ಕ್ಯಾಬ್ ಗಳಲ್ಲಿ ಟಿಪ್ ನೀಡುವ ಆಯ್ಕೆ (ಸಂಗ್ರಹ ಚಿತ್ರ) 
ದೇಶ

OLA, UBER ಆ್ಯಪ್‌ಗಳ 'Advance Tip' ದಂಧೆಗೆ ಕೇಂದ್ರ ಸರ್ಕಾರ ಬ್ರೇಕ್: ಪ್ರಯಾಣಕ್ಕೂ ಮುನ್ನ ಟಿಪ್ ಕೇಳದಂತೆ ಖಡಕ್ ಆದೇಶ..!

ಕ್ಯಾಬ್ ಅಥವಾ ಆಟೋ ಬುಕ್ ಮಾಡುವಾಗ ಗ್ರಾಹಕರಿಂದ ಮುಂಗಡವಾಗಿ ಟಿಪ್ (Advance Tip) ಕೇಳುವ ಆಯ್ಕೆಯನ್ನು ಆ್ಯಪ್‌ಗಳಿಂದ ತಕ್ಷಣವೇ ತೆಗೆದುಹಾಕುವಂತೆ ಕೇಂದ್ರ ಸರ್ಕಾರ ಕಟ್ಟುನಿಟ್ಟಿನ ಆದೇಶ ಹೊರಡಿಸಿದೆ.

ಬೆಂಗಳೂರು: ಓಲಾ, ಉಬರ್ ಸೇರಿದಂತೆ ದೇಶದ ಪ್ರಮುಖ ರೈಡ್-ಹೇಲಿಂಗ್ ಆ್ಯಪ್‌ಗಳಿಗೆ ಕೇಂದ್ರ ರಸ್ತೆ ಸಾರಿಗೆ ಮತ್ತು ಹೆದ್ದಾರಿಗಳ ಸಚಿವಾಲಯವು (MoRTH) ಬಿಗ್ ಶಾಕ್ ನೀಡಿದ್ದು, ಪ್ರಯಾಣಕ್ಕೂ ಮುನ್ನ ಟಿಪ್ ಕೇಳದಂತೆ ಖಡಕ್ ಆದೇಶ ಹೊರಡಿಸಿದೆ.

ಕ್ಯಾಬ್ ಅಥವಾ ಆಟೋ ಬುಕ್ ಮಾಡುವಾಗ ಗ್ರಾಹಕರಿಂದ ಮುಂಗಡವಾಗಿ ಟಿಪ್ (Advance Tip) ಕೇಳುವ ಆಯ್ಕೆಯನ್ನು ಆ್ಯಪ್‌ಗಳಿಂದ ತಕ್ಷಣವೇ ತೆಗೆದುಹಾಕುವಂತೆ ಕೇಂದ್ರ ಸರ್ಕಾರ ಕಟ್ಟುನಿಟ್ಟಿನ ಆದೇಶ ಹೊರಡಿಸಿದೆ.

ಹೊಸ 'ಮೋಟಾರು ವಾಹನ ಸಂಯೋಜಕರ ಮಾರ್ಗಸೂಚಿಗಳು, 2025'ರ ಅಡಿಯಲ್ಲಿ ಸರ್ಕಾರ ಈ ಮಹತ್ವದ ಕ್ರಮ ಕೈಗೊಂಡಿದೆ. ಇನ್ಮುಂದೆ ಗ್ರಾಹಕರು ಪ್ರಯಾಣ ಪೂರ್ಣಗೊಳಿಸಿದ ನಂತರವಷ್ಟೇ ಚಾಲಕರಿಗೆ ಟಿಪ್ ನೀಡುವ ಆಯ್ಕೆಯನ್ನು ತೋರಿಸಬೇಕು ಎಂದು ಸ್ಪಷ್ಟಪಡಿಸಲಾಗಿದೆ.

