ಚಿರಾಗ್ ಪಾಸ್ವಾನ್ 
ದೇಶ

ಹಾಸ್ಯ ಭಾಷಣಗಳನ್ನು ನೀಡುವ ರಾಹುಲ್ ಗಾಂಧಿ ವಿಪಕ್ಷ ನಾಯಕನಾಗಲು ಯೋಗ್ಯರಲ್ಲ: ಚಿರಾಗ್ ಪಾಸ್ವಾನ್

ಈ ಮೂಲಕ ಅವರ ಪಕ್ಷದಿಂದ ಮೊದಲ ಬಾರಿಗೆ ಸಂಸದರಾದವರ ಮುಂದೆ ತಮ್ಮ ಗೌರವವನ್ನು ತಾವೇ ಕೆಳಗೆ ಹಾಕಿಕೊಂಡಿದ್ದಾರೆ. ಕಿರಿಯ ಸಂಸದರ ಮುಂದೆ ನಗೆಪಾಟಲಿಗೀಡಾಗಿದ್ದಾರೆ ಎಂದು ಅವರು ಆರೋಪಿಸಿದ್ದಾರೆ.

ನವದೆಹಲಿ: ಲೋಕಸಭೆಯ ಚರ್ಚೆಯ ಸಂದರ್ಭದಲ್ಲಿ ವಿರೋಧ ಪಕ್ಷದ ನಾಯಕ (ಎಲ್‌ಒಪಿ) ರಾಹುಲ್ ಗಾಂಧಿ ಪ್ರಧಾನಿ ನರೇಂದ್ರ ಮೋದಿಯನ್ನು "ಜಾದೂಗಾರ" ಎಂದು ಕರೆದಿದ್ದಕ್ಕೆ ಕೇಂದ್ರ ಸಚಿವ ಚಿರಾಗ್ ಪಾಸ್ವಾನ್ ಆಕ್ರೋಶ ವ್ಯಕ್ತಪಡಿಸಿದರು.

ರಾಹುಲ್ ಗಾಂಧಿ ತಮ್ಮ ಸ್ಥಾನದ ಘನತೆಯನ್ನು ಕುಗ್ಗಿಸಿಕೊಂಡಿದ್ದಾರೆ ಮತ್ತು ತಮ್ಮದೇ ಸಂಸದರ ಮುಂದೆ ನಗೆಪಾಟಲೀಗೀಡಾಗಿದ್ದಾರೆ ಎಂದು ಪಾಸ್ವಾನ್ ಹೇಳಿದ್ದಾರೆ. ರಾಹುಲ್ ಗಾಂಧಿ ವಿರೋಧ ಪಕ್ಷದ ನಾಯಕನ ಸ್ಥಾನದ ಘನತೆಯನ್ನು ಕಡಿಮೆ ಮಾಡಿದ್ದಾರೆ. ಉದಾಹರಣೆಗಳನ್ನು ನೀಡುವ ಭರದಲ್ಲಿ ಪ್ರಧಾನಿ ಮೋದಿಯವರ ಹೆಸರನ್ನು ತಮ್ಮ ಜೊತೆ ಎಳೆದುಕೊಂಡು ಮಿತಿ ಮೀರಿ ವರ್ತಿಸಿದ್ದಾರೆ.

ಈ ಮೂಲಕ ಅವರ ಪಕ್ಷದಿಂದ ಮೊದಲ ಬಾರಿಗೆ ಸಂಸದರಾದವರ ಮುಂದೆ ತಮ್ಮ ಗೌರವವನ್ನು ತಾವೇ ಕೆಳಗೆ ಹಾಕಿಕೊಂಡಿದ್ದಾರೆ. ಕಿರಿಯ ಸಂಸದರ ಮುಂದೆ ನಗೆಪಾಟಲಿಗೀಡಾಗಿದ್ದಾರೆ ಎಂದು ಅವರು ಆರೋಪಿಸಿದ್ದಾರೆ. ರಾಹುಲ್ ಗಾಂಧಿ ಅವರ ಭಾಷಣದಿಂದ ನಾನು ತುಂಬಾ ನಿರಾಶೆಗೊಂಡಿದ್ದೇನೆ. ಪ್ರಜಾಪ್ರಭುತ್ವದಲ್ಲಿ ವಿರೋಧ ಪಕ್ಷವು ನಿರ್ಣಾಯಕ ಪಾತ್ರವನ್ನು ಹೊಂದಿದೆ.

