ನಟ ವಿಜಯ್ 
ದೇಶ

ಆಗ ಮಂಡ್ಯ, ಈಗ ತಮಿಳುನಾಡು: 3 ವಿಜಯ್, 2 ಜೊಸೆಫ್.. ಒಂದೇ ಹೆಸರಿನ ಅಭ್ಯರ್ಥಿಗಳ ಪಟ್ಟಿ, ನಟ Vijay ಹಣಿಯಲು ಏನೆಲ್ಲಾ ಕಸರತ್ತು!

ನಟ ಸ್ಪರ್ಧಿಸುತ್ತಿರುವ ಎರಡು ಕ್ಷೇತ್ರಗಳಲ್ಲಿ ತಮ್ಮದೇ ಹೆಸರಿನ ಐದು ಅಭ್ಯರ್ಥಿಗಳು ಕಣಕ್ಕಿಳಿದಿದ್ದು, ಇದು ಮತದಾರರು ಗೊಂದಲಕ್ಕೀಡಾಗುವ ಸಾಧ್ಯತೆ ಇದೆ ಎನ್ನಲಾಗಿದೆ.

ಚೆನ್ನೈ: ತಮಿಳುನಾಡು ವಿಧಾನಸಭೆ ಚುನಾವಣೆ ಕಣ ನಟ ವಿಜಯ್ ಸ್ಪರ್ಧೆ ಮೂಲಕ ರಂಗೇರಿದ್ದು, ದೊಡ್ಡ ಪಾರ್ಟಿ ಸಭೆಗಳ ಮೂಲಕ ನಟ ವಿಜಯ್ ಮತದಾರರಿಗೆ ಹತ್ತಿರವಾಗುತ್ತಿದ್ದಂತೆಯೇ ಇತ್ತ ಅವರನ್ನು ಹಣಿಯಲು ರಾಜಕೀಯ ಪಕ್ಷಗಳು ಇನ್ನಿಲ್ಲದ ಕಸರತ್ತು ಆರಂಭಿಸಿವೆ.

ಹೌದು.. ನಟ-ರಾಜಕಾರಣಿ ಸಿ. ಜೋಸೆಫ್ ವಿಜಯ್ ಈ ತಿಂಗಳು ಚುನಾವಣಾ ಪ್ರವೇಶಕ್ಕೆ ಸಜ್ಜಾಗುತ್ತಿದ್ದು, ಅವರು ಅಸಾಮಾನ್ಯ ಸವಾಲನ್ನು ಎದುರಿಸುತ್ತಿದ್ದಾರೆ.

ಅವರು ಸ್ಪರ್ಧಿಸುತ್ತಿರುವ ಎರಡು ಕ್ಷೇತ್ರಗಳಲ್ಲಿ ತಮ್ಮದೇ ಹೆಸರಿನ ಐದು ಅಭ್ಯರ್ಥಿಗಳು ಕಣಕ್ಕಿಳಿದಿದ್ದು, ಇದು ಮತದಾರರು ಗೊಂದಲಕ್ಕೀಡಾಗುವ ಸಾಧ್ಯತೆ ಇದೆ ಎನ್ನಲಾಗಿದೆ.

ಅಂತೆಯೇ ಪೆರಂಬೂರಿನಲ್ಲಿ, ತಮಿಳಗ ವೆಟ್ರಿ ಕಳಗಂ (ಟಿವಿಕೆ) ಮುಖ್ಯಸ್ಥ ನಟ ವಿಜಯ್ ಇತರ ಇಬ್ಬರು ವಿಜಯ್‌ಗಳೊಂದಿಗೆ ಸ್ಪರ್ಧಿಸುತ್ತಿದ್ದಾರೆ. ಆ ಮೂಲಕ ನಟ ವಿಜಯ್ ತಮ್ಮದೇ ಹೆಸರಿನ ಅಭ್ಯರ್ಥಿಗಳ ವಿರುದ್ದ ಹೋರಾಡಬೇಕಿದೆ.

ಇಷ್ಟಕ್ಕೂ ಯಾರು ಈ ವಿಜಯ್ ಗಳು?

