ನಟ ಮೋಹನ್ ಬಾಬು ಬೌನ್ಸರ್ ಗಳಿಂದ ವಿದ್ಯಾರ್ಥಿ ಸಂಘಟನೆ ನಾಯಕರ ಅಪಹರಣ 
ದೇಶ

ದುಬಾರಿ ಕಾಲೇಜು ಶುಲ್ಕ ಪ್ರಶ್ನಿಸಿ ಪ್ರತಿಭಟನೆ: ವಿದ್ಯಾರ್ಥಿ ನಾಯಕರ ಅಪಹರಣ; ನಟ Mohan Babu ವಿರುದ್ಧ ಪ್ರಕರಣ ದಾಖಲು! ಪೊಲೀಸ್ ಸಿನಿಮೀಯ ಚೇಸ್! Video

ವಿದ್ಯಾರ್ಥಿಗಳು ಸರ್ಕಾರ ನಿಗದಿಪಡಿಸಿದ ಶುಲ್ಕದ ಅನುಷ್ಠಾನ ಮಾಡಬೇಕು ಎಂದು ಪ್ರತಿಭಟನೆ ನಡೆಸಿತ್ತಿದ್ದಾರೆ. ವಿವಿಯ ಉನ್ನತ ಶಿಕ್ಷಣ ಮಂಡಳಿಯಿಂದ ವಿದ್ಯಾರ್ಥಿಗಳಿಗೆ ಕಿರುಕುಳ ನೀಡಲಾಗುತ್ತಿದೆ ಎಂದು SFI ನಾಯಕರು ಆರೋಪಿಸಿದ್ದಾರೆ.

ಹೈದರಾಬಾದ್: ಟಾಲಿವುಡ್ ಖ್ಯಾತ ನಟ ಮೋಹನ್ ಬಾಬು ಅವರ ವಿರುದ್ಧ ವಿದ್ಯಾರ್ಥಿ ಸಂಘಟನೆಯ ನಾಯಕರ ಅಪಹರಣ ಮಾಡಿದ ಆರೋಪದಡಿ ಪೊಲೀಸ್ ಪ್ರಕರಣ ದಾಖಲಾಗಿದೆ.

ನಟ ಮೋಹನ್ ಬಾಬು ಮಾಲೀಕತ್ವದ 'ಮೋಹನ್ ಬಾಬು ವಿಶ್ವವಿದ್ಯಾಲಯ'(MBU)ದಲ್ಲಿ ಯಥೇಚ್ಛ ಶುಲ್ಕ ವಿಧಿಸಲಾಗುತ್ತಿದೆ ಎಂದು ಆರೋಪಿಸಿ ವಿದ್ಯಾರ್ಥಿಗಳು ಪ್ರತಿಭಟನೆ ನಡೆಸುತ್ತಿದ್ದು ಈ ಪ್ರತಿಭಟನೆಗೆ ವಿದ್ಯಾರ್ಥಿ ಸಂಘಟನೆಗಳೂ ಸಹ ಕೈ ಜೋಡಿಸಿವೆ.

ತಿರುಪತಿಯಲ್ಲಿರುವ ಮೋಹನ್ ಬಾಬು ವಿಶ್ವವಿದ್ಯಾಲಯದಲ್ಲಿ ವಿದ್ಯಾರ್ಥಿ ಸಂಘಟನೆಗಳು ಕಳೆದ ಕೆಲ ದಿನಗಳಿಂದ ಪ್ರತಿಭಟನೆ ನಡೆಸುತ್ತಿದ್ದು, ಮೋಹನ್ ಬಾಬು ಕಾಲೇಜಿಗೆ ವಿಶ್ವವಿದ್ಯಾಲಯ ಸ್ಥಾನಮಾನ ಸಿಕ್ಕ ಬಳಿಕ ಶುಲ್ಕದಲ್ಲಿ ಗಣನೀಯ ಏರಿಕೆ ಮಾಡಿದ್ದು ಮಾತ್ರವಲ್ಲದೇ ನಿಯಮಗಳನ್ನು ಗಾಳಿಗೆ ತೂರುತ್ತಿದ್ದಾರೆ ಎಂದು ಆರೋಪಿಸಿವೆ.

