ಅಹಮದಾಬಾದ್: ಕೇಂದ್ರ ಕೃಷಿ ಮತ್ತು ರೈತ ಕಲ್ಯಾಣ ಸಚಿವ ಶಿವರಾಜ್ ಸಿಂಗ್ ಚೌಹಾಣ್ ಅವರು ಮಹಾತ್ಮ ಗಾಂಧಿ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತರಿ ಕಾಯ್ದೆ (MGNREGA) ಯೋಜನೆಯನ್ನು ರೋಜ್‌ಗಾರ್ ಮತ್ತು ಅಜೀವಿಕಾ ಮಿಷನ್ (ಗ್ರಾಮೀಣ) (VB-G RAM G) ಕಾಯ್ದೆಗೆ ಬದಲಾಯಿಸುವುದನ್ನು ಸಮರ್ಥಿಸಿಕೊಂಡಿದ್ದಾರೆ.
ಗುಜರಾತ್‌ಗೆ ಭೇಟಿ ನೀಡಿದ ಸಂದರ್ಭದಲ್ಲಿ, ಕೃಷಿ ಸಚಿವರು ಮನ್ರೇಗಾ ಕಾನೂನಿನ ಅನುಷ್ಠಾನದಲ್ಲಿ ಅಕ್ರಮಗಳಿವೆ ಎಂದು ಆರೋಪಿಸಿದರು. ಈ ಕಾನೂನಿನಡಿಯಲ್ಲಿ ಕಾರ್ಮಿಕರ ಬದಲಿಗೆ ಯಂತ್ರಗಳು ಮತ್ತು ಗುತ್ತಿಗೆದಾರರಿಂದ ಕೆಲಸ ಮಾಡಲಾಗುತ್ತಿತ್ತು. ಹೊಸ VB-G RAM G ಕಾಯ್ದೆಯು ಈ ಅಕ್ರಮಗಳನ್ನು ತಡೆಯುತ್ತದೆ ಎಂದು ಕೇಂದ್ರ ಸರ್ಕಾರದ ನೂತನ ಕಾನೂನನ್ನು ಸಮರ್ಥಿಸಿಕೊಂಡರು.
ಕೇಂದ್ರ ಸಚಿವರು ನರೇಗಾವನ್ನು 'ಭ್ರಷ್ಟಾಚಾರದ ಸಾಗರ' ಎಂದು ಕರೆದರು. ಅದನ್ನು ಇನ್ನು ಮುಂದೆ ಜಾರಿಗೆ ತರಲಾಗುವುದಿಲ್ಲ, ಸಾರ್ವಜನಿಕರು ಇನ್ನು ಮುಂದೆ ಕಾಂಗ್ರೆಸ್ ಮಾತನ್ನು ಕೇಳುವುದಿಲ್ಲ ಎಂದರು.
ಮನರೇಗಾ ಯೋಜನೆ ʼಭ್ರಷ್ಟಾಚಾರದ ಸಂಕೇತʼ, ಮನರೇಗಾ ಕಾರ್ಮಿಕರ ಹೆಸರಿನಲ್ಲಿ ಗುತ್ತಿಗೆದಾರರು ಕೆಲಸ ಮಾಡುತ್ತಿದ್ದರು. ನಕಲಿ ಹಾಜರಾತಿ, ಯಂತ್ರಗಳ ಬಳಕೆ ಮತ್ತು ಒಂದೇ ರಸ್ತೆಗಳನ್ನು ಪದೇ ಪದೆ ಹೊಸದು ಎಂದು ತೋರಿಸಲಾಗುತ್ತಿತ್ತು. ಆದರೂ ಕಾಂಗ್ರೆಸ್ ಪಕ್ಷವು ಗ್ರಾಮೀಣ ಕಾರ್ಮಿಕರ ಹಿತಾಸಕ್ತಿಗಳನ್ನು ಕಾಪಾಡುವ ಬದಲು ಭ್ರಷ್ಟಾಚಾರವನ್ನು ರಕ್ಷಿಸುತ್ತಿದೆ. ಹೊಸದಾಗಿ ಜಾರಿಗೆ ತಂದಿರುವ ವಿಕ್ಷಿತ್ ಭಾರತ್ – ರೋಜ್‌ಗಾರ್ ಮತ್ತು ಅಜೀವಿಕಾ ಮಿಷನ್ (ಗ್ರಾಮೀಣ) ಕಾಯ್ದೆಯ ವಿರುದ್ಧದ ಪ್ರಸ್ತಾವಿತ ಆಂದೋಲನವು ರಾಜಕೀಯ ಪ್ರೇರಿತವಾಗಿದೆ ಎಂದರು.
ಮೋದಿ ಸರ್ಕಾರದ ಅಡಿಯಲ್ಲಿ ಮನರೇಗಾವನ್ನು ಪರಿಣಾಮಕಾರಿಯಾಗಿ ಜಾರಿಗೊಳಿಸಲಾಯಿತು. 2014ರ ನಂತರ ಮೋದಿ ಸರ್ಕಾರವು ಮನರೇಗಾ ಯೋಜನೆಗೆ 8.48 ಲಕ್ಷ ಕೋಟಿ ರೂ.ಗಳಿಗೂ ಹೆಚ್ಚು ಹಣವನ್ನು ಒದಗಿಸಲಾಗಿದೆ. ಆದರೆ ಯುಪಿಎ ಅವಧಿಯಲ್ಲಿ ಸುಮಾರು 2 ಲಕ್ಷ ಕೋಟಿ ರೂ.ಗಳನ್ನು ಹಂಚಿಕೆ ಮಾಡಲಾಗಿದೆ ಎಂದು ಹೇಳಿದರು.