ಕಿರಣ್ ರಿಜಿಜು - ರಾಹುಲ್ ಗಾಂಧಿ 
ದೇಶ

ಸಂಸತ್ತಿನಲ್ಲಿ ವಿಪಕ್ಷಗಳ ಗದ್ದಲ, ಕಲಾಪ ಮುಂದೂಡಿಕೆ: ರಾಹುಲ್ ಗಾಂಧಿಯನ್ನು ಭೇಟಿಯಾದ ಕಿರಣ್ ರಿಜಿಜು!

ಸಂಸತ್ತಿನ ಕೆಳಮನೆಯಲ್ಲಿ ಸದನ ಆರಂಭವಾಗುತ್ತಿದ್ದಂತೆ ವಿರೋಧ ಪಕ್ಷದ ಸದಸ್ಯರು ಗದ್ದಲ ಎಬ್ಬಿಸಿದ್ದರಿಂದ ಲೋಕಸಭೆಯ ಕಲಾಪವನ್ನು ಮಧ್ಯಾಹ್ನ 2 ಗಂಟೆಗೆ ಮುಂದೂಡಲಾದ ಬೆನ್ನಲ್ಲೇ ಈ ಬೆಳವಣಿಗೆ ನಡೆದಿದೆ.

ನವದೆಹಲಿ: ಸದನದಲ್ಲಿ ಮುಂದುವರಿದಿರುವ ಬಿಕ್ಕಟ್ಟನ್ನು ಬಗೆಹರಿಸುವ ಪ್ರಯತ್ನದ ಭಾಗವಾಗಿ, ಸಂಸದೀಯ ವ್ಯವಹಾರಗಳ ಸಚಿವ ಕಿರಣ್ ರಿಜಿಜು ಬುಧವಾರ ಲೋಕಸಭೆಯ ವಿರೋಧ ಪಕ್ಷದ ನಾಯಕ ರಾಹುಲ್ ಗಾಂಧಿ ಅವರನ್ನು ಭೇಟಿಯಾಗಿದ್ದಾರೆ ಎಂದು ಮೂಲಗಳು ತಿಳಿಸಿವೆ.

ಸಂಸತ್ತಿನ ಕೆಳಮನೆಯಲ್ಲಿ ಸದನ ಆರಂಭವಾಗುತ್ತಿದ್ದಂತೆ ವಿರೋಧ ಪಕ್ಷದ ಸದಸ್ಯರು ಗದ್ದಲ ಎಬ್ಬಿಸಿದ್ದರಿಂದ ಲೋಕಸಭೆಯ ಕಲಾಪವನ್ನು ಮಧ್ಯಾಹ್ನ 2 ಗಂಟೆಗೆ ಮುಂದೂಡಲಾದ ಬೆನ್ನಲ್ಲೇ ಈ ಬೆಳವಣಿಗೆ ನಡೆದಿದೆ.

ಜುಲೈ 20 ರಂದು ಮುಂಗಾರು ಅಧಿವೇಶನ ಆರಂಭವಾದಾಗಿನಿಂದ, ಲೋಕಸಭೆಗೆ ತನ್ನ 'ಪ್ರಶ್ನೋತ್ತರ ಅವಧಿ'ಯನ್ನು ಪೂರ್ಣಗೊಳಿಸಲು ಸಾಧ್ಯವಾಗಿಲ್ಲ. ವಿಪಕ್ಷಗಳ ಗದ್ದಲದ ನಡುವೆಯೇ ಯಾವುದೇ ಚರ್ಚೆಯಿಲ್ಲದೆ ಐದು ಮಸೂದೆಗಳನ್ನು ಅಂಗೀಕರಿಸಲಾಗಿದೆ.

ಸದನ ಆರಂಭವಾದ ತಕ್ಷಣ, ಲೋಕಸಭಾ ಸ್ಪೀಕರ್ ಓಂ ಬಿರ್ಲಾ ಅವರು ಸದಸ್ಯರಿಗೆ ತಮ್ಮ ಆಸನಗಳಿಗೆ ಮರಳುವಂತೆಯೂ, ಸದನದಲ್ಲಿ 'ಪ್ರಶ್ನೋತ್ತರ ಅವಧಿ'ಯನ್ನು ನಡೆಸಲು ಅವಕಾಶ ನೀಡುವಂತೆಯೂ ಕೋರಿದರು.

