ಏಷ್ಯಾದ ಅತ್ಯಂತ ಶ್ರೀಮಂತ ಗ್ರಾಮ Online Desk
ದೇಶ

17 ಬ್ಯಾಂಕ್ 7000 ಕೋಟಿ FD; ನಮ್ಮ ಭಾರತದಲ್ಲೇ ಇದೆ ಏಷ್ಯಾದ ಅತ್ಯಂತ ಶ್ರೀಮಂತ ಗ್ರಾಮ! ಯಾವುದು ಗೊತ್ತಾ?

ಯಾವುದಾದರೂ ಒಂದೆರಡು ಗ್ರಾಮಗಳಿಗೆ ಸೇರಿ 1 ಬ್ಯಾಂಕ್​​​ ಇರುತ್ತದೆ. ಆದ್ರೆ, ಭಾರತದ ಒಂದು ಹಳ್ಳಿಯಲ್ಲಿ 17 ಬ್ಯಾಂಕ್​​​ಗಳು ತಮ್ಮ ಬ್ರಾಂಚ್ ಓಪನ್ ಮಾಡಿವೆ! ಜೊತೆಗೆ, ಗ್ರಾಮಸ್ಥರು ₹7,000 ಕೋಟಿಗೂ ಹೆಚ್ಚು ಹಣವನ್ನು FD ರೂಪದಲ್ಲಿ ಇಟ್ಟು ಏಷ್ಯಾದ ಶ್ರೀಮಂತ ಗ್ರಾಮ ಎಂಬ ಹೆಗ್ಗಳಿಕೆಗೆ ಪಾತ್ರವಾಗಿದೆ.

ಸಾಮಾನ್ಯವಾಗಿ ಯಾವುದಾದರೂ ಒಂದೆರಡು ಗ್ರಾಮಗಳಿಗೆ ಸೇರಿ ಒಂದೇ ಒಂದು ಬ್ಯಾಂಕ್​​​ ಇರುತ್ತದೆ. ಮಿಸ್ ಆದ್ರೆ, ಎರಡು! ಆದ್ರೆ, ನಿಮಗೆ ಗೊತ್ತಾ, ಭಾರತದ ಒಂದು ಪುಟ್ಟ ಹಳ್ಳಿಯಲ್ಲಿ ಬರೋಬ್ಬರಿ 17 ಬ್ಯಾಂಕ್​​​ಗಳು ತಮ್ಮ ಬ್ರಾಂಚ್ ಓಪನ್ ಮಾಡಿವೆ! ಹಾಗಾದ್ರೆ, ಆ ಹಳ್ಳಿಯಲ್ಲಿ ಇರುವ ವಿಶೇಷತೆಯಾದ್ರು ಏನು? ನೋಡುವುದಕ್ಕೆ ಸಾಮಾನ್ಯ ಹಳ್ಳಿಯಂತೆ ಕಂಡರೂ, ಇಲ್ಲಿನ ನಿವಾಸಿಗಳ ಬ್ಯಾಂಕ್ ಬ್ಯಾಲೆನ್ಸ್ ನೋಡಿದರೆ ದಂಗಾಗುವುದು ಖಂಡಿತ.! ಅಷ್ಟೇ ಅಲ್ಲ ಈ ಸಣ್ಣ ಗ್ರಾಮವು ಇಂದು ಏಷ್ಯಾದ ಅತ್ಯಂತ ಶ್ರೀಮಂತ ಗ್ರಾಮ ಎಂಬ ಹೆಗ್ಗಳಿಕೆಗೆ ಪಾತ್ರವಾಗಿದೆ. ಆ ಕುರಿತ ವರದಿ ಇಲ್ಲಿದೆ:

ಕೇವಲ 17 ಬ್ಯಾಂಕ್‌ಗಳಲ್ಲ, ಆ ಬ್ಯಾಂಕ್‌ ಶಾಖೆಗಳಲ್ಲಿ ಗ್ರಾಮಸ್ಥರು ಬರೋಬ್ಬರಿ ₹7,000 ಕೋಟಿಗೂ ಹೆಚ್ಚು ಹಣವನ್ನು ಫಿಕ್ಸೆಡ್ ಡೆಪಾಸಿಟ್ ರೂಪದಲ್ಲಿ ಇಟ್ಟು ಜಗತ್ತಿನ ಗಮನ ಸೆಳೆದಿದ್ದಾರೆ. ಈ ಅದ್ಭುತ ಸಾಧನೆ ಮಾಡಿದ ಭಾರತದ ಆ ಹೆಮ್ಮೆಯ ಗ್ರಾಮ ಗುಜರಾತ್‌ನ ಕಚ್ ಜಿಲ್ಲೆಯಲ್ಲಿರುವ ಮಾಧಾಪುರ.

