ಪ್ರಧಾನಿ ಮೋದಿ - ಜರ್ಮನ್ ಚಾನ್ಸೆಲರ್ ಫ್ರೆಡ್ರಿಕ್ ಮೆರ್ಜ್ 
ದೇಶ

ಮಹಾತ್ಮ ಗಾಂಧಿ ಸಂದೇಶಗಳು ಹಿಂದೆಂದಿಗಿಂತಲೂ ಈಗ ಹೆಚ್ಚು ಪ್ರಸ್ತುತ: ಸಬರಮತಿ ಆಶ್ರಮದಲ್ಲಿ ಜರ್ಮನ್ ಚಾನ್ಸೆಲರ್!

ಪ್ರಧಾನಿ ನರೇಂದ್ರ ಮೋದಿ ಮತ್ತು ಮೆರ್ಜ್ ಅವರು ಇಂದು ಬೆಳಗ್ಗೆ ಅಹಮದಾಬಾದ್‌ನ ಸಬರಮತಿ ಆಶ್ರಮಕ್ಕೆ ಭೇಟಿ ನೀಡಿ ಮಹಾತ್ಮ ಗಾಂಧಿಯವರಿಗೆ ಗೌರವ ಸಲ್ಲಿಸಿದರು.

ಅಹಮದಾಬಾದ್: ಭಾರತಕ್ಕೆ ಮೊದಲ ಬಾರಿ ಭೇಟಿ ನೀಡಿರುವ ಜರ್ಮನ್ ಚಾನ್ಸೆಲರ್ ಫ್ರೆಡ್ರಿಕ್ ಮೆರ್ಜ್ ಅವರು ಮಹಾತ್ಮ ಗಾಂಧಿಯವರ ಪರಂಪರೆ ಭಾರತೀಯರು ಮತ್ತು ಜರ್ಮನ್ನರನ್ನು ಸ್ನೇಹಿತರನ್ನಾಗಿ ಮಾಡಿದೆ ಮತ್ತು ಅವರ ಸಂದೇಶಗಳು ಹಿಂದೆಂದಿಗಿಂತಲೂ ಈಗ ಹೆಚ್ಚು ಪ್ರಸ್ತುತ ಎಂದು ಸೋಮವಾರ ಹೇಳಿದ್ದಾರೆ.

ಪ್ರಧಾನಿ ನರೇಂದ್ರ ಮೋದಿ ಮತ್ತು ಮೆರ್ಜ್ ಅವರು ಇಂದು ಬೆಳಗ್ಗೆ ಅಹಮದಾಬಾದ್‌ನ ಸಬರಮತಿ ಆಶ್ರಮಕ್ಕೆ ಭೇಟಿ ನೀಡಿ ಮಹಾತ್ಮ ಗಾಂಧಿಯವರಿಗೆ ಗೌರವ ಸಲ್ಲಿಸಿದರು.

ಕೆಲವು ನಿಮಿಷಗಳ ಮೊದಲು ಆಶ್ರಮಕ್ಕೆ ತಲುಪಿದ ಪ್ರಧಾನಿ ಮೋದಿ ಅವರು, ಜರ್ಮನ್ ಚಾನ್ಸೆಲರ್ ಮೆರ್ಜ್ ಅವರನ್ನು ಸ್ವಾಗತಿಸಿದರು.

ರಾಷ್ಟ್ರಪಿತ ಮಹಾತ್ಮ ಗಾಂಧಿ ಅವರ ಪ್ರತಿಮೆಗೆ ಪುಷ್ಪ ನಮನ ಸಲ್ಲಿಸಿದ ನಂತರ, ಇಬ್ಬರೂ ನಾಯಕರು ಭಾರತದ ಸ್ವಾತಂತ್ರ್ಯ ಹೋರಾಟದ ಸಮಯದಲ್ಲಿ ಮಹಾತ್ಮ ಗಾಂಧಿ ಮತ್ತು ಅವರ ಪತ್ನಿ ಕಸ್ತೂರ್ಬಾ ವಾಸಿಸುತ್ತಿದ್ದ ಆಶ್ರಮದೊಳಗಿನ ಕೋಣೆಯಾದ 'ಹೃದಯ ಕುಂಜ್'ಗೆ ಭೇಟಿ ನೀಡಿದರು.

ಆಶ್ರಮದಲ್ಲಿ, ಮೆರ್ಜ್ 'ಚರಖಾ' ಅಥವಾ ನೂಲುವ ಚಕ್ರವನ್ನು ಬಳಸಿ ಖಾದಿ ನೂಲನ್ನು ಹೇಗೆ ನೇಯಲಾಗುತ್ತದೆ ಎಂಬುದನ್ನು ವೀಕ್ಷಿಸಿದರು.

