ನೀಟ್ ಪರೀಕ್ಷೆಯಲ್ಲಿ ಉತ್ತೀರ್ಣರಾದ ಎ. ಸುರೇಶ್ ಕುಮಾರ್  
ದೇಶ

ತಮಿಳುನಾಡು: ಕಲಿಕೆಗೆ ವಯಸ್ಸಿನ ಮಿತಿ ಇಲ್ಲ; ಡಾಕ್ಟರ್ ಆಗುವ 34 ವರ್ಷಗಳ ಕನಸು ನನಸು; ನೀಟ್ ಪರೀಕ್ಷೆಯಲ್ಲಿ 51 ವರ್ಷದ ವ್ಯಕ್ತಿ ಉತ್ತೀರ್ಣ!

ಈಗಾಗಲೇ ಎರಡು ಪಿಎಚ್‌ಡಿ (PhD) ಮತ್ತು ಒಂದು ಎಂಬಿಎ (MBA) ಪದವಿ ಹೊಂದಿದ್ದರೂ, ವೈದ್ಯರಾಗುವ ತಮ್ಮ ಕನಸನ್ನು ನನಸಾಗಿಸಿಕೊಳ್ಳಲು ನೀಟ್ (NEET) ಪರೀಕ್ಷೆಯಲ್ಲಿ ಉತ್ತೀರ್ಣರಾಗಿದ್ದಾರೆ. ಗುರುವಾರ ಅವರಿಗೆ ತಮ್ಮ ಮನೆಗೆ ಹತ್ತಿರವಿರುವ ನಾಗಪಟ್ಟಣಂ ವೈದ್ಯಕೀಯ ಕಾಲೇಜಿನಲ್ಲಿ ಸೀಟು ದೊರೆತಿದೆ.

ಚೆನ್ನೈ: ಕಲಿಕೆಗೆ ವಯಸ್ಸಿನ ಮಿತಿ ಇಲ್ಲ, ಅದೊಂದು ಸಂಖ್ಯೆ ಮಾತ್ರ, ಪರಿಶ್ರಮದ ಮೂಲಕ ಯಶಸ್ಸು ಸಾಧಿಸಬಹುದು ಎಂಬುದನ್ನು ತಮಿಳುನಾಡಿನ ನಾಗಪಟ್ಟಣಂ ಜಿಲ್ಲೆ ವ್ಯಕ್ತಿಯೊಬ್ಬರು ಮಾಡಿ ತೋರಿಸಿದ್ದಾರೆ. ಹೌದು, 51 ವರ್ಷದ ವ್ಯಕ್ತಿಯೊಬ್ಬರ ಡಾಕ್ಟರ್ ಆಗಬೇಕೆಂಬ 34 ವರ್ಷಗಳ ಕನಸು ನನಸು ಆಗಿದೆ.

ಈಗಾಗಲೇ ಎರಡು ಪಿಎಚ್‌ಡಿ (PhD) ಮತ್ತು ಒಂದು ಎಂಬಿಎ (MBA) ಪದವಿ ಹೊಂದಿದ್ದರೂ, ವೈದ್ಯರಾಗುವ ತಮ್ಮ ಕನಸನ್ನು ನನಸಾಗಿಸಿಕೊಳ್ಳಲು ನೀಟ್ (NEET) ಪರೀಕ್ಷೆಯಲ್ಲಿ ಉತ್ತೀರ್ಣರಾಗಿದ್ದಾರೆ. ಗುರುವಾರ ಅವರಿಗೆ ತಮ್ಮ ಮನೆಗೆ ಹತ್ತಿರವಿರುವ ನಾಗಪಟ್ಟಣಂ ವೈದ್ಯಕೀಯ ಕಾಲೇಜಿನಲ್ಲಿ ಸೀಟು ದೊರೆತಿದೆ. ಇದರೊಂದಿಗೆ ಅವರು 12ನೇ ತರಗತಿ (ಪ್ಲಸ್ ಟು) ಮುಗಿದ 34 ವರ್ಷಗಳ ನಂತರ ಅವರ ಕನಸು ಸಾಕಾರಗೊಳ್ಳುವಂತಾಗಿದೆ.