ಇಷ್ಟೊಂದು ಬ್ಯಾಂಕ್‌ಗಳು ಈ ಹಳ್ಳಿಗೆ ಯಾಕೆ ಬಂದವು?

ಮಾಧಾಪುರದಲ್ಲಿ ಕೇವಲ 32,000 ಜನಸಂಖ್ಯೆ ಇದೆ. ಆದರೆ ಇಲ್ಲಿ SBI, HDFC, ICICI, PNB, Axis ಮತ್ತು Union Bank ನಂತಹ ದೇಶದ ಮುಂಚೂಣಿ 17ಕ್ಕೂ ಹೆಚ್ಚು ಪ್ರಮುಖ ಬ್ಯಾಂಕ್‌ಗಳು ತಮ್ಮ ಶಾಖೆಗಳನ್ನು ತೆರೆದಿವೆ. ಹಳ್ಳಿಯ ಜನರ ಬಳಿ ಇರುವ ಅಪಾರ ಹಣವನ್ನು ನಿರ್ವಹಿಸಲೆಂದೇ ಇಷ್ಟೊಂದು ಬ್ಯಾಂಕ್‌ಗಳು ಇಲ್ಲಿ ಪೈಪೋಟಿಗೆ ಬಿದ್ದಿವೆ.

ಸಾವಿರಾರು ಕೋಟಿ ಹಣ ಎಲ್ಲಿಂದ ಬಂತು?

ಈ ಹಳ್ಳಿಯ ಶ್ರೀಮಂತಿಕೆಯ ಅಸಲಿ ರಹಸ್ಯ ಇರುವುದು ಇಲ್ಲಿನ ಜನರ ದೇಶಪ್ರೇಮದಲ್ಲಿ. ಮಾಧಾಪುರದ ಸುಮಾರು 1,200ಕ್ಕೂ ಹೆಚ್ಚು ಕುಟುಂಬಗಳು ವಿದೇಶಗಳಲ್ಲಿ (ಲಂಡನ್, ಅಮೆರಿಕ, ಆಫ್ರಿಕಾ, ಮತ್ತು ಗಲ್ಫ್ ದೇಶಗಳಲ್ಲಿ) ನೆಲೆಸಿದ್ದಾರೆ. ಇವರು ವಿದೇಶದಲ್ಲಿ ಗಳಿಸಿದ ಹಣವನ್ನು ಅಲ್ಲೇ ಬ್ಯಾಂಕ್‌ಗಳಲ್ಲಿ ಇಡುವುದಿಲ್ಲ. ಬದಲಾಗಿ, ತಮ್ಮ ಸ್ವಂತ ಹಳ್ಳಿಯ ಬ್ಯಾಂಕ್‌ ಖಾತೆಗಳಿಗೆ ಕಳುಹಿಸುತ್ತಾರೆ. ದಶಕಗಳಿಂದ ಈ ರೀತಿ ಹಣ ಒಟ್ಟುಗೂಡಿ ಇಂದು ₹7,000 ಕೋಟಿಯ ದಾಟಿದೆ. ಅದರಂತೆ, ಇಲ್ಲಿನ ಪ್ರತಿಯೊಂದು ಮನೆಯ ಖಾತೆಯಲ್ಲೂ ಸರಾಸರಿ ₹15 ಲಕ್ಷದಿಂದ ₹20 ಲಕ್ಷದವರೆಗೆ ಕೇವಲ ಉಳಿತಾಯದ ಹಣವೇ ಇರುತ್ತದೆ.