ಆಲ್ ಇಂಡಿಯಾ ಜನನಾಯಕ ಮಕ್ಕಳ ಕಳಗಂ (ಎಐಜೆಎಂಕೆ) ಪಕ್ಷದ ಕೆ. ವಿಜಯ್ ಮತ್ತು ಸ್ವತಂತ್ರ ಅಭ್ಯರ್ಥಿ ವಿಜಯ್ ಜಿ. ಮತ್ತು ತಿರುಚ್ಚಿ ಪೂರ್ವದಲ್ಲಿ, ಅವರ ಪ್ರತಿಸ್ಪರ್ಧಿಗಳಲ್ಲಿ ಒಬ್ಬರಾಗಿದ್ದ ವಿಜಯ್ ಎಂಬ ಸ್ವತಂತ್ರ ಅಭ್ಯರ್ಥಿಗಳು ಇದೀಗ ಪೆರಂಬೂರಿನಲ್ಲಿ ನಟ ಜೋಸೆಫ್ ವಿಜಯ್ ವಿರುದ್ಧ ಕಣಕ್ಕಿಳಿದಿದ್ದಾರೆ.

ವಿಜಯ್ ಮಾತ್ರವಲ್ಲ ಜೊಸೆಫ್ ರಿಂದಲೂ ಸ್ಪರ್ಧೆ

ಇನ್ನು ಕೇವಲ ವಿಜಯ್ ಎಂಬ ಹೆಸರಿನ ಅಭ್ಯರ್ಥಿಗಳು ಮಾತ್ರವಷ್ಟೇ ಅಲ್ಲ. ಜೋಸೆಫ್ ಎಂಬ ಹೆಸರಿನ ಅಭ್ಯರ್ಥಿಗಳೂ ಕೂಡ ಕಣದಲ್ಲಿದ್ದು, ಎಂ. ಜೋಸೆಫ್ ಮತ್ತು ಎಸ್. ಜೋಸೆಫ್ ಕೂಡ ಪೆರಂಬೂರು ಕ್ಷೇತ್ರದಿಂದ ಸ್ಪರ್ಧಿಸುತ್ತಿದ್ದಾರೆ.

ಅಂದು ಮಂಡ್ಯ ಇಂದು ತಮಿಳುನಾಡು

ಒಂದೇ ಹೆಸರಿನ ಅಭ್ಯರ್ಥಿಗಳನ್ನು ಕಣಕ್ಕಿಳಿಸುವ ಮೂಲಕ ಮತದಾರರನ್ನು ಗೊಂದಲಕ್ಕೀಡು ಮಾಡುವ ಪ್ರಯತ್ನ ದೇಶದ ರಾಜಕೀಯದಲ್ಲಿ ಇದೇ ಮೊದಲೇನಲ್ಲ.. ಇತ್ತೀಚಿನ ಉದಾಹರಣೆ ಎಂದರೆ ಈ ಹಿಂದೆ ಕರ್ನಾಟಕದ ಮಂಡ್ಯ ಲೋಕಸಭಾ ಚುನಾವಣೆಯಲ್ಲಿ ಸ್ವತಂತ್ರ ಅಭ್ಯರ್ಥಿಯಾಗಿದ್ದ ಸುಮಲತಾ ಅಂಬರೀಷ್ ಅವರ ಹಣಿಯಲು ಹತ್ತಾರು ಸುಮಲತಾ ಎಂಬ ಹೆಸರಿನ ಮಹಿಳೆಯನ್ನು ಕಣಕ್ಕಿಳಿಸಿದ್ದನ್ನು ಇಲ್ಲಿ ಸ್ಮರಿಸಬಹುದು.

