ಗೌರಿ ಲಂಕೇಶ್-ಶ್ರೀಕಾಂತ್ ಪಂಗಾರ್ಕರ್ 
ದೇಶ

BMC Election: ಸ್ವತಂತ್ರವಾಗಿ ಸ್ಪರ್ಧಿಸಿದ್ದ ಗೌರಿ ಲಂಕೇಶ್ ಹತ್ಯೆ ಆರೋಪಿ ಶ್ರೀಕಾಂತ್ ಪಂಗಾರ್ಕರ್ಗೆ ಪ್ರಚಂಡ ಗೆಲುವು!

ಮಹಾರಾಷ್ಟ್ರ ಪುರಸಭೆ ಚುನಾವಣೆಯ ಫಲಿತಾಂಶಗಳು ಪ್ರಕಟವಾಗುತ್ತಿವೆ. ಜಲ್ನಾ ಕಾರ್ಪೊರೇಷನ್‌ನ ವಾರ್ಡ್‌ನಿಂದ ಸ್ವತಂತ್ರ ಅಭ್ಯರ್ಥಿಯಾಗಿ ಸ್ಪರ್ಧಿಸಿದ್ದ ಶ್ರೀಕಾಂತ್ ಪಂಗಾರ್ಕರ್ ಗೆದ್ದಿದ್ದಾರೆ. ಶ್ರೀಕಾಂತ್ ಪಂಗಾರ್ಕರ್ ಖ್ಯಾತ ಪತ್ರಕರ್ತೆ ಗೌರಿ ಲಂಕೇಶ್ ಹತ್ಯೆ ಪ್ರಕರಣದ ಆರೋಪಿಯಾಗಿದ್ದಾರೆ.

ಮುಂಬೈ: ಮಹಾರಾಷ್ಟ್ರ ಪುರಸಭೆ ಚುನಾವಣೆಯ ಫಲಿತಾಂಶಗಳು ಪ್ರಕಟವಾಗುತ್ತಿವೆ. ಜಲ್ನಾ ಕಾರ್ಪೊರೇಷನ್‌ನ ವಾರ್ಡ್‌ನಿಂದ ಸ್ವತಂತ್ರ ಅಭ್ಯರ್ಥಿಯಾಗಿ ಸ್ಪರ್ಧಿಸಿದ್ದ ಶ್ರೀಕಾಂತ್ ಪಂಗಾರ್ಕರ್ ಗೆದ್ದಿದ್ದಾರೆ. ಶ್ರೀಕಾಂತ್ ಪಂಗಾರ್ಕರ್ ಖ್ಯಾತ ಪತ್ರಕರ್ತೆ ಗೌರಿ ಲಂಕೇಶ್ ಹತ್ಯೆ ಪ್ರಕರಣದ ಆರೋಪಿಯಾಗಿದ್ದಾರೆ.

ಶ್ರೀಕಾಂತ್ ಜಲ್ನಾದ ವಾರ್ಡ್ 13ರಿಂದ ಸ್ಪರ್ಧಿಸಿದರು. ಬಿಜೆಪಿ ಸೇರಿದಂತೆ ಇತರ ಪಕ್ಷಗಳ ಅಭ್ಯರ್ಥಿಗಳು ಕಣದಲ್ಲಿದ್ದರೆ. ಆದರೆ ಏಕನಾಥ್ ಶಿಂಧೆ ನೇತೃತ್ವದ ಶಿವಸೇನೆ ತನ್ನ ಅಭ್ಯರ್ಥಿಯನ್ನು ಕಣಕ್ಕಿಳಿಸಿರಲಿಲ್ಲ. ಕಳೆದ ವರ್ಷ ವಿಧಾನಸಭಾ ಚುನಾವಣೆಗೆ ಮುನ್ನ ಪಂಗಾರ್ಕರ್ ಶಿವಸೇನೆ ಸೇರಿದರು. ಆದಾಗ್ಯೂ ವ್ರ ಆಕ್ಷೇಪಣೆಗಳು ವ್ಯಕ್ತವಾದ ನಂತರ ಶಿಂಧೆ ತಮ್ಮ ಉಮೇದುವಾರಿಕೆಯನ್ನು ನಿಲ್ಲಿಸಿದರು. ಶಿವಸೇನೆಯ ಪರವಾಗಿ 2001-2006ರವರೆಗೆ ಜಲ್ನಾ ಪುರಸಭೆಯ ಸದಸ್ಯರಾಗಿದ್ದ ಪಂಗಾರ್ಕರ್, ಟಿಕೆಟ್ ನಿರಾಕರಿಸಿದ ನಂತರ 2011ರಲ್ಲಿ ಹಿಂದೂ ಜನಜಾಗೃತಿ ಸಮಿತಿಗೆ ಸೇರಿದರು.