ಆದರೆ ನನಗೆ ಹೆಂಡತಿಯ ಸಮಸ್ಯೆಯಿಲ್ಲ ಎನ್ನುತ್ತಾ ಲೋಕಸಭಾ ವಿರೋಧ ಪಕ್ಷದ ನಾಯಕರೊಬ್ಬರು ಸದನದಲ್ಲಿ ತನ್ನನ್ನು ತಾನೇ ಅಪಹಾಸ್ಯ ಮಾಡಿಕೊಳ್ಳಲು ಬಯಸಿದರೆ, ಅವರು ಕೇವಲ ಹಾಸ್ಯ ಭಾಷಣಗಳನ್ನು ನೀಡಲು ಬಯಸಿದರೆ, ಅವರು ವಿರೋಧ ಪಕ್ಷದ ನಾಯಕರಾಗಲು ಯೋಗ್ಯರಲ್ಲ ಎಂದು ನನಗೆ ಅನಿಸುತ್ತದೆ” ಎಂದು ಚಿರಾಗ್ ಪಾಸ್ವಾನ್ ಹೇಳಿದ್ದಾರೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

ಮೈಸೂರಿನಲ್ಲಿ ವಿವೇಕ ಸ್ಮಾರಕ ಉದ್ಘಾಟಿಸಿದ ಪ್ರಧಾನಿ ಮೋದಿ; ಕೆಲಹೊತ್ತು ಧ್ಯಾನ

ಕಾವೇರಿ ಕಿಚ್ಚಿನ ನಡುವೆಯೇ ಕೊಡಗಿನಲ್ಲಿ ಭಾರಿ ಮಳೆ: ಭಾಗಮಂಡಲ‌ ತ್ರಿವೇಣಿ ಸಂಗಮ, ಸ್ನಾನಘಟ್ಟ ಜಲಾವೃತ, ಶಾಲಾ-ಕಾಲೇಜುಗಳಿಗೆ ರಜೆ! ಹಾರಂಗಿ ಭರ್ತಿ, Video

Commonwealth Games 2026: ಭಾರತಕ್ಕೆ ಡಬಲ್ ಧಮಾಕ; ಬಾಕ್ಸಿಂಗ್‌ನಲ್ಲಿ ಚಿನ್ನ ಗೆದ್ದ ಪ್ರೀತಿ, ಜೈಸ್ಮಿನ್, ಭಾರತಕ್ಕೆ ಒಟ್ಟು 27 ಪದಕ!

ಏರ್ಪೋರ್ಟ್ to ಸೆಮಿಕಂಡಕ್ಟರ್‌, ಆಂಧ್ರಕ್ಕೆ ಬಂಪರ್ ಗಿಫ್ಟ್: ವಿಮಾನ ನಿಲ್ದಾಣ ಉದ್ಘಾಟನೆ ಸೇರಿ 17,900 ಕೋಟಿ ರೂ ಯೋಜನೆಗಳಿಗೆ ಪ್ರಧಾನಿ ಮೋದಿ ಚಾಲನೆ

ಮೈಸೂರಿನಲ್ಲಿ ‘ಗೋ ಬ್ಯಾಕ್ ಮೋದಿ’ ಪ್ರತಿಭಟನೆಗೆ ಯತ್ನ; DSS ಮುಖಂಡರು ಪೊಲೀಸ್ ವಶಕ್ಕೆ