ಕೃತಿ, ರಾಹುಲ್ ಮತ್ತು ಕಂಗನಾ 
ದೇಶ

ಕೃತಿ -ಕಂಗನಾ ಜಗಳ: ಮಹಿಳೆ ಏನು ಧರಿಸಬೇಕು ಎಂಬುದು ಆಕೆಯ ಆಯ್ಕೆ; ಅಖಾಡಕ್ಕಿಳಿದ ರಾಹುಲ್ ಗಾಂಧಿ!

‘ಮಹಿಳೆ ಏನು ಧರಿಸುತ್ತಾಳೆ, ಏನು ಮಾಡುತ್ತಾಳೆ ಮತ್ತು ಎಲ್ಲಿಗೆ ಹೋಗುತ್ತಾಳೆ ಎಂಬುದು ಆಕೆಯ ಆಯ್ಕೆ. ಮಹಿಳೆಯರನ್ನು ಟ್ರೋಲ್‌ ಮಾಡುವುದನ್ನು ನಿಲ್ಲಿಸಿ’ ಎಂದು ಹೇಳಿದ್ದಾರೆ

ನವದೆಹಲಿ: ರಕ್ಷಾಬಂಧನದ ಜಾಹೀರಾತಿನಲ್ಲಿ ನಟಿ ಕೃತಿ ಸನೂನ್‌ ಧರಿಸಿದ್ದ ಉಡುಪಿನ ಕುರಿತು ವ್ಯಕ್ತವಾಗುತ್ತಿರುವ ಟೀಕೆಗೆ ಕಾಂಗ್ರೆಸ್‌ ನಾಯಕ ರಾಹುಲ್‌ ಗಾಂಧಿ ತಿರುಗೇಟು ನೀಡಿದ್ದು, ತಮ್ಮ ಜೀವನದ ಆಯ್ಕೆಗಳನ್ನು ಸ್ವತಂತ್ರವಾಗಿ ನಿರ್ಧರಿಸುವ ಹಕ್ಕನ್ನು ಮಹಿಳೆಯರು ಹೊಂದಿದ್ದಾರೆ ಎಂದು ಹೇಳಿದ್ದಾರೆ.

ಕೃತಿ ಸನೂನ್‌ ಅವರ ಇನ್‌ಸ್ಟಾಗ್ರಾಂ ಸ್ಟೋರಿಯನ್ನು ತಮ್ಮ ಖಾತೆಯಲ್ಲಿ ಹಂಚಿಕೊಂಡಿರುವ ರಾಹುಲ್‌ ಗಾಂಧಿ, ‘ಮಹಿಳೆ ಏನು ಧರಿಸುತ್ತಾಳೆ, ಏನು ಮಾಡುತ್ತಾಳೆ ಮತ್ತು ಎಲ್ಲಿಗೆ ಹೋಗುತ್ತಾಳೆ ಎಂಬುದು ಆಕೆಯ ಆಯ್ಕೆ. ಮಹಿಳೆಯರನ್ನು ಟ್ರೋಲ್‌ ಮಾಡುವುದನ್ನು ನಿಲ್ಲಿಸಿ’ ಎಂದು ಹೇಳಿದ್ದಾರೆ.

ಅಲ್ಲದೆ, ತಮ್ಮ ಪೋಸ್ಟ್‌ನಲ್ಲಿ ‘ಸ್ಮ್ಯಾಶ್‌ ದಿ ಪಿತೃಪ್ರಧಾನ’ (ಪುರುಷ ಪ್ರಧಾನ ವ್ಯವಸ್ಥೆಯನ್ನು ಧ್ವಂಸಗೊಳಿಸಿ) ಎಂಬ ಹ್ಯಾಶ್‌ಟ್ಯಾಗ್‌ ಅನ್ನೂ ಬಳಸಿದ್ದಾರೆ.

ಇತ್ತೀಚೆಗೆ ಪ್ರಸಾರವಾದ ಜೀವಾ ಜ್ಯುವೆಲ್ಲರಿಯ ರಕ್ಷಾಬಂಧನ ಜಾಹೀರಾತಿನಲ್ಲಿ ಕೃತಿ ಸನೂನ್‌ ಅವರು ಧರಿಸಿದ್ದ ಉಡುಪು ಸಾಮಾಜಿಕ ಮಾಧ್ಯಮದಲ್ಲಿ ಚರ್ಚೆಗೆ ಗ್ರಾಸವಾಗಿತ್ತು. ಜಾಹೀರಾತಿನಲ್ಲಿ ಅವರು ತಮ್ಮ ಆನ್‌-ಸ್ಕ್ರೀನ್‌ ಸಹೋದರನಿಗೆ ರಾಖಿ ಕಟ್ಟುವ ದೃಶ್ಯದಲ್ಲಿ ಕಾಣಿಸಿಕೊಂಡಿದ್ದರು.