ಅಂತೆಯೇ ವಿದ್ಯಾರ್ಥಿಗಳು ಸರ್ಕಾರ ನಿಗದಿಪಡಿಸಿದ ಶುಲ್ಕದ ಅನುಷ್ಠಾನ ಮಾಡಬೇಕು ಎಂದು ಪ್ರತಿಭಟನೆ ನಡೆಸಿತ್ತಿದ್ದಾರೆ. ವಿವಿಯ ಉನ್ನತ ಶಿಕ್ಷಣ ಮಂಡಳಿಯಿಂದ ವಿದ್ಯಾರ್ಥಿಗಳಿಗೆ ಕಿರುಕುಳ ನೀಡಲಾಗುತ್ತಿದೆ ಎಂದು SFI ನಾಯಕರು ಆರೋಪಿಸಿದ್ದಾರೆ.

ಮೋಹನ್ ಬಾಬು ಅವರ ಶಿಕ್ಷಣ ಸಂಸ್ಥೆಗಳಲ್ಲಿ ಶುಲ್ಕ ಶೋಷಣೆಯನ್ನು ವಿರೋಧಿಸಿ ವಿದ್ಯಾರ್ಥಿ ಸಂಘಟನೆಗಳು ಪ್ರತಿಭಟನೆ ನಡೆಸಿದ್ದವು. ಅಲ್ಲದೆ ಈ ಸಂಬಂಧ ಜಿಲ್ಲಾಧಿಕಾರಿಗೆ ಮನವಿ ಸಲ್ಲಿಸಲು ಕಲೆಕ್ಟರ್ ಕಚೇರಿಗೆ ತೆರಳುತ್ತಿದ್ದ ವೇಳೆ ಅಪಹರಣ ನಡೆದಿದೆ ಎನ್ನಲಾಗಿದೆ.

ವಿದ್ಯಾರ್ಥಿ ಸಂಘಟನೆ ನಾಯಕರ ಅಪಹರಣ

ಮಂಗಳವಾರ ಬೆಳಿಗ್ಗೆ ವಿವಿ ಆವರಣದಲ್ಲಿ ಧರಣಿ ಕುಳಿತಿದ್ದ 30 ಸ್ಟೂಡೆಂಟ್ ಫೆಡರೇಷನ್ ಆಫ್ ಇಂಡಿಯಾ (SFI) ನಾಯಕರನ್ನು ಮೋಹನ್ ಬಾಬು ಅವರ ಬೌನ್ಸರ್ಗಳು ತಡೆದರು. ಅಲ್ಲದೆ ಸಂಘಟನೆ ನಾಯಕರ ಮೇಲೆ ಹಲ್ಲೆ ಮಾಡಿದರು. ಅವರನ್ನು ಕ್ರೂರವಾಗಿ ನಡೆಸಿಕೊಂಡು ಬಲವಂತವಾಗಿ ವಾಹನಗಳಲ್ಲಿ ತುಂಬಿಸಿಕೊಂಡು ಹೋದರು ಎನ್ನಲಾಗಿದೆ.

ಸಿನಿಮೀಯ ರೀತಿಯ ಚೇಸ್

ಇನ್ನು ಅತ್ತ ವಿದ್ಯಾರ್ಥಿ ಸಂಘಟನೆ ನಾಯಕರ ಅಪಹರಣ ಬೆನ್ನಲ್ಲೇ ವಿಚಾರ ತಿಳಿದ ಪೊಲೀಸರು ಅವರನ್ನು ಬೆನ್ನತ್ತಿದ್ದಾರೆ. ಈ ಕುರಿತ ವಿಡಿಯೋಗಳು ವ್ಯಾಪಕ ವೈರಲ್ ಆಗುತ್ತಿವೆ. ಸಿಪಿಐ(ಎಂ) ನಾಯಕ ಕಂದರ ಪು ಮುರಳಿ ಅವರು ತಕ್ಷಣ ಈ ವಿಷಯವನ್ನು ಜಿಲ್ಲಾ ಎಸ್ಪಿ ಸುಬ್ಬರಾಯುಡು ಅವರ ಗಮನಕ್ಕೆ ತಂದಿದ್ದಾರೆ.

ಎಎಸ್ಪಿ ರವಿ ಮನೋಹರಾಚಾರಿ ನೇತೃತ್ವದ ವಿಶೇಷ ಪೊಲೀಸ್ ತಂಡಗಳು ಅಪಹರಣಕಾರರ ವಾಹನಗಳನ್ನು ಬೆನ್ನಟ್ಟಿದವು. ಅಂತಿಮವಾಗಿ ಪೊಲೀಸರು ನಾರಾಯಣರಪಳ್ಳಿ ಮತ್ತು ಅಕ್ಬರ್ ಬಳಿಯ ಭೀಮವರಂನಲ್ಲಿರುವ ವಾಹನಗಳನ್ನು ತಡೆದು ಅಪಹರಣಕಾರರನ್ನು ವಶಕ್ಕೆ ಪಡೆದು ಅಪಹೃತರನ್ನು ರಕ್ಷಿಸಿದ್ದಾರೆ. ಅಂತೆಯೇ ಅಪಹರಣಕ್ಕೆ ಬಳಸಲಾದ ಎರಡು ವಾಹನಗಳನ್ನು ವಶಪಡಿಸಿಕೊಂಡಿದ್ದಾರೆ.

