ದಂಪತಿ ಮೇಲೆ ನಾಯಿ ದಾಳಿ 
ದೇಶ

ಮನೆ ನೋಡಲು ಹೋಗಿದ್ದವರ ಮೇಲೆ ಪಿಟ್ ಬುಲ್ ನಾಯಿ ದಾಳಿ: ತಪ್ಪಿಸಿಕೊಳ್ಳಲು ಪರದಾಡಿದ ದಂಪತಿಗೆ ಗಂಭೀರ ಗಾಯ; ವಿಡಿಯೋ ವೈರಲ್

ನಾಯಿ ಆಕೆಯ ತೋಳು, ಕಾಲು ಕಚ್ಚಿ ಗಾಯ ಮಾಡಿದೆ. ದೇಹದ ಹಲವು ಭಾಗಗಳಿಗೆ ತೀವ್ರವಾಗಿ ಕಚ್ಚಿದ್ದು, ಆಳವಾದ ಗಾಯಗಳಾಗಿವೆ. ಸದ್ಯ ಶಿಫಾಲಿ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.

ಪಂಜಾಬ್: ಬ್ರೋಕರ್ ಜೊತೆ ಮನೆ ನೋಡಲು ಹೋಗಿದ್ದ ದಂಪತಿಗಳ ಮೇಲೆ ಪಿಟ್‌ಬುಲ್ ನಾಯಿ ಏಕಾಏಕಿ ದಾಳಿ ಮಾಡಿದ್ದರಿಂದ ಇಬ್ಬರು ತೀವ್ರವಾಗಿ ಗಾಯಗೊಂಡಿರುವ ಘಟನೆ ಪಂಜಾಬ್‌ನ ಪಟಿಯಾಲದ ಘುಮನ್ ನಗರದಲ್ಲಿ ನಡೆದಿದೆ.

ಮಂಗಳವಾರ ಸಂಜೆ ಅಂಕಿತ್ ಸಭರ್ವಾಲ್ ಹಾಗೂ ಅವರ ಪತ್ನಿ ಶಿಫಾಲಿ ಬಾಡಿಗೆ ಮನೆ ನೋಡಲು ಮನೆ ಬ್ರೋಕರ್‌ ಜೊತೆ ಘುಮನ್ ನಗರಕ್ಕೆ ತೆರಳಿದ್ದಾರೆ. ಈ ವೇಳೆ ಮನೆಯ ಗೇಟ್ ತೆರೆಯುತ್ತಿದ್ದಂತೆ ಪಿಟ್‌ಬುಲ್ ನಾಯಿ ಏಕಾಏಕಿ ಹೊರಗೆ ಬಂದು ಶಿಫಾಲಿ ಮೇಲೆ ದಾಳಿ ಮಾಡಿದೆ.

ನಾಯಿ ಆಕೆಯ ತೋಳು, ಕಾಲು ಕಚ್ಚಿ ಗಾಯ ಮಾಡಿದೆ. ದೇಹದ ಹಲವು ಭಾಗಗಳಿಗೆ ತೀವ್ರವಾಗಿ ಕಚ್ಚಿದ್ದು, ಆಳವಾದ ಗಾಯಗಳಾಗಿವೆ. ಸದ್ಯ ಶಿಫಾಲಿ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಪತ್ನಿಯನ್ನು ರಕ್ಷಿಸಲು ಮುಂದಾದ ಅಂಕಿತ್‌ಗೂ ನಾಯಿ ದಾಳಿ ಮಾಡಿದೆ. ಅವರ ಕಾಲು ಮತ್ತು ಬೆನ್ನಿನ ಭಾಗದಲ್ಲಿ ಗಾಯಗಳಾಗಿವೆ.

ದಂಪತಿ ನಾಯಿಯಿಂದ ತಪ್ಪಿಸಿಕೊಳ್ಳಲು ಪರದಾಡುತ್ತಿರುವ ವಿಡಿಯೋ ಸೋಷಿಯಲ್‌ ಮೀಡಿಯಾದಲ್ಲಿ ವೈರಲ್‌ ಆಗಿದೆ. ದಾಳಿ ಮುಂದುವರೆಸಿದ್ದ ವೇಳೆ ನಾಲ್ಕು ಜನ ಸ್ಥಳೀಯರು ಕೋಲುಗಳನ್ನು ಹಿಡಿದು ನಾಯಿಯನ್ನು ಹೊಡೆದು ಬೆದರಿಸಿ, ತಡೆಯಲು ಪ್ರಯತ್ನಿಸಿದ್ದಾರೆ. ಕೆಲವು ಸಮಯದ ನಂತರ ಹರಸಾಹಸಪಟ್ಟು ದಂಪತಿಯನ್ನು ರಕ್ಷಿಸಿದ್ದಾರೆ. ದಾಳಿಯ ಭಯಾನಕ CCTV ದೃಶ್ಯಗಳು ಇದೀಗ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿವೆ.

Karnataka Bandh-ಮಂಡ್ಯ, ಮೈಸೂರು ಭಾಗಗಳಲ್ಲಿ ಉತ್ತಮ ಸ್ಪಂದನೆ: ಬೆಂಗಳೂರು ಸೇರಿ ರಾಜ್ಯದ ಇತರ ಜಿಲ್ಲೆಗಳಲ್ಲಿ ನೀರಸ ಪ್ರತಿಕ್ರಿಯೆ-Video

ಬಂಗಾಳ ಕೊಲ್ಲಿಯಲ್ಲಿ ವಾಯುಭಾರ ಕುಸಿತ: ಒಡಿಶಾದಲ್ಲಿ ಭಾರಿ ಮಳೆ, ಇಡೀ ರಾಜ್ಯಕ್ಕೆ 'Red Alert': ಹವಾಮಾನ ಇಲಾಖೆ

‘Hormuz ಮೇಲೆ ಅಮೆರಿಕಾ ಸಂಪೂರ್ಣ ಹಿಡಿತ’ ಎಂದ Trump; ಹೇಳಿಕೆಯಿಂದ ‘ವಾಸ್ತವ ಬದಲಾಗಲ್ಲ’, ಷರತ್ತುಗಳ ಒಪ್ಪದ ಹೊರತು ಜಲಸಂಧಿ ತೆರೆಯಲ್ಲ; Iran ತಿರುಗೇಟು..!

AI ಗುಳ್ಳೆ ಯಾವಾಗ ಸಿಡಿಯುತ್ತೆ? (ಹಣಕ್ಲಾಸು)

ವಿಧಾನಸೌಧ-ವಿಕಾಸಸೌಧ, ಆರೋಗ್ಯಸೌಧದಲ್ಲೇ ಇಲ್ಲ ಆರೋಗ್ಯ! ಕ್ಯಾಂಟೀನ್‌ಗಳಲ್ಲಿ ಜಿರಳೆ, ಅವಧಿ ಮೀರಿದ ಆಹಾರ ಪತ್ತೆ; ಹೊರಗೆ ಊಟ ಮಾಡುವ ಮುನ್ನ ಇದನ್ನೊಮ್ಮೆ ನೋಡಿ..!