ಸ್ಪೈಸ್ ಜೆಟ್  online desk
ದೇಶ

ದೆಹಲಿ ವಿಮಾನ ನಿಲ್ದಾಣ: ವಿಮಾನಗಳು ಪರಸ್ಪರ ಡಿಕ್ಕಿ; ಅಕಾಸಾ, ಸ್ಪೈಸ್‌ಜೆಟ್ ರೆಕ್ಕೆಗಳು ತುಂಡು! Video

ಅಕಾಸಾ ಏರ್ ವಿಮಾನ ದೆಹಲಿಯಿಂದ ಹೈದರಾಬಾದ್‌ಗೆ ತೆರಳುವ QP-1406 ವಿಮಾನಯಾನವನ್ನು ನಡೆಸಬೇಕಾಗಿದ್ದು, ಸ್ಪೈಸ್‌ಜೆಟ್ ವಿಮಾನ ಲೇಹ್‌ನಿಂದ ಆಗಮಿಸಿತ್ತು ಎಂದು ಅಧಿಕಾರಿಗಳು ಹೇಳಿದ್ದಾರೆ.

ದೆಹಲಿ ವಿಮಾನ ನಿಲ್ದಾಣದ ಟ್ಯಾಕ್ಸಿವೇಯಲ್ಲಿ ಅಕಾಸಾ ಏರ್ ಮತ್ತು ಸ್ಪೈಸ್‌ಜೆಟ್ ವಿಮಾನಗಳ ರೆಕ್ಕೆಗಳು ಪರಸ್ಪರ ತಾಕಿಕೊಂಡಿದ್ದು, ಈ ಘಟನೆದಲ್ಲಿ ಹಾನಿ ಸಂಭವಿಸಿದ ಕಾರಣ ಎರಡೂ ವಿಮಾನಗಳ ಟೇಕ್ ಆಫ್ ನ್ನು ರದ್ದುಗೊಳಿಸಿ ನಿಲ್ಲಿಸಲಾಗಿದೆ.

ಅಕಾಸಾ ಏರ್ ವಿಮಾನ ಟೇಕ್‌ಆಫ್‌ಗೆ ಟ್ಯಾಕ್ಸಿಂಗ್ ಮಾಡುತ್ತಿದ್ದಾಗ ಮತ್ತು ಸ್ಪೈಸ್‌ಜೆಟ್ ವಿಮಾನ ಪಾರ್ಕಿಂಗ್ ಸ್ಟ್ಯಾಂಡ್‌ ಕಡೆಗೆ ಟ್ಯಾಕ್ಸಿಂಗ್ ಮಾಡುತ್ತಿದ್ದಾಗ, ಮಧ್ಯಾಹ್ನ ಸುಮಾರು 2.15ರ ಸುಮಾರಿಗೆ ಟರ್ಮಿನಲ್ 1 ಬಳಿ ಈ ಘಟನೆ ನಡೆದಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಅಕಾಸಾ ಏರ್ ವಿಮಾನ ದೆಹಲಿಯಿಂದ ಹೈದರಾಬಾದ್‌ಗೆ ತೆರಳುವ QP-1406 ವಿಮಾನಯಾನವನ್ನು ನಡೆಸಬೇಕಾಗಿದ್ದು, ಸ್ಪೈಸ್‌ಜೆಟ್ ವಿಮಾನ ಲೇಹ್‌ನಿಂದ ಆಗಮಿಸಿತ್ತು ಎಂದು ಅಧಿಕಾರಿಗಳು ಹೇಳಿದ್ದಾರೆ.

"ದೆಹಲಿಯಿಂದ ಹೈದರಾಬಾದ್‌ಗೆ ತೆರಳಬೇಕಿದ್ದ QP 1406 ವಿಮಾನಯಾನವನ್ನು ನಡೆಸುತ್ತಿದ್ದ ಅಕಾಸಾ ಏರ್ ವಿಮಾನ 2026ರ ಏಪ್ರಿಲ್ 16ರಂದು Bay ಗೆ ಹಿಂದಿರುಗಬೇಕಾಯಿತು. ಪ್ರಾಥಮಿಕ ಮಾಹಿತಿಯ ಪ್ರಕಾರ, ಅಕಾಸಾ ವಿಮಾನ ಸ್ಥಿರವಾಗಿ ನಿಂತಿದ್ದಾಗ ಮತ್ತೊಂದು ಏರ್‌ಲೈನ್‌ನ ವಿಮಾನವು ಅದನ್ನು ತಾಕಿದೆ" ಎಂದು ಅಕಾಸಾ ಏರ್ ತನ್ನ ಪ್ರಕಟಣೆಯಲ್ಲಿ ತಿಳಿಸಿದೆ.

