ತಮಿಳುನಾಡು ರೋಡ್ ರೇಡ್ ಪ್ರಕರಣ 
ದೇಶ

Road Rage Shocker: ಕ್ಷುಲ್ಲಕ ಜಗಳ, ಕುಟುಂಬದ ಮೇಲೆ ಕಾರು ಹರಿಸಿದ ಡಿಎಂಕೆ ನಾಯಕನ ಪುತ್ರ, ಓರ್ವ ಸಾವು, ಹಲವರಿಗೆ ಗಾಯ

ರೋಡ್ ರೇಜ್ ಮತ್ತು ಕುಡಿದು ಅಪಾಯಕಾರಿಯಾಗಿ ಕಾರು ಚಾಲನೆ ಮಾಡಿದ ಪ್ರಕರಣದಡಿ ತಮಿಳುನಾಡಿನ ಡಿಎಂಕೆ ನಾಯಕನ 20 ವರ್ಷದ ಮಗ ಆಧಿತ್ಯಾನನ್ನು ಬಂಧಿಸಲಾಗಿದೆ.

ಚೆನ್ನೈ: ತಮಿಳುನಾಡಿನಲ್ಲಿ ಡಿಎಂಕೆ ನಾಯಕನೋರ್ವನ ಮಗ ಕುಡಿದ ಮತ್ತಿನಲ್ಲಿ ಕಾರು ಓಡಿಸಿ ಕುಟುಂಬಕ್ಕೆ ಡಿಕ್ಕಿ ಹೊಡೆದ ಪರಿಣಾಮ ಓರ್ವ ಸಾವನ್ನಪ್ಪಿ ಹಲವರು ಗಾಯಗೊಂಡಿರುವ ಘಟನೆ ಮಂಗಳವಾರ ವರದಿಯಾಗಿದೆ.

ರೋಡ್ ರೇಜ್ ಮತ್ತು ಕುಡಿದು ಅಪಾಯಕಾರಿಯಾಗಿ ಕಾರು ಚಾಲನೆ ಮಾಡಿದ ಪ್ರಕರಣದಡಿ ತಮಿಳುನಾಡಿನ ಡಿಎಂಕೆ ನಾಯಕನ 20 ವರ್ಷದ ಮಗ ಆಧಿತ್ಯಾನನ್ನು ಬಂಧಿಸಲಾಗಿದ್ದು, ಈತ ಒಂದೇ ಕುಟುಂಬದ ನಾಲ್ವರು ಸದಸ್ಯರ ಮೇಲೆ ಕಾರನ್ನು ಡಿಕ್ಕಿ ಹೊಡೆಸಲು ಯತ್ನಿಸಿದ್ದು ಈ ಪೈಕಿ ಓರ್ವ ಸಾವನ್ನಪ್ಪಿದ್ದಾನೆ.

ಪ್ರಮುಖ ಆರೋಪಿ ಆದಿತ್ಯನಲ್ಲದೆ, ಘಟನೆಯ ಸಮಯದಲ್ಲಿ ಕಾರಿನಲ್ಲಿದ್ದ ಆತನ ಸ್ನೇಹಿತರಾದ ರಿತಿಕ್ ಕುಮಾರ್ ಮತ್ತು ಹರೀಶ್ ಅವರನ್ನೂ ಪೊಲೀಸರು ಬಂಧಿಸಿದ್ದಾರೆ. ಮೃತ ಸಂತ್ರಸ್ಥನನ್ನು ಕೃಷ್ಣಗಿರಿ ಜಿಲ್ಲೆಯ ನಿವಾಸಿ ಹಾಗೂ ಸಹಾಯಕ ಕಾರ್ಮಿಕ ನಿರೀಕ್ಷಕ ಶಿವಮೂರ್ತಿ ಎಂದು ಗುರುತಿಸಲಾಗಿದೆ.

ಪೊಲೀಸರ ಪ್ರಕಾರ, ಆದಿತ್ಯ ಕಾರು ಚಾಲನೆ ಮಾಡುತ್ತಿದ್ದಾಗ ಶಿವಮೂರ್ತಿಯ ಮನೆಯ ಹೊರಗಿನ ರಸ್ತೆಯಲ್ಲಿ ನಿಲ್ಲಿಸಿದ್ದ ದ್ವಿಚಕ್ರ ವಾಹನವೊಂದು ಅಡ್ಡಇತ್ತು. ಈ ವೇಳೆ ಆದಿತ್ಯಾ ಹಾರ್ನ್ ಮಾಡಲು ಪ್ರಾರಂಭಿಸಿದರು. ಈ ವೇಳೆ ಶಿವಮೂರ್ತಿ ಮತ್ತು ಅವರ ಕುಟುಂಬ ಸದಸ್ಯರು ದ್ವಿಚಕ್ರ ವಾಹನಗಳನ್ನು ರಸ್ತೆಯಿಂದ ತೆಗೆಯಲು ಬಂದರು.

