ಹಾರ್ಮುಜ್ ಜಲಸಂಧಿಯಲ್ಲಿ ಭಾರತೀಯ ಟ್ಯಾಂಕರ್ ಗಳ ಮೇಲೆ ಇರಾನ್ ದಾಳಿ 
ದೇಶ

Strait of Hormuz: 'ನೀವೇ ಅನುಮತಿ ಕೊಟ್ಟು ಈಗ ಗುಂಡು ಹಾರಿಸುತ್ತಿದ್ದೀರಿ': Iran ದಾಳಿಗೊಳಗಾದ ಭಾರತೀಯ ತೈಲ ಟ್ಯಾಂಕರ್‌ ಆಡಿಯೋ ವೈರಲ್!

ಹಾರ್ಮುಜ್‌ ಜಲಸಂಧಿಯಲ್ಲಿ (Hormuz) ಭಾರತದ ಎರಡು ತೈಲ ಟ್ಯಾಂಕರ್‌ಗಳ (Indian Oil Tanker) ಮೇಲೆ ಇರಾನ್‌ನಿಂದ (Iran) ಗುಂಡಿನ ದಾಳಿ ನಡೆದಿದೆ.

ಟೆಹ್ರಾನ್: ಪ್ರಸ್ತುತ ಜಗತ್ತಿನ ಸುದ್ದಿಮಾಧ್ಯಮಗಳ ಕೇಂದ್ರ ಬಿಂದುವಾಗಿರುವ ಹಾರ್ಮುಜ್‌ ಜಲಸಂಧಿಯಲ್ಲಿ ಭಾರತದ ಎರಡು ತೈಲ ನೌಕೆಗಳ ಮೇಲೆ ದಾಳಿ ಮಾಡುವ ಮೂಲಕ ಇರಾನ್ ಭಾರತದ ಕೆಂಗಣ್ಣಿಗೆ ಗುರಿಯಾಗಿದ್ದು, ಅಚ್ಚರಿ ಎಂದರೆ ಭಾರತ ಮೂಲದ ನೌಕೆಗಳಿಗೆ ಅನುಮತಿ ನೀಡಿಯೂ ಇರಾನ್ ದಾಳಿ ನಡೆಸಿದೆ ಎಂದು ಹೇಳಲಾಗಿದೆ.

ಹೌದು.. ಹಾರ್ಮುಜ್‌ ಜಲಸಂಧಿಯಲ್ಲಿ (Hormuz) ಭಾರತದ ಎರಡು ತೈಲ ಟ್ಯಾಂಕರ್‌ಗಳ (Indian Oil Tanker) ಮೇಲೆ ಇರಾನ್‌ನಿಂದ (Iran) ಗುಂಡಿನ ದಾಳಿ ನಡೆದಿದೆ. ಕ್ವೆಶ್ಮ್ ಮತ್ತು ಲಾರಕ್ ದ್ವೀಪಗಳ ನಡುವಿನ ಸಮುದ್ರದಲ್ಲಿ ಈ ದಾಳಿ ನಡೆದಿದ್ದು, ದಾಳಿ ಬಳಿಕ ತೈಲ ಟ್ಯಾಂಕರ್‌ಗಳು ಅಲ್ಲಿಂದ ವಾಪಸ್‌ ಆಗಿವೆ ಎಂದು ವರದಿಯಾಗಿದೆ.

ಜಲಸಂಧಿಯಲ್ಲಿ ಹಡಗುಗಳು ಬರುತ್ತಿದ್ದಂತೆ ಇರಾನ್‌ನ ರೆವಲ್ಯೂಷನರಿ ಗಾರ್ಡ್ ಕಾರ್ಪ್ಸ್‌ನ (IRGC) ಎರಡು ಗನ್‌ಬೋಟ್‌ಗಳು ನೌಕೆಗಳತ್ತ ಧಾವಿಸಿದ್ದು, ಈ ವೇಳೆ ಯಾವುದೇ ರೇಡಿಯೋ ಸಂದೇಶ ನೀಡದೆ ಏಕಾಏಕಿ ಗುಂಡಿನ ದಾಳಿ ನಡೆಸಿವೆ ಎಂದು ಟ್ಯಾಂಕರ್‌ನ ಕ್ಯಾಪ್ಟನ್ ವರದಿ ಮಾಡಿದ್ದಾರೆ.

ಒಮನ್‌ನ ಈಶಾನ್ಯಕ್ಕೆ 37 ಕಿಲೋಮೀಟರ್ ದೂರದಲ್ಲಿ ಈ ದಾಳಿ ನಡೆದಿದ್ದು, ಟ್ಯಾಂಕರ್ ಮತ್ತು ಸಿಬ್ಬಂದಿ ಸುರಕ್ಷಿತವಾಗಿದ್ದಾರೆ. ಘಟನೆಯ ಬಗ್ಗೆ ತನಿಖೆ ನಡೆಯುತ್ತಿದೆ ಎಂದು ಯುಕೆ ಕಡಲ ವ್ಯಾಪಾರ ಕಾರ್ಯಾಚರಣೆ ಕೇಂದ್ರ ಮಾಹಿತಿ ಹಂಚಿಕೊಂಡಿದೆ.

ಅನುಮತಿ ನೀಡಿ ಹೊಡೆಯಿತಾ ಇರಾನ್?