ಇತ್ತೀಚಿನ ದಿನಗಳಲ್ಲಿ ಓಲಾ, ಉಬರ್ ಆ್ಯಪ್‌ಗಳು ರೈಡ್ ಬುಕ್ ಮಾಡುವ ಮುನ್ನವೇ "ಅಡ್ವಾನ್ಸ್ ಟಿಪ್ ನೀಡಿ, ಬೇಗ ರೈಡ್ ಪಡೆಯಿರಿ" ಎಂಬಂತಹ ಆಯ್ಕೆಗಳನ್ನು ಗ್ರಾಹಕರಿಗೆ ತೋರಿಸುತ್ತಿದ್ದವು. ಇದರಿಂದಾಗಿ ಗ್ರಾಹಕರು ಹೆಚ್ಚುವರಿ ಹಣ ನೀಡದಿದ್ದರೆ ರೈಡ್ ಸಿಗುವುದಿಲ್ಲ ಅಥವಾ ಚಾಲಕರು ರೈಡ್ ಕ್ಯಾನ್ಸಲ್ ಮಾಡುತ್ತಾರೆ ಎಂಬ ಭಯದ ವಾತಾವರಣ ಸೃಷ್ಟಿಯಾಗಿತ್ತು. ಕೇಂದ್ರ ಗ್ರಾಹಕ ಸಂರಕ್ಷಣಾ ಪ್ರಾಧಿಕಾರ (CCPA) ಮತ್ತು ಗ್ರಾಹಕ ವ್ಯವಹಾರಗಳ ಸಚಿವಾಲಯವು ಇದನ್ನು ತೀವ್ರವಾಗಿ ಖಂಡಿಸಿವೆ.

ಟಿಪ್ ನೀಡುವ ಆಯ್ಕೆ ನಿಷೇಧಿಸಿ

ಇದರಂತೆ ಪ್ರಯಾಣವನ್ನು ಚಾಲಕ ಸ್ವೀಕರಿಸುವ ಮೊದಲು, ಪ್ರಯಾಣ ಆರಂಭಕ್ಕೂ ಮುನ್ನ ಅಥವಾ ಪ್ರಯಾಣದ ಮಧ್ಯೆ ಟಿಪ್‌ ನೀಡುವ ಆಯ್ಕೆಯನ್ನು ಆ್ಯಪ್‌ಗಳಲ್ಲಿ ತೋರಿಸುವುದನ್ನು ಸಂಪೂರ್ಣವಾಗಿ ನಿಷೇಧಿಸಲಾಗಿದೆ. ಪ್ರಯಾಣ ಯಶಸ್ವಿಯಾಗಿ ಪೂರ್ಣಗೊಂಡ ಬಳಿಕ ಮಾತ್ರ ಪ್ರಯಾಣಿಕರಿಗೆ ಟಿಪ್‌ ನೀಡುವ ಆಯ್ಕೆ ಲಭ್ಯವಿರಬೇಕು ಎಂದು ತಿಳಿಸಿದೆ.

ಟಿಪ್‌ ನೀಡಿದರೆ ಬೇಗ ಕ್ಯಾಬ್‌ ದೃಢೀಕರಣವಾಗುತ್ತದೆ, ಕಾಯುವ ಸಮಯ ಕಡಿಮೆಯಾಗುತ್ತದೆ, ಚಾಲಕ ಶೀಘ್ರವಾಗಿ ನಿಯೋಜನೆಯಾಗುತ್ತಾರೆ ಅಥವಾ ಉತ್ತಮ ಸೇವೆ ದೊರೆಯುತ್ತದೆ ಎಂಬ ಭಾವನೆ ಮೂಡಿಸುವ ಆ್ಯಪ್‌ ವಿನ್ಯಾಸಗಳು ಗ್ರಾಹಕ ಸಂರಕ್ಷಣಾ ಕಾಯ್ದೆ, 2019ರ ಉಲ್ಲಂಘನೆಯಾಗುತ್ತವೆ.

