ಸಿಆರ್ ಪಿಎಫ್ ಸಾಂದರ್ಭಿಕ ಚಿತ್ರ 
ದೇಶ

CRPF ನಲ್ಲಿ ಸೂಸೈಡ್ ಕೇಸ್ ಹೆಚ್ಚಳ: 2025ರಲ್ಲಿ ಅತಿ ಹೆಚ್ಚು 59 ಸಿಬ್ಬಂದಿ ಆತ್ಮಹತ್ಯೆ! ಕಾರಣವೇನು?

2021-25ರ ಅವಧಿಯ ಅಧಿಕೃತ ದತ್ತಾಂಶಗಳ ಪ್ರಕಾರ, ಶೇ. 77ಕ್ಕೂ ಹೆಚ್ಚು ಪ್ರಕರಣಗಳಲ್ಲಿ (ಒಟ್ಟು 262 ಪ್ರಕರಣಗಳ ಪೈಕಿ 202) ಸಿಬ್ಬಂದಿ ಕರ್ತವ್ಯದಲ್ಲಿದ್ದಾಗಲೇ ಆತ್ಮಹತ್ಯೆಗೆ ಶರಣಾಗಿದ್ದಾರೆ.

ನವದೆಹಲಿ: ದೇಶದ ಅತಿದೊಡ್ಡ ಅರೆಸೇನಾ ಪಡೆಯಾದ ಕೇಂದ್ರೀಯ ಮೀಸಲು ಪೊಲೀಸ್ ಪಡೆ (CRPF)ಯಲ್ಲಿ ಆತ್ಮಹತ್ಯೆ ಪ್ರಕರಣಗಳು ಹೆಚ್ಚಾಗುತ್ತಿವೆ. 2025ರಲ್ಲಿ ಕಳೆದ ಐದು ವರ್ಷಗಳಲ್ಲಿಯೇ ಅತಿ ಹೆಚ್ಚು ಅಂದರೆ 59 ಸಿಬ್ಬಂದಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಈ ಪೈಕಿ ಶೇಕಡಾ 80ಕ್ಕೂ ಹೆಚ್ಚು ಮಂದಿ ಕಾನ್ಸ್ಟೇಬಲ್ ಶ್ರೇಣಿಯ ಸಿಬ್ಬಂದಿಯಾಗಿದ್ದಾರೆ ಎಂದು ಅಧಿಕೃತ ಮೂಲಗಳು ಗುರುವಾರ ತಿಳಿಸಿವೆ.

2021-25ರ ಅವಧಿಯ ಅಧಿಕೃತ ದತ್ತಾಂಶಗಳ ಪ್ರಕಾರ, ಶೇ. 77ಕ್ಕೂ ಹೆಚ್ಚು ಪ್ರಕರಣಗಳಲ್ಲಿ (ಒಟ್ಟು 262 ಪ್ರಕರಣಗಳ ಪೈಕಿ 202) ಸಿಬ್ಬಂದಿ ಕರ್ತವ್ಯದಲ್ಲಿದ್ದಾಗಲೇ ಆತ್ಮಹತ್ಯೆಗೆ ಶರಣಾಗಿದ್ದಾರೆ. ಉಳಿದ ಪ್ರಕರಣಗಳು ಅವರು ರಜೆಯಲ್ಲಿದ್ದಾಗ ನಡೆದಿವೆ.

ಈ ಕುರಿತು ಪಡೆಯಿಂದ ಯಾವುದೇ ಅಧಿಕೃತ ಪ್ರತಿಕ್ರಿಯೆ ಬಂದಿಲ್ಲವಾದರೂ, ಸಿಬ್ಬಂದಿಯ ಉತ್ತಮ ದೈಹಿಕ ಮತ್ತು ಮಾನಸಿಕ ಆರೋಗ್ಯವನ್ನು ಖಚಿತಪಡಿಸಿಕೊಳ್ಳಲು ಅರೆಸೇನಾ ಪಡೆ ಹಲವಾರು ಕ್ರಮಗಳನ್ನು ಕೈಗೊಂಡಿದೆ ಮತ್ತು ಈ ಪ್ರಕ್ರಿಯೆ ಮುಂದುವರಿದಿದೆ ಎಂದು ಸಿಆರ್‌ಪಿಎಫ್ ಅಧಿಕಾರಿಗಳು ಸುದ್ದಿಸಂಸ್ಥೆ ಪಿಟಿಐಗೆ ತಿಳಿಸಿದ್ದಾರೆ.

ಹೆಚ್ಚಿನ ಆತ್ಮಹತ್ಯೆ ಪ್ರಕರಣಗಳು ಕೌಟುಂಬಿಕ ಸಮಸ್ಯೆಗಳಿಗೆ ಸಂಬಂಧಿಸಿರುವುದು ಕಂಡುಬಂದಿದೆ; ಇದರೊಂದಿಗೆ ಸೇವೆಯ ಕಠಿಣತೆ ಮತ್ತು ಕಠಿಣ ಕರ್ತವ್ಯಗಳ ಒತ್ತಡವೂ ಇದಕ್ಕೆ ಕಾರಣವಾಗಿದೆ ಎಂದು ಅಧಿಕಾರಿಗಳು ಹೇಳಿದ್ದಾರೆ.

