ಸಾಂದರ್ಭಿಕ ಚಿತ್ರ 
ದೇಶ

ಡಾರ್ಕ್‌ ಪ್ಯಾಟರ್ನ್‌ ವಿರುದ್ಧ ಸಮರ: ಬುಕ್ ಮೈ ಶೋ ಸೇರಿದಂತೆ 9 ಡಿಜಿಟಲ್‌ ವೇದಿಕೆಗಳ ವಿರುದ್ಧ CCPA ಕಟ್ಟುನಿಟ್ಟಿನ ಕ್ರಮ, ₹20 ಲಕ್ಷ ದಂಡ!

ಕೇಂದ್ರ ಸರ್ಕಾರ 2023ರಲ್ಲೇ 13 ಮಾದರಿಯ ಡಾರ್ಕ್ ಪ್ಯಾಟರ್ನ್‌ಗಳನ್ನು ನಿಷೇಧಿಸಿ ಆದೇಶ ಹೊರಡಿಸಿತ್ತು. ಗ್ರಾಹಕ ವ್ಯವಹಾರಗಳ ಇಲಾಖೆ ಡಾರ್ಕ್‌ ಪ್ಯಾಟರ್ನ್‌ ಕುರಿತಂತೆ ಸೂಕ್ತ ಮಾರ್ಗದರ್ಶಿ ಸೂತ್ರಗಳನ್ನು ಸಹ ನೀಡಿದೆ.

ನವದೆಹಲಿ: ಡಿಜಿಟಲ್‌ ವಾಣಿಜ್ಯ ವೇದಿಕೆಗಳಲ್ಲಿ ಡಾರ್ಕ್‌ ಪ್ಯಾಟರ್ನ್‌ ಪ್ರದರ್ಶಿಸಿ ಗ್ರಾಹಕರನ್ನು ವಂಚಿಸುತ್ತಿದ್ದ 9 ಕಂಪನಿಗಳಿಗೆ ಕೇಂದ್ರ ಗ್ರಾಹಕ ಸಂರಕ್ಷಣಾ ಪ್ರಾಧಿಕಾರ(CCPA) ಒಟ್ಟು ₹20 ಲಕ್ಷ ದಂಡ ವಿಧಿಸಿ ಕಟ್ಟುನಿಟ್ಟಿನ ಕ್ರಮ ಕೈಗೊಂಡಿದೆ.

ಕೇಂದ್ರ ಸರ್ಕಾರ 2023ರಲ್ಲೇ 13 ಮಾದರಿಯ ಡಾರ್ಕ್ ಪ್ಯಾಟರ್ನ್‌ಗಳನ್ನು ನಿಷೇಧಿಸಿ ಆದೇಶ ಹೊರಡಿಸಿತ್ತು. ಗ್ರಾಹಕ ವ್ಯವಹಾರಗಳ ಇಲಾಖೆ ಡಾರ್ಕ್‌ ಪ್ಯಾಟರ್ನ್‌ ಕುರಿತಂತೆ ಸೂಕ್ತ ಮಾರ್ಗದರ್ಶಿ ಸೂತ್ರಗಳನ್ನು ಸಹ ನೀಡಿದೆ.

ಆದಾಗ್ಯೂ ಕೆಲ ಕಂಪನಿಗಳು ಗ್ರಾಹಕರನ್ನು ಸೆಳೆಯವ ಭರದಲ್ಲಿ ನಿಯಮ ಉಲ್ಲಂಘಿಸುತ್ತಿದ್ದು, ಕೇಂದ್ರ ಗ್ರಾಹಕ ವ್ಯವಹಾರಗಳ ಸಚಿವ ಪ್ರಲ್ಹಾದ ಜೋಶಿ ಅವರ ಗಮನಕ್ಕೆ ಬರುತ್ತಲೇ ಕಟ್ಟುನಿಟ್ಟಿನ ಕ್ರಮ ಕೈಗೊಳ್ಳುವಂತೆ ಕೇಂದ್ರ ಗ್ರಾಹಕ ಸಂರಕ್ಷಣಾ ಪ್ರಾಧಿಕಾರ (CCPA)ಕ್ಕೆ ಸೂಚನೆ ನೀಡಿದ್ದಾರೆ.