ಮುಂದುವರೆದು, ಬ್ಯಾಂಕ್‌ಗಳಲ್ಲಿ ಇಷ್ಟೊಂದು ಹಣವಿರುವುದರಿಂದ ಈ ಹಳ್ಳಿ ಯಾವುದೇ ಮೆಟ್ರೋ ನಗರಕ್ಕೂ ಕಮ್ಮಿ ಇಲ್ಲದಂತೆ ಅಭಿವೃದ್ಧಿ ಹೊಂದಿದೆ. ಅದರಂತೆ, ಹಳ್ಳಿಯಲ್ಲಿ ಅತ್ಯಾಧುನಿಕ ಅಂತರರಾಷ್ಟ್ರೀಯ ಶಾಲೆಗಳು ಮತ್ತು ಕಾಲೇಜುಗಳಿವೆ. ಜೊತೆಗೆ ಸುಸಜ್ಜಿತ ಖಾಸಗಿ ಕ್ಲಬ್‌ಗಳು, ಶಾಪಿಂಗ್ ಕಾಂಪ್ಲೆಕ್ಸ್‌ಗಳು ಮತ್ತು ದೊಡ್ಡ ಆಸ್ಪತ್ರೆಗಳಿವೆ. ಹಾಗೂ ಇಲ್ಲಿನ ರಸ್ತೆಗಳು, ಶುದ್ಧ ಕುಡಿಯುವ ನೀರು ಮತ್ತು ನೈರ್ಮಲ್ಯ ವ್ಯವಸ್ಥೆ ಅತ್ಯಂತ ಮಾದರಿಯಾಗಿದೆ. ವಿಶೇಷವೆಂದರೆ, ಈ ಎಲ್ಲ ಸೌಲಭ್ಯಗಳಿಗೆ ಹಳ್ಳಿಯವರು ಸರ್ಕಾರದ ಅನುದಾನಕ್ಕಾಗಿ ಕಾಯುವುದಿಲ್ಲ; ಬದಲಾಗಿ, ತಾವೇ ಹಣ ಒಟ್ಟುಗೂಡಿಸಿ ಅಭಿವೃದ್ಧಿ ಮಾಡಿಕೊಳ್ಳುತ್ತಾರೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

ನಿಮ್ಮ ಮೇಲೆ ನಮಗೆ ನಂಬಿಕೆ ಇದೆ, ದೇಶಕ್ಕೆ ನಿಮ್ಮ ಅವಶ್ಯಕತೆ ಇದೆ: CJP ಪ್ರತಿಭಟನೆ ನಂತರ ಮೊದಲ ಬಾರಿ Gen Z ಉದ್ದೇಶಿಸಿ ಮೋದಿ ಭಾಷಣ

ಭಾರತೀಯ ಅಭಿಮಾನಿಗಳಿಗೆ ಶಾಕ್: ಭಾರತಕ್ಕೂ ಮೊದಲು ವಿದೇಶದಲ್ಲಿ Ramayana ಚಿತ್ರ ಬಿಡುಗಡೆ; ಕಾರಣ ಬಿಚ್ಚಿಟ್ಟ ನಿರ್ಮಾಪಕ!

'ಜೆಡಿಎಸ್ ಪಾದಯಾತ್ರೆ ಅಲ್ಲ, ಕುಮಾರಸ್ವಾಮಿ ಮಾಡಿದ ಪಾಪಕ್ಕೆ ಪ್ರಾಯಶ್ಚಿತ ಯಾತ್ರೆ: ಸಚಿವ ಬಾಲಕೃಷ್ಣ ತಿರುಗೇಟು

ಶ್ರೀಲಂಕಾ ಪ್ರವಾಸ: ಜೈಸ್ವಾಲ್ ಡಕೌಟ್, ಶತಕ ಸಿಡಿಸಿ ಭಾರತಕ್ಕೆ ಆಸರೆಯಾದ ಕನ್ನಡಿಗ ದೇವದತ್ ಪಡಿಕ್ಕಲ್

ಮೈಸೂರು: ʻಡಾಲಿʼ ಕಿರುಕುಳಕ್ಕೆ ಬೇಸತ್ತ ಮಹಿಳೆ ಆತ್ಮಹತ್ಯೆಗೆ ಶರಣು; ಡೆತ್‌ನೋಟ್‌ ಪತ್ತೆ!