ವಿಜಯ್, ಟಿವಿಕೆ ಮಾತ್ರವಲ್ಲ ಇತರೆ ಪಕ್ಷದ ಅಭ್ಯರ್ಥಿಗಳಿಗೂ ಇದೇ ಸಮಸ್ಯೆ

ಇನ್ನು ಏಪ್ರಿಲ್ 23 ರಂದು ನಡೆಯಲಿರುವ ವಿಧಾನಸಭಾ ಚುನಾವಣೆಯಲ್ಲಿ ಕೇವಲ ವಿಜಯ್ ಮಾತ್ರವಲ್ಲ ವಿವಿಧ ಪಕ್ಷಗಳು ಸಹ ಅದೇ ಸಮಸ್ಯೆಯನ್ನು ಎದುರಿಸುತ್ತಿವೆ. ತಿರುಚ್ಚಿ ಜಿಲ್ಲೆಯ ತುರೈಯೂರ್ (ಎಸ್‌ಸಿ) ವಿಧಾನಸಭಾ ಕ್ಷೇತ್ರದಲ್ಲಿ, ಸರೋಜಾ ಹೆಸರಿನ ಮೂವರು ಅಭ್ಯರ್ಥಿಗಳು ಸ್ಪರ್ಧಿಸುತ್ತಿದ್ದಾರೆ. ಈ ಪೈಕಿ ಓರ್ವರು ಎಐಎಡಿಎಂಕೆ ಅಭ್ಯರ್ಥಿಯಾಗಿರುವುದು ಗಮನಾರ್ಹ. ಅಂತೆಯೇ ಮನ್ನಾರ್‌ಗುಡಿಯಲ್ಲಿ, ಕಾಮರಾಜ್ ಎಂಬ ಹೆಸರನ್ನು ಹೊಂದಿರುವ ನಾಲ್ಕು ಅಭ್ಯರ್ಥಿಗಳು ಸ್ಪರ್ಧಿಸುತ್ತಿದ್ದಾರೆ.

ಮಾಜಿ ಡಿಎಂಕೆ ಸಚಿವ ವಿ. ಸೆಂಥಿಲ್ ಬಾಲಾಜಿ ಸ್ಪರ್ಧಿಸುತ್ತಿರುವ ಕೊಯಮತ್ತೂರು ದಕ್ಷಿಣದಲ್ಲಿ, ಸೆಂಥಿಲ್ ಎಂಬ ಹೆಸರಿನ ಐದು ಅಭ್ಯರ್ಥಿಗಳು ಸ್ಪರ್ಧೆಯಲ್ಲಿದ್ದಾರೆ. ಅಚ್ಚರಿ ಎಂದರೆ ಇದೇ ವಿಜಯ್ ಅವರ ಟಿವಿಕೆ ಪಕ್ಷದ ಅಭ್ಯರ್ಥಿಯಾಗಿದ್ದಾರೆ. ಇತರರು ಸ್ವತಂತ್ರ ಅಭ್ಯರ್ಥಿಗಳಾಗಿದ್ದಾರೆ.

ಎಐಎಡಿಎಂಕೆ ಹಿರಿಯ ನಾಯಕ ಎಸ್.ಪಿ. ವೇಲುಮಣಿ ಕಣದಲ್ಲಿರುವ ಕೊಯಮತ್ತೂರು ಜಿಲ್ಲೆಯ ಥೊಂಡಮುತ್ತೂರ್ ಕ್ಷೇತ್ರದಲ್ಲಿ ವೇಲುಮಣಿ ಹೆಸರಿನ ಅಭ್ಯರ್ಥಿಗಳಿದ್ದು, ಅಂತೆಯೇ ಅಧಿಕೃತ ಡಿಎಂಕೆ ಅಭ್ಯರ್ಥಿ ಎನ್. ಕಾರ್ತಿಕೇಯನ್ ಸ್ಪರ್ಧೆ ಮಾಡುತ್ತಿರುವ ಕ್ಷೇತ್ರದಲ್ಲಿ ಕಾರ್ತಿಕೇಯನ್ ಎಂಬ ಹೆಸರಿನ ಮೂವರು ಹೆಚ್ಚುವರಿ ಅಭ್ಯರ್ಥಿಗಳು ಸ್ಪರ್ಧೆಗೆ ಇಳಿದಿದ್ದಾರೆ.

ಮತದಾರರ ಗೊಂದಲಕ್ಕೀಡು ಮಾಡುವ ತಂತ್ರಗಾರಿಕೆ

ಅಂತೆಯೇ ಕೆಲವು ನಾಯಕರು ಒಂದೇ ಹೆಸರಿನ ಅಭ್ಯರ್ಥಿಗಳನ್ನು ಹಾಕುವುದು ಮತಗಳನ್ನು ವಿಭಜಿಸುವ ಸಾಮರ್ಥ್ಯವನ್ನು ಹೊಂದಿರುವ ಉದ್ದೇಶಪೂರ್ವಕ ತಂತ್ರವಾಗಿದೆ ಎಂದು ಹೇಳುತ್ತಾರೆ.

