ಮಮತಾ ಬ್ಯಾನರ್ಜಿ, ಪ್ರಧಾನಿ ನರೇಂದ್ರ ಮೋದಿ  
ದೇಶ

'ಪ್ರಧಾನಿ ಮೋದಿ ಮೀನು ತಿನ್ನುವುದಾದರೆ ನಾನು ಅವರಿಗೆ ಅಡುಗೆ ಮಾಡಿ ಬಡಿಸುತ್ತೇನೆ': ಮಮತಾ ಬ್ಯಾನರ್ಜಿ

ಇತ್ತೀಚೆಗೆ ಪ್ರಧಾನ ಮಂತ್ರಿ ನರೇಂದ್ರ ಮೋದಿ ಅಂಗಡಿಯೊಂದಕ್ಕೆ ಹೋಗಿ ಜಾಲ್ಮುರಿ ಸೇವಿಸಿದ್ದು ಭಾರೀ ಸುದ್ದಿಯಾಗಿತ್ತು. ಇದಕ್ಕೆ ಪ್ರತಿಕ್ರಿಯಿಸಿದ್ದ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಪ್ರಧಾನಿ ಮೋದಿ ತಿನ್ನುವುದಾದರೆ ನಾನು ಅವರಿಗೆ ಮೀನು ಅಡುಗೆ ಮಾಡಿ ಬಡಿಸುತ್ತೇನೆ ಎಂದು ಹೇಳಿದ್ದರು.

ಜಲ್ಮುರಿ ಮತ್ತು ಮೀನು - ಪಶ್ಚಿಮ ಬಂಗಾಳ ಜನತೆಯ ಆಹಾರ ಸಂಸ್ಕೃತಿಯ ಅವಿಭಾಜ್ಯ ಭಾಗ. ಅಲ್ಲಿ ಇಂದು ಮೊದಲ ಹಂತದ ಮತದಾನ ನಡೆಯುತ್ತಿದೆ.

ಇತ್ತೀಚೆಗೆ ಪ್ರಧಾನ ಮಂತ್ರಿ ನರೇಂದ್ರ ಮೋದಿ ಅಂಗಡಿಯೊಂದಕ್ಕೆ ಹೋಗಿ ಜಲ್ಮುರಿ ಸೇವಿಸಿದ್ದು ಭಾರೀ ಸುದ್ದಿಯಾಗಿತ್ತು. ಇದಕ್ಕೆ ಪ್ರತಿಕ್ರಿಯಿಸಿದ್ದ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಪ್ರಧಾನಿ ಮೋದಿ ತಿನ್ನುವುದಾದರೆ ನಾನು ಅವರಿಗೆ ಮೀನು ಪದಾರ್ಥ ಮಾಡಿಕೊಡುತ್ತೇನೆ ಎಂದು ಹೇಳಿದ್ದರು.

ರಾಜ್ಯದಲ್ಲಿ ಬಿಜೆಪಿ ಅಧಿಕಾರಕ್ಕೆ ಬಂದರೆ ಮೀನು, ಮಾಂಸ ಮತ್ತು ಮೊಟ್ಟೆ ಸೇವನೆ ನಿಷೇಧಿಸಬಹುದು ಟಿಎಂಸಿ ಚುನಾವಣಾ ಪ್ರಚಾರ ವೇಳೆ ಆರೋಪಿಸಿತ್ತು. ಪ್ರಧಾನಮಂತ್ರಿ ಮೋದಿ ಸಸ್ಯಾಹಾರಿ ಎಂದು ಹೇಳಲಾಗುತ್ತಿದೆ.

ಕಳೆದ ಭಾನುವಾರ ಜಾರ್ಗ್ರಾಮ್‌ನಲ್ಲಿ ನಡೆದ ಚುನಾವಣಾ ಪ್ರಚಾರದ ವೇಳೆ ಪ್ರಧಾನಮಂತ್ರಿ ನರೇಂದ್ರ ಮೋದಿ ರಸ್ತೆಬದಿಯ ಸಾಮಾನ್ಯ ಅಂಗಡಿಯಿಂದ ಜನಪ್ರಿಯ ಬೆಂಗಾಳಿ ಸ್ಟ್ರೀಟ್ ಫುಡ್ ಪೊಪ್ಪಡ್ ಅಕ್ಕಿ, ಹಸಿಮೆಣಸಿನಕಾಯಿ ಮತ್ತು ವಿವಿಧ ಮಸಾಲೆಗಳಿಂದ ತಯಾರಾಗುವ ಜಲ್ಮುರಿ ಖರೀದಿಸಿ ತಿಂದ ನಂತರ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಇದೆಲ್ಲ ಡ್ರಾಮಾ ಎಂದು ಕರೆದರು.

ಪ್ರಧಾನ ಮಂತ್ರಿಗಳದ್ದು ಕೇವಲ ಪ್ರದರ್ಶನ ಮಾತ್ರ. ಅವರು ತಿಂದ ಜಲ್ಮುರಿ ಅಂಗಡಿಯವರು ಮಾಡಿದ್ದು ಅಲ್ಲ, ಈ ತಿಂಡಿಯನ್ನು ಪ್ರಧಾನಮಂತ್ರಿಗೆ ಭದ್ರತೆ ಒದಗಿಸುವ ಎಸ್‌ಪಿಜಿ (Special Protection Group) ಸಿಬ್ಬಂದಿಯೇ ತಯಾರಿಸಿರಬಹುದು ಎಂದರು.