ನಾಗಪಟ್ಟಣಂ ಜಿಲ್ಲೆಯ ವೇಲಂಕಣ್ಣಿಯವರಾದ ಎ. ಸುರೇಶ್ ಕುಮಾರ್ ಈ ಸಾಧನೆ ಮಾಡಿದ್ದು, ತಮ್ಮಗಿಂತ ಚಿಕ್ಕ ವಯಸ್ಸಿನ ವಿದ್ಯಾರ್ಥಿಗಳೊಂದಿಗೆ ಕಲಿಯುವ ಬಗ್ಗೆ ಉತ್ಸಾಹ ವ್ಯಕ್ತಪಡಿಸುತ್ತಾರೆ. ವಯಸ್ಸು ಕೇವಲ ಒಂದು ಸಂಖ್ಯೆ ಮಾತ್ರ ಎನ್ನುತ್ತಾರೆ. 51ನೇ ವಯಸ್ಸಿನಲ್ಲಿಯೂ ಅಧ್ಯಯನ ಮಾಡುವ ಅವರ ಈ ಛಲಕ್ಕೆ ಕಾರಣ, 34 ವರ್ಷಗಳ ಕಾಲ ಈಡೇರದೇ ಉಳಿದಿದ್ದ ವೈದ್ಯಕೀಯ ಕ್ಷೇತ್ರದ ಮೇಲಿನ ಅವರ ದೀರ್ಘಕಾಲದ ಆಸಕ್ತಿ. ಫಾರ್ಮಸಿ ಮತ್ತು ರೋಗನಿರ್ಣಯ (ಡಯಾಗ್ನೋಸ್ಟಿಕ್ಸ್) ಕ್ಷೇತ್ರಗಳಲ್ಲಿ ವೃತ್ತಿಪರ ಯಶಸ್ಸು ಮತ್ತು ಅನೇಕ ಪದವಿಗಳನ್ನು ಹೊಂದಿದ್ದರೂ ವೈದ್ಯರಾಗಬೇಕೆಂಬ ಅದಮ್ಯ ಆಸೆ ಹೊಂದಿದ್ದರು.

1992ರಲ್ಲಿ 12ನೇ ತರಗತಿಯನ್ನು ಪೂರ್ಣಗೊಳಿಸಿದಾಗಿನಿಂದಲೂ ವೈದ್ಯಕೀಯ ಶಿಕ್ಷಣ ಪಡೆಯುವ ಕನಸು ಕಂಡಿದ್ದಾಗಿ ಹೇಳಿದ ಕುಮಾರ್, ಕೌಟುಂಬಿಕ ಜವಾಬ್ದಾರಿಗಳ ಕಾರಣದಿಂದಾಗಿ ಆರಂಭದಲ್ಲಿ ಫಾರ್ಮಸಿ ಆಯ್ಕೆ ಮಾಡಿಕೊಂಡು, ಫಾರ್ಮಾಸ್ಯುಟಿಕಲ್ ಮತ್ತು ರೋಗನಿರ್ಣಯ ಉದ್ಯಮಗಳಲ್ಲಿ ವೃತ್ತಿಯನ್ನು ರೂಪಿಸಿಕೊಂಡಿದ್ದಾಗಿ ತಿಳಿಸಿದರು. ಆದಾಗ್ಯೂ, ನೀಟ್ ಪರೀಕ್ಷೆಗೆ ಇದ್ದ ವಯಸ್ಸಿನ ಮಿತಿಯನ್ನು ತೆಗೆದುಹಾಕುವ ಸುಪ್ರೀಂ ಕೋರ್ಟ್‌ನ ನಿರ್ಧಾರದಿಂದ ಪ್ರೇರೇಪಿತರಾದ ಅವರು, ತಮ್ಮ ದೀರ್ಘಕಾಲದ ಆಸಕ್ತಿಯನ್ನು ಬೆನ್ನಟ್ಟಲು ನಿರ್ಧರಿಸಿದರು.

