ಕೇಂದ್ರ ಸಚಿವ ಸುಕಾಂತ ಮಜುಂದಾರ್  
ದೇಶ

ಕೋಲ್ಕತ್ತಾದಲ್ಲಿ 5.4 ರಷ್ಟು ತೀವ್ರತೆಯ ಭೂಕಂಪ: ವೇದಿಕೆಯಲ್ಲಿ ಭಾಷಣ ಮಾತನಾಡುತ್ತಿದ್ದಾಗ ಅಲುಗಾಡಿದ ಕೇಂದ್ರ ಸಚಿವರು! Video

ರಿಕ್ಟರ್ ಮಾಪಕದಲ್ಲಿ 5.5ರಷ್ಟು ತೀವ್ರತೆಯ ಭೂ ಕಂಪವಾಗಿದ್ದು, ಜನರು ಮನೆ ಮತ್ತು ಕಚೇರಿಗಳಿಂದ ಹೊರ ಬಂದಿದ್ದಾರೆ. ಮಧ್ಯಾಹ್ನ 1.22 ಕ್ಕೆ ಭೂಕಂಪನದ ಅನುಭವಾಗಿದೆ ಎಂದು ಹವಾಮಾನ ಇಲಾಖೆ ತಿಳಿಸಿದೆ.

ಕೋಲ್ಕತ್ತಾ: ಪಶ್ಚಿಮ ಬಂಗಾಳದ ರಾಜಧಾನಿ ಕೋಲ್ಕತ್ತಾದಲ್ಲಿ ಶುಕ್ರವಾರ 5.4 ತೀವ್ರತೆಯ ಪ್ರಬಲ ಭೂಕಂಪ ಸಂಭವಿಸಿದೆ. ಕೋಲ್ಕತ್ತಾ ಮತ್ತಿತರ ಭಾಗಗಳಲ್ಲಿ ಕಂಪನದ ಅನುಭವವಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಭೂಕಂಪದ ಕೇಂದ್ರ ಬಿಂದು ಬಾಂಗ್ಲಾದೇಶದಲ್ಲಿ ದಾಖಲಾಗಿದೆ ಎಂದು ವರದಿಯಾಗಿದೆ. ಪಶ್ಚಿಮ ಬೆನಾಲ್ ರಾಜಧಾನಿಯಲ್ಲಿ ಮಧ್ಯಾಹ್ನ 1.22 ರ ಸುಮಾರಿಗೆ ಭೂಕಂಪ ಸಂಭವಿಸಿದೆ. ಜನರು ತಮ್ಮ ಅನುಭವಗಳನ್ನು ಸಾಮಾಜಿಕ ಮಾಧ್ಯಮದಲ್ಲಿ ಹಂಚಿಕೊಂಡಿದ್ದಾರೆ.

ಇದುವರೆಗೆ ಯಾವುದೇ ಪ್ರಾಣಹಾನಿ ಅಥವಾ ಆಸ್ತಿ ನಷ್ಟದ ಬಗ್ಗೆ ವರದಿಯಾಗಿಲ್ಲ. ಕೋಲ್ಕತ್ತಾದಲ್ಲಿ ಈ ತಿಂಗಳು ಭೂಕಂಪ ಸಂಭವಿಸಿದ್ದು ಇದು ಎರಡನೇ ಬಾರಿ. ಈ ಹಿಂದೆ ಫೆಬ್ರವರಿ 3 ರಂದು ಲಘು ಭೂಕಂಪ ಆಗಿತ್ತು.

ನೆರೆಯ ರಾಜ್ಯಗಳು ಮತ್ತು ಬಾಂಗ್ಲಾದೇಶದಲ್ಲಿಯೂ ಭೂಕಂಪದ ಅನುಭವವಾಗಿದೆ. EMSC ದತ್ತಾಂಶದ ಪ್ರಕಾರ, ಮ್ಯಾನ್ಮಾರ್‌ನ ಅಕ್ಯಾಬ್‌ನಿಂದ ಪೂರ್ವಕ್ಕೆ 70 ಮೈಲುಗಳಷ್ಟು ದೂರದಲ್ಲಿ ಭೂಕಂಪನ ಸಂಭವಿಸಿದೆ. ಕೋಲ್ಕತ್ತಾ ಸೇರಿದಂತೆ ಪಶ್ಚಿಮ ಬಂಗಾಳದ ಕೆಲವು ಭಾಗಗಳಲ್ಲಿ ಮತ್ತು ನೆರೆಯ ಬಾಂಗ್ಲಾದೇಶದಲ್ಲಿ ಕಂಪನದ ಅನುಭವವಾಗಿದೆ. 10 ಕಿಲೋಮೀಟರ್ ಅಥವಾ 6.21 ಮೈಲಿ ಆಳದಲ್ಲಿ ಭೂಕಂಪ ಸಂಭವಿಸಿದೆ ಎಂದು ಜರ್ಮನ್ ರಿಸರ್ಚ್ ಸೆಂಟರ್ ಫಾರ್ ಜಿಯೋಸೈನ್ಸ್ ಹೇಳಿದೆ.

