ಸಾಂದರ್ಭಿಕ ಚಿತ್ರ 
ದೇಶ

10 ವರ್ಷಗಳಲ್ಲಿ ಗುಜರಾತ್ ಬಿಜೆಪಿ ಸಂಸದರ ಆಸ್ತಿ ಹಲವು ಪಟ್ಟು ಹೆಚ್ಚಳ: ADR ವರದಿ

ಕೇಂದ್ರ ಸಚಿವ ಸಿ ಆರ್ ಪಾಟೀಲ್ ಅವರನ್ನು ಹೊರತುಪಡಿಸಿ, ಒಂದು ದಶಕದ ಸತತ ಚುನಾವಣಾ ಗೆಲುವಿನ ಬಳಿಕ ಅನೇಕ ಬಿಜೆಪಿ ಸಂಸದರಿಗೆ ಆಸ್ತಿ ಆಶ್ಚರ್ಯಕರ ರೀತಿಯಲ್ಲಿ ಹಲವು ಪಟ್ಟು ಹೆಚ್ಚಾಗಿದೆ.

ಅಹಮದಾಬಾದ್: 2014, 2019 ಮತ್ತು 2024ರಲ್ಲಿ ಹ್ಯಾಟ್ರಿಕ್ ಗೆಲುವು ಸಾಧಿಸಿ ಸತತ ಮೂರು ಬಾರಿ ಲೋಕಸಭೆಗೆ ಆಯ್ಕೆಯಾದ ಸಂಸದರ ಆಸ್ತಿಗಳನ್ನು ಬಹಿರಂಗಪಡಿಸುವ ವರದಿಯನ್ನು ಅಸೋಸಿಯೇಷನ್ ​​ಫಾರ್ ಡೆಮಾಕ್ರಟಿಕ್ ರಿಫಾರ್ಮ್ಸ್(ADR) ಬುಧವಾರ ಪ್ರಕಟಿಸಿದೆ.

ಕೇಂದ್ರ ಸಚಿವ ಸಿ ಆರ್ ಪಾಟೀಲ್ ಅವರನ್ನು ಹೊರತುಪಡಿಸಿ, ಒಂದು ದಶಕದ ಸತತ ಚುನಾವಣಾ ಗೆಲುವಿನ ಬಳಿಕ ಅನೇಕ ಬಿಜೆಪಿ ಸಂಸದರಿಗೆ ಆಸ್ತಿ ಆಶ್ಚರ್ಯಕರ ರೀತಿಯಲ್ಲಿ ಹಲವು ಪಟ್ಟು ಹೆಚ್ಚಾಗಿದೆ.

ಗುಜರಾತ್‌ನಲ್ಲಿ, ಕೇವಲ ಏಳು ಸಂಸದರು ಚುನಾವಣೆಯಸ್ಸಿ ಹ್ಯಾಟ್ರಿಕ್ ಗೆಲವು ಸಾಧಿಸಿದ್ದಾರೆ. ಮೂರು ಚುನಾವಣೆಗಳಲ್ಲಿ ಅವರ ಆಸ್ತಿ ಘೋಷಣೆಗಳ ಹೋಲಿಕೆ ವ್ಯಾಪಕ ವ್ಯತ್ಯಾಸಗಳಿದ್ದು, ಹಲವಾರು ಸಂಸದರ ಆಸ್ತಿ ಭಾರಿ ಪ್ರಮಾಣದಲ್ಲಿ ಹೆಚ್ಚಾಗಿದೆ" ಎಂದು ADR ವಿಶ್ಲೇಷಣೆ ಹೇಳುತ್ತದೆ.

ಪಟ್ಟಿಯಲ್ಲಿ ಮೊದಲ ಸ್ಥಾನದಲ್ಲಿರುವ ಬಿಜೆಪಿ ಸಂಸದೆ ಪೂನಂಬೆನ್ ಮೇಡಂ ಅವರ ಘೋಷಿತ ಆಸ್ತಿ 2014 ರಲ್ಲಿ ಸುಮಾರು 17 ಕೋಟಿ ರೂ.ಗಳಿಂದ 2024 ರಲ್ಲಿ 147 ಕೋಟಿ ರೂ.ಗಳಿಗೆ ಜಿಗಿದಿದೆ, ಒಂದೇ ದಶಕದಲ್ಲಿ ಸರಿಸುಮಾರು 130 ಕೋಟಿ ರೂ. ಅಥವಾ ಶೇ. 747 ರಷ್ಟು ಏರಿಕೆಯಾಗಿದೆ.

ಪೂನಂಬೆನ್ ಮೇಡಂ ನಂತರ, ಕಛ್ ಬಿಜೆಪಿ ಸಂಸದ ವಿನೋದ್ ಲಖಂಶಿ ಚಾವ್ಡಾ ಅವರ ಆಸ್ತಿ 2014 ರಲ್ಲಿ ಕೇವಲ 56 ಲಕ್ಷ ರೂ. ಎಂದು ಘೋಷಿಸಿದ್ದರು. ಅದು 2024 ರ ವೇಳೆಗೆ 6.5 ಕೋಟಿ ರೂ.ಗೆ ಹೆಚ್ಚಾಗಿ, ಶೇ. 1,100 ಕ್ಕಿಂತ ಹೆಚ್ಚಾಗಿದೆ.

