ಸಾಂದರ್ಭಿಕ ಚಿತ್ರ 
ದೇಶ

ರಾಜಸ್ಥಾನ: ಇಬ್ಬರು ಬ್ರಿಟಿಷ್ ಪ್ರಜೆಗಳಿಗೆ ಭಾರತ ತೊರೆಯಲು ಸೂಚನೆ; ಕಾರಣ ಏನು ಗೊತ್ತಾ?

ಪೋಸ್ಟರ್‌ಗಳಲ್ಲಿ "ಫ್ಯಾಲೆಸ್ಟೈನ್ ಅನ್ನು ಮುಕ್ತಗೊಳಿಸಿ, ಇಸ್ರೇಲ್ ಅನ್ನು ಬಹಿಷ್ಕರಿಸಿ" ಎಂಬ ಘೋಷಣೆಗಳಿವೆ.

ಜೈಪುರ: ರಾಜಸ್ಥಾನದ ಪುಷ್ಕರ್ ನಲ್ಲಿ, ಗಾಜಾ ಮೇಲೆ ಇಸ್ರೇಲ್ ನಡೆಸಿದ ಜನಾಂಗೀಯ ದಾಳಿಗೆ ಸಂಬಂಧಿಸಿದ ಘೋಷಣೆಗಳನ್ನು ಹೊಂದಿರುವ ಪೋಸ್ಟರ್‌ಗಳನ್ನು ಅಂಟಿಸಿದ್ದಕ್ಕಾಗಿ ರಾಜ್ಯ ಪೊಲೀಸರ ಅಪರಾಧ ತನಿಖಾ ಇಲಾಖೆ(ಸಿಐಡಿ) ಇಬ್ಬರು ಬ್ರಿಟಿಷ್ ಪ್ರಜೆಗಳಿಗೆ ಭಾರತವನ್ನು ತೊರೆಯುವಂತೆ ನೋಟಿಸ್ ನೀಡಿದೆ ಎಂದು ಪಿಟಿಐ ವರದಿ ಮಾಡಿದೆ.

ಪೋಸ್ಟರ್‌ಗಳಲ್ಲಿ "ಫ್ಯಾಲೆಸ್ಟೈನ್ ಅನ್ನು ಮುಕ್ತಗೊಳಿಸಿ, ಇಸ್ರೇಲ್ ಅನ್ನು ಬಹಿಷ್ಕರಿಸಿ" ಎಂಬ ಘೋಷಣೆಗಳಿವೆ.

ಪೊಲೀಸ್ ಅಧಿಕಾರಿಗಳನ್ನು ಉಲ್ಲೇಖಿಸಿ ಪಿಟಿಐ ಮಾಡಿರುವ ವರದಿಯ ಪ್ರಕಾರ, ಇಬ್ಬರು ಬ್ರಿಟಿಷ್ ಪ್ರಜೆಗಳು ಭಾರತದಲ್ಲಿ ಪ್ರವಾಸಿ ವೀಸಾದಲ್ಲಿದ್ದಾರೆ.

ಬ್ರಿಟಿಷ್ ಪ್ರಜೆಗಳ ಈ ಕ್ರಮ ವೀಸಾ ಷರತ್ತುಗಳ ಉಲ್ಲಂಘನೆಯಾಗಿದ್ದು, ಇದು ರಾಜಕೀಯ ಚಟುವಟಿಕೆಗಳಲ್ಲಿ ತೊಡಗಿಸಿಕೊಳ್ಳುವುದನ್ನು ನಿಷೇಧಿಸುತ್ತದೆ ಎಂದು ಸಿಐಡಿ ಹೇಳಿಕೊಂಡಿದೆ.