'ಸದನದ ಒಳಗಾಗಲಿ ಅಥವಾ ಹೊರಗಾಗಲಿ ಘೋಷಣೆಗಳನ್ನು ಕೂಗುವುದು ಪ್ರಜಾಪ್ರಭುತ್ವಕ್ಕೆ ಒಳ್ಳೆಯದಲ್ಲ. ಫಲಕಗಳನ್ನು ಪ್ರದರ್ಶಿಸುವ ಮತ್ತು ಘೋಷಣೆಗಳನ್ನು ಕೂಗುವ ಮೂಲಕ ನೀವು ಸದನದ ಘನತೆಯನ್ನು ಕುಂದಿಸುತ್ತಿದ್ದೀರಿ' ಎಂದು ಬಿರ್ಲಾ ವಿರೋಧ ಪಕ್ಷದ ಸದಸ್ಯರಿಗೆ ಹೇಳಿದರು.

ಪ್ರಮುಖ ಪ್ರಶ್ನೆಗಳನ್ನು ಪಟ್ಟಿಯಲ್ಲಿ ಸೇರಿಸಲಾಗಿದ್ದರೂ, ನಡೆಯುತ್ತಿರುವ ಮುಂಗಾರು ಅಧಿವೇಶನದಲ್ಲಿ ವಿರೋಧ ಪಕ್ಷಗಳು ಸೃಷ್ಟಿಸಿರುವ ಅಡಚಣೆಯಿಂದಾಗಿ ಸದನಕ್ಕೆ 'ಪ್ರಶ್ನೋತ್ತರ ಅವಧಿ'ಯನ್ನು ನಡೆಸಲು ಸಾಧ್ಯವಾಗುತ್ತಿಲ್ಲ ಎಂದು ಅನೇಕ ಸದಸ್ಯರು ತಮ್ಮನ್ನು ಸಂಪರ್ಕಿಸಿ ಹೇಳಿದ್ದಾರೆ ಎಂದು ಬಿರ್ಲಾ ತಿಳಿಸಿದರು.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

ಎಲ್.ಕೆ. ಅಡ್ವಾಣಿ, ಮನೀಶ್ ಸಿಸೋಡಿಯಾ ಸೇರಿದಂತೆ ದೆಹಲಿಯ 33.13 ಲಕ್ಷ ಮತದಾರರಿಗೆ SIR ನೋಟಿಸ್‌!

ವಾರಣಾಸಿ ಎನ್‌ಕೌಂಟರ್‌ನಲ್ಲಿ 30 ಲಕ್ಷ ಬಹುಮಾನ ಹೊಂದಿದ್ದ ನಕ್ಸಲ್ ಕಮಾಂಡರ್ ಹತ್ಯೆ!

ರಷ್ಯಾ ಸಂಸತ್ ಚುನಾವಣೆ ಮಧ್ಯೆ ಮಾಸ್ಕೋ ಮೇಲೆ ಉಕ್ರೇನ್‌ನಿಂದ ಭೀಕರ ದಾಳಿ: 1,000ಕ್ಕೂ ಹೆಚ್ಚು ಡ್ರೋನ್‌ಗಳಿಂದ ದಾಳಿ!

ಸಲ್ಮಾನ್ ಖಾನ್ ದ್ವಂದ ನಿಲುವುಳ್ಳ ಮೂರ್ಖ: 'ಬಿಗ್ ಬಾಸ್ ಮಾಜಿ ಸ್ಪರ್ಧಿ' ಸೋಫಿಯಾ ಹಯಾತ್ ಕಿಡಿ!

ರಣಜಿ ಟ್ರೋಫಿ 2026-27: ಹೈದರಾಬಾದ್ ತಂಡದ ನಾಯಕರಾಗಿ ಮೊಹಮ್ಮದ್ ಸಿರಾಜ್ ನೇಮಕ!