ಇನ್ನು ಈ ದಾಳಿಗೂ ಮುನ್ನ ಭಾರತದ ಧ್ವಜವಿದ್ದ ತೈಲ ಟ್ಯಾಂಕರ್ ಗೆ ಹಾರ್ಮುಜ್ ಮೂಲಕ ಹಾದುಹೋಗಲು ಇರಾನ್ ಅನುಮತಿ ನೀಡಿತ್ತು ಎನ್ನಲಾಗಿದೆ. ಅದಾಗ್ಯೂ ಹಾರ್ಮುಜ್ ನಲ್ಲಿ ಏಕಾಏಕಿ ಭಾರತದ ಟ್ಯಾಂಕರ್ ಗಳ ಮೇಲೆ ಗುಂಡಿನ ದಾಳಿ ನಡೆಸಿದೆ. ಇದು ಭಾರತ ಮೂಲದ ನಾವಿಕರನ್ನು ಬೆಚ್ಚಿ ಬೀಳಿಸಿದ್ದು ಭಾರಿ ಸುದ್ದಿಗೆ ಗ್ರಾಸವಾಗಿದೆ.

ಆಡಿಯೋ ವೈರಲ್

ಇನ್ನು ಭಾರತೀಯ ಟ್ಯಾಂಕರ್ ಗಳ ಮೇಲೆ ಇರಾನ್ ನೌಕಾಪಡೆ ದಾಳಿ ಮಾಡುವಾಗ ತೈಲ ಟ್ಯಾಂಕರ್ ಗಳಲ್ಲಿದ್ದ ನಾವಿಕರು ಇರಾನ್ ನೌಕಾಪಡೆ ಜೊತೆ ಮಾತನಾಡಿರುವ ಆಡಿಯೋ ಟೇಪ್ ವೊಂದು ವ್ಯಾಪಕ ವೈರಲ್ ಆಗುತ್ತಿದೆ.

ಈ ಆಡಿಯೋದಲ್ಲಿ ನಾವಿಕರು, 'ನೀವು ನಮಗೆ ಹೋಗಲು ಅನುಮತಿ ನೀಡಿದ್ದೀರಿ. ನನ್ನ ಹೆಸರು ನಿಮ್ಮ ಪಟ್ಟಿಯಲ್ಲಿ ಎರಡನೇ ಸ್ಥಾನದಲ್ಲಿದೆ. ಆದರೆ ನೀವು ಈಗ ಗುಂಡು ಹಾರಿಸುತ್ತಿದ್ದೀರಿ. ನಾವು ಹಿಂತಿರುಗಲು ಬಿಡಿ!" - ಇರಾನಿನ ನೌಕಾಪಡೆಗೆ ಮನವಿ ಮಾಡುತ್ತಿರುವ ಆಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವ್ಯಾಪಕ ವೈರಲ್ ಆಗುತ್ತಿದೆ.

ಅಂತೆಯೇ ಮೊದಲು ಅನುಮತಿ ನೀಡಿ ಬಳಿಕ ಹಿಂಬಾಲಿಸಿಕೊಂಡು ಬಂದು ಗುಂಡಿನ ದಾಳಿ ಮಾಡಿದ ಇರಾನ್ ನಡೆ ವಿರುದ್ಧವೂ ವ್ಯಾಪಕ ಅನುಮಾನಗಳು ಮೂಡುತ್ತಿವೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

ಪಶ್ಚಿಮ ಏಷ್ಯಾದ ಉದ್ವಿಗ್ನತೆ ನಡುವೆ ಮೋದಿ- ಪೆಜೆಶ್ಕಿಯನ್ ಮಾತುಕತೆ: ದೀರ್ಘಕಾಲೀನ, ಪರಸ್ಪರ ಲಾಭದಾಯಕ ಕಾರ್ಯತಂತ್ರಕ್ಕೆ ಒತ್ತು

ಲೋಕೋಪಯೋಗಿ ಇಲಾಖೆಯಲ್ಲಿ 'ಲಂಚ'; ವಿದೇಶಿ ಷೇರು ಹೂಡಿಕೆ ಇತ್ಯಾದಿ; ಸತೀಶ್ ಜಾರಕಿಹೊಳಿ ಮನೆಯಲ್ಲಿ ಸಿಕ್ಕಿದ್ದೇನು? EDಯಿಂದ ಅಧಿಕೃತ ಹೇಳಿಕೆ

ಬದರಿನಾಥದ 'ತಪ್ತ ಕುಂಡ'ದಲ್ಲಿ 108 ಬಾರಿ ಧಾರ್ಮಿಕ ಸ್ನಾನ: ರಾಜಸ್ಥಾನದ ಇಬ್ಬರು ವೃದ್ಧೆಯರು ಸಾವು!

BRICS 2026: ಪುಟಿನ್-ಮೋದಿ ಮಾತುಕತೆ: ಕಪ್ಪು ಸಮುದ್ರದಲ್ಲಿ ಭಾರತೀಯರ ಸುರಕ್ಷತೆಯ ವಿಷಯ ಪ್ರಸ್ತಾಪ ರಷ್ಯಾ ಅಧ್ಯಕ್ಷ ಹೇಳಿದ್ದೇನು?

ಬ್ರಿಕ್ಸ್ ಶೃಂಗಸಭೆ: ಭಾರಿ ಭದ್ರತೆ, ಐಷಾರಾಮಿ ವಿಮಾನದಲ್ಲಿ ನವದೆಹಲಿಗೆ ಆಗಮಿಸಿದ ಪುಟಿನ್! "ಡೂಮ್ಸ್ ಡೇ' ವಿಶೇಷತೆ ಏನು ಗೊತ್ತಾ? Video