ಶಬರಿಮಲೆ ದೇವಸ್ಥಾನ 
ದೇಶ

ಶಬರಿಮಲೆ ಚಿನ್ನ ಕಳವು ಪ್ರಕರಣ: TDB ಮಾಜಿ ಸದಸ್ಯ ಶಂಕರ್ ದಾಸ್ ಬಂಧನ!

ದೇವಸ್ಥಾನದ ಗರ್ಭಗುಡಿಯ ಬಾಗಿಲು ಮತ್ತು ದ್ವಾರಪಾಲಕ ವಿಗ್ರಹಗಳ ಮೇಲಿನ ಚಿನ್ನದ ಲೇಪನ ಕಳವಿಗೆ ಸಂಬಂಧಿಸಿದ ಪ್ರಕರಣಗಳಲ್ಲಿ ಮಾಜಿ ತಿರುವಾಂಕೂರು ದೇವಸ್ವಂ ಬೋರ್ಡ್ (TDB) ಸದಸ್ಯನನ್ನು ಬಂಧಿಸಲಾಗಿದೆ

ತಿರುವನಂತಪುರಂ: ಶಬರಿಮಲೆ ಚಿನ್ನ ಕಳವು ಪ್ರಕರಣಕ್ಕೆ ಸಂಬಂಧಿಸಿದಂತೆ ತನಿಖೆ ನಡೆಸುತ್ತಿರುವ ಎಸ್‌ಐಟಿ ಬುಧವಾರ TDB ಮಾಜಿ ಸದಸ್ಯ ಕೆಪಿ ಶಂಕರ ದಾಸ್ ಅವರನ್ನು ಬಂಧಿಸಿದೆ.

ದೇವಸ್ಥಾನದ ಗರ್ಭಗುಡಿಯ ಬಾಗಿಲು ಮತ್ತು ದ್ವಾರಪಾಲಕ ವಿಗ್ರಹಗಳ ಮೇಲಿನ ಚಿನ್ನದ ಲೇಪನ ಕಳವಿಗೆ ಸಂಬಂಧಿಸಿದ ಎರಡು ಪ್ರಕರಣಗಳಲ್ಲಿ ಮಾಜಿ ತಿರುವಾಂಕೂರು ದೇವಸ್ವಂ ಬೋರ್ಡ್ (TDB) ಸದಸ್ಯನನ್ನು ಕೇರಳದ ತಿರುವನಂತಪುರಂನ ಖಾಸಗಿ ಆಸ್ಪತ್ರೆಯಿಂದ ಬಂಧಿಸಲಾಗಿದೆ ಎಂದು ಮೂಲಗಳು ತಿಳಿಸಿವೆ.

ಈ ಪ್ರಕರಣಗಳಲ್ಲಿ ದಾಸ್ ಅವರನ್ನು ಇನ್ನೂ ಯಾಕೆ ಬಂಧಿಸಿಲ್ಲ ಎಂದು ಕೇರಳ ಹೈಕೋರ್ಟ್ ಪ್ರಶ್ನಿಸಿದ ಬೆನ್ನಲ್ಲೇ ಅವರ ಬಂಧನವಾಗಿದೆ. ದಾಸ್ ಎರಡು ಪ್ರಕರಣಗಳಲ್ಲಿ ಬಂಧಿತರಾದ 12ನೇ ವ್ಯಕ್ತಿಯಾಗಿದ್ದಾರೆ. ರಿಮಾಂಡ್‌ಗಾಗಿ ಅವರನ್ನು ಗುರುವಾರ ನ್ಯಾಯಾಲಯಕ್ಕೆ ಹಾಜರುಪಡಿಸುವ ಸಾಧ್ಯತೆಯಿದೆ ಎಂದು ಮೂಲಗಳು ತಿಳಿಸಿವೆ.

ಇದೇ ಪ್ರಕರಣದಲ್ಲಿ ಇತ್ತೀಚಿಗೆ ದೇವಾಲಯದ ಪ್ರಧಾನ ಅರ್ಚಕ ಅಯ್ಯಪ್ಪ ದೇವಾಲಯದ ಪ್ರಧಾನ ಅರ್ಚಕ ಕಂದರಾರು ರಾಜೀವರನ್ನು ಎಸ್ ಐಟಿ ಬಂಧಿಸಿತ್ತು.

ಪ್ರಮುಖ ಆರೋಪಿ ಉನ್ನಿಕೃಷ್ಣನ್ ಪಾಟಿ ಮತ್ತು ತಿರುವಾಂಕೂರು ದೇವಸ್ವಂ ಮಂಡಳಿಯ ಮಾಜಿ ಅಧ್ಯಕ್ಷ ಎ ಪದ್ಮಕುಮಾರ್ ನೀಡಿದ ಹೇಳಿಕೆಗಳನ್ನು ಆಧರಿಸಿ ಕಂದರಾರು ಅವರನ್ನು ಬಂಧಿಸಲಾಗಿತ್ತು. ಈಗ TDB ಮಾಜಿ ಸದಸ್ಯ ದಾಸ್ ಅವರನ್ನು ಬಂಧಿಸಿದೆ.

ಈ ಪ್ರಕರಣದಲ್ಲಿ ಮತ್ತಷ್ಟು ಜನರನ್ನು ಬಂಧಿಸುವ ಸಾಧ್ಯತೆಯಿದೆ ಎಂದು ಮೂಲಗಳು ಹೇಳಿವೆ.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

ಚುನಾವಣೆಗೂ ಮುನ್ನ ಯೋಗಿ ಸರ್ಕಾರದಲ್ಲಿ ಮಹತ್ತರ ಬದಲಾವಣೆ: ಸಂಪುಟ ಪುನಾರಚನೆ; 6 ಹೊಸ ಸಚಿವರ ಸೇರ್ಪಡೆ

ಕೇರಳ ಸಿಎಂ ಆಯ್ಕೆ: ಕೆಸಿ ವೇಣುಗೋಪಾಲ್ ರಾಹುಲ್ ಗಾಂಧಿಯ ಆದ್ಯತೆ; ಕುತೂಹಲ ಮೂಡಿಸಿದ ಖಾಸಗಿ ಭೇಟಿ!

Tamil Nadu: 'ಡಿಎಂಕೆ ಸರ್ಕಾರದ ಆರ್ಥಿಕ ಸ್ಥಿತಿಗತಿಯ ಬಗ್ಗೆ ಶ್ವೇತಪತ್ರ': ಇಚ್ಛಾಶಕ್ತಿ ಬೇಕು ಎಂದ Stalin ಗೆ ಶಾಕ್ ಕೊಟ್ಟ ಸಿಎಂ ವಿಜಯ್

ಸಿಎಂ ಪದಗ್ರಹಣ ಕಾರ್ಯಕ್ರಮ: ಸೂಟ್ ಧರಿಸಿ 74 ವರ್ಷಗಳ ತಮಿಳು ಪರಂಪರೆ, ಸಂಪ್ರದಾಯ ಮುರಿದ ವಿಜಯ್!

ಕರ್ನಾಟಕದಲ್ಲಿ ಎಲ್ಲಾ ಕುರ್ಚಿಗಳೂ ಗಟ್ಟಿಯಾಗಿವೆ, ಅವರಿಗೆ ಏನು ಕಾಣುತ್ತಿದೆಯೋ ಗೊತ್ತಿಲ್ಲ: ಪ್ರಧಾನಿಗೆ ಡಿಸಿಎಂ ಡಿಕೆ ಶಿವಕುಮಾರ್ ಟಾಂಗ್

SCROLL FOR NEXT