ರಾಹುಲ್ ಗಾಂಧಿ ಹಂಚಿಕೊಂಡಿರುವ ಫೋಟೋ

ನಿನ್ನೆ ನಟಿ, ಬಿಜೆಪಿ ಸಂಸದಾ ಕಂಗನಾ ರಣಾವತ್ ಅವರು ಬಿಕಿನಿಯಲ್ಲಿಯೇ ರಾಖಿ ಕಟ್ಟುವ ಅವಶ್ಯಕತೆಯೆನಿತ್ತು? ಉದ್ದೇಶಪೂರ್ವಕವಾಗಿ ಅಸಹತ್ಯ ಮಾಡಿದಂತಿದೆ ಎಂದು ಕಿಡಿಕಾರಿದ್ದರು. ಇದರ ಬೆನ್ನಲ್ಲೇ ನಟಿ ಕೃತಿ ಪ್ರತಿಕ್ರಿಯಿಸಿ, ಸಂಸ್ಕೃತಿ, ಸಂಪ್ರದಾಯ ಎನ್ನುವುದು ಧರಿಸುವ ಬಟ್ಟೆಯಲ್ಲಲ್ಲ. ಬದಲಿಗೆ ಆಕೆಯ ಹೃದಯದಲ್ಲಿದೆ ಎಂದು ಟಾಂಗ್ ನೀಡಿದ್ದರು. ಇದೀಗ ನಟಿ ಕೃತಿಗೆ ರಾಗಾ ಸಾಥ್ ನೀಡಿದ್ದು, ಇನ್‌ಸ್ಟಾದಲ್ಲಿ ಸ್ಟೋರಿ ಶೇರ್ ಮಾಡಿದ್ದಾರೆ.

ಹಬ್ಬದ ನಿಜವಾದ ಅರ್ಥ ನಾವು ಹಾಕುವ ಬಟ್ಟೆಗಳಲ್ಲಿಲ್ಲ, ಬದಲಾಗಿ ಸಂಪ್ರದಾಯಗಳ ಬಗ್ಗೆ ನಾವು ಹೊಂದಿರುವ ಭಾವನೆಗಳಲ್ಲಿದೆ. ರಕ್ಷಾ ಬಂಧನವೆಂಬುದು ರಕ್ಷಣೆಗಾಗಿರುವ ಒಂದು ಬಂಧ ಎಂದರ್ಥ. ನಾನು ಮತ್ತು ನನ್ನ ಸಹೋದರಿ ಪರಸ್ಪರ ರಾಖಿ ಕಟ್ಟಿಕೊಳ್ಳುತ್ತೇವೆ.

ಒಬ್ಬ ಸಹೋದರ ಮಾಡುವುದಕ್ಕಿಂತ ಹೆಚ್ಚಾಗಿ ನಾವು ಒಬ್ಬರನ್ನೊಬ್ಬರು ರಕ್ಷಿಸಬಲ್ಲೆವು. ನಾವಿಬ್ಬರು ಕೂಡ ಪರಸ್ಪರ ಆರೋಗ್ಯ, ಸಂತೋಷ ಮತ್ತು ದೀರ್ಘಾಯುಷ್ಯಕ್ಕಾಗಿ ಪ್ರಾರ್ಥಿಸುತ್ತೇವೆ. ನಮ್ಮ ಈ ಪ್ರಾರ್ಥನೆ ಮತ್ತು ಭರವಸೆ ಕೇವಲ ನಮಗಲ್ಲ, ನಮ್ಮ ನಾಯಿಗಳಿಗೂ ಅನ್ವಯಿಸುತ್ತದೆ. ಯಾಕೆಂದರೆ, ಅವುಗಳು ಕೂಡ ನಮ್ಮ ಕುಟುಂಬದ ಸದಸ್ಯರೇ ಎಂದು ಕೃತಿ ಬರೆದುಕೊಂಡಿದ್ದರು.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

ಬಿಜೆಪಿ ಸಂಸದೀಯ ಮಂಡಳಿಯಲ್ಲಿ ಮಹತ್ತರ ಬದಲಾವಣೆ ಸಾಧ್ಯತೆ; ನಾಲ್ವರು ಮುಖ್ಯಮಂತ್ರಿಗಳಿಗೆ ಸ್ಥಾನ?

ಇರಾನ್‌ ತೈಲ ವಹಿವಾಟಿಗೆ ಅಮೆರಿಕಾ ಬ್ರೇಕ್: ಭಾರತದ 4 ಕಂಪನಿಗಳು ಕಪ್ಪುಪಟ್ಟಿಗೆ, 3 ಪ್ರಜೆಗಳ ಮೇಲೂ ನಿರ್ಬಂಧ..!

"ಮದುವೆ ಅಂದ್ರೆ ಗುಲಾಮಗಿರಿಯಲ್ಲ, ಮನೆಗೆಲಸ ಮಾಡು-ಅತ್ತೆ-ಮಾವನ ನೋಡ್ಕೋ ಅನ್ನೋಕೆ ಗಂಡನಿಗೆ ಹಕ್ಕಿಲ್ಲ": ಹೈಕೋರ್ಟ್ ಮಹತ್ವದ ತೀರ್ಪು..!

ಬಿಡದಿ ಟೌನ್‌ಶಿಪ್‌ ಯೋಜನೆ: ರೈತರ ಭೂಮಿ ಕಸಿಯಲ್ಲ, denotification ಮಾಡಲ್ಲ- ಸಿಎಂ ಡಿಕೆ. ಶಿವಕುಮಾರ್ ಸ್ಪಷ್ಟನೆ

Operation Sindoor; Kirana Hills ಪರಮಾಣು ನೆಲೆಗೆ ಅಪ್ಪಳಿಸಿದ ಭಾರತದ ಡ್ರೋನ್? ಬೆಚ್ಚಿಬಿದ್ದ ಪಾಕಿಸ್ತಾನ..! Indian Army ಹೇಳಿದ್ದೇನು?