ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ 
ದೇಶ

ಬಿಜೆಪಿಯಿಂದ ಹಣ ಪಡೆದು Exit polls ಪ್ರಕಟ: 226 ಕ್ಕೂ ಹೆಚ್ಚು ಸ್ಥಾನಗಳಲ್ಲಿ TMC ಗೆಲುತ್ತೆ- ಮಮತಾ ಬ್ಯಾನರ್ಜಿ!

ಟಿವಿಗಳಲ್ಲಿ ತೋರಿಸಲಾಗುತ್ತಿರುವುದನ್ನು ಮಧ್ಯಾಹ್ನ 1.08 ಕ್ಕೆ ಬಿಜೆಪಿ ಕಚೇರಿಯಿಂದ ಪ್ರಸಾರ ಮಾಡಲಾಯಿತು. ಅದನ್ನು ಪ್ರಕಟಿಸಲು ಹಣ ನೀಡಲಾಗಿದೆ. ನನಗೆ ನಿರ್ದಿಷ್ಟ ಮಾಹಿತಿ ಇದೆ ಎಂದು ಅವರು ಆರೋಪಿಸಿದ್ದಾರೆ.

ಕೋಲ್ತತ್ತಾ: ಪಶ್ಚಿಮ ಬಂಗಾಳದಲ್ಲಿ ಟಿಎಂಸಿ ಕಾರ್ಯಕರ್ತರ ಮನೋಸ್ಥೈರ್ಯವನ್ನು ಕುಗ್ಗಿಸಲು ಬಿಜೆಪಿ ಸೂಚನೆ ಮೇರೆಗೆ ಎಕ್ಸಿಟ್ ಪೋಲ್ ಸಮೀಕ್ಷಾ ವರದಿಗಳನ್ನು ಪ್ರಕಟಿಸಲಾಗುತ್ತಿದೆ ಎಂದು ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಗುರುವಾರ ಆರೋಪಿಸಿದ್ದಾರೆ. ಅವರ ಪಕ್ಷವು 226 ಕ್ಕೂ ಹೆಚ್ಚು ಸ್ಥಾನಗಳನ್ನು ಗೆಲ್ಲುತ್ತದೆ ಎಂದು ಪ್ರತಿಪಾದಿಸಿದ್ದಾರೆ.

ಈ ಕುರಿತು ಸಾಮಾಜಿಕ ಜಾಲತಾಣ ಎಕ್ಸ್ ನಲ್ಲಿ ಮಮತಾ ಬ್ಯಾನರ್ಜಿ ಪೋಸ್ಟ್ ಮಾಡಿರುವ ವಿಡಿಯೋ ಸಂದೇಶದಲ್ಲಿ ಟಿವಿ ಚಾನೆಲ್ ಗಳು ಬಿಜೆಪಿ ಕಚೇರಿಯಿಂದ ಪ್ರಸಾರವಾದ" ಚುನಾವಣಾ ಸಮೀಕ್ಷೆಗಳನ್ನು ಪ್ರಸಾರ ಮಾಡುತ್ತಿವೆ ಎಂದು ಬ್ಯಾನರ್ಜಿ ಹೇಳಿದ್ದಾರೆ.

ಟಿವಿಗಳಲ್ಲಿ ತೋರಿಸಲಾಗುತ್ತಿರುವುದನ್ನು ಮಧ್ಯಾಹ್ನ 1.08 ಕ್ಕೆ ಬಿಜೆಪಿ ಕಚೇರಿಯಿಂದ ಪ್ರಸಾರ ಮಾಡಲಾಯಿತು. ಅದನ್ನು ಪ್ರಕಟಿಸಲು ಹಣ ನೀಡಲಾಗಿದೆ. ನನಗೆ ನಿರ್ದಿಷ್ಟ ಮಾಹಿತಿ ಇದೆ ಎಂದು ಅವರು ಆರೋಪಿಸಿದ್ದಾರೆ.

ತಮ್ಮ ಪಕ್ಷದ ಭವಿಷ್ಯದ ಬಗ್ಗೆ ಮಮತಾ ಬ್ಯಾನರ್ಜಿ ವಿಶ್ವಾಸ ವ್ಯಕ್ತಪಡಿಸಿದ್ದು, 294 ಸದಸ್ಯರ ಬಲದ ವಿಧಾನಸಭೆಯಲ್ಲಿ ಟಿಎಂಸಿ ಆರಾಮವಾಗಿ ಮೂರನೇ ಎರಡರಷ್ಟು ಸ್ಥಾನವನ್ನು ಪಡೆಯಲಿದೆ. 226 ಕ್ಕೂ ಹೆಚ್ಚು ಸ್ಥಾನಗಳಲ್ಲಿ ಗೆಲುವು ಸಾಧಿಸುತ್ತೇವೆ. ಜನರು ನೀಡಿದ ಬೃಹತ್ ಜನಾದೇಶದಲ್ಲಿ ನನಗೆ ಸಂಪೂರ್ಣ ನಂಬಿಕೆ ಇದೆ ಎಂದು ಅವರು ಹೇಳಿದ್ದಾರೆ.