ಈ ವೇಳೆ ಆದಿತ್ಯಾ ವಾಗ್ವಾದ ಆರಂಭಿಸಿದ್ದಾನೆ. ಈ ವೇಳೆ ಶಿವಮೂರ್ತಿ ಕುಟುಂಬಸ್ಥರೂ ಕೂಡ ವಾಗ್ವಾದ ನಡೆಸಿದ್ದು, ನೋಡ ನೋಡುತ್ತಲೇ ಆದಿತ್ಯಾ ತೀವ್ರ ಆಕ್ರೋಶದಿಂದ ಶಿವಮೂರ್ತಿ ಕುಟುಂಬಸ್ಥರ ಮೇಲೆ ಕಾರು ಹರಿಸಿದ್ದಾನೆ. ಈ ವೇಳೆ ಶಿವಮೂರ್ತಿ ಅವರ ಮಗ ಕಿರುಬಕರನ್, ಸೊಸೆ ಅಂಶವಲ್ಲಿ ಮತ್ತು ಮೊಮ್ಮಗಳು ನಿಲಾನಿ ಮೇಲೆ ಕಾರು ಹರಿಸಲು ಪ್ರಯತ್ನಿದ್ದಾನೆ. ಈ ವೇಳೆ ಶಿವಮೂರ್ತಿ ತೀವ್ರವಾಗಿ ಗಾಯಗೊಂಡು ಸಾವನ್ನಪ್ಪಿದರು.

ಕೊಲೆ ಪ್ರಕರಣ ದಾಖಲು!

ಈ ಸಂಬಂಧ ಆದಿತ್ಯಾ ಮತ್ತು ಆತನ ಸ್ನೇಹಿತರ ವಿರುದ್ಧ ಕೊಲೆ ಪ್ರಕರಣ ದಾಖಲಾಗಿದ್ದು, ಮೂವರು ಆರೋಪಿಗಳನ್ನು ಬಂಧಿಸಲಾಗಿದೆ. ಹೆಚ್ಚಿನ ತನಿಖೆ ನಡೆಯುತ್ತಿದೆ ಎಂದು ಪೊಲೀಸರು ತಿಳಿಸಿದ್ದಾರೆ.

ಆಗಿದ್ದೇನು?

ಘಟನೆ ಕುರಿತು ಸಂತ್ರಸ್ಥ ಶಿವಮೂರ್ತಿ ಅವರ ಮಗ ಕಿರುಬಕರನ್ ತಮ್ಮ ಹೇಳಿಕೆ ನೀಡಿದ್ದು, "ನಮ್ಮ ದ್ವಿಚಕ್ರ ವಾಹನವನ್ನು ನಮ್ಮ ಮನೆಯ ಹೊರಗೆ ನಿಲ್ಲಿಸಲಾಗಿತ್ತು. ಅವರು ಬಂದು ಹಾರ್ನ್ ಮಾಡಿದರು. ನಾವು ನಮ್ಮ ವಾಹನವನ್ನು ಸ್ಥಳಾಂತರಿಸಲು ಪ್ರಯತ್ನಿಸಿದಾಗ, ಅವರು ನಮ್ಮ ದ್ವಿಚಕ್ರ ವಾಹನಕ್ಕೆ ಡಿಕ್ಕಿ ಹೊಡೆದು ಹಾನಿಗೊಳಿಸಿದರು.

ನಮ್ಮ ನೆರೆಹೊರೆಯವರು ಮತ್ತು ನಾನು ಅವರ ನಡವಳಿಕೆಯನ್ನು ಪ್ರಶ್ನಿಸಿದೆವು. ಅವರು ಕುಡಿದ ಮತ್ತಿನಲ್ಲಿದ್ದರು. ಅವರು ಕೋಲು ತಂದು ನಮ್ಮನ್ನು ಹೊಡೆಯಲು ಪ್ರಯತ್ನಿಸಿದರು. ನನ್ನ ತಂದೆ ಅವರೊಂದಿಗೆ ತಾಳ್ಮೆಯಿಂದ ಮಾತನಾಡುತ್ತಿದ್ದರು. ಇದ್ದಕ್ಕಿದ್ದಂತೆ, ಅವರಲ್ಲಿ ಒಬ್ಬರು ನಮ್ಮ ಮೇಲೆ ಕಾರನ್ನು ಗುದ್ದಿದರು. ಕಾರು ಡಿಕ್ಕಿ ಹೊಡೆದ ನಂತರ ನನ್ನ ತಂದೆ ಸಾವನ್ನಪ್ಪಿದರು" ಎಂದು ಅವರು ಹೇಳಿದರು.