ಭಾರತದಲ್ಲಿ ಇದ್ದುಕೊಂಡು ಇತರ ದೇಶಗಳಿಗೆ ಅಗೌರವ ತೋರಿಸುವ ಚಟುವಟಿಕೆಗಳಲ್ಲಿ ತೊಡಗಿಸಿಕೊಳ್ಳುವುದು ವೀಸಾ ಮಾನದಂಡಗಳನ್ನು ಉಲ್ಲಂಘಿಸುತ್ತದೆ ಎಂದು ಹೆಚ್ಚುವರಿ ಪೊಲೀಸ್ ವರಿಷ್ಠಾಧಿಕಾರಿ(ಸಿಐಡಿ) ರಾಜೇಶ್ ಮೀನಾ ಹೇಳಿದ್ದಾರೆ.

ವಲಸೆ ಮತ್ತು ವಿದೇಶಿಯರ ಕಾಯ್ದೆ, 2025 ರ ನಿಬಂಧನೆಗಳ ಅಡಿಯಲ್ಲಿ ನೋಟಿಸ್‌ ಹೊರಡಿಸಲಾಗಿದ್ದು, ಇಬ್ಬರಿಗೂ ದೇಶ ತೊರೆಯುವಂತೆ ನಿರ್ದೇಶಿಸಲಾಗಿದೆ ಎಂದು ಅವರು ತಿಳಿಸಿದ್ದಾರೆ.

ಸಿಐಡಿ ಮಧ್ಯ ಪ್ರವೇಶದ ನಂತರ, ಸಾರ್ವಜನಿಕ ಸ್ಥಳಗಳಿಂದ ಆ ಪೋಸ್ಟರ್‌ಗಳನ್ನು ತೆಗೆದುಹಾಕಲಾಯಿತು ಮತ್ತು ವಿದೇಶಿ ಪ್ರವಾಸಿಗರು ಹೆಚ್ಚಾಗಿ ಭೇಟಿ ನೀಡುವ ಪ್ರದೇಶಗಳಲ್ಲಿ ಪೊಲೀಸರು ತಪಾಸಣೆ ನಡೆಸಿದರು.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

ವಿಬಿ-ಜಿ ರಾಮ್ ಜಿ ರದ್ದುಗೊಳಿಸಿ, ‘ಮನರೇಗಾ’ ಮರುಜಾರಿಗೆ ವಿಧಾನಸಭೆಯಲ್ಲಿ ನಿರ್ಣಯ ಮಂಡನೆ

ಪ್ರಧಾನಿ ಮೋದಿ ವಿರುದ್ಧ 'ಅವಹೇಳನಕಾರಿ' ಹೇಳಿಕೆ: ವಿಧಾನ ಪರಿಷತ್‌ನಲ್ಲಿ ಕೋಲಾಹಲ, ಕಾಂಗ್ರೆಸ್ ಎಂಎಲ್‌ಸಿ ವಿರುದ್ಧ ಬಿಜೆಪಿ ಕಿಡಿ!

ಉತ್ತರ ಕನ್ನಡ: ಗುರೂಜಿ ಜೊತೆ ಮಹಿಳೆ ಅಕ್ರಮ ಸಂಬಂಧ: ದೂರ ನೀಡಿದ್ದ ಹತ್ಯೆ; ಜೋತಿಷಿ ಕಮಲಾಕರ್ ಭಟ್ ಸೇರಿ 7 ಮಂದಿ ಬಂಧನ

Cricket: ಇತಿಹಾಸ ಬರೆದ ಭಾರತ: ಆಸ್ಟ್ರೇಲಿಯಾ-ವೆಸ್ಟ್ ಇಂಡೀಸ್ ಜಂಟಿ ವಿಶ್ವದಾಖಲೆ ಉಡೀಸ್!

ಬೆಳಗಾವಿ: ತಾಯಿ ಜತೆ ಓಡಿ ಹೋಗಿದ್ದವನನ್ನು ಇರಿದು ಕೊಂದ ಮಗ; ಶವದ ಮೇಲೆ ಕಾಲಿಟ್ಟು ಪೊಲೀಸರಿಗೆ ಕರೆ!

SCROLL FOR NEXT