ಕೇಂದ್ರ ಗೃಹ ಸಚಿವ ಅಮಿತ್ ಶಾ ವಿರುದ್ಧ ಮಮತಾ ಕಿಡಿಕಾರಿದ್ದು, ಇಡೀ ಚುನಾವಣಾ ಪ್ರಕ್ರಿಯೆಯಲ್ಲಿ ಕೇಂದ್ರ ಪಡೆಗಳು "ಬಿಜೆಪಿಯ ಏಜೆಂಟರಂತೆ" ಕೆಲಸ ಮಾಡುತ್ತಿವೆ ಎಂದು ಆರೋಪಿಸಿದ್ದಾರೆ. ಅಮಿತ್ ಶಾ ಅವರ ನೇರ ಸೂಚನೆಯ ಮೇರೆಗೆ, ಕೇಂದ್ರ ಪಡೆಗಳು ಪಶ್ಚಿಮ ಬಂಗಾಳದಲ್ಲಿ ಇಡೀ ಚುನಾವಣಾ ಪ್ರಕ್ರಿಯೆಯಲ್ಲಿ ಬಿಜೆಪಿಯ ಏಜೆಂಟರಂತೆ ಕಾರ್ಯನಿರ್ವಹಿಸುತ್ತಿವೆ ಎಂದು ಅವರು ಹೇಳಿದ್ದಾರೆ.

ಸ್ವಾತಂತ್ರ್ಯದ ನಂತರ 2026 ರ ವಿಧಾನಸಭಾ ಚುನಾವಣೆಯಲ್ಲಿ ರಾಜ್ಯವು ಇದುವರೆಗಿನ ಅತ್ಯಧಿಕ ಮತದಾನವನ್ನು ದಾಖಲಿಸಿದೆ, ಎರಡು ಹಂತಗಳಲ್ಲಿ ಒಟ್ಟು ಶೇ. 92.47 ರಷ್ಟು ಮತದಾನವಾಗಿದೆ ಎಂದು ಚುನಾವಣಾ ಆಯೋಗ ಬುಧವಾರ ತಿಳಿಸಿದೆ.

ಬುಧವಾರ ನಡೆದ ಎರಡನೇ ಮತ್ತು ಅಂತಿಮ ಹಂತದ ಮತದಾನದಲ್ಲಿ ಸಂಜೆ 7.45 ರವರೆಗೆ ಶೇ. 91.66 ರಷ್ಟು ಮತದಾನವಾಗಿದ್ದರೆ, ಮೊದಲ ಹಂತದಲ್ಲಿ ಶೇ. 93. 19 ರಷ್ಟು ಮತದಾನವಾಗಿದೆ ಎಂದು ಅದು ಹೇಳಿದೆ.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

Exit polls ಮೇಲೆ ನನಗೆ ನಂಬಿಕೆ ಇಲ್ಲ: ಅದೊಂದು ಜಾಲ- ಕಾಂಗ್ರೆಸ್ ನಾಯಕ ಜೈರಾಮ್ ರಮೇಶ್ ಕಿಡಿ!

ನರ್ಮದಾ ನದಿಯಲ್ಲಿ 30 ಪ್ರವಾಸಿಗರಿದ್ದ ಕ್ರೂಸ್ ಹಡಗು ಜಲಸಮಾಧಿ: ಐದು ಶವಗಳು ಪತ್ತೆ, ತೀವ್ರಗೊಂಡ ರಕ್ಷಣಾ ಕಾರ್ಯಾಚರಣೆ!

ರಜತ್ ಪಾಟಿದಾರ್ ಔಟ್ ವಿವಾದ: ಚೆಂಡು ನೆಲಕ್ಕೆ ತಾಗಿದ್ದರೂ ಅಂಪೈರ್ ಎಡವಟ್ಟು; Virat Kohli ಆಕ್ರೋಶ, Video!

ಬೌರಿಂಗ್ ಆಸ್ಪತ್ರೆ ದುರಂತ: ಕಾರ್ಯನಿರ್ವಾಹಕ ಇಂಜಿನಿಯರ್ ಅಮಾನತಿಗೆ ಸಿಎಂ ಸಿದ್ದರಾಮಯ್ಯ ಸೂಚನೆ

ವಿದ್ಯಾರ್ಥಿ ಆತ್ಮಹತ್ಯೆ ಪ್ರಕರಣ: ಧಾರವಾಡ ವಿದ್ಯಾಗಿರಿ ಠಾಣೆ ಇನ್ಸ್​​ಪೆಕ್ಟರ್ ರಫೀಕ್​​ ಅಮಾನತು!

SCROLL FOR NEXT