ಮುಂಬೈ: ಮಹಾರಾಷ್ಟ್ರ ಮುಖ್ಯಮಂತ್ರಿ ದೇವೇಂದ್ರ ಫಡ್ನವೀಸ್ ಹಾಗೂ ಉಪ ಮುಖ್ಯಮಂತ್ರಿ ಅಜಿತ್ ಪವಾರ್ ನಡುವಿನ ಮುಸುಕಿನ ಗುದ್ದಾಟ ಮುಂದುವರೆದಿದೆ.
ಬಿಜೆಪಿ ಮಾಡಿದ ಅಭಿವೃದ್ಧಿ ಕಾರ್ಯಗಳಿಂದಾಗಿ ವಿರೋಧಿಗಳು ತಮ್ಮ ಹತಾಶೆ ಮತ್ತು ಕೋಪವನ್ನು ಹೊರಹಾಕುತ್ತಿದ್ದಾರೆ ಎಂದು ಫಡ್ನವೀಸ್ ಶನಿವಾರ ಹೇಳುವ ಮೂಲಕ ಅಜಿತ್ ಪವಾರ್ ವಿರುದ್ಧ ತೀವ್ರ ವಾಗ್ದಾಳಿ ನಡೆಸಿದರು.
ಜನವರಿ 15 ರಂದು ಚುನಾವಣೆ ನಡೆಯಲಿರುವ ಪಿಂಪ್ರಿ ಚಿಂಚ್‌ವಾಡ್‌ನಲ್ಲಿ ನಡೆದ Rally ಯಲ್ಲಿ ಮಾತನಾಡಿದ ಫಡ್ನವಿಸ್, ಕೆಲವರಿಗೆ ಕೆಲಸದ ಮೂಲಕ ತೋರಿಸಲು ಏನೂ ಇಲ್ಲದಿರುವುದರಿಂದ ಅನಗತ್ಯ ಚರ್ಚೆ ಮತ್ತು ವಿವಾದಗಳನ್ನು ಸೃಷ್ಟಿಸುವ ವಿಷಯಗಳತ್ತ ಗಮನ ಹರಿಸಲು ಪ್ರಯತ್ನಿಸುತ್ತಿದ್ದಾರೆ ಎಂದು ಹೇಳಿದರು.
ಪವಾರ್ ಅವರ NCP ಬಿಜೆಪಿ ನೇತೃತ್ವದ ಮಹಾಯುತಿಯ ಮೈತ್ರಿಪಕ್ಷವಾಗಿದೆ. ಆದರೆ ಎರಡು ಪಕ್ಷಗಳು ಪುಣೆ ಮತ್ತು ಪಿಂಪ್ರಿ ಚಿಂಚ್‌ವಾಡ್ ಸ್ಥಳೀಯ ಸಂಸ್ಥೆ ಚುನಾವಣೆಯಲ್ಲಿ ಪ್ರತ್ಯೇಕವಾಗಿ ಹೋರಾಡುತ್ತಿವೆ. ಪುಣೆ ಮತ್ತು ಪಿಂಪ್ರಿ ಚಿಂಚ್‌ವಾಡ್‌ನ ಅಭಿವೃದ್ಧಿಯನ್ನು ಅಕ್ರಮಗಳು ಮತ್ತು ಭ್ರಷ್ಟಾಚಾರವು ಮೊಟಕುಗೊಳಿಸಿದೆ ಎಂದು ಉಪ ಮುಖ್ಯಮಂತ್ರಿ ಸರಣಿ ಸುದ್ದಿಗೋಷ್ಠಿಯಲ್ಲಿ ಹೇಳಿಕೊಂಡಿದ್ದಾರೆ.
ರಾಜ್ಯ ಸರ್ಕಾರವು ಆಡಳಿತಗಾರರನ್ನು ನೇಮಿಸುವ ಮೊದಲು 2017 ಮತ್ತು 2022 ರ ನಡುವೆ ಬಿಜೆಪಿ ಎರಡು ಸ್ಥಳೀಯ ಸಂಸ್ಥೆಗಳಲ್ಲಿ ಆಳ್ವಿಕೆ ನಡೆಸಿತ್ತು.