ಕೇಂದ್ರ ಸಚಿವ ಸುಕಾಂತ ಮಜುಂದಾರ್ ಕೋಲ್ಕತ್ತಾದಲ್ಲಿ ಇಂದು ಮಧ್ಯಾಹ್ನ ಆಯೋಜಿಸಿದ್ದ ಸಾರ್ವಜನಿಕ ಸಭೆಯೊಂದರಲ್ಲಿ ಮಾತನಾಡುತ್ತಿದ್ದಾಗ ಭೂಕಂಪ ಸಂಭವಿಸಿದೆ. ಈ ಕುರಿತ ವಿಡಿಯೋವನ್ನು ಸುದ್ದಿ ಸಂಸ್ಥೆ ಐಎಎನ್‌ಎಸ್ ಹಂಚಿಕೊಂಡಿದೆ.

ವಿಡಿಯೋದಲ್ಲಿ ವೇದಿಕೆಯಲ್ಲಿದ್ದ ಮಜುಂದಾರ್, ನಡುಗುತ್ತಿರುವಂತೆ ಕಾಣಿಸುತ್ತದೆ. ನಾನು ಭಾಷಣ ನಿಲ್ಲಿಸಲೇ ಎಂದು ಅವರು ಕೇಳುತ್ತಾರೆ. ಕಾರ್ಯಕ್ರಮ ಸ್ಥಳದಲ್ಲಿದ್ದ ಲೈಟ್ , ಕ್ಯಾಮರಾಗಳು ಕೂಡಾ ಅಲುಗಾಡುವುದು ಕಂಡುಬಂದಿದೆ.

ರಿಕ್ಟರ್ ಮಾಪಕದಲ್ಲಿ 5.5ರಷ್ಟು ತೀವ್ರತೆಯ ಭೂ ಕಂಪವಾಗಿದ್ದು, ಜನರು ಮನೆ ಮತ್ತು ಕಚೇರಿಗಳಿಂದ ಹೊರ ಬಂದಿದ್ದಾರೆ. ಮಧ್ಯಾಹ್ನ 1.22 ಕ್ಕೆ ಭೂಕಂಪನದ ಅನುಭವಾಗಿದೆ ಎಂದು ಹವಾಮಾನ ಇಲಾಖೆ ತಿಳಿಸಿದೆ.ರಾಜ್ಯ ಸಚಿವಾಲಯದಲ್ಲಿ ಕಂಪನದ ಹಿನ್ನೆಲೆಯಲ್ಲಿ ನಬಣ್ಣ, ನೌಕರರು ಬೀದಿಗೆ ಬಂದಿದ್ದಾರೆ. ಸಾಲ್ಟ್ ಲೇಕ್‌ನಲ್ಲಿರುವ ನಗರದ ಐಟಿ ಹಬ್ ಮತ್ತು ಇತರ ಪ್ರದೇಶಗಳಲ್ಲಿನ ಬಹುಮಹಡಿ ವಸತಿ ಕಟ್ಟಡಗಳಲ್ಲಿ ಇದೇ ರೀತಿಯ ದೃಶ್ಯಗಳು ಕಂಡುಬಂದವು.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

ಸುಬ್ಬಾರೆಡ್ಡಿ ಶಾಸಕ ಸ್ಥಾನ ಅಸಿಂಧು ಆದೇಶಕ್ಕೆ ಸುಪ್ರೀಂ ತಡೆ!

ಬೆಂಗಳೂರಿನಲ್ಲಿ ಸುಡು ಬಿಸಿಲು: 30 ಡಿಗ್ರಿ ಸೆ.ಗಿಂತ ಹೆಚ್ಚಿನ ಉಷ್ಣಾಂಶ ದಾಖಲು! ಆರೋಗ್ಯ ತಜ್ಞರು ಏನಂತಾರೆ?

Mutual Fund ಗಳಲ್ಲಿ ಚಿನ್ನ, ಬೆಳ್ಳಿ ಮೌಲ್ಯಮಾಪನ ಪದ್ಧತಿಯಲ್ಲಿ ಭಾರಿ ಬದಲಾವಣೆ; ಇದರಿಂದಾಗುವ ಲಾಭವೇನು?

'ನಾನು ಭ್ರಷ್ಟನಲ್ಲ': ಕೋರ್ಟ್ ತೀರ್ಪಿನ ಬಳಿಕ ಮಾಧ್ಯಮಗಳ ಮುಂದೆ ಕಣ್ಣೀರು ಹಾಕಿದ ಅರವಿಂದ್ ಕೇಜ್ರಿವಾಲ್; Video

Delhi excise policy case: ಅರವಿಂದ್ ಕೇಜ್ರಿವಾಲ್-ಮನೀಶ್ ಸಿಸೋಡಿಯಾ ವಿರುದ್ಧ ಕೇಸು ಖುಲಾಸೆ; Video

SCROLL FOR NEXT