ಸಚಿವ ಜೋಶಿ ಅವರ ನಿರ್ದೇಶನದಂತೆ, ಗ್ರಾಹಕರ ದೂರು ಆಧರಿಸಿ ಹಾಗೂ ಕೆಲವೊಮ್ಮೆ ಸ್ವಯಂ ಕಾರ್ಯಾಚರಣೆಗಿಳಿದ CCPA, ಗ್ರಾಹಕರನ್ನು ವಂಚಿಸುತ್ತಿರುವ ಪ್ರತಿಷ್ಠಿತ ಕಂಪನಿಗಳ ವಿರುದ್ಧ ಕಟ್ಟುನಿಟ್ಟಿನ ಕ್ರಮ ಕೈಗೊಳ್ಳುತ್ತಿದೆ. ಇದೀಗ ಡಾರ್ಕ್ ಪ್ಯಾಟರ್ನ್ ಮೂಲಕ ಗ್ರಾಹಕರನ್ನು ವಂಚಿಸುತ್ತಿದ್ದ ಝೆಪ್ಟೋ, ಬುಕ್ ಮೈ ಶೋ, ಫಿಸಿಕ್ಸ್ ವಾಲಾ ಸೇರಿದಂತೆ 9 ಕಂಪನಿಗಳಿಗೆ ದಂಡ ವಿಧಿಸಿದೆ.

ಯಾವ ಕಂಪನಿಗೆಷ್ಟು ದಂಡ?: ಜೆಪ್ಟೋಗೆ ₹7 ಲಕ್ಷ ದಂಡ ವಿಧಿಸಲಾಗಿದೆ. ಈ ಕಂಪನಿ ಮೊದ ಮೊದಲು ಕಡಿಮೆ ದರ ತೋರಿಸಿ ಬಳಿಕ ನಿರ್ವಹಣೆ ಶುಲ್ಕ, ಸದಸ್ಯತ್ವ ಶುಲ್ಕವೆಂದು ಹೆಚ್ಚಿನ ಹಣ ಪಡೆಯುತ್ತಿತ್ತು. ಆನ್‌ಲೈನ್‌ ಶಿಕ್ಷಣ ಸಂಸ್ಥೆ ಫಿಸಿಕ್ಸ್ ವಾಲಾ ಕಂಪನಿಗೆ ₹5 ಲಕ್ಷ ದಂಡ ಬಿದ್ದಿದೆ. ಇದು ತನ್ನ ಪಿಡಬ್ಲ್ಯು ಫೌಂಡೇಶನ್​ಗೆಂದು ₹10 ದೇಣಿಗೆಯನ್ನು ಮೊದಲೇ ಪಡೆದುಕೊಳ್ಳುತ್ತಿರುವುದು ಗೋಚರಿಸಿದೆ. ಅಲ್ಲದೇ, ಉಚಿತ ಕೋರ್ಸ್‌ಗಳಿಗೆ ವೈಯಕ್ತಿಕ ಮಾಹಿತಿ ಕಡ್ಡಾಯಗೊಳಿಸಿತ್ತು. ಹೀಗಾಗಿ CCPA ಪರಿಶೀಲನೆ ನಡೆಸಿ ದಂಡ ವಿಧಿಸಿದೆ.

ಬುಕ್‌ಮೈಶೋ ಕಂಪನಿ ಗ್ರಾಹಕರು ಹಣ ಪಾವತಿಸುವಾಗ ‘BookASmile’ ನಿಧಿಗೆ ₹1 ದೇಣಿಗೆಯನ್ನು ಪೂರ್ವಭಾವಿಯಾಗಿ ಪಡೆದುಕೊಳ್ಳುತ್ತಿತ್ತು. ಈ ಸ್ವಯಂ ದೇಣಿಗೆ ಸಂಗ್ರಹವನ್ನು ತೆಗೆದುಹಾಕುವಂತೆ CCPA ಸೂಚಿಸಿದೆ.

