ಮದುಮಗಳಿಗೆ ಗುಂಡೇಟು 
ದೇಶ

ಮಾಜಿ ಪ್ರೇಯಸಿಯ ಮದುವೆಗೆ ಬಂದು ಗುಂಡು ಹಾರಿಸಿದ ಭಗ್ನ ಪ್ರೇಮಿ, Video ವೈರಲ್!

ಬಿಹಾರದ ಬಕ್ಸಾರ್​​ನಲ್ಲಿ ಈ ಘಟನೆ ನಡೆದಿದ್ದು, ಭಗ್ನ ಪ್ರೇಮಿಯೋರ್ವ ಮದುವೆ ಮನೆಗೆ ಬಂದು ವೇದಿಕೆಯಲ್ಲಿದ್ದ ಮಾಜಿ ಪ್ರೇಯಸಿಯ ಹೊಟ್ಟೆಗೆ ಗುಂಡು ಹಾರಿಸಿದ್ದಾನೆ.

ಪಾಟ್ನಾ: ಮಾಜಿ ಪ್ರೇಯಸಿಯ ಮದುವೆಗೆ ಬಂದ ಭಗ್ನಪ್ರೇಮಿಯೋರ್ವ ಆಕೆಯ ಹೊಟ್ಟೆಗೆ ಗುಂಡು ಹಾರಿಸಿರುವ ಘಟನೆ ಬಿಹಾರದಲ್ಲಿ ನಡೆದಿದೆ.

ಬಿಹಾರದ ಬಕ್ಸಾರ್​​ನಲ್ಲಿ ಈ ಘಟನೆ ನಡೆದಿದ್ದು, ಭಗ್ನ ಪ್ರೇಮಿಯೋರ್ವ ಮದುವೆ ಮನೆಗೆ ಬಂದು ವೇದಿಕೆಯಲ್ಲಿದ್ದ ಮಾಜಿ ಪ್ರೇಯಸಿಯ ಹೊಟ್ಟೆಗೆ ಗುಂಡು ಹಾರಿಸಿದ್ದಾನೆ. ಗುಂಡು ಹಾರಿಸಿದಾಗ ಆರತಿ ಕುಮಾರಿ ವರನ ಜೊತೆಗೆ ವೇದಿಕೆಯಲ್ಲಿದ್ದರು.

ವಧು-ವರರ ಪಕ್ಕದಲ್ಲಿ ಅವರ ಸ್ನೇಹಿತರು ಮತ್ತು ಕುಟುಂಬ ಸದಸ್ಯರು ಇದ್ದರು. ಆರತಿಯ ಸಂಬಂಧಿಕರೊಬ್ಬರು ವೇದಿಕೆಯಲ್ಲಿ ವರನ ಹಣೆಗೆ ಸಿಂಧೂರ ಹಚ್ಚುವ ಆಚರಣೆಯನ್ನು ಮಾಡುತ್ತಿದ್ದರು. ವೇದಿಕೆಯ ಮುಂದೆ ನಿಂತಿದ್ದ ಅತಿಥಿಗಳಲ್ಲಿ ಒಬ್ಬ ವ್ಯಕ್ತಿ ವಧುವಿನ ಮೇಲೆ ಗುಂಡು ಹಾರಿಸಿದ್ದಾನೆ.

ಈ ವೇಳೆ ವಧು ಆರತಿ ಕುಮಾರಿ ಗಂಭೀರವಾಗಿ ಗಾಯಗೊಂಡಿದ್ದು, ಆರತಿಯ ಹೊಟ್ಟೆಗೆ ಗುಂಡು ತಗುಲಿದೆ. ಈ ವೇಳೆ ಜನರು ಭಯಭೀತರಾಗಿ, ಕಿರುಚುತ್ತಾ ಹೊರಗೆ ಓಡಿಹೋದರು. ಆರತಿ ಕುಸಿದು ಬಿದ್ದಾಗ ಕೆಲವರು ಆಕೆ ಪ್ರಜ್ಞೆ ತಪ್ಪದಂತೆ ನೋಡಿಕೊಳ್ಳಲು ಪ್ರಯತ್ನಿಸಿದರು.