ಇದಲ್ಲದೆ, ಪ್ರಯಾಣಿಕರು ಸ್ವಯಂಪ್ರೇರಿತವಾಗಿ ನೀಡುವ ಸಂಪೂರ್ಣ ಟಿಪ್‌ ಮೊತ್ತ ಚಾಲಕನಿಗೆ ನೇರವಾಗಿ ಸೇರಬೇಕು. ಅಗ್ರಿಗೇಟರ್‌ ಸಂಸ್ಥೆಗಳು ಅದರಿಂದ ಯಾವುದೇ ಕಮಿಷನ್‌ ಅಥವಾ ಪ್ಲಾಟ್‌ಫಾರ್ಮ್‌ ಶುಲ್ಕವನ್ನು ಕಡಿತಗೊಳಿಸುವಂತಿಲ್ಲ.

ಮೋಟಾರು ವಾಹನ ಕಾಯ್ದೆ, 1988ರ ಅಡಿಯಲ್ಲಿ ಕಾರ್ಯನಿರ್ವಹಿಸುತ್ತಿರುವ ಎಲ್ಲಾ ರೈಡ್‌ ಅಗ್ರಿಗೇಟರ್‌ಗಳು ತಮ್ಮ ಡಿಜಿಟಲ್‌ ಪ್ಲಾಟ್‌ಫಾರ್ಮ್‌ಗಳನ್ನು ತಕ್ಷಣ ಪರಿಶೀಲಿಸಿ, ನಿಯಮಗಳಿಗೆ ವಿರುದ್ಧವಾಗಿರುವ ಎಲ್ಲಾ ಬಳಕೆದಾರ ಇಂಟರ್‌ಫೇಸ್‌ ವೈಶಿಷ್ಟ್ಯಗಳನ್ನು ತೆಗೆದುಹಾಕುವಂತೆ ಸೂಚಿಸಲಾಗಿದೆ.

ಟಿಪ್ ಎಂಬುದು ಚಾಲಕರ ಉತ್ತಮ ಸೇವೆಗೆ ಕೊಡುವ ಗೌರವ ಧನವೇ ಹೊರತು, ರೈಡ್ ಬುಕ್ ಮಾಡಲು ಕೊಡುವ ಲಂಚದಂತಾಗಬಾರದು ಎಂದು ಸರ್ಕಾರ ಎಚ್ಚರಿಸಿದೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

‘ನನ್ನನ್ನು ಅಸ್ಪೃಶ್ಯನಂತೆ ಕಂಡು ಶುದ್ಧೀಕರಣ ಮಾಡಿದರು’: ಬಿಜೆಪಿ ವಿರುದ್ಧ Mallikarjun Kharge ಕಿಡಿ, ನಡ್ಡಾ ಪ್ರತಿಕ್ರಿಯೆ

ಕೆಂಪುಕೋಟೆ ದಾಳಿ ಹಿಂದೆ ಅಲ್-ಖೈದಾ ಕೈವಾಡ; ವಿಶ್ವಸಂಸ್ಥೆಯ ಭದ್ರತಾ ಮಂಡಳಿ ವರದಿಯಲ್ಲಿ ಅಧಿಕೃತ ಉಲ್ಲೇಖ...!

Karnataka Bandh-ಮಂಡ್ಯ, ಮೈಸೂರು ಭಾಗಗಳಲ್ಲಿ ಉತ್ತಮ ಸ್ಪಂದನೆ: ಬೆಂಗಳೂರು ಸೇರಿ ರಾಜ್ಯದ ಇತರ ಜಿಲ್ಲೆಗಳಲ್ಲಿ ನೀರಸ ಪ್ರತಿಕ್ರಿಯೆ-Video

ಗದ್ದಲದ ನಡುವೆಯೇ ಸಂಸತ್ ಮುಂಗಾರು ಅಧಿವೇಶನಕ್ಕೆ ತೆರೆ; Lok Sabha-Rajya Sabha ಕಲಾಪ ಅನಿರ್ದಿಷ್ಟಾವಧಿಗೆ ಮುಂದೂಡಿಕೆ

'ಯುವಕನಾಗಿ ಭಾರತ ತಂಡಕ್ಕೆ ಬಂದಾಗ'; ಗೌತಮ್ ಗಂಭೀರ್ 'Bohot Badhiya Banda' ಆದರೆ...: ಹರ್ಭಜನ್ ಸಿಂಗ್