ಇಂಡಿಗೋ ಆ್ಯಪ್‌ನಲ್ಲಿ ವಿಮೆ ಪಡೆಯದ ಕಾರಣಕ್ಕೆ ಗ್ರಾಹಕರನ್ನು ಗಾಬರಿಪಡಿಸುವಂತೆ ʼNo, I will take riskʼ ಸಂದೇಶ ನೀಡುತ್ತಿತ್ತು. ಇದನ್ನು ಬದಲಾಯಿಸಲು ಸೂಚಿಸಲಾಗಿದೆ. ಇನ್ನು, ಆಟೋಮ್ಯಾಟಿಕ್ ಲಾಯಲ್ಟಿ ಪ್ರೋಗ್ರಾಮ್ ನೋಂದಣಿ ಮತ್ತು ಪ್ರಚಾರ ಸಂದೇಶಗಳಿಗೆ ಬಲವಂತದ ಸಮ್ಮತಿ ಪಡೆಯುತ್ತಿದ್ದ ಸ್ಪೈಸ್‌ಜೆಟ್ ಸಂಸ್ಥೆಗೂ ₹1 ಲಕ್ಷ ದಂಡ ಹಾಕಲಾಗಿದೆ. ಹೀಗೆ ವಿವಿಧ ರೀತಿ ಗ್ರಾಹಕರನ್ನು ವಂಚಿಸುತ್ತಿದ್ದ ಅನುಜ್ ಜಿಂದಾಲ್‌ಗೆ ₹3 ಲಕ್ಷ, ಫರ್ಸ್ಟ್ ಕ್ರೈಗೆ ₹2 ಲಕ್ಷ, ಫಾರ್ಮ್‌ಈಸಿ ಸಂಸ್ಥೆಗೆ ₹1 ಲಕ್ಷ, ಮೆಕಾಫಿ (McAfee) ಸಂಸ್ಥೆಗೆ ₹1 ಲಕ್ಷ ದಂಡ ವಿಧಿಸಲಾಗಿದೆ ಎಂದು CCPA ಮಾಹಿತಿ ನೀಡಿದೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

ರೇಣುಕಾಸ್ವಾಮಿ ಕೊಲೆ ಪ್ರಕರಣ: ಎ-14 ಪ್ರದೋಶ್ ಮಾಫಿ ಸಾಕ್ಷಿ ವಿಚಾರಣೆ, ದರ್ಶನ್ ಗೆ "ಕಂಟಕವಾಗುತ್ತಾ? ಆ.10 ಕ್ಕೆ ಆದೇಶ ಕಾಯ್ದಿರಿಸಿದ ನ್ಯಾಯಾಧೀಶರು!

'ಕ್ಯಾ ಬೋಲ್ತಿ ಪಬ್ಲಿಕ್': ನೀಟ್ ನಂತರ CJPಯ ಮುಂದಿನ ಟಾರ್ಗೆಟ್ ನಿರುದ್ಯೋಗ; ಜನರ ಧ್ವನಿಯಾಗಲು ದೇಶಾದ್ಯಂತ ಅಭಿಯಾನ

ಉಮರ್ ಖಾಲಿದ್, ಶಾರ್ಜೀಲ್ ಇಮಾಮ್‌ರಂತೆ ನಾನೂ ರಾಜಕೀಯ ಸಂಚಿಗೆ ಬಲಿ: ‘Tehelka’ ಮಾಜಿ ಸಂಪಾದಕ ತರುಣ್ ತೇಜ್‌ಪಾಲ್‌

1 ಕೋಟಿ ರೂ. ಸಾಲ ತೀರಿಸಲು 'ನನ್ನ ಆತ್ಮವನ್ನೇ ಮಾರಿಕೊಂಡೆ': 'ಸಿ-ಗ್ರೇಡ್' ಸಿನಿಮಾದಲ್ಲೂ ಮಾಡ್ದೆ, ಜೀವನದ ಕರಾಳ ಅಧ್ಯಾಯ ಬಿಚ್ಚಿಟ್ಟ ನಟಿ ಸುಶ್ಮಿತಾ ಮುಖರ್ಜಿ!

ವಾಹನ ಸವಾರರ ಗಮನಕ್ಕೆ: ಬೆಂಗಳೂರಿನ ಕೆಆರ್ ಮಾರ್ಕೆಟ್ ಫ್ಲೈಓವರ್‌ ಮೂರು ತಿಂಗಳು ಬಂದ್; ಇಲ್ಲಿದೆ ಕಾರಣ...