ಪತ್ರಕರ್ತೆ ಗೌರಿ ಲಂಕೇಶ್ ಅವರನ್ನು ಸೆಪ್ಟೆಂಬರ್ 2017ರಲ್ಲಿ ಬೆಂಗಳೂರಿನಲ್ಲಿರುವ ಅವರ ನಿವಾಸದಲ್ಲಿ ದುಷ್ಕರ್ಮಿಗಳು ಗುಂಡಿಕ್ಕಿ ಹತ್ಯೆ ಮಾಡಿದ್ದರು. ಈ ಪ್ರಕರಣದಲ್ಲಿ ಬಂಧಿಸಲ್ಪಟ್ಟಿದ್ದ ಪಂಗಾರ್ಕರ್ ಅವರಿಗೆ 2024ರಲ್ಲಿ ಕರ್ನಾಟಕ ಹೈಕೋರ್ಟ್ ಜಾಮೀನು ನೀಡಿತು. ಇದಕ್ಕೂ ಮೊದಲು 2018ರಲ್ಲಿ ಸ್ಫೋಟಕಗಳು ಮತ್ತು ಶಸ್ತ್ರಾಸ್ತ್ರಗಳನ್ನು ವಶಪಡಿಸಿಕೊಂಡ ಪ್ರಕರಣದಲ್ಲಿ ಮಹಾರಾಷ್ಟ್ರ ಭಯೋತ್ಪಾದನಾ ನಿಗ್ರಹ ದಳ ಅವರನ್ನು ಬಂಧಿಸಿತು.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

BMC ಚುನಾವಣಾ ಫಲಿತಾಂಶ: ಬಿಜೆಪಿ ಮೈತ್ರಿಕೂಟಕ್ಕೆ 128 ಸ್ಥಾನಗಳಲ್ಲಿ ಮುನ್ನಡೆ; ಮಹಾಯುತಿಯ ಹಿಡಿತಕ್ಕೆ ಮುಂಬೈ, ಪುಣೆ, ನಾಗ್ಪುರ

CCL 2026: ಪಂಜಾಬ್ ತಂಡವನ್ನು ಮಣಿಸಿ ಟೂರ್ನಿಯಲ್ಲಿ ಕರ್ನಾಟಕ ಬುಲ್ಡೋಜರ್ಸ್ ಶುಭಾರಂಭ!

ಮೊದಲು ನಿಮ್ಮ ಪಾರ್ಟಿ ಹಣೆ ಬರಹ ನೋಡಿಕೊಳ್ಳಿ: ಪ್ರಿಯಾಂಕ್ ಖರ್ಗೆ ವಿರುದ್ಧ ಕುಮಾರಸ್ವಾಮಿ ವಾಗ್ದಾಳಿ

ಲಾತೂರ್‌ನಲ್ಲಿ ಕಾಂಗ್ರೆಸ್ ಗೆಲುವು; ವಿಲಾಸ್‌ರಾವ್ ದೇಶಮುಖ್ ನೆನಪು ಅಳಿಸುತ್ತೇವೆ ಎಂದಿದ್ದ ಬಿಜೆಪಿಗೆ ಮುಖಭಂಗ

ಕನಕಪುರ ಏಕೆ ಗಬ್ಬೆದ್ದು ನಾರುತ್ತಿದೆ? ತ್ಯಾಜ್ಯ ವಿಲೇವಾರಿಯಾಕಿಲ್ಲ: ಉಪ ಲೋಕಾಯುಕ್ತರ ಮಹತ್ವದ ಸೂಚನೆ

SCROLL FOR NEXT