ಉದ್ಯೋಗದಲ್ಲಿದ್ದರೂ, ರಾತ್ರಿಯ ವೇಳೆ ಅಧ್ಯಯನ ಮಾಡುತ್ತಿದ್ದೆ ಮತ್ತು ವಿಷಯದೊಂದಿಗೆ ಸಂಪರ್ಕವನ್ನು ಕಾಯ್ದುಕೊಳ್ಳಲು ನನ್ನ ಮಗನಿಗೆ ಜೀವಶಾಸ್ತ್ರವನ್ನು (biology) ಕೂಡ ಕಲಿಸುತ್ತಿದ್ದೆ. ತಮ್ಮ ಅಧ್ಯಯನದತ್ತ ಗಮನಹರಿಸಲು ಉದ್ಯೋಗಕ್ಕೆ ರಾಜೀನಾಮೆ ನೀಡುವಂತೆ ಅವರನ್ನು ಪ್ರೋತ್ಸಾಹಿಸುವಲ್ಲಿ ಅವರ ಪತ್ನಿ ಅಪಾರ ಬೆಂಬಲ ನೀಡಿದ್ದಾರೆ. ಅಷ್ಟೇ ಅಲ್ಲದೆ, ಕಠಿಣವಾದ ತಯಾರಿ ದಿನಚರಿಯನ್ನು ಪಾಲಿಸಲು ಕೂಡ ಅವರು ಸಹಾಯ ಮಾಡಿದ್ದಾರೆ ಎಂದು ಅವರು ಹೇಳಿಕೊಂಡಿದ್ದಾರೆ.

ಹಿಂದೆ ಸಂಭವಿಸಿದ ರಸ್ತೆ ಅಪಘಾತವೊಂದರಿಂದ ಉಂಟಾದ ಶಾಶ್ವತ ಗಾಯವು ಅವರ ದೈಹಿಕ ಚಲನಶೀಲತೆಯನ್ನು ಸೀಮಿತಗೊಳಿಸಿದರೂ, ಅವರ ದೃಢಸಂಕಲ್ಪವನ್ನು ಕುಗ್ಗಿಸಲಿಲ್ಲ; ಹೀಗಾಗಿ ಅವರು ವಿಶೇಷ ಕೋಟಾದಡಿ ಅರ್ಹತೆ ಪಡೆದರು.

ಈಡೇರದ ಮಹತ್ವಾಕಾಂಕ್ಷೆಯ ಕೊರಗಿನೊಂದಿಗೆ ಈ ಜಗತ್ತನ್ನು ತೊರೆಯಲು ತಾನು ಬಯಸುವುದಿಲ್ಲ. "51ನೇ ವಯಸ್ಸಿನಲ್ಲೂ ನಾನು ಉತ್ತಮ ದೈಹಿಕ ಕ್ಷಮತೆಯನ್ನು ಕಾಯ್ದುಕೊಂಡಿದ್ದೇನೆ ಮತ್ತು ವಯಸ್ಸು ಕೇವಲ ಒಂದು ಸಂಖ್ಯೆ ಅಷ್ಟೇ ಎಂದು ಕುಮಾರ್ ಚೆನ್ನೈನಲ್ಲಿ ಸುದ್ದಿಗಾರರಿಗೆ ತಿಳಿಸಿದರು.

ವೃತ್ತಿಪರ ಮತ್ತು ಕೌಟುಂಬಿಕ ಜವಾಬ್ದಾರಿಗಳ ನಡುವೆಯೂ ಸಮತೋಲನ ಕಾಯ್ದುಕೊಂಡು, ಅತ್ಯಂತ ಶಿಸ್ತುಬದ್ಧವಾಗಿ NEET ಪರೀಕ್ಷೆಗೆ ತಯಾರಿ ನಡೆಸಿದ ಕುಮಾರ್, ಕೆಲಸ ಮುಗಿಸಿ ಬಂದ ನಂತರ ಅಧ್ಯಯನದಲ್ಲಿ ತೊಡಗಿಸಿಕೊಳ್ಳುತ್ತಿದ್ದರು. ಆಗಾಗ್ಗೆ ರಾತ್ರಿ 10 ಗಂಟೆಯಿಂದ ಮಧ್ಯರಾತ್ರಿಯವರೆಗೂ ಓದುತ್ತಿದ್ದರು. ಅವರ ಪತ್ನಿ ಬೆಳಿಗ್ಗೆ 4 ಗಂಟೆಗೆ ಅವರನ್ನು ಎಬ್ಬಿಸಿ ಉಪಹಾರ ಅಥವಾ ಕಾಫಿ ನೀಡುತ್ತಿದ್ದರು ಎಂದು ಅವರು ಹೇಳಿಕೊಂಡರು.