ಆರತಿಯನ್ನು ತಕ್ಷಣವೇ ಹತ್ತಿರದ ಸದರ್ ಆಸ್ಪತ್ರೆಗೆ ಕರೆದೊಯ್ಯಲಾಯಿತು. ಅವರಿಗೆ ಪ್ರಥಮ ಚಿಕಿತ್ಸೆ ನೀಡಲಾಯಿತು. ಅವರನ್ನು ವಾರಾಣಸಿ ಟ್ರಾಮಾ ಸೆಂಟರ್‌ಗೆ ಕರೆದೊಯ್ಯಲಾಯಿತು. ಆರತಿ ಜೀವನ್ಮರಣ ಹೋರಾಟ ನಡೆಸುತ್ತಿದ್ದು, ಅವರ ಸ್ಥಿತಿ ಗಂಭೀರವಾಗಿದೆ. ಮಂಗಳವಾರ ರಾತ್ರಿ 11 ಗಂಟೆ ಸುಮಾರಿಗೆ ಈ ಘಟನೆ ನಡೆದಿದೆ ಎಂದು ಪೊಲೀಸರು ತಿಳಿಸಿದ್ದಾರೆ.

ಪ್ರೇಮ ಪ್ರಸಂಗ

ಸ್ಥಳೀಯರ ಪ್ರಕಾರ, ಗುಂಡಿನ ದಾಳಿ ಘಟನೆಗೆ ಶಂಕಿತ ಪ್ರೇಮ ಪ್ರಕರಣ ಕಾರಣ ಎನ್ನಲಾಗಿದೆ. ಆರತಿ ಮೇಲೆ ಗುಂಡುಹಾರಿಸಿದ ಆರೋಪಿಯನ್ನು ದೀನಬಂಧು ಎಂದು ಗುರುತಿಸಲಾಗಿದೆ. ಪ್ರಸ್ತುತ ಆರೋಪಿ ತಲೆಮರೆಸಿಕೊಂಡಿದ್ದು, ಆರೋಪಿಯ ಪೋಷಕರನ್ನು ಪೊಲೀಸರು ವಿಚಾರಣೆ ನಡೆಸುತ್ತಿದ್ದು, ಅವರನ್ನು ವಶಕ್ಕೆ ಪಡೆದಿದ್ದಾರೆ.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

ಯೋಗೇಶ್ ಗೌಡ ಹತ್ಯೆ ಪ್ರಕರಣ: Congress ಶಾಸಕ ವಿನಯ್ ಕುಲಕರ್ಣಿ ಸೇರಿ 16 ಮಂದಿಗೆ ಜೀವಾವಧಿ ಶಿಕ್ಷೆ, ಮಹತ್ವದ ತೀರ್ಪು!

ವಿನಯ್ ಕುಲಕರ್ಣಿಗೆ ಜೀವಾವಧಿ ಶಿಕ್ಷೆ: ನಾನು ಅವತ್ತೇ ಹೇಳಿದ್ದೆ, ಈಗ ನನ್ನ ಮಾತು ನಿಜವಾಗಿದೆ - ಯಡಿಯೂರಪ್ಪ

ಯೋಗೀಶ್ ಗೌಡ ಕೊಲೆ ಪ್ರಕರಣ: ವಿನಯ್ ಕುಲಕರ್ಣಿಗೆ ಜೀವಾವಧಿ ಶಿಕ್ಷೆ, ಶಾಸಕ ಸ್ಥಾನ ರದ್ದು!

ಟಿ20 ವಿಶ್ವಕಪ್‌ಗೆ ಕಳಂಕ: ಚೆನ್ನೈ ಪಂದ್ಯದಲ್ಲಿ ಮ್ಯಾಚ್ ಫಿಕ್ಸಿಂಗ್ ಆರೋಪ? ತನಿಖೆ ಕೈಗೊಂಡ ICC!

ಮಕ್ಕಳಿಂದ `ಮಸಾಜ್': ವಚನಾನಂದ ಶ್ರೀಗಳ ವಿರುದ್ಧ ಹಾಸ್ಟೇಲ್ ವಿದ್ಯಾರ್ಥಿಗಳಿಂದಲೇ ದೂರು

SCROLL FOR NEXT