ಟಿಎಂಸಿ ಮುಖ್ಯಸ್ಥರು ಪ್ರಧಾನ ಮಂತ್ರಿಯವರು ಅಂಗಡಿಗೆ ಹೋಗಿ ಸಾಮಾನ್ಯರ ರೀತಿ ಖರೀದಿಸುವಂತೆ ನಾಟಕ ಮಾಡಲಾಗಿದೆ ಎಂದು ಹೇಳಿದರೆ, ಬಿಜೆಪಿ ಸಂಸದ ಹಾಗೂ ಮಾಜಿ ಕೇಂದ್ರ ಸಚಿವ ಅನುರಾಗ್ ಠಾಕೂರ್ ಅವರು, ಮೋದಿ ಈ ರೀತಿಯಾಗಿ ಸಾಮಾನ್ಯ ಅಂಗಡಿಯಲ್ಲಿ ತಿಂಡಿ ತಿನ್ನುವುದರಿಂದ ಪಶ್ಚಿಮ ಬಂಗಾಳ ವಿಧಾನಸಭಾ ಚುನಾವಣೆಯಲ್ಲಿ ಪರಿಣಾಮ ಬೀರುತ್ತದೆ ಎಂದು ಹೇಳಿದರು. ಕಳೆದ 15 ವರ್ಷಗಳಲ್ಲಿ ಮುಖ್ಯಮಂತ್ರಿ ಬ್ಯಾನರ್ಜಿ ಇಂತಹ ಸಣ್ಣ ವ್ಯಾಪಾರಿಗಳೊಂದಿಗೆ ಸಂಪರ್ಕ ಸಾಧಿಸಲು ಪ್ರಯತ್ನಿಸಿದ್ದಾರೆಯೆ ಎಂದು ಪ್ರಶ್ನಿಸಿದ್ದಾರೆ.

ಬಿಜೆಪಿ ಗೆದ್ದರೆ ಜನರ ಆಹಾರ ಪದ್ಧತಿಗಳನ್ನು ನಿಯಂತ್ರಿಸುತ್ತದೆ ಎಂಬ ಟಿಎಂಸಿ ಆರೋಪವನ್ನು ಕೇಸರಿ ಪಕ್ಷದ ನಾಯಕರು ತೀವ್ರವಾಗಿ ತಳ್ಳಿ ಹಾಕುತ್ತಿದ್ದು, ಪಶ್ಚಿಮ ಬಂಗಾಳದ ಮೀನುಪ್ರಿಯ ಜನರು ತಮ್ಮ ಇಚ್ಛೆಯಂತೆ ಏನು ಬೇಕಾದರೂ ತಿನ್ನಬಹುದು ಎಂದು ಹೇಳಿದ್ದಾರೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

ಭಾರತ-ರಷ್ಯಾ ಆರ್ಥಿಕ ಬಾಂಧವ್ಯಕ್ಕೆ ಹೊಸ ಬಲ; ಪುಟಿನ್ ಭೇಟಿಯಾದ ಜೈಶಂಕರ್, ಪರಮಾಣು ಸಹಕಾರ ಸೇರಿ ಹಲವು ಅಂಶಗಳ ಕುರಿತು ಚರ್ಚೆ!

3 ದಿನ ಮೊದಲೇ ಮುಂಗಾರು ಅಧಿವೇಶನಕ್ಕೆ ತೆರೆ: 'ವಿರೋಧ ಪಕ್ಷಕ್ಕೆ ಹೆದರಿ ಅಧಿವೇಶನ ರದ್ದು'; ರಾಜ್ಯಪಾಲರಿಗೆ BJP ದೂರು!

Video: ಕುದಿಯುತ್ತಿದ್ದ ಬೆಲ್ಲದ ಪಾಕಕ್ಕೆ ಬಿದ್ದ ಯುವಕ; ಅಣ್ಣನ ಸಾಲ ತೀರಿಸಲು ಕೆಲಸಕ್ಕೆ ಹೋಗಿದ್ದವನ ದಾರುಣ ಅಂತ್ಯ

'ಕಿವಿಲಿ ಹೊಗೆ ಬರುವಂತಿದೆ': ಲಂಕಾ-ಭಾರತ ಟೆಸ್ಟ್ ಪಂದ್ಯದಲ್ಲಿ ಮತ್ತೊಂದು ವಿವಾದ, ಗ್ಲೌಸ್ ಕಿತ್ತೆಸೆದ ಬ್ಯಾಟರ್, ಆಗಿದ್ದೇನು?

ಬಿಜೆಪಿ MLC ಎನ್. ರವಿಕುಮಾರ್‌ ವಿರುದ್ಧ ಜಾಮೀನು ರಹಿತ ಬಂಧನ ವಾರಂಟ್