ಘಟನೆಯಲ್ಲಿ ಭಾಗಿಯಾದ ವಿಮಾನ ಬೋಯಿಂಗ್ 737 ಮ್ಯಾಕ್ಸ್ 8 ಮಾದರಿಯದು. ಎಲ್ಲಾ ಪ್ರಯಾಣಿಕರು ಮತ್ತು ಸಿಬ್ಬಂದಿಯನ್ನು ಸುರಕ್ಷಿತವಾಗಿ ಇಳಿಸಲಾಗಿದೆ ಎಂದು ವಿಮಾನಯಾನ ಸಂಸ್ಥೆ ತಿಳಿಸಿದೆ. “ನಿರ್ಧರಿತ ನಿಯಮಾವಳಿಗಳ ಪ್ರಕಾರ ಸಂಬಂಧಿತ ಅಧಿಕಾರಿಗಳಿಗೆ ಮಾಹಿತಿ ನೀಡಲಾಗಿದೆ ಮತ್ತು ವಿಷಯದ ಕುರಿತು ತನಿಖೆ ನಡೆಯುತ್ತಿದೆ,” ಎಂದು ಅದು ಪ್ರಕಟಿಸಿದೆ.

ಪ್ರತ್ಯೇಕ ಪ್ರಕಟಣೆಯಲ್ಲಿ, ಸ್ಪೈಸ್‌ಜೆಟ್ ತನ್ನ ಬೋಯಿಂಗ್ 737-700 ವಿಮಾನವು ದೆಹಲಿ ವಿಮಾನ ನಿಲ್ದಾಣದಲ್ಲಿ ಟ್ಯಾಕ್ಸಿಂಗ್ ವೇಳೆ ನೆಲಮಟ್ಟದ ಘಟನೆಗೆ ಒಳಗಾಗಿದ್ದು, ಅದರ ಬಲಭಾಗದ ವಿಂಗ್‌ಲೆಟ್‌ಗೆ ಹಾಗೂ ಮತ್ತೊಂದು ವಿಮಾನ ಕಂಪನಿಗೆ ಸೇರಿದ ಇನ್ನೊಂದು ವಿಮಾನದ ಎಡಭಾಗಕ್ಕೆ ಹಾನಿಯಾಗಿದೆ ಎಂದು ತಿಳಿಸಿದೆ. ಸ್ಪೈಸ್‌ಜೆಟ್ ವಿಮಾನವನ್ನು ದೆಹಲಿಯಲ್ಲೇ ನಿಲ್ಲಿಸಲಾಗಿದೆ ಎಂದು ಹೇಳಿದೆ. ಅಧಿಕಾರಿಗಳ ಪ್ರಕಾರ, ಟ್ಯಾಕ್ಸಿವೇಯಲ್ಲಿ ಎರಡೂ ವಿಮಾನಗಳ ರೆಕ್ಕೆಗಳು ಪರಸ್ಪರ ತಾಕಿಕೊಂಡಿವೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

ಮೂಡಾ ಅಕ್ರಮಕ್ಕೆ ಬ್ರೇಕ್: ₹2000 ಕೋಟಿ ಮೌಲ್ಯದ 1,100 ಸೈಟುಗಳ ಹಂಚಿಕೆ ರದ್ದು ಮಾಡಿದ ಯತೀಂದ್ರ ಸಿದ್ದರಾಮಯ್ಯ

ರೋಚಕ ಪಂದ್ಯದಲ್ಲಿ ಭಾರತ 5-3 ಗೋಲುಗಳಿಂದ ಪಾಕಿಸ್ತಾನವನ್ನು ಸೋಲಿಸಿ ವಿಶ್ವಕಪ್‌ನಿಂದ ಹೊರದೂಡಿದೆ!

ಕರ್ನಾಟಕದ ಇತಿಹಾಸದಲ್ಲೇ ಮೊದಲು: ಪ್ರತಿಭಟಿಸುವುದಾದರೆ ಸದನದ ಬಾವಿಗೆ ಬನ್ನಿ; ವಿಪಕ್ಷ ಶಾಸಕರಿಗೆ ಸ್ಪೀಕರ್ ಆಹ್ವಾನ, BJP ಕಿಡಿ!

ಸಚಿವ ನಾಗೇಂದ್ರ ರಾಜೀನಾಮೆಗೆ ಬಿಜೆಪಿ ಬಿಗಿಪಟ್ಟು: ವಿಧಾನಸೌಧ ಆವರಣದಲ್ಲಿ ಪ್ರತಿಭಟನೆ; ಸಿಎಂ ಡಿಕೆಶಿ ವಿರುದ್ಧ ವಾಗ್ದಾಳಿ; Video

ತಪ್ಪಾದ DPR ಸಿದ್ಧಪಡಿಸುವ ಸಲಹೆಗಾರರೇ ಹೆದ್ದಾರಿ ಅಪಘಾತಗಳು ಮತ್ತು ಸಾವುಗಳಿಗೆ 'ತಪ್ಪಿತಸ್ಥರು': ನಿತಿನ್ ಗಡ್ಕರಿ ಕಠಿಣ ಕ್ರಮದ ಎಚ್ಚರಿಕೆ!