ಸಾಂದರ್ಭಿಕ ಚಿತ್ರ 
ದೇಶ

ಆರೋಗ್ಯ ತಪಾಸಣೆ ವೇಳೆ 9ನೇ ತರಗತಿ ವಿದ್ಯಾರ್ಥಿನಿ ಗರ್ಭಿಣಿ; ಮನೆಗೆ ಪಾಠ ಮಾಡಲು ಬಂದು ಹೀನ ಕೃತ್ಯ ಎಸಗಿದ ಶಿಕ್ಷಕನ ಬಂಧನ!

ಈ ವಾರದ ಆರಂಭದಲ್ಲಿ ಶಾಲೆಯಲ್ಲಿ ನಡೆಸಲಾದ ನಿಯಮಿತ ವೈದ್ಯಕೀಯ ಪರೀಕ್ಷೆಯಲ್ಲಿ ಬಾಲಕಿ ಐದು ತಿಂಗಳ ಗರ್ಭಿಣಿಯಾಗಿರುವು ತಿಳಿದುಬಂದಿದೆ.

ಬರಿಪಾದ: ಒಡಿಶಾದ ಮಯೂರ್‌ಭಂಜ್ ಜಿಲ್ಲೆಯಲ್ಲಿ ಶುಕ್ರವಾರ ವಸತಿ ಶಾಲೆಯ 9ನೇ ತರಗತಿ ವಿದ್ಯಾರ್ಥಿನಿಯ ಮೇಲೆ ಅತ್ಯಾಚಾರ ಎಸಗಿ, ಗರ್ಭಿಣಿ ಮಾಡಿದ ಆರೋಪದ ಮೇಲೆ ಖಾಸಗಿ ಶಿಕ್ಷಕರೊಬ್ಬರನ್ನು ಬಂಧಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.

ಈ ವಾರದ ಆರಂಭದಲ್ಲಿ ಶಾಲೆಯಲ್ಲಿ ನಡೆಸಲಾದ ನಿಯಮಿತ ವೈದ್ಯಕೀಯ ಪರೀಕ್ಷೆಯಲ್ಲಿ ಬಾಲಕಿ ಐದು ತಿಂಗಳ ಗರ್ಭಿಣಿಯಾಗಿರುವು ತಿಳಿದುಬಂದಿದೆ. ನಂತರ ಆಕೆಯ ಪೋಷಕರಿಗೆ ಈ ವಿಷಯವನ್ನು ತಿಳಿಸಲಾಯಿತು ಎಂದು ಅವರು ಹೇಳಿದ್ದಾರೆ.

ಪೋಷಕರು ಬಾಲಕಿಯನ್ನು ವಿಚಾರಿಸಿದಾಗ, ಬೇಸಿಗೆ ರಜೆಯಲ್ಲಿ ಮನೆಗೆ ಪಾಠ ಮಾಡಲು ಬರುತ್ತಿದ್ದ ಶಿಕ್ಷಕನೇ ತನ್ನ ಮೇಲೆ ಲೈಂಗಿಕ ದೌರ್ಜನ್ಯ ಎಸಗಿದ್ದಾನೆ ಮತ್ತು ವಿಷಯ ಯಾರಿಗೂ ಹೇಳದಂತೆ ಬೆದರಿಕೆ ಹಾಕಿರುವುದಾಗಿ ತಿಳಿಸಿದ್ದಾಳೆ. ನಂತರ ಪೋಷಕರು ಶಿಕ್ಷಕನ ವಿರುದ್ಧ ದೂರು ನೀಡಿದ್ದಾರೆ ಎಂದು ತನಿಖಾ ಅಧಿಕಾರಿ ತಿಳಿಸಿದ್ದಾರೆ.

ಗುರುವಾರ ದಾಖಲಿಸಿದ ದೂರಿನಲ್ಲಿ, ಬೇಸಿಗೆ ರಜೆಯಲ್ಲಿ ಮಗಳಿಗೆ ಮನೆ ಪಾಠ ಮಾಡಲು ಬರುತ್ತಿದ್ದ ಶಿಕ್ಷಕ ತಮ್ಮ ಮಗಳ ಮೇಲೆ ಅತ್ಯಾಚಾರ ಎಸಗಿದ್ದಾನೆ. ಮನೆಯಲ್ಲಿ ಅವಳು ಒಬ್ಬಂಟಿಯಾಗಿರುವಾಗ ಆಕೆಯನ್ನು ಬಳಸಿಕೊಂಡಿದ್ದಾನೆ. ಈ ಬಗ್ಗೆ ಯಾರಿಗಾದರೂ ಹೇಳಿದರೆ ಭೀಕರ ಪರಿಣಾಮ ಎದುರಿಸಬೇಕಾಗುತ್ತದೆ ಎಂದು ಬೆದರಿಕೆ ಹಾಕಿದ್ದಾನೆ ಎಂದು ಪೋಷಕರು ತಿಳಿಸಿದ್ದಾರೆ.

ದೂರಿನ ಆಧಾರದ ಮೇಲೆ ಎಫ್‌ಐಆರ್ ದಾಖಲಿಸಲಾಗಿದ್ದು, ಶಿಕ್ಷಕನನ್ನು ಬಂಧಿಸಲಾಗಿದೆ ಎಂದು ಅಧಿಕಾರಿ ಹೇಳಿದ್ದಾರೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

ವೆನೆಜುವೆಲಾ ಜತೆ ‘ವಿಶ್ವದ ಅತಿದೊಡ್ಡ ತೈಲ ಒಪ್ಪಂದ’ ; 65 ಬಿಲಿಯನ್ ಬ್ಯಾರೆಲ್ ತೈಲ ನಿಕ್ಷೇಪದ ಮೇಲೆ ಅಮೆರಿಕದ ನಿಯಂತ್ರಣ

ನೇಪಾಳ ಪ್ರವಾಹ: ಇನ್ಫೋಸಿಸ್ ಪಬ್ಲಿಕ್ ಸರ್ವಿಸಸ್ CEO ನಾಪತ್ತೆ

‘ವೈಫ್ ಮೆಟೀರಿಯಲ್’: Toxic ನಟಿ ರುಕ್ಮಿಣಿ ವಸಂತ್ ಪರ ನಿಂತ ಗಾಯಕಿ ಚಿನ್ಮಯಿ, ಟ್ರೋಲಿಗರಿಗೆ Belt Treatment

ಬರಗಾಲ ಇದ್ದರೂ ಅದ್ದೂರಿ ದಸರಾ ಏಕೆ? ವಿಧಾನಸೌಧ ಕೂಡ ನಮ್ಮಪ್ಪನ ಆಸ್ತಿ ಎಂದು ಮಾರಿ ಬಿಡ್ತಾರೆ: ಎಚ್.ಡಿ ಕುಮಾರಸ್ವಾಮಿ

'ಮಹಾರಾಜರ ಕಾಲದಲ್ಲಿ ಹೊಗಳು ಭಟ್ಟರು ಇರ್ತಿದ್ರು: ನಮ್ಮ ಸರ್ಕಾರಕ್ಕಾಗಿ ಕುಮಾರಣ್ಣನನ್ನು ಇಟ್ಟುಕೊಂಡಿದ್ದೇವೆ; ಹಗರಣ ಸಾಬೀತಾದ್ರೆ ರಾಜಕೀಯ ನಿವೃತ್ತಿ'