ನವದೆಹಲಿ: ಭಾರತೀಯ ಜನತಾ ಪಕ್ಷ ಮುಸ್ಲಿಂ ಮುಕ್ತ ಭಾರತ ಕನಸು ಕಾಣುತ್ತಿದ್ದು, ಆದರೆ ಇದು ಕನಸಿನ ಮಾತು ಎಂದು ಆಲ್ ಇಂಡಿಯಾ ಮಜ್ಲಿಸ್-ಎ-ಇತ್ತೆಹಾದುಲ್ ಮುಸ್ಲಿಮೀನ್ (AIMIM) ಮುಖ್ಯಸ್ಥ ಅಸಾದುದ್ದೀನ್ ಓವೈಸಿ ಖಂಡಿಸಿದ್ದಾರೆ.
ಭಾರತೀಯ ಜನತಾ ಪಕ್ಷದ ಅಸ್ಸಾಂ ಘಟಕ ತನ್ನ ಅಧಿಕೃತ ಖಾತೆಯಲ್ಲಿ ಸೆಪ್ಟೆಂಬರ್ 15 ರಂದು ಹಂಚಿಕೊಂಡಿರುವ ವಿಡಿಯೋ ಕುರಿತು ಕಿಡಿಕಾರಿರುವ ಒವೈಸಿ, 'ಬಿಜೆಪಿ ಅಸ್ಸಾಂ ಅಸಹ್ಯಕರವಾದ ಕೃತಕ ಬುದ್ಧಿಮತ್ತೆಯ ವೀಡಿಯೊವನ್ನು ಪೋಸ್ಟ್ ಮಾಡಿದ್ದು, ಈ ಮೂಲಕ ಮುಸ್ಲಿಂ ಮುಕ್ತ ಭಾರತ ಕಲ್ಪನೆ ಇದ್ದರೆ ಅದು ನಿಮ್ಮ ಕನಸು ಎಂದು ಬರೆದಿದ್ದಾರೆ.
ಅಂತೆಯೇ ಅದು ಅಸಹ್ಯಕರ ಹಿಂದುತ್ವ ಸಿದ್ಧಾಂತವನ್ನು ಬಹಿರಂಗಪಡಿಸುತ್ತದೆ ಮತ್ತು ಆ ಪಕ್ಷ ಭಾರತದಲ್ಲಿ ಮುಸ್ಲಿಮರ ಅಸ್ತಿತ್ವವನ್ನೇ ಒಂದು ಸಮಸ್ಯೆಯಾಗಿ ನೋಡುತ್ತಿದೆ ಎಂದು ಹೇಳಿದ್ದಾರೆ.
ಇಸ್ಲಾಮೋಫೋಬಿಯಾ ಎಂದ ಕಾಂಗ್ರೆಸ್
ಇದೇ ವೇಳೆ ಅಸ್ಸಾಂ ಬಿಜೆಪಿಯ ಈ ವಿಡಿಯೋವನ್ನು AIMIM ಮುಖ್ಯಸ್ಥ ಅಸಾದುದ್ದೀನ್ ಓವೈಸಿ ಮಾತ್ರವಲ್ಲದೇ ಕಾಂಗ್ರೆಸ್ ನಾಯಕರೂ ಕೂಡ ಕಿರಿದ್ದಾರೆ. 'ಇದು ಕೋಮು ದ್ವೇಷವನ್ನು ಪ್ರಚೋದಿಸುತ್ತಿದೆ ಮತ್ತು “ಇಸ್ಲಾಮೋಫೋಬಿಯಾ” ಎಂದು ಆರೋಪಿಸಿದ್ದಾರೆ.
ವಿಡಿಯೋಗೆ ಪ್ರತಿಕ್ರಿಯಿಸಿರುವ ಕಾಂಗ್ರೆಸ್ ಸಾಮಾಜಿಕ ಜಾಲತಾಣಗಳ ಅಧ್ಯಕ್ಷೆ ಸುಪ್ರಿಯಾ ಶ್ರೀನಾಟೆ, 'ಚುನಾವಣಾ ಆಯೋಗ ಈ ರೀತಿಯ ಪೋಸ್ಟ್‌ಗಳಿಗೆ ಯಾವುದೇ ಆಕ್ಷೇಪಣೆಗಳಿಲ್ಲವೇ..? ಬಿಜೆಪಿ ಈ ರೀತಿಯಾಗಿ ವಿಷ ಹರಡುತ್ತಿದ್ದರು ಆಯೋಗ ಮೌನವಾಗಿರುವುದನ್ನು ಪ್ರಶ್ನಿಸಿದ್ದರು.
ಜ್ಞಾನೇಶ್, ನೀವು ಯಾವಾಗಲೂ ಹಾಗೆ ಮೂಕ ಪ್ರೇಕ್ಷಕರಾಗಿ ಉಳಿದು ಇದನ್ನು ಸಮರ್ಥಿಸಿಕೊಳ್ಳುತ್ತೀರಾ? ಎಂದು ಬಿಜೆಪಿ ನಾಯಕರನ್ನು ಪ್ರಶ್ನಿಸಿದ್ದಾರೆ.
ಇಷ್ಟಕ್ಕೂ ಏನಿದು ವಿವಾದಾತ್ಮಕ ವಿಡಿಯೋ?
ಅಂದಹಾಗೆ ಅಸ್ಸಾಂ ಬಿಜೆಪಿ ಘಟಕ ಅಪ್ಲೋಡ್ ಮಾಡಿದ್ದ ಕೃತಕ ಬುದ್ಧಿಮತ್ತೆ ಆಧಾರಿತ ಈ ಕ್ಲಿಪ್, ಮುಸ್ಲಿಂ ಬಹುಸಂಖ್ಯಾತ ಅಸ್ಸಾಂ ಅನ್ನು ಕಾಲ್ಪನಿಕವಾಗಿ ಚಿತ್ರಿಸುತ್ತದೆ ಮತ್ತು ಮುಸ್ಲಿಮರನ್ನು ಭೂಕಬಳಿಕೆ ಮಾಡುವ ಅಕ್ರಮ ವಲಸಿಗರಂತೆ ಬಿಂಬಿಸಿದೆ.
ಬಿಜೆಪಿ ಅಧಿಕಾರದಲ್ಲಿರದಿದ್ದರೆ ಹೇಗಿರುತ್ತದೆ, ಗೋಮಾಂಸವನ್ನು ಕಾನೂನುಬದ್ಧಗೊಳಿಸಲಾಗುತ್ತಿದೆ ಮತ್ತು ಪಾಕಿಸ್ತಾನಿ ಪ್ರಭಾವವಿದೆ ಎಂದು ಆರೋಪಿಸಲಾಗುತ್ತಿದೆ. ಈ ವಿಡಿಯೋದಲ್ಲಿ ವಿರೋಧ ಪಕ್ಷದ ನಾಯಕರಾದ ರಾಹುಲ್ ಗಾಂಧಿ ಮತ್ತು ಗೌರವ್ ಗೊಗೊಯ್ ಅವರು ಪಾಕಿಸ್ತಾನಿ ಧ್ವಜದ ಹಿನ್ನೆಲೆಯಲ್ಲಿ ಸಾರ್ವಜನಿಕರನ್ನು ಉದ್ದೇಶಿಸಿ ಮಾತನಾಡುತ್ತಿರುವುದು ಕೂಡ ಇದೆ.