ಈ ಬಗ್ಗೆ ಹೆಸರು ಹೇಳಲು ಇಚ್ಛಿಸದ ಎಐಎಡಿಎಂಕೆಯ ಮಾಜಿ ಕಾರ್ಯಕಾರಿಣಿಯೊಬ್ಬರು ಮಾಧ್ಯಮವೊಂದಕ್ಕೆ ಮಾತನಾಡಿದ್ದು, 'ಸಾರ್ವಜನಿಕರನ್ನು ಗೊಂದಲಕ್ಕೀಡುಮಾಡುವ ಉದ್ದೇಶದಿಂದ ಇಂತಹ ತಂತ್ರಗಳು ಪ್ರತಿ ಚುನಾವಣೆಯಲ್ಲೂ ಸಾಮಾನ್ಯ ದೃಶ್ಯವಾಗಿದೆ.

ಇದು ಯಾವುದೇ ಪ್ರಮುಖ ಪ್ರತಿಕೂಲ ಪರಿಣಾಮವನ್ನು ಉಂಟುಮಾಡುವ ಸಾಧ್ಯತೆಯಿಲ್ಲದಿದ್ದರೂ, ಪ್ರಮುಖ ಪಕ್ಷಗಳ ಚಿಹ್ನೆಗಳಿಗೆ ಕೆಲವು ಚಿಹ್ನೆಗಳ ಹೋಲಿಕೆಯು ನಿಜಕ್ಕೂ ಗಮನಾರ್ಹ ಗೊಂದಲಕ್ಕೆ ಕಾರಣವಾಗಬಹುದು" ಎಂದು ಹೇಳಿದ್ದಾರೆ.

ಡಿಎಂಕೆ ವಕ್ತಾರ ಸರವಣನ್ ಅಣ್ಣಾದೊರೈ, "ಹತಾಶ ವ್ಯಕ್ತಿಗಳು ನಾಮಮಾತ್ರದ ಅಭ್ಯರ್ಥಿಗಳನ್ನು ಕಣಕ್ಕಿಳಿಸುವುದು ಹತಾಶ ವ್ಯಕ್ತಿಗಳ ಹತಾಶ ಕ್ರಮ" ಎಂದು ಕಿಡಿಕಾರಿದ್ದಾರೆ.

ಅಭ್ಯರ್ಥಿ ಹೇಳೋದೇನು?

ಇನ್ನು ನಟ ವಿಜಯ್ ಅವರ ಹೆಸರುಗಳಿರುವ ಅಭ್ಯರ್ಥಿಯೊಬ್ಬರು ತಮ್ಮ ವಿರುದ್ಧದ ಆರೋಪಗಳನ್ನು ಅಲ್ಲಗಳೆದಿದ್ದಾರೆ.

ಪೆರಂಬೂರಿನಲ್ಲಿ ಟಿವಿಕೆ ಮುಖ್ಯಸ್ಥ ನಟ ವಿಜಯ್ ರ ಪ್ರತಿಸ್ಪರ್ಧಿಗಳಲ್ಲಿ ಒಬ್ಬರಾದ ಎಐಜೆಎಂಕೆಯ ಕೆ. ವಿಜಯ್ ಮಾತನಾಡಿ, 'ಅವರ ವಿರುದ್ಧ ನಿಲ್ಲುವ ನಿರ್ಧಾರ ಉದ್ದೇಶಪೂರ್ವಕವಾಗಿದೆ ಎಂಬುದನ್ನು ನಾನು ಒಪ್ಪುವುದಿಲ್ಲ. ಯಾವುದೇ ರಾಜಕೀಯ ಪ್ರೇರಣೆ ಇರಲಿಲ್ಲ.

ನಾನು 2017 ರಲ್ಲಿ ಸ್ಥಾಪನೆಯಾದ ನಮ್ಮ ಪಕ್ಷದ ಜಿಲ್ಲಾ ಕಾರ್ಯದರ್ಶಿ. ನನಗೆ ಇನ್ನೂ ಚಿಹ್ನೆಯನ್ನು ನೀಡಲಾಗಿಲ್ಲ. ನಟ ವಿಜಯ್ ಅವರ ನಾಮಪತ್ರದ ಮೇಲೆ ಪ್ರಭಾವ ಬೀರಲು ಪ್ರಯತ್ನಿಸುವ ಉದ್ದೇಶ ನನಗಿಲ್ಲ. ನಾವು ಬಹು ಕ್ಷೇತ್ರಗಳಲ್ಲಿ ನಾಮಪತ್ರಗಳನ್ನು ಸಲ್ಲಿಸಿದ್ದೇವೆ ಎಂದು ಅವರು ಹೇಳಿದರು.