ಮೆರ್ಜ್‌ ಅಲ್ಲಿನ ಸಂದರ್ಶಕರ ಪುಸ್ತಕದಲ್ಲಿ ಸಹಿ ಹಾಕಿದರು. ನಂತರ ಇಬ್ಬರೂ ನಾಯಕರು ಸಬರಮತಿ ನದಿ ದಂಡೆಯಲ್ಲಿ ನಡೆದ ಅಂತಾರಾಷ್ಟ್ರೀಯ ಗಾಳಿಪಟ ಉತ್ಸವ 2026 ರಲ್ಲಿ ಭಾಗವಹಿಸಿದರು.

ಆಶ್ರಮದ ಸಂದರ್ಶಕರ ಪುಸ್ತಕದಲ್ಲಿರುವ ಟಿಪ್ಪಣಿಯಲ್ಲಿ, ಮೆರ್ಜ್ ಹೀಗೆ ಹೇಳಿದ್ದಾರೆ, "ಪ್ರತಿಯೊಬ್ಬ ವ್ಯಕ್ತಿಯ ಸ್ವಾತಂತ್ರ್ಯ ಮತ್ತು ಘನತೆಯ ಶಕ್ತಿಯ ಬಗ್ಗೆ ಮಹಾತ್ಮ ಗಾಂಧಿಯವರ ಅಚಲ ನಂಬಿಕೆ ಇಂದಿಗೂ ನಮಗೆ ಸ್ಫೂರ್ತಿ ನೀಡುತ್ತದೆ. ಅವರ ಹೋರಾಟ ಹಾಗೂ ವ್ಯಕ್ತಿತ್ವ ಪ್ರತಿಯೊಬ್ಬರಿಗೂ ಮಾದರಿಯಾಗಿದೆ. ಜಗತ್ತಿಗೆ ಈಗಲೂ ಮಹಾತ್ಮ ಗಾಂಧಿಯವರ ಸಂದೇಶಗಳ ಅವಶ್ಯಕತೆ ಇದೆ" ಎಂದು ಬರೆದಿದ್ದಾರೆ.

ಗಾಂಧಿ ಆಶ್ರಮ ಎಂದೂ ಕರೆಯಲ್ಪಡುವ ಸಬರಮತಿ ಆಶ್ರಮವನ್ನು 1917 ರಲ್ಲಿ ಮಹಾತ್ಮ ಗಾಂಧಿಯವರು ಸ್ಥಾಪಿಸಿದರು. ಇದು 1917 ರಿಂದ 1930 ರವರೆಗೆ ಗಾಂಧಿಯವರ ನೆಲೆಯಾಗಿತ್ತು ಮತ್ತು ಭಾರತದ ಸ್ವಾತಂತ್ರ್ಯ ಹೋರಾಟದ ಪ್ರಮುಖ ಕೇಂದ್ರಗಳಲ್ಲಿ ಒಂದಾಗಿತ್ತು.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

ನೀವು ಇಲ್ಲಿ ಹುಟ್ಟೋದು ಬೇಡ ನಿಮ್ಮ ಕ್ಷೇತ್ರದ ಶೇ. 75 ರಷ್ಟಾದರೂ ಇಲ್ಲಿ ಅಭಿವೃದ್ಧಿ ಮಾಡಿ: ಡಿಕೆಶಿಗೆ ಖರ್ಗೆ ಟಾಂಗ್; Video

ಸ್ವಾತಂತ್ರ್ಯ ಬಳಿಕ ಇದೇ ಮೊದಲು: ಮಕರ ಸಂಕ್ರಾಂತಿಗೆ ಮತ್ತೊಂದು ಹೊಸ 'ದಾಖಲೆ'ಗೆ ಸಜ್ಜಾದ ಪ್ರಧಾನಿ ಮೋದಿ!

ಡೆಂಟಲ್ ಕಾಲೇಜು ವಿದ್ಯಾರ್ಥಿನಿ ಆತ್ಮಹತ್ಯೆ ಕೇಸ್: ಕೆಲಸದಿಂದ 6 ಪ್ರಾಧ್ಯಾಪಕರ ವಜಾ

ಯಶ್ 'ಟಾಕ್ಸಿಕ್' ಟೀಸರ್ ವಿರುದ್ಧ ಮಹಿಳಾ ಆಯೋಗಕ್ಕೆ ಎಎಪಿ ದೂರು; 'ಆ' ದೃಶ್ಯಕ್ಕೆ ಆಕ್ಷೇಪ!

ಟ್ರಂಪ್ ಗೆ 'ಮರೆಯಲಾಗದ ಪಾಠ' ಕಲಿಸುತ್ತೇವೆ: ಇರಾನ್ ಸಂಸತ್ ಸ್ಪೀಕರ್ ಖಡಕ್ ವಾರ್ನಿಂಗ್!

SCROLL FOR NEXT