ಹಿಂದಿನ ವರ್ಷಗಳ ಪ್ರಶ್ನೆಪತ್ರಿಕೆಗಳನ್ನು ಅಭ್ಯಾಸ ಮಾಡುತ್ತಿದೆ. ಪರೀಕ್ಷೆಯಲ್ಲಿ ಉತ್ತೀರ್ಣರಾಗುವ ಸಾಮರ್ಥ್ಯದ ಬಗ್ಗೆ ಆತ್ಮವಿಶ್ವಾಸ ಮೂಡುವವರೆಗೆ, 2023 ರಿಂದ 2025 ರವರೆಗೆ ಪ್ರತಿ ವರ್ಷ ತಮ್ಮ ಪ್ರಗತಿಯನ್ನು ಮೌಲ್ಯಮಾಪನ ಮಾಡಿಕೊಂಡರು. ತಮಿಳು ಭಾಷೆಯಲ್ಲಿ ಬರೆದ ಮೊದಲ ಪ್ರಯತ್ನದಲ್ಲಿ ವಿಫಲವಾದ ನಂತರ, ಎರಡನೇ ಪ್ರಯತ್ನಕ್ಕಾಗಿ ಇಂಗ್ಲಿಷ್ ಭಾಷೆಯನ್ನು ಆರಿಸಿಕೊಂಡೆ. ಆ ಭಾಷೆಯಲ್ಲಿದ್ದವೃತ್ತಿಪರ ಅನುಭವವು ಯಶಸ್ಸನ್ನು ತಂದುಕೊಟ್ಟಿತು ಎಂದು ಅವರು ತಿಳಿಸಿದರು.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

ಪರಿಷತ್ ಸಭಾಪತಿ ಚುನಾವಣೆಯಲ್ಲಿ ಕಾಂಗ್ರೆಸ್‌ಗೆ ಕೌಂಟರ್; ನಾಮಪತ್ರ ಸಲ್ಲಿಸಿದ BJP ಅಭ್ಯರ್ಥಿ; ಸ್ಪೀಕರ್ ಚುನಾವಣೆ ಬಹಿಷ್ಕಾರ

ಕರ್ನಾಟಕ ಪುರುಷರ ಕ್ರಿಕೆಟ್ ತಂಡಕ್ಕೆ ಮುಖ್ಯ ಕೋಚ್ ಆಗಿ ವಿನಯ್ ಕುಮಾರ್ ನೇಮಕ

BJP-RSS 'ಜೋಕರ್ ಗಳ ಗುಂಪು' ಎಂದ ರಾಹುಲ್ ಗಾಂಧಿ! ವಿಶ್ವ ನಾಯಕರನ್ನು 'ಅಪ್ಪಿಕೊಳ್ಳುವ' ಪ್ರಧಾನಿ ಮೋದಿಯ ವಿದೇಶಾಂಗ ನೀತಿಯ ಬಗ್ಗೆ ಲೇವಡಿ

ದೇವೇಗೌಡರ ಪತ್ನಿ ಚೆನ್ನಮ್ಮ ನಿಧನಕ್ಕೆ ವಿಧಾನಸಭೆಯಲ್ಲಿ ಸಂತಾಪ; ಸರ್ಕಾರಿ ಗೌರವ ಸಮರ್ಥಿಸಿಕೊಂಡ CM; ಡಿಕೆಶಿ ಹೇಳಿದ್ದೇನು? Video

ಜಂತರ್ ಮಂತರ್ ಪ್ರತಿಭಟನೆಯಲ್ಲಿ ಭಾಗವಹಿಸಿದ್ದವರು Gen Zಗಳೇ ಅಲ್ಲ; 'ಶಬಾನಾ ಅಜ್ಮಿಯಂತವರೇ' ಹೆಚ್ಚು: ಕಂಗನಾ