ಮೋಹನ್ ಬಾಬು ಕುಟುಂಬದ ವಿರುದ್ಧ ಪೊಲೀಸ್ ದೂರು!

ವಿದ್ಯಾರ್ಥಿ ಮುಖಂಡರ ಅಪಹರಣಕ್ಕೆ ಸಂಬಂಧಿಸಿದಂತೆ ತಿರುಚನೂರು ಪೊಲೀಸ್ ಠಾಣೆಯಲ್ಲಿ ಮೋಹನ್ ಬಾಬು ವಿರುದ್ಧ ಪ್ರಕರಣ ದಾಖಲಿಸಲಾಗಿದೆ. ಮೋಹನ್ ಬಾಬು ಮಾತ್ರವಲ್ಲದೇ ಅವರ ಪುತ್ರ ಹಾಗೂ ವಿವಿ ಮುಖ್ಯಸ್ಥ ಪುತ್ರ ಮಂಚು ವಿಷ್ಣು ಮತ್ತು ಅವರ ಪಿಆರ್ ಒ ಸತೀಶ್ ವಿರುದ್ಧವೂ ಪ್ರಕರಣ ದಾಖಲಾಗಿದೆ.

ವಿದ್ಯಾರ್ಥಿ ಸಂಘದ ನಾಯಕರ ದೂರಿನ ಆಧಾರದ ಮೇಲೆ, ಪೊಲೀಸರು ಮೋಹನ್ ಬಾಬು, ಅವರ ಪುತ್ರ ಮಂಚು ವಿಷ್ಣು ಮತ್ತು ಸತೀಶ್ ವಿರುದ್ಧ ಐಪಿಸಿ ಸೆಕ್ಷನ್ 363, 323 ಹಲ್ಲೆ, 506 ಬೆದರಿಕೆ ಮತ್ತು 120 ಬಿ ಕ್ರಿಮಿನಲ್ ಪಿತೂರಿಯೊಂದಿಗೆ ಕೆಂಪು ಅಡಿಯಲ್ಲಿ ಪ್ರಕರಣ ದಾಖಲಿಸಿದ್ದಾರೆ.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

ವಿಬಿ-ಜಿ ರಾಮ್ ಜಿ ವಿರುದ್ಧ ವಿಧಾನಸಭೆಯಲ್ಲಿ ನಿರ್ಣಯ ಅಂಗೀಕಾರ; ಕಲಾಪ ಅನಿರ್ದಿಷ್ಟಾವಧಿಗೆ ಮುಂದೂಡಿಕೆ

'ಜವಾಬ್ದಾರಿಯಿಂದ ಪ್ರಧಾನಿ ಮೋದಿ ನುಣುಚಿಕೊಂಡರು': ಸಂಸತ್ ಹೊರಗೆ ನರವಾಣೆ ಆತ್ಮಚರಿತ್ರೆ ಪ್ರದರ್ಶಿಸಿದ Rahul Gandhi; Video

ಬೆಳಗಾವಿ: ವಂಟಮೂರಿ ಮಹಿಳೆ‌‌ ವಿವಸ್ತ್ರಗೊಳಿಸಿ ಹಲ್ಲೆ ಪ್ರಕರಣ; 12 ಜನರಿಗೆ ಐದು ವರ್ಷ ಜೈಲು ಶಿಕ್ಷೆ

ಪಾರ್ಟಿಗೆ ತರುತ್ತಿದ್ದ ಗ್ಯಾಸ್ ಬಲೂನ್ ಲಿಫ್ಟ್ ನಲ್ಲಿ ಸ್ಫೋಟ, ಇಬ್ಬರಿಗೆ ಗಾಯ: Video Viral

News Wrap 04-02-2026 | ಅಬಕಾರಿ ಇಲಾಖೆ ಹಗರಣ: ಸಚಿವ ಆರ್ ಬಿ ತಿಮ್ಮಾಪುರ ರಾಜೀನಾಮೆಗೆ ಬಿಜೆಪಿ ಪಟ್ಟು; Namma Metro ಪ್ರಯಾಣ ದರ ಶೇ.5 ರಷ್ಟು ಏರಿಕೆಗೆ ನಿರ್ಧಾರ!

SCROLL FOR NEXT