"ಯಾವುದೇ ರಾಜಕೀಯ ಪ್ರೇರಣೆ ಇಲ್ಲ, ಮತ್ತು ನಾನು ನನ್ನ ಕ್ಷೇತ್ರದಲ್ಲಿ ಹಲವು ವರ್ಷಗಳಿಂದ ಸಕ್ರಿಯನಾಗಿದ್ದೇನೆ. ನನ್ನ ಹೆಸರು ವಿಜಯ್ ಎಂಬ ಕಾರಣಕ್ಕಾಗಿ ನನಗೆ ಟಿಕೆಟ್ ನೀಡಲಾಗಿದೆ ಎಂದು ಜನರು ಭಾವಿಸಿದರೆ, ಅವರು ಹಾಗೆಯೇ ಅಂದುಕೊಳ್ಳಲಿ. ನಮ್ಮ ಚಿಹ್ನೆಗಳು ವಿಭಿನ್ನವಾಗಿರುವುದರಿಂದ ಯಾವುದೇ ಗೊಂದಲವಿಲ್ಲ ಎಂದು ನಾನು ಭಾವಿಸುತ್ತೇನೆ ಎಂದು ಪೆರಂಬೂರು ಕ್ಷೇತ್ರದ ಮತ್ತೊಬ್ಬ ಅಭ್ಯರ್ಥಿ ಎಂ. ಜೋಸೆಫ್ ತಮ್ಮ ನಾಮಪತ್ರವನ್ನು ಸಮರ್ಥಿಸಿಕೊಂಡರು.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

ಅಮೆರಿಕ ಮಧ್ಯಸ್ಥಿಕೆಯಲ್ಲಿ ಇಸ್ರೇಲ್–ಲೆಬನಾನ್ ಶಾಂತಿ ಪ್ರಯತ್ನ: ಕದನ ವಿರಾಮವಿಲ್ಲದೆ ಮಾತುಕತೆ ಸಾಧ್ಯವಿಲ್ಲ; ಹಿಜ್ಬುಲ್ಲಾ ಷರತ್ತು, ಉದ್ವಿಗ್ನತೆ ಮುಂದುವರಿಕೆ ಸಾಧ್ಯತೆ

‘ಮಾನವಕುಲಕ್ಕೆ ಶಾಪ’ ನೀವು, ನರಕದಲ್ಲಿ ಬೆಂದು ಹೋಗಿ; ಇಸ್ರೇಲ್'ಗೆ ಪಾಕ್ ಶಾಪ, ಶಾಂತಿ ಮಾತುಕತೆ ಮಧ್ಯಸ್ಥಿಕೆ ನಡುವೆಯೇ ಶಾಕಿಂಗ್ ಹೇಳಿಕೆ..!

ತಮಿಳುನಾಡಿನಲ್ಲಿ ದ್ರಾವಿಡ ಪಕ್ಷಗಳ ನೇರ ಸೆಣಸಾಟ ಮುಂದುವರಿಯಲಿದೆಯೇ? ತೃತೀಯ ಶಕ್ತಿ ಉದಯಿಸುತ್ತದೆಯೇ? (ನೇರ ನೋಟ)

ಹಾರ್ಮುಜ್ ಟ್ಯಾಂಕರ್ ಶುಲ್ಕ ವಿವಾದ: ಕೂಡಲೇ ನಿಲ್ಲಿಸಿ...; ಇರಾನ್ ವಿರುದ್ಧ ಗುಡುಗಿದ ಟ್ರಂಪ್, ಕಠಿಣ ಎಚ್ಚರಿಕೆ

ಶಾಂತಿ ಮಾತುಕತೆ ಮಧ್ಯಸ್ಥಿಕೆ ವಹಿಸಿ, ವಿನಾಶ ಬಯಸಿದರೆ ಒಪ್ಪಲಾಗದು: ಪಾಕ್ ವಿರುದ್ಧ ಗುಡುಗಿದ ಇಸ್ರೇಲ್..!

SCROLL FOR NEXT