ಶಿವಮೂರ್ತಿ ಅವರ ಸೊಸೆ ಅಮ್ಸವಲ್ಲಿ, ಅವರು ವಿಷಯವನ್ನು ಶಾಂತಿಯುತವಾಗಿ ಇತ್ಯರ್ಥಪಡಿಸಲು ಪ್ರಯತ್ನಿಸಿದರು. ಅವರು ನನ್ನ ಮಾವನನ್ನು ಕೊಂದರು. ನನ್ನ ಮಗು ಗಾಯಗೊಂಡಿದ್ದಾನೆ. ಆದಿತ್ಯ ಅವರ ತಂದೆ ಕೃಷ್ಣಗಿರಿ ಜಿಲ್ಲೆಯಲ್ಲಿ ಡಿಎಂಕೆ ನಾಯಕರಾಗಿದ್ದಾರೆ ಎಂದು ಪೊಲೀಸ್ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

ಈ ಘಟನೆಯ ಬಗ್ಗೆ ರಾಜ್ಯ ಬಿಜೆಪಿ ಮುಖ್ಯಸ್ಥ ನೈನಾರ್ ನಾಗೇಂದ್ರನ್ ಆಡಳಿತಾರೂಢ ಡಿಎಂಕೆ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ. "ಮುಖ್ಯಮಂತ್ರಿಯವರ ಬಳಿ ಏನು ಉತ್ತರವಿದೆ? ಡಿಎಂಕೆ ಪದಾಧಿಕಾರಿಗಳು ಶಕ್ತಿಶಾಲಿಗಳಾಗಿದ್ದಾರೆ ಮತ್ತು ಎಲ್ಲಿ ಬೇಕಾದರೂ ಏನು ಬೇಕಾದರೂ ಮಾಡಲು ಸಿದ್ಧರಾಗಿದ್ದಾರೆ" ಎಂದು ಬಿಜೆಪಿ ನಾಯಕಿ ಹೇಳಿದರು.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

ಜಾರ್ಖಂಡ್ ಏರ್ ಆಂಬುಲೆನ್ಸ್ ದುರಂತ: ಮೃತಪಟ್ಟ ಎಲ್ಲಾ ಏಳು ಮಂದಿ ಮೃತದೇಹ ಮರಣೋತ್ತರ ಪರೀಕ್ಷೆಗೆ ರವಾನೆ-Video

ಜಾರ್ಖಂಡ್‌ ಸಮೀಪ ಚಾತ್ರಾದಲ್ಲಿ ಪತನಗೊಂಡ ರಾಂಚಿ–ದೆಹಲಿ ಏರ್ ಆಂಬ್ಯುಲೆನ್ಸ್: ಎಲ್ಲಾ 7 ಮಂದಿ ಸಾವು-Video

CM ಪಟ್ಟ ಜಟಾಪಟಿ: ಮತ್ತಷ್ಟು ಹರಿತವಾಯ್ತು ದಲಿತ ಸಿಎಂ ಅಸ್ತ್ರ, DKS ವಿರುದ್ಧ ಸಿದ್ದು ಬಣ ಪ್ರತಿತಂತ್ರ..!

ರಂಜಾನ್, ಹೋಳಿ ಹಬ್ಬ: ಶಾಂತಿ ಕದಡಿದರೆ ಕಠಿಣ ಕ್ರಮ, ಎಚ್ಚರಿಕೆ ವಹಿಸುವಂತೆ ಅಧಿಕಾರಿಗಳಿಗೆ ಸರ್ಕಾರ ಖಡಕ್ ಸೂಚನೆ

'ನಾಚಿಕೆ ಏನೆಂದು ನಿಮಗೆ ನಾನು ಹೇಳುತ್ತೇನೆ, ಕೇಳಿಸಿಕೊಳ್ಳಿ ಮೋದಿಯವರೇ', ಎಪ್ಸ್ಟೀನ್ ಫೈಲ್, India-US trade ವಿರುದ್ಧ ರಾಹುಲ್ ಗಾಂಧಿ ವಾಗ್ದಾಳಿ-Video

SCROLL FOR NEXT