ಸುಮಾರು 3.25 ಲಕ್ಷ ಸಿಬ್ಬಂದಿಯನ್ನು ಹೊಂದಿರುವ ಸಿಆರ್‌ಪಿಎಫ್ ದೇಶದ ಪ್ರಮುಖ ಆಂತರಿಕ ಭದ್ರತಾ ಪಡೆಯಾಗಿದೆ. ಸಿಆರ್‌ಪಿಎಫ್‌ನ ಕಾರ್ಯಾಚರಣಾ ಸಾಮರ್ಥ್ಯದ ಶೇಕಡಾ 95-97ರಷ್ಟು ಸಿಬ್ಬಂದಿ ಯಾವುದೇ ಸಮಯದಲ್ಲಿ ಭಯೋತ್ಪಾದಕರು ಮತ್ತು ಉಗ್ರಗಾಮಿಗಳನ್ನು ಎದುರಿಸುವ ಅಥವಾ ಕಾನೂನು ಮತ್ತು ಸುವ್ಯವಸ್ಥೆ ಕಾಪಾಡುವ ಕರ್ತವ್ಯದಲ್ಲಿ ನಿರತರಾಗಿರುತ್ತಾರೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

2025ರಲ್ಲಿ 59 ಸಿಬ್ಬಂದಿ ಆತ್ಮಹತ್ಯೆ ಮಾಡಿಕೊಂಡಿದ್ದರೆ, ಈ ಸಂಖ್ಯೆ 2024ರಲ್ಲಿ 46, 2023ರಲ್ಲಿ 57, 2022ರಲ್ಲಿ 43 ಮತ್ತು 2021ರಲ್ಲಿ 57 ಆಗಿತ್ತು ಎಂದು ಅಧಿಕಾರಿಗಳು ಮಾಹಿತಿ ನೀಡಿದ್ದಾರೆ. ಕಳೆದ ಐದು ವರ್ಷಗಳಲ್ಲಿ (ಜುಲೈ 2026ರವರೆಗಿನ 19 ಪ್ರಕರಣಗಳನ್ನೂ ಒಳಗೊಂಡಂತೆ) ಈ ತೀವ್ರ ನಿರ್ಧಾರ ಕೈಗೊಂಡ ಒಟ್ಟು 281 ಸಿಬ್ಬಂದಿಯ ಪೈಕಿ 237 ಮಂದಿ 'ನಾನ್-ಗೆಜೆಟೆಡ್' (non-gazetted) ಶ್ರೇಣಿಗೆ ಸೇರಿದವರಾಗಿದ್ದಾರೆ ಎಂದು ಮೂಲಗಳು ತಿಳಿಸಿವೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

ಕಾವೇರಿ ವಿವಾದ: ಮಾತುಕತೆ ಅಂದ್ರೆ ರಾಜಿ ಎಂದರ್ಥವಲ್ಲ; ಬೆಂಗಳೂರು ಭೇಟಿ ಪ್ರಯತ್ನ ಸಮರ್ಥಿಸಿಕೊಂಡ ತಮಿಳುನಾಡು ಸಿಎಂ ವಿಜಯ್!

ಸಚಿವ ಸ್ಥಾನಕ್ಕಾಗಿ ಕೃಷ್ಣಪ್ಪ ಬಿಗಿ ಪಟ್ಟು: ಡಿಕೆಶಿ ಸಂಪುಟದಿಂದ ಒಬ್ಬರಿಗೆ ಕೊಕ್? ‘ನಾನು ರಾಜೀನಾಮೆಗೆ ಸಿದ್ಧ’ ಎಂದ ಬಾಲಕೃಷ್ಣ!

‘ಧುರಂಧರ್’ ಹೊಸ ದಾಖಲೆ: ಜಗತ್ತಿನಲ್ಲೇ ಅತಿ ಹೆಚ್ಚು ವೀಕ್ಷಿಸಲ್ಪಟ್ಟ ಇಂಗ್ಲೀಷೇತರ ಸಿನಿಮಾ!

ವಿಜ್ಞಾನಿಗಳಿಗೇ ಶಾಕ್; ಸುರಕ್ಷಿತ ಸ್ಯಾಂಡ್‌ಬಾಕ್ಸ್‌ನಿಂದ ಹೊರಬಂದ ಚೀನಾದ ಅತ್ಯಂತ ಶಕ್ತಿಶಾಲಿ Ai ಮಾದರಿ: ವರದಿ

ದಳಪತಿ ದಾಂಪತ್ಯದಲ್ಲಿ ಸ್ಫೋಟಕ ತಿರುವು: ವಿಚ್ಛೇದನ ಅರ್ಜಿ ಹಿಂಪಡೆದ ತಮಿಳುನಾಡು ಸಿಎಂ ವಿಜಯ್ ಪತ್ನಿ ಸಂಗೀತಾ; ಪ್ರಕರಣ ಇತ್ಯರ್ಥ