲ್ಲಿ ತಿಳಿಸಿದ್ದಾರೆ.
"ಇಂದು ದೇಶದ 145 ಕೋಟಿ ಭಾರತೀಯರಿಗೆ ಹಬ್ಬದ ದಿನ. ನಮ್ಮ ಅತ್ಯಂತ ಗೌರವಾನ್ವಿತ ಮತ್ತು ಪ್ರೀತಿಯ ಪ್ರಧಾನಿ ನರೇಂದ್ರಭಾಯಿ ಮೋದಿ ಅವರ 75 ನೇ ಹುಟ್ಟುಹಬ್ಬ. ಭಾರತದ ಇಡೀ ವ್ಯಾಪಾರ ಸಮುದಾಯದ ಪರವಾಗಿ, ರಿಲಯನ್ಸ್ ಕುಟುಂಬ ಮತ್ತು ಅಂಬಾನಿ ಕುಟುಂಬದ ಪರವಾಗಿ, ನಾನು ಪ್ರಧಾನಿ ಮೋದಿ ಅವರಿಗೆ ನನ್ನ ಅಭಿನಂದನೆಗಳನ್ನು ಸಲ್ಲಿಸುತ್ತೇನೆ" ಎಂದು ಹೇಳಿದ್ದಾರೆ.
ಪ್ರಧಾನಿ ಮೋದಿ ಅವರ ಅಮೃತ ಮಹೋತ್ಸವ ಮತ್ತು ಭಾರತದ ಅಮೃತ ಕಾಲ ನಡುವಿನ ಸಾಂಕೇತಿಕ ಸಂಪರ್ಕವನ್ನು ಅಂಬಾನಿ ಎತ್ತಿ ತೋರಿಸಿದರು. ಭಾರತದ ಅಮೃತ ಕಾಲದಲ್ಲಿ ಮೋದಿ ಅವರ ಅಮೃತ ಮಹೋತ್ಸವ ಬರುತ್ತಿರುವುದು ಕಾಕತಾಳೀಯವಲ್ಲ. ಸ್ವತಂತ್ರ ಭಾರತ 100 ವರ್ಷಗಳನ್ನು ಪೂರೈಸುವಾಗ ಮೋದಿ ಅವರು ಭಾರತಕ್ಕೆ ಸೇವೆ ಸಲ್ಲಿಸುವುದನ್ನು ಮುಂದುವರಿಸಬೇಕೆಂಬುದು ನನ್ನ ಆಳವಾದ ಆಶಯವಾಗಿದೆ" ಎಂದು ಹೇಳಿದ್ದಾರೆ.