ಬಾರ್ಡೋಲಿಯ(ಎಸ್‌ಟಿ) ಮತ್ತೊಬ್ಬ ಬಿಜೆಪಿ ಸಂಸದ ಪರಭುಭಾಯಿ ನಾಗರ್‌ಭಾಯಿ ವಾಸವ ಅವರ ಆಸ್ತಿ ಸುಮಾರು 1.6 ಕೋಟಿ ರೂ.ಗಳಿಂದ 4.7 ಕೋಟಿ ರೂ.ಗಳಿಗೆ ಏರಿಕೆಯಾಗಿದ್ದು, ಇದು ಸುಮಾರು ಶೇ. 195 ರಷ್ಟು ಹೆಚ್ಚಳವನ್ನು ಸೂಚಿಸುತ್ತದೆ.

ಹಿರಿಯ ಸಂಸದರಾದ ದೇವುಸಿನ್ಹ್ ಚೌಹಾಣ್(ಖೇಡಾ) ಮತ್ತು ರಾಜೇಶ್ ನರನ್‌ಭಾಯಿ ಚುಡಾಸಮಾ(ಜುನಾಗಢ್) ಕೂಡ ಅತಿ ವೇಗವಾಗಿ ಶ್ರೀಮಂತರಾಗಿದ್ದು, ಹತ್ತು ವರ್ಷಗಳ ಅವಧಿಯಲ್ಲಿ ಪ್ರತಿಯೊಬ್ಬರೂ ತಮ್ಮ ಘೋಷಿತ ಸಂಪತ್ತಿಗಿಂತ 2 ಕೋಟಿ ಅಥವಾ ಅದಕ್ಕಿಂತ ಹೆಚ್ಚಿನದನ್ನು ಘೋಷಿಸಿಕೊಂಡಿದ್ದಾರೆ.

ಹಲವು ಸಂಸದರು ತಮ್ಮ ಸಂಪತ್ತನ್ನು ಹೆಚ್ಚಿಸಿಕೊಳ್ಳುತ್ತಿದ್ದರೆ, ಅವರಿ ವಿರುದ್ಧಾಗಿ ಸಿ ಆರ್ ಪಾಟೀಲ್ ಆಸ್ತಿಯನ್ನು ಕಳೆದುಕೊಂಡಿದ್ದಾರೆ. ಕೇಂದ್ರ ಸಚಿವ ಮತ್ತು ನವಸಾರಿ ಸಂಸದರಾಗಿರುವ ಸಿಆರ್ ಪಾಟೀಲ್ ಅವರು 2014 ಕ್ಕೆ ಹೋಲಿಸಿದರೆ ಅವರ ಘೋಷಿತ ಆಸ್ತಿಯಲ್ಲಿ ಶೇಕಡಾ 47 ರಷ್ಟು ಕುಸಿತವಾಗಿದೆ ಎಂದು ಎಡಿಆರ್ ವರದಿ ಮಾಡಿದೆ.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

ಕೋಲ್ಕತ್ತಾ: I-PAC ಮೇಲಿನ ED ದಾಳಿ ವಿರುದ್ಧ ಬೀದಿಗಿಳಿದ ಪಶ್ಚಿಮ ಬಂಗಾಳ ಸಿಎಂ ಮಮತಾ

ಬೆಂಗಳೂರು: ಮನನೊಂದು ಡೆಂಟಲ್ ಕಾಲೇಜು ವಿದ್ಯಾರ್ಥಿನಿ ಆತ್ಮಹತ್ಯೆ; ಆಡಳಿತ ಮಂಡಳಿ ಕಿರುಕುಳ ಆರೋಪ

ಬೆಂಗಳೂರು: ಕಗ್ಗದಾಸಪುರ ಜಂಕ್ಷನ್ ನಲ್ಲಿ ಬಿಗ್ ಫೈಟ್! Zepto ರೈಡರ್ ಥಳಿಸಿದ ಬೈಕ್ ಸವಾರರಿಗೆ ಜನರಿಂದ ಗೂಸಾ! Video

ಪ್ರಹ್ಲಾದ್ ಜೋಶಿ ಮೊದಲು ಚುನಾವಣಾ ಬಾಂಡ್‌, PM ಕೇರ್ಸ್‌ ಬಗ್ಗೆ ಉತ್ತರಿಸಲಿ: ದಿನೇಶ್ ಗುಂಡೂರಾವ್

Iran Protests ನಡುವೆ ರೆಜಾ ಪಹ್ಲವಿ ಸದ್ದು: ಜಾತ್ಯತೀತ ಮತ್ತು ಪ್ರಜಾಪ್ರಭುತ್ವ ವ್ಯವಸ್ಥೆಗೆ ಕರೆ ನೀಡುತ್ತಿರುವ ಈ ಪ್ರಭಾವಿ ವ್ಯಕ್ತಿ ಯಾರು?

SCROLL FOR NEXT