ಸಾಂದರ್ಭಿಕ ಚಿತ್ರ 
ದೇಶ

ದೆಹಲಿ ಕಾರು ಸ್ಫೋಟ: ಯಾಸಿರ್ ಅಹ್ಮದ್ ದಾರ್‌ನನ್ನು ಕರೆತಂದು ದಕ್ಷಿಣ ಕಾಶ್ಮೀರದಲ್ಲಿ NIA ಶೋಧ!

"ವೈಟ್ ಕಾಲರ್' ಭಯೋತ್ಪಾದಕ ಗುಂಪಿನೊಂದಿಗೆ ನಂಟಿಗೆ ಸಂಬಂಧಿಸಿದಂತೆ ಅಹ್ಮದ್ ನನ್ನು ಬಂಧಿಸಲಾಗಿತ್ತು.

ದಕ್ಷಿಣ ಕಾಶ್ಮೀರ: ದೆಹಲಿಯ ಕೆಂಪು ಕೋಟೆ ಬಳಿ ನವೆಂಬರ್ 10 ರಂದು ನಡೆದಿದ್ದ ಕಾರು ಸ್ಫೋಟದ ತನಿಖೆಯ ಭಾಗವಾಗಿ ರಾಷ್ಟ್ರೀಯ ತನಿಖಾ ಸಂಸ್ಥೆ (NIA)ಶುಕ್ರವಾರ ಜಮ್ಮು ಮತ್ತು ಕಾಶ್ಮೀರದ ಶೋಪಿಯಾನ್ ಮತ್ತು ಪುಲ್ವಾಮಾ ಜಿಲ್ಲೆಗಳಲ್ಲಿ ಶೋಧ ನಡೆಸಿತು ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಸಿಆರ್ ಪಿಎಫ್ ಹಾಗೂ ಸ್ಥಳೀಯ ಪೊಲೀಸರ ಸಹಕಾರದೊಂದಿಗೆ ಆರೋಪಿಗಳಲ್ಲಿ ಒಬ್ಬನಾದ ಯಾಸಿರ್ ಅಹ್ಮದ್ ದಾರ್‌ನನ್ನು ಕರೆತಂದು ಎನ್ ಐಎ ಅಧಿಕಾರಿಗಳು ಶೋಧ ಕಾರ್ಯ ನಡೆಸಿದರು ಎಂದು ಅವರು ಹೇಳಿದ್ದಾರೆ.

"ವೈಟ್ ಕಾಲರ್' ಭಯೋತ್ಪಾದಕ ಗುಂಪಿನೊಂದಿಗೆ ನಂಟಿಗೆ ಸಂಬಂಧಿಸಿದಂತೆ ಅಹ್ಮದ್ ನನ್ನು ಬಂಧಿಸಲಾಗಿತ್ತು.

ದಕ್ಷಿಣ ಕಾಶ್ಮೀರದ ಶೋಪಿಯಾನ್‌ನ ಪದಪವನ್ ಪ್ರದೇಶ ಮತ್ತು ಪುಲ್ವಾಮಾದ ಪಾಂಪೋರ್ ಪ್ರದೇಶದಲ್ಲಿ ಶೋಧ ಕಾರ್ಯ ನಡೆಯುತ್ತಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಈ ಪ್ರದೇಶಗಳಲ್ಲಿನ ಕೆಲವು ಅಡಗುತಾಣಗಳ ಬಗ್ಗೆ ಪ್ರಕರಣದ ಒಂಬತ್ತನೇ ಆರೋಪಿ ದಾರ್ ವಿಚಾರಣೆ ವೇಳೆ ಮಾಹಿತಿ ನೀಡಿದ್ದ ಎನ್ನಲಾಗಿದೆ.

ಈ ಹಿನ್ನೆಲೆಯಲ್ಲಿ ಆತನನ್ನು ಕರೆತಂದು ಶೋಧ ನಡೆಸಲಾಗಿದೆ. ಹೆಚ್ಚಿನ ವಿವರಗಳನ್ನು ನಿರೀಕ್ಷಿಸಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

ಮಹತ್ವದ ಆದೇಶ: ಅಗತ್ಯವಿದ್ದರೆ ಆಕ್ರಮಣಕಾರಿ ಬೀದಿ ನಾಯಿಗಳನ್ನು ಕೊಲ್ಲಲು ಸುಪ್ರೀಂ ಕೋರ್ಟ್ ಅನುಮತಿ!

Ebola outbreak: ಮಾರಣಾಂತಿಕ ಎಬೋಲಾಗೆ 131 ಸಾವು, 500ಕ್ಕೂ ಹೆಚ್ಚು ಶಂಕಿತ ಕೇಸ್; ವಿಶ್ವಸಂಸ್ಥೆಯಿಂದ ತುರ್ತು ಪರಿಸ್ಥಿತಿ ಘೋಷಣೆ!

ದೇವಾಲಯಗಳ ಚಿನ್ನದ ಮೇಲೆ ಪ್ರಧಾನಿ ಮೋದಿ ಕಣ್ಣು?: ಕೇಂದ್ರ ಸರ್ಕಾರ ಹೇಳಿದ್ದೇನು?

ಮುಂದೆ ತುಂಬಾ ಕಠಿಣಾತಿಕಠಿಣ ದಿನಗಳು ಬರಲಿವೆ: ರಾಹುಲ್ ಗಾಂಧಿ ಎಚ್ಚರಿಕೆ

ಸಾರಿಗೆ ಸಂಘಟನೆಗಳಿಗೆ ಹೈಕೋರ್ಟ್ ಬ್ರೇಕ್: ಮೇ 20 ರಿಂದ ಮುಷ್ಕರ ನಡೆಸದಂತೆ ನಿರ್ಬಂಧ

SCROLL FOR NEXT